ಭೂತಾಯಿ ರಕ್ಷಣೆ

ಭೂತಾಯಿ ರಕ್ಷಣೆ

ಬೆಳಗಾಗಿ ನಾನೆದ್ದು ಯಾರಾರ ನೆನೆಯಲಿ
ಎಳ್ಳು ಜೀರಿಗೆ ಬೆಳಿಯೋಳ-ಭೂಮಿ ತಾಯಿಯ
ಎದ್ದೊಂದ ಗಳಿಗೆ ನೆನೆದೇನ.

ಹಳ್ಳಿಯ ಮಹಿಳೆಯೊಬ್ಬಳು ಈ ಜಾನಪದ ಹಾಡಿನ ಮೂಲಕ ಭೂಮಿತಾಯಿಯ ಬಗ್ಗೆ ಅಭಿಮಾನದಿಂದ ನೆನೆದು ಹಾಡುತ್ತಾಳೆ. ಭಾರತ ಹಳ್ಳಿಗಳ ದೇಶವಾಗಿದೆ. ರೈತನೆ ಅನ್ನದಾತ. ನಮ್ಮೆಲ್ಲರನ್ನು ಸಲಹುವಳೆ ಭೂಮಿತಾಯಿ. ಅಂತಲೇ ಭುದೇವಿಯ ನೆನೆಯದೇ ವಿಧಿಯಿಲ್ಲ. ಬದುಕಿನುದ್ದಕ್ಕೂ ಭೂಮಿಯನ್ನೇ ನಂಬಿಕೊಂಡು ಬಾಳಿರುವ ರೈತ ಅವನ ಬೆವರಿನ ಫಲವೇ ನಮ್ಮ ಕೈಯೊಳಗಿನ ತುತ್ತು. ಆದರೆ ಇಂದು ಕಾಲ ಬದಲಾಗಿದೆ. ನಮ್ಮ ರಕ್ತದ ಕಣ ಕಣದಲ್ಲೂ ಭೂದೇವಿಯು ನೀಡಿದ ಆಹಾರದಂಶವಿದ್ದರೂ ಜಾಗತೀಕರಣದ ಅವಸರದಲ್ಲಿ ಭೂಮಿಯ ಫಲವತತ್ತೆ ಮತ್ತು ಅದರ ಮಹತ್ವ ನಾವು ಮರೆಯುತ್ತಿದ್ದೇವೆ.

ಇವತ್ತು ಹಳ್ಳಿ ಹಳ್ಳಿಗಳಲ್ಲೂ ಜಾಗತೀಕರಣದ ಬಿಸಿ ತಟ್ಟಿದೆ. ಎಲ್ಲರಿಗೂ ಹಣ ಸಂಪಾದನೆಯೇ ಗುರಿಯಾಗಿದೆ. ಟಿವಿಗಳು ನಮ್ಮ ಮನೆಗೆ ಲಗ್ಗೆ ಹಾಕಿದ ಮೇಲೆ ದುಡಿಮೆ, ಪರಿಶ್ರಮಗಳಿಗೆ ಗ್ರಹಣ ಹಿಡಿಯಿತ್ತಿದೆಯೋ ಎನಿಸದೆ ಇರದು. ಅಂತಲೇ ಸರ್‍ವಜ್ಞ ತನ್ನ ತ್ರಿಪದಿಗಳಲ್ಲಿ ಬೇಸಾಯಕ್ಕೆ ಮಹತ್ವ ಕೊಡುತ್ತಾನೆ.

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯ ಮೇಲು
ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ
ದಾಟವೇ ಕೆಡಗು ಸರ್‍ವಜ್ಞ

ಅನೇಕ ವಿದ್ಯೆಗಳಲ್ಲಿ ವ್ಯವಸಾಯವೇ ಶ್ರೇಷ್ಠ, ಅದು ಮೇಟಿ ವಿದ್ಯೆ. ಅದರಿಂದ ರಾಟಿ ನಡೆದು ದೇಶವೇ ಬೆಳಗುವುದು. ಇಲ್ಲದಿದ್ದರೆ ಇನ್ನಾವ ಆಟವೂ ಕೆಡಗು ಎನ್ನುವ ಕವಿಯ ಭಾವ ನಿಜಕ್ಕೂ ಮೆಚ್ಚುವಂಥದ್ದು. ಆದರೆ ಇಂದು ಬೇಸಾಯಕ್ಕೆ ಜನರು ನಿರ್‍ಲಕ್ಷ್ಯ ಮಾಡುತ್ತಿರುವುದು ದುರ್‍ದೈವದ ಸಂಗತಿ. ಇಂದಿನ ದಿನಗಳಲ್ಲಿ ರೈತನು ವ್ಯವಸಾಯ ಮಾಡಿ ಹೆಚ್ಚಿನ ಇಳುವರಿ ತೆಗೆಯುವ ನಿಟ್ಟಿನಲ್ಲಿ ರಾಸಾಯನಿಕ ಗೊಬ್ಬರ, ವಿಷಯುಕ್ತ ಔಷಧಗಳನ್ನು ಬೆಳೆಗಳಿಗೆ ನೀಡಿ ಹೆಚ್ಚಿನ ಬೆಳೆ ರಾಶಿಯ ನಿರೀಕ್ಷೆಯಲ್ಲಿ ಭೂಮಿಯನ್ನು ಬಂಜರುಗೊಳಿಸುತ್ತಿದ್ದಾನೆ. ಇದರಿಂದಾಗಿ ವಾತಾವರಣ ಕಲುಷಿತಗೊಳ್ಳುವುದಷ್ಟೇ ಅಲ್ಲದೆ ಬೆಳೆಗಳಲ್ಲಿ ವಿಷದಂಶವು ತುಂಬಿ ಜನರು ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಇಂದು ಇಂಥ ರಾಸಾಯನಿಕ ಪದಾರ್‍ಥಗಳಿಂದ ಮುಕ್ತಗೊಳ್ಳಲು ನಾವು ಸಾವಯವ ಕೃಷಿ ಮಾಡಬೇಕಿದೆ. ಈಗೀಗ ಜಗತ್ತಿನಲ್ಲಿ ಯಂತ್ರ, ವಾಹನಗಳ ಸಂಖ್ಯೆ ಜಾಸ್ತಿಯಾಗಿ ಇಂಧನ ಉಪಯೋಗದಿಂದ ವಾತಾವರಣ ಕೆಡುತಿದ್ದು ಜೈವಿಕ ಇಂಧನಕ್ಕೆ ಸಂಬಂಧಿಸಿದ ಗಿಡ-ಮರಗಳನ್ನು ನೆಟ್ಟು ದೇಶದ ಆರೋಗ್ಯ ಕಾಪಾಡಬೇಕಿದೆ.

ರೈತನು ದೇಶದ ಬೆನ್ನೆಲುಬು, ಅನ್ನದಾತನೆಂದು ಹೊಗಳಿದರೂ ಇಂದು ರೈತನಿಗೆ ಉಳಿಗಾಲವಿಲ್ಲವಾಗಿದೆ. ಬಿತ್ತಿದ ಬೀಜ ಮೊಳಕೆಯೊಡೆಯದಿದ್ದಾಗ ಮೊಳಕೆಯೊಡೆದರೂ ಬೆಳೆ ಬೆಳೆಯದಿದ್ದಾಗ ಬೆಳೆ ಬೆಳೆದರೂ ಧಾನ್ಯಕ್ಕೆ ಕೈತುಂಬ ಹಣ ಬರದೇ ಇದ್ದಾಗ ಅವನ ಬದುಕು ನಿತ್ಯ ಸಾಯುತ್ತಿದೆ. ಬದುಕನ್ನು ಎದುರಿಸಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಅಂತಲೇ ಇಂದು ಭೂಮಿತಾಯಿ ಅವನ ಮೇಲೆ ಮುನಿದಿದ್ದಾಳೆ, ಹೆಜ್ಜೆ ಹೆಜ್ಜೆಗೂ ರಕ್ಷಿಸುವ ಭೂತಾಯಿ ಫಲವತತ್ತೆ ಕಾಪಾಡುವುದು ನಮ್ಮೆಲ್ಲರ ಕರ್‍ತವ್ಯವಾಗಿದೆ. ಅಂತಲೇ ಇಂದು ಸರ್‍ಕಾರ ಮತ್ತು ಸಮಾಜ ಭೂತಾಯಿಯತ್ತ ವಾಲುತ್ತಿದೆ. ರೈತನಿಗೆ ಭೂಮಿಯ ಮಣ್ಣಿನ ಬಗ್ಗೆ ತಿಳುವಳಿಕೆ, ಬೀಜ, ಗೊಬ್ಬರ, ಸಾವಯವ ಕೃಷಿ ಸೊನ್ನೆ ಬಂಡವಾಳದಲ್ಲಿ ಭೂಮಿಯಲ್ಲಿ ಬೆಳೆ ಇಳುವರಿಗಳತ್ತ ನಾವು ದಾಪುಗಾಲು ಆರೋಗ್ಯಕರ ಲಕ್ಷಣವಾಗಿದೆ. ಹಾಕುತ್ತಿರುವುದು ಆರೋಗ್ಯಕರ ಲಕ್ಷಣವಾಗಿದೆ.

ಸ್ವಚ್ಛವಾದ ಪರಿಸರ, ನಿರಾಂತರವಾದ ಬಾಳಾಗಬೇಕಾದರೆ ಪರಿಸರ ಮಾಲಿನ್ಯ ತಡೆಗಟ್ಟಬೇಕಾದರೆ ಸಾವಯವ ಕೃಷಿ ಮಾಡಬೇಕಿದೆ. ಜೀವನ ಸಾರ್‍ಥಕಗೊಳಿಸಬೇಕಿದೆ. ಭೂಮಿಯ ರಕ್ಷಣೆ ನಮ್ಮೆಲ್ಲರ ಕರ್‍ತವ್ಯವಾಗಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒತ್ತಿದೋಟಿನ ಸರಕಾರವೆಲ್ಲಿಹುದು?
Next post ಕರುಳು

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…