ಬರೆದವರು: Thomas Hardy / Tess of the d’Urbervilles

ಮಲ್ಲಣ್ಣ ದಂಪತಿಗಳೂ ಶಂಭುರಾಮಯ್ಯ ದಂಪತಿಗಳೂ ಒಟ್ಟಿಗೇ ಇದ್ದಾರೆ. ಅವರಿಗೆ ಬೇರೆ ಕೆಲಸ ಏನೂ ಇಲ್ಲ. ಬೆಳಗೆದ್ದು ಸ್ನಾನ ಮಾಡುತ್ತಾರೆ. ನಾಲ್ವರೂ ಭಗವದ್ಗೀತೆ ಹಿಡಿದು ಕೂರುತ್ತಾರೆ. ಪಾರಾಯಣ ಎಂಟುಗಂಟೆವರೆಗೂ ಮಾಡಿ, ಒಂದಷ್ಟು ಹೊತ್ತು ಧ್ಯಾನ ದಲ್ಲಿದ್ದು ದೇವರ ಪೂಜೆ ಮಾಡಿ ಈಚೆಗೆ ಬರುತ್ತಾರೆ. ಅಡಿಗೆಯವರು ತಂದಿಟ್ಟ ಉಪಾಹಾರ ಅಷ್ಟು ಸೇವಿಸಿ ಬಂದು ವಿವೇಕಾನಂದ ಸಂಘದಲ್ಲಿ ಕುಳಿತು ಕೊಳ್ಳುತ್ತಾರೆ. ಅಲ್ಲಿ ದಿನವೂ ಪರಮಹಂಸರು, ರಾಮ ತೀರ್ಥರು, ವಿವೇಕಾನಂದರು, ನಿಜ ಗುಣರು, ಮೊದಲಾದ ಮಹನೀ ಯರ ಉಪದೇಶಗಳನ್ನು ಕುರಿತು ಅಷ್ಟು ಮಾತುಕಥೆಗಳಾಗುತ್ತವೆ. ಮಧ್ಯಾಹ್ನ ಮೂರರಿಂದ ಐದರವರೆಗೆ ಭಾರತ ಭಾಗವತ ಪುರಾಣ ಮತ್ತೆ ಸಂಜೆ ಪೂಜೆ ಮಂಗಳಾರತಿ-ದಿನವೂ ಹೀಗೆ ನಡೆಯುತ್ತಿದೆ.

ಈ ದಿನ ಏಕೋ ಕೆಂಪಮ್ಮನಿಗೆ ಹಾಸುಗೆಯಿಂದ ಏಳುವ ವೇಳೆಗೇ ಏನೋ ಮುಜಗರ. ಆದರೂ ಎದ್ದು ಸ್ನಾನಮಾಡಿ ಕಷ್ಟ ಪಟ್ಟುಕೊಂಡು ಗೀತಾ ಪಾರಾಯಣ ಮುಗಿಸಿದಳು. ಮೈಕೈಯೆಲ್ಲ ನೊವು ಆನಂದಮ್ಮನಿಗೆ ಹೇಳಿ ಮನೆಯಲ್ಲೇ ಮತ್ತೆ ಮಲಗಿ ಕೊಂಡಳು. ಮಧ್ಯಾಹ್ನದ ವೇಳೆಗೆ ಬಲವಾಗಿ ಜ್ವರ ಬಂದಿದೆ.

ಮಲ್ಲಣ್ಣ ಮಗ್ಗುಲಲ್ಲೇ ಕುಳಿತಿದ್ದಾನೆ : “ಏನು ಕೆಂಪೀ! ಯಾವುದಾದರೂ ಔಸ್ತಿ, ಕಷಾಯ ಮಾಡಲಾ ?” ಎಂದು ಕೇಳಿದ.

ಕೆಂಪಿಯು ಹೊದೆದಿದ್ದ ಮುಸುಕು ತೆಗೆದು ಸುತ್ತಲೂ ನೋಡಿ “ಏನೂ ಬ್ಯಾಡಿ-ನೀವು ಬೇಕಾದ್ದಾಗಲಿ ನನ್ನ ಮಗ್ಗುಲಲ್ಲಿದ್ದು ಬಿಡಿ. ನಮ್ಮ ಮಲ್ಲೀನ ಕರಿಸಿ. ಈ ಸರ್ತಿ ನಾ ಬದುಕೇನೋ ಇಲ್ಲವೋ ಕಾಣೆ. ಎಲ್ಲಿ? ಇತ್ತ ಬನ್ನಿ. ಮೈಮೇಲೆ ಗ್ಯಾನ ಇರೋವಾಗಲೇ ಆನಂದ ಪಟ್ಟು ಬುಡ್ತೀನಿ.” ಎಂದು ಗಂಡನನ್ನು ಬರಸೆಳೆದು ಮೊಕವನ್ನು ಮುದ್ದಾಡಿಬಿಟ್ಟಳು. ” ಇನ್ನು ಸತ್ತರೂ ನನಗೆ ಚಿಂತೆಯಿಲ್ಲ” ಎಂದು ದುಪ್ಪಟಿ ಎಳೆದುಕೊಂಡು ಮಲಗಿಬಿಟ್ಟಳು,

ಮಲ್ಲಣ್ಣ ಯೋಚಿಸಿದ ; “ಇದ್ಯಾಕೆ ಹಿಂಗೆ ಮಾತಾಡ್ತಾಳೆ? ಒಂದು ವೇಳೆ “ಇವಳು ಹೇಳಿದಂಗೇ ಅಗ್ಹೊದರೆ, ನಾನೇನು ಮಾಡ ಬೇಕು? ಇವಳಿಂದ ನನಗೆ ಸಂಸಾರ! ಈ ಮುಕ್ಕನೇ ಹೋದಮೇಲೆ ನಾನಿಲ್ಲಿದ್ದು ಮಾಡೋದಾದರೂ ಏನು? ನಾನೇಕೆ ಮತ್ತೆ ನನ್ನ ಕಿನ್ನರಿ ತಕೊಂಡು ದೇಶದ ಮೇಲೆ ಹೊರಟು ಹೋಗಬಾರದು? ಏನೋ ಕಾಸಿ, ರಾಮೇಸ್ಟರ, ಅಂತ ತಿರುಕ್ಕೊಂಡು, ಎಲ್ಲಂದರಲ್ಲಿ ಇದ್ದು ಬುಡೋದು ? ಆದರೆ ನಾಯಕರು ಇರೋ ಅಂದರೋ? ಮಲ್ಲಿ ಹೋಗ ಕೂಡದು ಅಂದರೋ? ”

ಅಷ್ಟರಲ್ಲಿ ಆನಂದಮ್ಮ ಶಂಭುರಾಮಯ್ಯ ಪುರಾಣ ಮುಗಿಸಿಕೊಂಡು ಬಂದರು. ಆನಂದಮ್ಮ ಅವಸರ ಅವಸರವಾಗಿ ಕೇಳಿದಳು “ಹೇಗಿದೆ ಕೆಂಪಮ್ಮನವರಿಗೆ ? ?

“ಜರ ಕಾಯಿತಾ ಆದೆ.?

” ಮಜ್ಜಿಗೆ ಹಳ್ಳೀಗೆ ವರ್ತಮಾನ ಕಳಿಸಿದಿರಾ 1?

“ಮಧ್ಯಾಹ್ನವೇ ಕಳೀಸ್ತು.”

” ಈಗ ಔಷಧಿ ಏನು ಕೂಡೋದು ??

“ಏನೂ ಬೇಡ ಅಂತಾಳೆ.”

“ಅವರು ಹಾಗಂದರೆ ನಾವು ಸುಮ್ಮನಿರೋಕೆ ಆದೀತೆ? ಕೆಂಪಮ್ಮ! ಏನ್ರೀ! ಯಾವ ಔಷಧಿ ತೆಗೆದುಕೋತೀರ್ರೀ? ಆಸ್ಪತ್ರೆ ಔಷಧಿ ತೆಗೆದುಕೋತೀರಾ? ನೇಟಿವ್ ಔಷಧಿ ತೆಗೆದುಕೋತೀರಾ ?”

ಕೆಂಪಮ್ಮ ಮುಸುಕು ತೆಗೆದಳು: ಆನಂದಮ್ಮನಿಗೆ ಒಲೆಹತ್ತಿರ ಕುಳಿತಂತಾಯಿತು. “ತಾಯಿ, ನನಗೆ ಆಸ್ಪತ್ರೆ ಔಸ್ತಿ ಅಸಂಯ್ಯ ! ಯಾವ ಯಾವ ಜಾತಿಯೋರ ನೀರು ನಾನ್ಯಾಕೆ ಕುಡೀಲಿ? ನನಗೆ ಏನೂ ಬೇಡ, ಸ್ವಾಮಿಪಾದ ಸೇರಿಕೊಳ್ಳೋವ. ಎಲ್ಲಾ ಚೆನ್ನಾಗಿರೋ ವಾಗಲೇ ಕಣ್ಣು ಮುಚ್ಚಿ ಕೊಳ್ಳೋವ ಅನ್ನಸ್ತಾ ಅದೆ. ಏನೋ ನಮ್ಮ ಮಲ್ಲೀ ಹೊಟ್ಟೇಲಿ ಒಂದುಮೊಗ ಕಂಡಿದ್ದರೆ ಆಗುತ್ತಿತ್ತು. ಓಗಲಿ. ಎಲ್ಲಾ ನಾಕೂ ಮೂಲೆ ಚೆನ್ನಾಗದೆ. ನಮ್ಮ ಬುದ್ಧಿಯೋರ ಮುಂದೆ ಅರಸಿನ ಕುಂಕುಮ ಇಟ್ಟುಕೊಂಡು ಹೋದರೆ ನಾನೇ ಪುಣ್ಯವಂತೆ : ”

ಆನಂದಮ್ಮ ಅವಳ ಮಾತುಗಳನ್ನು ಕೇಳಿದಳು- -ಜ್ವರದ ತಾಪ. ಮಾತು ಧಾರಾಳವಾಗಿ ಬರದೆ ಅಲ್ಲಲ್ಲಿ ಕಚ್ಚಿ ಕಚ್ಚಿ ಬಂದಂತೆ ಬರುತ್ತದೆ. ಆದರೂ ಆ ಮಾತಿನ ಭಾವ ಅವಳ “ಮನಸ್ಸಿಗೆ ಹಿಡಿಯಿತು. “ಅವಳು ಹೇಳುವುದೂ ನಿಜ-ಎಂದಿದ್ದರೂ ಹೋಗಬೇಕು. ಎಲ್ಲವೂ ನೇರವಾಗಿ ಇರುವಾಗಲೇ ಹೋಗಬಾರದೇಕೆ ?’ ಎನ್ನಿಸಿತು. “ನನಗೇಕೆ ಹೀಗೆ ತೋರಿತು?” ಎಂದು ಅವಳೇ ಆಶ್ಚರ್ಯಪಟ್ಟಳು. ಏಕೆ ಹೀಗೆನ್ನಿಸಿತೋ ಅವಳಿಗೇ ತಿಳಿಯದು. ‘ ಯಾರಾದರೂ ಬಲವಂತವಾಗಿ ತನ್ನ ಎದೆ ಯಲ್ಲಿ ಆ ಮಾತುಗಳನ್ನು ಮೂಟೆ ಕಟ್ಟಿ ಹಾಕಿದರೋ?’ ಎಂದು ಕೂಡಾ ಅನ್ನಿಸಿತು.

ಆ ಮಾತುಗಳನ್ನು ಅತ್ತ ಕಳಿ ಆನಂದಮ್ಮನು ಎದ್ದು ತಲೆಗೆ ಕಿಬ್ಬೊಟ್ಟೆಗೆ ಒದ್ದೆ ಬಟ್ಟೆ ಫೋಟ್ಲೀಸ್ ಹಾಕಿದಳು. ಕೂಡಲೇ ಎಗ್ಯೂ ಮಿಕ್ಸ್ ಚರ್ ತರಿಸಿ ಒಂದಿಷ್ಟು ಕೊಟ್ಟು, ಡಾಕ್ಟರಿಗೆ ಹೇಳಿ ಕಳುಹಿಸಿ ದಳು. ಡಾಕ್ಟರ್ ಬಂದುನೋಡಿ ಇನ್ನೊಂದಿಷ್ಟು ಮಿಕ್ಸ್ ಚರ್ ಕೊಟ್ಟು, ನಾಳೆಬಂದು ನೋಡುವುದಾಗಿ ಹೇಳಿಹೋದರು.

“ರಾತ್ರಿಯೆಲ್ಲ ಜ್ವರಕಾಯಿತು : ಬೆಳಗಿನ ಝಾವದಲ್ಲಿ ಕೆಂಪಿಯು ಕಿರಿಚಿಕೊಂಡು ಎದ್ದು ಬಿಟ್ಟಳು: “ಯಾರೋ ನನ್ನ ಹಿಡಿದೆಳೀತವ್ರೆ

ಎಳೀತವ್ರೇ ಎಂದು ಅರಚುತ್ತಿದ್ದಾಳೆ.

ಆನಂದಮ್ಮ ಶಂಭುರಾಮುಯ್ಯ ಮಲ್ಲಣ್ಣ ಮೂವರೂ ವಿಶ್ವ ಪ್ರಯತ್ನಮಾಡಿ ಅವಳನ್ನು ಸಮಾಧಾನಮಾಡಿದರು.

ಸುಮಾರು ಒಂಭತ್ತು ಗಂಟೆ ಇರಬಹುದು- ಸಾರೋಟು ಬಂತು ; ಮಲ್ಲಿ, ನಾಯಕರು, ಸುಂದರಮ್ಮಣ್ಣಿ ಮೂವರೂ ಬಂದರು. ಮಲ್ಲಿಯು ಓಡಿಹೋಗಿ ತಾಯಿಮುಗ್ಗುಲಲ್ಲಿ ಕುಳಿತುಕೊಂಡು “ಅವ್ವಾ ! ಅವ್ವಾ !” ಎಂದಳು. ಕೆಂಪಿಯು ಆ ಶಬ್ದವನ್ನು ಕೇಳುತ್ತಲೇ “ಬಂದೆಯಾ ಅವ್ವಾ !” ಎಂದು ಆನಂದದಿಂದ ಮಲ್ಲಿಯನ್ನು ತಬ್ಬಿಕೊಂಡಳು. ಅವ ಳಿಗೆ ಆ ಆನಂದದಲ್ಲಿ ಹೊಸದಾಗಿ ಚೈತನ್ಯ ಕೂಡಿತ್ತು. ಅಬ್ಬಾ ಆ ವಾತ್ಸಲ್ಯದ ಪ್ರಭಾವ ಎಂಥದು! ತಾಯಿಗೆ ಮಕ್ಕಳನ್ನು ಕಂಡರೆ ಯೌವನವು ಉಕ್ಕುವುದಂತೆ ; ಆ ಮಗಳನ್ನು ಮುಟ್ಟಿ ಅವಳಿಗೆ ಗುಣ ವಾಯಿತೋ ಎನ್ನುವ ಮಟ್ಟಿಗೂ ಆಯಿತು. ಜ್ವರವು ಕಡಿಮೆಯಾ ದಂತಾಯಿತು.

ಆನೆಂದಮ್ಮನು ಒದ್ದೆ ಬಟ್ಟೆಯಲ್ಲಿ ಮೈಯೆಲ್ಲಾ ಒರೆಸಿದಳು. ರಾಣಿಯೂ ವಿಶ್ವಾಸದಿಂದ ಉಪಚಾರದ ಮಾತುಗಳನ್ನಾಡಿ ಸಮಾಧಾನ ಮಾಡಿದಳು : ಕೆಂಪಿಯು ಕೈಮುಗಿದು ಆಕೆಯ ಪಾದಗಳನ್ನು ಮುಟ್ಟ ಕಣ್ಣಿಗೊತ್ತಿಕೊಂಡು “ಬುದ್ದಿ, ತಾವು ದೊಡ್ಡ ಮನಸ್ಸುಮಾಡಿ ನನ್ನೆ ಮಗೀನ ಕೈಹಿಡಿದು ಕಾಪಾಡಿದ್ರಿ. ನಾನು ನನ್ನ ಚರ್ಮ ಕೊಯ್ದು ನಮ್ಮ ಪಾದಕ್ಕೆ ಜೋಡುಮಾಡಿ ತೊಡಿಸಿದರೂ ತಮ್ಮ ಖಣ ತೀರಿಸ ಲಾರೆ. ಈ ಸಲ ನಾನು ಬದುಕೋ ಅಂಗಿಲ್ಲ. ಅಪ್ಪಣೆಕೊಡಿ. ಓಗ್ಬುಟ್ಟು ಬರ್ತೀನಿ.” ಎಂದಳು.

ಸಹಜವಾಗಿ ಸರಳವಾಗಿ ಬಂದ ಮಾತುಗಳು ರಾಣಿಯ ಹೃದಯ ವನ್ನು ಕಲಕಿದುವು. “ಯಾಕೆ ಕೆಂಪಮ್ಮಣ್ಣಿ ! ಇನ್ನೂ ಎಷ್ಟು ಕಾಲ ಇರಬೇಕೋ ಏನೋ ಮೊಮ್ಮಗನ್ನ ಎತ್ತಿಕೋಬೇಡವಾ? ಸುಮ್ಮನಿರಿ ಹಂಗೆಲ್ಲ ಆಡಬಾರದು” ಎಂದು ಮೃದುವಾಗಿ ನುಡಿದು ಧೈರ್ಯ ಹೇಳಿದಳು.

ನಾಯಕನೂ ಒಂದುಗಳಿಗೆ ಅಲ್ಲಿದ್ದು ಎಲ್ಲವನ್ನೂ ವಿಚಾರಿಸಿ ಕೊಂಡು ತನ್ನ ಕೋಣೆಗೆ ಬಂದನು.

ಇನ್ನೊಂದು ಗಳಿಗೆಗೆ ಡಾಕ್ಟ್ರರು ಬಂದು ನೋಡಿದರು. “ಇದೇಕೋ ಪಲ್ಸ್ ಫೇಲ್ ಆಗುತ್ತಿದೆ. ದೊಡ್ಡಡಾಕ್ವರನ್ನು ಕರಿಸಿದರೆ ಒಳ್ಳೆಯದು.” ಎಂದರು. ಲೇಡೀ ಡಾಕ್ಟರೂ ಬಂದರು. ಅವರೂ ಹೋಗಿ ಇನ್ನೊಬ್ಬ ಭಾರಿಡಾಕ್ಟರನ್ನು ಕರೆತಂದರು. ಊಟದ ಹೊತ್ತಿಗೆ ಮೂವರು ಭಾರಿ ಭಾರಿ ಡಾಕ್ಟರುಗಳು ಬಂದು ನೋಡಿದರು. ಏನೇನೋ ಔಷಧಗಳನ್ನು ಕೊಟ್ಟರು. ಆದರೆ ಅವರ ನಿರೀಕ್ಷೆಯಂತೆ ರೋಗವು ಇಳಿಯಲಿಲ್ಲ. ಆಗ ಇನ್ನೂ ಇಂಜೆಕ್ಷನ್ಗಳು ಬಂದಿರಲಿಲ್ಲ: . ಅಲ್ಲೊ ಪತಿಯೂ ಪೌಡರ್ ಮಿಕ್ಸ್ಚರ್ಗಳಲ್ಲೇ ಇದ್ದ ಕಾಲ.

ಸಂಜೆಯಾಗುತ್ತಾ ಕೆಂಪೀಗೆ ಸಂಕಟವು ಹೆಚ್ಚಾಗುತ್ತ ಬಂತು. ಗಂಜಿಯೂ ದಕ್ಕಲಿಲ್ಲ. ಜ್ಞಾನಾಜ್ಞಾನವಾಗುತ್ತ ಬಂತು. ಜ್ಞಾನ ವಾದಾಗ ಮಲಿಯು ಮಗ್ಗುಲಲ್ಲಿ ಕುಳಿತಿದ್ದು ” ಅವ್ವಾ ! ಏನಾಗ ಬೇಕು?” ಎಂದಳು. ಕೆಂಪಿಯು ಕಣ್ಣು ಅಗಲವಾಗಿ ತೆರೆದು “ಎರಡಾಸೆ” ಎಂದಳು.

” ಹೇಳವ್ವಾ. ಮಾಡೋವ.” “ನೀನೂ ನಾಯಕರು ಜೊತೇಲಿ ನಿಂತುಕೊಳ್ಳಿ ಕಣ್ಣಾರ ನೋಡಬೇಕು. ಆ ಮಕ್ಕಳು ಅವರಿಗೇನಾದರೂ ಮಾಡು.”

ಮಲ್ಲಿಯು ಕಣ್ತುಂಬ ನೀರಿಟ್ಟುಕೊಂಡು ಹೋಗಿ ಗಂಡನನ್ನು ಕರೆದುಕೊಂಡು ಬಂದಳು. ಇಬ್ಬರೂ ಜೊತೆಯಲ್ಲಿ ನಿಂತರು. ಕೆಂಪೀಗೆ ಉಮಾ ಮಹೇಶ್ವರರ ದರ್ಶನವಾಗಿದ್ದರೂ ಅಷ್ಟು ಸಂತೋಷವಾಗುತ್ತಿ ರಲಿಲ್ಲ. ಆ ಆನಂದವು ಅವಳಿಗೆ ದೇಹಾದ್ಯಂತವೂ ವ್ಯಾಪಿಸಿತು. ಜ್ವರವನ್ನು ಹಿಮ್ಮೆಟ್ಟಿಸಿತು. ಎದ್ದು ಗಂಡನನ್ನು ಒರಗಿಕೊಂಡು ಕುಳಿ ತಳು. ಇಬ್ಬರಿಗೂ ಕೈ ಮುಗಿದಳು. “ಬಂದೆ! ಬಂದೆ!” ಎಂದು ಕೆಳ ಗುರುಳಿದಳು. ಒಂದೇಗಳಿಗೆಯೊಳಗಾಗಿ ಮೈಯೆಲ್ಲ ತಣ್ಣಗಾಗಿ ಹೋಯಿತು.
*****