ಶೆಟ್ಟೀ ಬೆಟ್ಟದ ಮೇನೇ
ಹುಟ್ಟಿದೊಂದು ಬಿದುರಾ
ಕೋಲೇ ಕೋಲೆಂಬೂ ಗೀಜಗನೇ || ೧ ||
ಹುಟ್ಟಿತೊಂದು ಬಿದ್ರ ಕೋಲು
ಜಾಡಕಾರ ಕತ್ಯೋ
ಜಾಡಕಾರ ಕತ್ತಿಗೇ
ಲಾಗಿತ್ತೊಂದು ಗೊಡ್ ಮೊರಾ ಕೋಲೂ || ೨ ||
ಆಗಿತ್ತೊಂದು ಗೂಡ್ ಮೊರಕೇ
ಖಂಡ್ಗ ಖಂಡ್ಗ ಬತ್ತ
ಚಿನ್ಮಾಯಂತಾ ಯೇಲಿಯೋ
ಚಿನ್ಮಯಂತಾ ಯೆಲಿ ಗೇ
ರಾವ್ ಗಣ್ ಬೆಕ್ಕೋ || ಕೋಲೂ || ೩ ||
ರಾವ್ ಗಣ್ ಬೆಕ್ಕಿಗೇ
ಜಾಲ್ ಮಾವ್ ಕುನ್ಯೋ
ಜಾಲ್ ಮಾವ್ ಕುನ್ನಿಗೇ
ಗೇರ್ ಕಾರ್‍ಯ ಪಟ್ಟಿ ಹುಲಿಯೋ
ಗೇರ್ ಕಾರ್‍ಯ ಪಟ್ಟಿ ಹುಲಿಗೇ
ಬೆಳ್ಳಿ ಕಟ್ನ ಕೋವ್ಯೋ ಕೋಲೂ || ೪ ||
ಬೆಳ್ಳಿ ಕಟ್ನ ಕೋವಿಗೆ
ಇಜ್ಜಾ ನಾಗರ ಮದ್ದೋ
ಇಜ್ಜಾ ನಾಗರ ಮದ್ದೀಗೇ
ಬಂಕಾಪೂರ್ ದ ಬೆಂಕ್ಯೋ || ಕೋಲೂ || ೫ ||
ಬಂಕಾಪೂರದ ಬೆಂಕಿಗೆ
ಹರ್‌ವಾ ಜಲದಿ ನೀರೋ || ಕೊಲೂ
ಹರ್‌ವಾ ಜಲದಿ ನೀರಿಗೇ
ವಕ್ರ ಕಾಲ್ ಯೆಮ್ಯೋ
ವಕ್ರ ಕಾಲ್ ಯೆಮ್ಮಿಗೇ || ಕೋಲೂ || ೬ ||
ಪಾವ್ ಶೇರ್ ಹಾಲೋ
ಪಾವ್ ಶೇರ್ ಹಾಲಿಗೇ
ಬೆಳ್ಗಲ್ಲಂತಾ ಬೆಣ್ಣ್ಯೋ
ಪಾವ್ ಶೇರ್ ಬೆಣ್ಣಿಗೇ
ತಾಗಿದೊಂದು ಹಣವೋ || ಕೋಲೂ || ೭ ||
ತಾಗಿದೊಂದು ಹಣವಕ್ಕೇ
ಇಪ್ಪತ ಮೊಳ್ನ ಸಾಲ್ಯೋ
ಇಪ್ಪತ ಮೊಳ್ನ ಸಾಲಿಗೇ
ಹದ್ನಾರೆ ವರ್‍ಸನ ಹುಡಗ್ಯೋ || ಕೋಲೂ || ೮ ||
ಹದ್ನಾರೆ ವರ್‍ಸನ ಹುಡ್ಗಿಗೇ
ಹದ್ನೆಂಟ್ ವರ್‍ಸನ ಹುಡ್ಗನೋ || ೯ ||
*****
ಹೇಳಿದವರು: ಶಿವಿ ಜೆಟ್ಟಿ ಮುಕ್ರಿ, ಹೊಲನಗದ್ದೆ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.