Home / ಲೇಖನ / ಕೃಷಿ / ಬೆಳೆನಾಶಗೊಳಿಸುವ ಕೀಟಗಳ ವಿರುದ್ಧ ಹೊಸ ಅಸ್ತ್ರ

ಬೆಳೆನಾಶಗೊಳಿಸುವ ಕೀಟಗಳ ವಿರುದ್ಧ ಹೊಸ ಅಸ್ತ್ರ

ಅಸಂಖ್ಯಾತ ಕೀಟಗಳ ಭಾಧೆಯಿಂದಾಗಿ ರೈತ ಬೆಳೆದ ಬೆಳೆಗಳು ನಾಶಗೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳಿವೆ. ಸಾಲಮಾಡಿ ಉತ್ತು ಬಿತ್ತಿದ ರೈತನಿಗೆ ಈ ಕೀಟಗಳ ಭಾಧೆಯಿಂದ ಬೆಳೆಗಳೆಲ್ಲ ಅಸ್ತಿ ಪಂಜರವಾಗಿ ಉತ್ಪನ್ನ ಶೂನ್ಯವಾಗಿ ಬಿಡುತ್ತದೆ. ಬೌಮಿಸಿಯ ಟಬಾಕಿ ಎನ್ನುವ ವೈಜ್ಞಾನಿಕ ಹೆಸರಿನ ಪ್ರಾಣಿ ಒಂದು ಅಪಾಯಕಾರಿ ಕೀಟವಾಗಿದೆ. ಇದೊಂದು ಬಿಳಿಯಬಣ್ಣದ ನೊಣವಾಗಿದ್ದು ಸು. ೬೦೦ ಬಗೆಯ ಕೃಷಿ ಬೆಳೆಗಳಿಗೆ ಮಾರಕವಾಗಿದೆ. ಜೆಮಿಸಿಯಾ ನೊಣಗಳಲ್ಲಿ ಇರುವ ಬಿ ಜೈಯೋಟೈಪ್, ಎನ್ನುವ ಜಾತಿಯಂತೂ ಕೃಷಿಬೆಳೆಗೆ ಪರಮ ಶತೃವಾಗಿದೆ. ಈ ಜಾತಿಯ ನೊಣಗಳು ೫ ಪಟ್ಟು ಹೆಚ್ಚು ವೇಗವಾಗಿ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ. ಸು. ೬೦ ಬಗೆಯ ರೋಗಕಾರಕ ವೈರಸ್‌ಗಳನ್ನು ಗಿಡದಿಂದ ಗಿಡಕ್ಕೆ ಪ್ರಸಾರ ಮಾಡುತ್ತ ಹೋಗುತ್ತವೆ. ಈ ಕೃಷಿ ಪೀಡೆಯ ವಿರುದ್ದ ಸೂಕ್ತಮದ್ದಿನ ತಯಾರಿಕೆಗಾಗಿ ವಿಜ್ಞಾನಿಗಳು ಬಹುಕಾಲದಿಂದ ಸಂಶೋಧನೆ ನಡೆಯಿಸಿ ಯಶಸ್ವಿಯಾಗಿದ್ದಾರೆ. ಒಂದು ಪುಟ್ಟ ಗಾತ್ರದ ಗಿಡವೊಂದು ಬೆಮಿಸಿಯಾ ಕೀಟಗಳನ್ನು ಯಶಸ್ವಿಯಾಗಿ ನಿಯಂತ್ರಿಸುವುದು, ಪತ್ತೆಯಾಗಿದೆ. ಹಳದಿ ಬಣ್ಣದ ಹೂಗಳನ್ನು ಬೀರುವ ಈ ಸಸ್ಯದ ವೈಜ್ಞಾನಿಕ ಹೆಸರು “ಕ್ಯಾಲ್ಸಿಯೋಲೇರಿಯಾ ಆಂಡಿನಾ” ಈ ಗಿಡದಲ್ಲಿರುವ ಎರಡು ಬಗೆಯ ರಾಸಾಯನಿಕಗಳು ಬೆಮಿಸಿಯಾ ನೊಣಗಳ ಪೈಕಿ ಹೆಚ್ಚು ಅಪಾಯಕಾರಿಯಾದ ಬಿ ಬಯೋಟೈಟ್, ನೊಣಗಳನ್ನು ಹತೋಟಿಯಲ್ಲಿಡುತ್ತದೆ. ಕ್ಯಾಲ್ಸಿಯೋಲೇರಿಯಾ ಸಸ್ಯದಲ್ಲಿ ಇರುವ ರಾಸಾಯನಿಕಗಳು ಬೆಸಿಮಿಯಾ ನೊಣಗಳನ್ನು ಅಲ್ಲದೇ ಗಿಡಹೇನು ಮತ್ತು ಇನ್ನಿತರೆ ಕೃಷಿ ಪೀಡೆಗಳನ್ನು ಸಹ ನಾಶಪಡಿಸುವುದಾಗಿ ತಿಳಿದು ಬಂದಿದೆ. ಮಹತ್ವದ ಸಂಗತಿ ಎಂದರೆ ಗಿಡದ ಸಾರವನ್ನು ನಿಯಂತ್ರಿಸುವುದಾಗಿ ತಿಳಿದು ಬಂದಿದೆ. ಈ ಕೀಟಗಳು ಈಗ ಆಧುನಿಕ ಕೀಟನಾಶಕಗಳ ವಿರುದ್ಧ ಪ್ರತಿರೋಧ ಶಕ್ತಿಯನ್ನು ಬೆಳಸಿಕೊಂಡು ಕೃಷಿ ವಿಜ್ಞಾನಿಗಳಿಗೆ ತಲೆನೋವು ತಂದಿದ್ದವು.

ಅಂತರಾಷ್ಟ್ರೀಯ ಮಟ್ಟದ ಸಂಶೋಧಕರ ತಂಡವೊಂದು ನಾಲ್ಕು ನೂರಕ್ಕೂ ಹೆಚ್ಚು ಬಗೆಯ ಗಿಡಗಳನ್ನು ಕೀಟನಾಶಕ ಗುಣಗಳಿಗಾಗಿ ಸಂಗ್ರಹಿಸಿ ಸಮಗ್ರವಾಗಿ ಅಧ್ಯಯನ ನಡೆಸುತ್ತಿರುವಾಗ ಈ ಗಿಡದ ಕುರಿತು ತಿಳಿದು ಬಂತು. ಚಿಲಿ ವಿಶ್ವವಿದ್ಯಾಲಯದ ಹರ್ಮನ್ ನೈಲೇ ಯರ್ ಎಂಬ ವಿಜ್ಞಾನಿ ಈ ಸಸ್ಯ ಸಂಗ್ರಹಣಾ ಕಾರ್ಯವನ್ನು ಮಾಡಿದ್ದರು. ಕ್ಯಾಲ್ಸಿಯೋಲೇರಿಯಾ ಗಿಡಗಳ ಕೀಟ ನಾಶಕ ಸಾಮರ್ಥ್ಯ ಹೆಚ್ಚಿಸಿದ್ದಾಗಿದೆ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...