ಗುರುಗಳೆ ನೀವು ನಡೆದ
ಹೆಜ್ಜೆ ಗುರುತು
ನನ್ನೆದೆಯಲ್ಲಿ ಅಚ್ಚೊತ್ತಿವೆ
ಎಲ್ಲವೂ ಮರ್‍ತು

ನಿರ್‍ಮಲ ಪ್ರೇಮ ನಿಮ್ಮದು
ಜನ ಮನದಲಿ
ನೀವು ಬಿತ್ತಿದ ಜ್ಞಾನವು
ನಿತ್ಯ ಜಿವ್ಹೆಯಲಿ

ನೀವು ಅಲೆದಾಡಿದ ಧಾಮ
ಆನಂದ ಪರಾಕಾಷ್ಠೆ
ನೀವು ಹಾಡಿದ ಹಾಡು
ನೀತಿ ನಿಷ್ಠೆ

ಮನದ ಮಲೀನತೆಯ
ನೀವು ಬಿಡಿಸಿದಿರಿ
ಶುದ್ಧ ಚೇತನ್ಯದಲಿ
ಹೂ ಮುಡಿಸಿದಿರಿ

ತಾಯಿ ಭಾರತಿ ಪುನಿತೆ
ನಿಮ್ಮ ಪಡೆದು
ಎಲ್ಲೆಲ್ಲಿ ಬೆಳಕು ಚೆಲ್ಲಿದ್ದಿರಿ
ಮಾಣಿಕ್ಯ ವಿಠಲ ನೆನೆದು
*****