ವಾಗ್ದೇವಿಯ ತಂದೆತಾಯಿಗಳು ಮಗಳ ದೆಸೆಯಿಂದ ಅತ್ಯಾನಂದವನ್ನು ಅನುಭವಿಸುವ ಉತ್ತಮ ಸ್ಥಿತಿಗೆ ಬಂದರು. ಅದೇನು ಆಶ್ಚರ್ಯ? ಉಣ್ಣಲಿಕ್ಕೆ ತಿನ್ನಲಿಕ್ಕೆ ಏನೂ ಕಡಿಮೆಯುಂಟೇ? ಅವರಿಗೆ ಯೋಚನೆ ಯಾವದಾದರೂ ಇರಲಿಕ್ಕೆ ಕಾರಣವೇ ಇಲ್ಲ. ಮೃಷ್ಟಾನ್ನಭೋಜನದಿಂದ ಮೈ ಬಣ್ಣವು ಪುತ್ಥಳಿ ಚಿನ್ಮದ ವರ್ಣಕ್ಕೂ ಮಿಗಿಲಾಯಿತ್ತು. ದೇಹದಲ್ಲಿ ಬಲವೂ ಸುಷ್ಟಿಯೂ ವೃದ್ಧಿ ಯಾಗುತ್ತಾ ಬಂದು, ಮೊದಲು ಅವರನ್ನು ನೋಡಿದವರಿಗೆ ಈಗ ಫಕ್ಚನೆ ಗುರ್ತು ಸಿಕ್ಕುವುದು ಪ್ರಯಾಸವಾಯಿತೆನ್ನಬಹುದು. ಶ್ರೀಪಾದಂಗಳವರ ದಯಾಭಿಲಾಷಿಗಳಾಗಿ ಬರುವವರಲ್ಲಿ ಅನೇಕರು ಮೊದಲು ವಾಗ್ದೇವಿಯ ಪಿತನನ್ನು ಕಂಡು, ತನ್ನ ಬರುವಿಕೆಯ ಉದ್ದೇಶವನ್ನು ವಿನಯಪೂರ್ವಕ ವಾಗಿ ತಿಳಿಸಿ, ಅದು ನೆರವೇರಲಿಕ್ಕೆ ಅವಶ್ಯವಿರುವ ಸಹಾಯವನ್ನು ದೊರ ಕಿಸಿಕೊಳ್ಳುವುದಕ್ಕೆ ಅವನಿಂದ ವಾಗ್ದಾನ ನಡಕೊಳ್ಳುವ ಮುಂಚೆ ಯತಿಗಳ ಮಠದ ಬಾಗಿಲಿಗೆ ಹೋಗಲಿಕ್ಕೆ ಹೆದರುವರು. ಸಣ್ಣಸಣ್ಣ ಸಂಗತಿಗಳಲ್ಲಿ ತಮ್ಮಣ್ಣಭಟ್ಟನು ವೆಂಕಟಪತಿ ಆಚಾರ್ಯನನ್ನು ಕಂಡು, ಇಂಧಿಂಥವಗೆ ಇಂಥಿಂಥಾ ಕೆಲಸವಾಗಬೇಕೆಂದು ತಿಳಿಸಿದರೆ ಸಾಕು. ಅವನು ಕೊಟ್ಟ ವಾಗ್ದಾನಗಳು ನೆರವೇರುತ್ತಿದ್ದುವು. ವಿಷೇಷ ಕಾರ್ಯಗಳಾದರೆ ವಾಗ್ದೇವಿಯ ಮುಖೇನ ಆಗಬೇಕು. ಅವಳು ತಾನೆ ಶ್ರೀಪಾದಂಗಳವರಿಗೆ ಅರಿಕೆಮಾಡಿ ಅವರು ವಿನೋದರೂವನಾಗಿ ಒಲ್ಲೆನೆಂದರೆ ಅವರ ಕಿವಿಯನ್ನು ಹಿಂಡಿ– “ಸಾಕು ನೀನು ಹೇಳದಂತಾಗಲಿ” ಎಂಬ ನುಡಿಯನ್ನು ಸನ್ಯಾಸಿಯ ಬಾಯಿ ಯಿಂದ ಹೊರಡಿಸದೆ ಮ್ಲಾನವದನಳನಗಿ ಹಿಂತಿರಿಗಿ ಬರುವ ಕಾಲ ಉಂಟೇ? ಇಹದಲ್ಲಿ ಸ್ತ್ರೀಮೋಹಕ್ಕೆ ಮರುಳಾದವನು ಚಂದ್ರನಲ್ಲವೇ?
ಆಬಾಚಾರ್ಯನ ಕಾರಭಾರಿನ ವೃತ್ತಾಂತ ಕೇಳಲಿಕ್ಕೆ ವಾಚಕರಿಗೆ ಇಷ್ಟ ವಿರಬಹುದು. ಅವನು ಮುಂಜಾನೆ ಎದ್ದು ಮುಖಪ್ರಕ್ಷಾಳನ ಮಾಡಿದಾಕ್ಷಣ ದೇವಸ್ಥಾ ನಕ್ಕೆ ಹೋಗಿ ದೇವರಿಗೆ ಕೈ ಮುಗಿಯುವದು ಬಿಟ್ಟು ಭೋಜನ ಶಾಲೆಗೆ ಬಂದು ಆ ಹೊತ್ತು ಎಷ್ಟು ಬಗೆ ಪಲ್ಯ, ನಿತ್ಯಗಟ್ಲೆಗಿಂತ ಹೆಚ್ಚಿನ ಭಕ್ಷಭೋಜ್ಯಾದಿಗಳು ಆಗುವ ಸಂಭವವದೆಯೋ ಎಂಬ ವರ್ತಮಾನವನ್ನು ಜಾಗ್ರತೆಯಿಂದ ಸಂಗ್ರಹಿಸಿದ ಮೇಲೆ ಅತ್ತೆ ಮಾವಂದಿರನ್ನು ಕಂಡು ಅವರಿಗೆ ವಂದಿಸಿ ಪತ್ನಿಯ ಮುಖಾವಲೋಕನದ ಸುಖವನ್ನನುಭವಿಸಿ ಒಂದಾನೊಂದು ವೇಳೆ ಸಿಟ್ಟುತಾಳಿ — “ಏನೇ ವಾಗೀ! ನಿನಗೆ ಯಾರೂ ಕೇಳುವವರಿಲ್ಲವೇ ಒಳ್ಳೇಶಾಲೆ ಉಟ್ಟು ಕುಪ್ಪಸ ತೊಟ್ಟುಕೊಂಡು ತುಳಸಿಕಟ್ಟೆ ಎದುರು ಚಲೋ ದಾಗಿ ರಂಗೋಲೆ ಬರೆದು, ಹೂವುಗಳಿಂದ ಅಲಂಕರಿಸುವದು ಬಿಟ್ಟು ಇನ್ನೂ ಮುಖಮಜ್ಜನ ಮಾಡದೆ ಸುಮ್ಮಗೆ ದೈವದಂತೆ ಕೂತುಬಿಟ್ಟಿದ್ದೀಯಲ್ಲ? ದಿನವಹಿ ನಿನಗೆ ಬುದ್ಧಿಹೇಳಬೇಕೇ? ‘ಕುದುರೆಗೆ ಹಿಷಾರೆ ಕತ್ತೆಗೆ ಲತ್ತೆ’ ಎಂಬ ಗಾದೆ ಕೇಳಿ ಬಲ್ಲಿಯಾ? ಕತ್ತೆಯಂತೆ ನಿನ್ನ ಅವಸ್ಥೆ ಕಾಣಿಸುತ್ತದೆ. ಈಗ ಒಂದು ಏಟು ಕೊಟ್ಟು ಬಿಟ್ಟರೆ ನಾಲ್ಕು ಗಾವುದವರೆಗೂ ಉರುಳಾಡ ಬೇಕು. ಛೀ ಥೂ, ಎನ್ನಿಸಿಕೊಂಡನಕ ಯಾವ ಕೆಲಸವಾದರೂ ಮಾಡ ಲಾರೆಯಾ” ಎಂದು ಕೋಪಾಟೋಪದಿಂದ ದವಡೆಗೆ ಹೊಡಿಯಲಿಕ್ಕೆ ಕೈ ಎತ್ತುವ ಕಾಲದಲ್ಲಿ ಭಾಗೀರಧಿಯು ಅಡ್ಡತಡದು ಮಗಳಿಗೆ ಗದರಿಸಿ ಅಳಿ ಯನ ಸಿಟ್ಟು ತಣಿಸುವಳು.
ವಾಗ್ದೇವಿಯು ಗಂಡಗೆ ಸಿಟ್ಟು ಬಂದಾಗ ಗಡಗಡನೆ ನಡುಗಿ ಈಗ ಹೊಡೆಯುವನೋ ಆಗ ಹೊಡಿಯುವನೋ ಎಂಬ ಹೆದರಿಕೆಯಿಂದಿರುವವಳ ವೇಷವನ್ನು ಧರಿಸಿಕೊಳ್ಳುವಳು. ಅವಳು ಕ್ಷಣಸಾವಕಾಶವಿಲ್ಲದೆ ದಪ್ಪವಾದ ಮೊಸರಿನಲ್ಲಿ ಜೀರಸಾಲೆಬತ್ತದ ಅವಲಕ್ಕಿ ನೆನೆಹಾಕಿ ಎಳೇಮೆಣಸು ಹಸಿ ಶುಂಠಿ ಚೂರು ಬೆರಸಿ -“ಹೌದೇನು! ಮೊಸರು ಅವಲಕ್ಕಿ ಮಡಗಿ ಎಷ್ಟು ಹೊತ್ತಾಯಿತು? ಒಳಗೆ ಬರಬಾರದೇನು! ದಿನಾಲು ನಿಮಗೆ ಹೇಳಿಹೇಳಿ ಸಾಯುವವರ್ಯಾರು? ಹೊತ್ತಿಗೆ ಇಷ್ಟು ತಿನ್ನಲಕ್ಕೆ ಉದಾಸೀನವಾದರೆ ಮಾಡ ತಕ್ಕದ್ದೇನು” ಎಂದು ಸಮೀಪವಿದ್ದವರಿಗೆ ಮೆಚ್ಚಿಸುವಳು. “ರವಷ್ಟು ತಡಿಯೇ, ನಾನಿನ್ನೂ ಸೂರ್ಯನಮಸ್ಕಾರ ಮಾಡಲಿಲ್ಲ. ನಿನ್ನ ಅವಲಕ್ಕಿ ಯಾರಿಗೆ ಬೇಕು? ದಿಂಡೆ ಹೆಂಗಸು? ಹೀಗೆಂದು ಗದರಿಸಿ ಬಿಟ್ಟ ಗಂಡನು ಮೋರೆ ಗಂಟುಹಾಕಿಕೊಳ್ಳುವದೂ ಇತ್ತು. ಅಂಥಾ ಸಮಯದಲ್ಲಿ ಸುಮ್ಮನೆ ಅವಲಕ್ಕಿ ಹಾಳಾಗ ಬೇಕ್ಯಾಕೆ? ಕೆಪ್ಪಮಾಣಿಯಾದರೂ ತಿನ್ನಲೆಂದು ವಾಗ್ಧೇ ವಿಯು ಅವನನ್ನು ಕರಿಯಲಿಕ್ಕೆ ನೋಡಿ– “ಸೂರ್ಯನಮಸ್ಕಾರ ನಾಳೆ? ಎಂದು ಬೇಗನೆ ಒಳಗೆ ಹೋಗಿ ಅವಲಕ್ಕಿಯನ್ನು ಸಂಪೂರ್ಣವಾಗಿ ಹೊಟ್ಟೆ ಯಲ್ಲಿಳಿಸಿ ಬಿಟ್ಟು ತೇಗುತ್ತಾ ಆ ಹೊಟ್ಟೆಬಾಕನು ಹೊರಗೆ ಬರುವನು.
ಹಗಲು ಸಮಯ ಅಬಾಚಾರ್ಯನು ಆಗಿಂದಾಗ್ಯೆ ಪತ್ನಿಯ ಮೇಲಣ ವಿಚಾರವನ್ನು ಮಾಡಿ ಅವಳ ನ್ಯೂನಾತಿರಿಕ್ತಗಳನ್ನು ಕ್ಷಣಕ್ಷಣ ತಿದ್ದುತ್ತಾ ಈ ದಂಪತಿಗಳ ಮರ್ಮವನ್ನು ತಿಳಿಯದ ಜನರಿಗೆ ಅವನು ಸಾಕ್ಷಾತ್ ಯಮನೆಂಬಂತೆ ಕಾಣಿಸಿಕೊಳ್ಳುವನು. ಪರಂತು ಮಠದಲ್ಲಿರುವ ಸರ್ವ ಜನ ರಿಗೂ ಆಬಾಚಾರ್ಯನ ಕಡದುಗಾರಿಕೆ ಚನ್ನಾಗಿ ಗೊತ್ತಿತ್ತು. ಅವನು ಹೆಂಡ ತಿಯ ಮೇಲೆ ನಡಿಸುವ ಶಿಕ್ಷೆರಕ್ಷೆಯು ಸೂರ್ಯನು ಉದಯಾಚಲಕ್ಕೆ ಬಂದ ತರುವಾಯ ಅಸ್ತಾಚಲಕ್ಕೆ ಹೋಗುವ ಪರಿಯಂತರ ಹನ್ನೆರಡು ತಾಸುಗಳಷ್ಟು ಸಮಯಕ್ಕೆ ಮಾತ್ರ ಮಿತವಾಗಿರುವದಲ್ಲದೆ ದೀಪ ಹಚ್ಚಿದ ಮೇಲೆ ಅವಳ ಮೇಲೆ ಪತಿಯು ಎಳ್ಳಿನಷ್ಟು ಸ್ವತಂತ್ರ ಉಳ್ಳವನಾಗಿರಲಿಲ್ಲ. ಹೀಗಾಗಿ ಅವನು ಪುಣ್ಯವಂತನೆಂದು ಅತ್ತೆ ಮಾವಂದಿರು ಸಹ ಅವನ ಮೇಲೆ ಅಮಿತ ಪ್ರೀತಿಯಿಂದ ಇರುವರು. ವಾಗ್ದೇವಿ ಅನಕಾ ಪತಿಯನ್ನು ನೋಡಿದಾಕ್ಷಣ ಬೆಚ್ಚಿ ಬಿದ್ದು ಸಂದು ಮೂಲೆಯಲ್ಲಿ ಅಡಗಿಕೊಳ್ಳುವಳು. ಎಷ್ಟು ಮುಂಜಾಗ್ರತೆಯಿಂದ ನಡಕೊಂಡರೂ ಇವರು ಮಠದಲ್ಲಿ ಆವಾಸ ಮಾಡಿಕೊಂಡಿರುವ ಉದ್ದೇಶವು ಸಜೀವ ಪ್ರಾಣಿಗಳಿಗೆಲ್ಲ ಚನ್ನಾಗಿ ಗೊತ್ತಿರುವದು.
ಒಂದಾನೊಂದು ದಿನ ಗ್ರಹಣಕಾಲದಲ್ಲಿ ನದೀಸ್ನಾನಕ್ಕೆ ವಾಗ್ದೇವಿಯು ಪತಿ ಮತ್ತು ತಂದೆತಾಯಿಗಳ ಸಮ್ಮೇಳದಲ್ಲಿ ಮಂದಗಮನೆಯಾಗಿ ಹೋಗು ವಾಗ ಅದೇ ಉದ್ದಿಶ್ಯ ನದಿತೀರಕ್ಕೆ. ಬರುವವರಲ್ಲಿ ಕೆಲವು ಕಾಕ ಪೋಕರು ವಾಗ್ದೇವಿಯನ್ನು ಹಾಸ್ಯವದನಯುಕ್ತರಾಗಿ ನೋಡಿದರು. ಆಬಾಚಾರ್ಯನು ಅವರನ್ನು ಕಂಡಾಬಟ್ಟೆ ಬೈದು ಗದರಿಸಿ ದೂರಮಾಡಿದನು. ಕೂಡಲೇ ಇನ್ನೂ ಕೆಲವರು ಹಾಗೆಯೇ ಮಾಡತೊಡಗಿದರು. ಆಚಾರ್ಯನು ಸುಮ್ಮಗಿರಲಿಲ್ಲ. ದಿಂಡರಾದ ಆ ಯೌವನಸ್ತರಿಗೆ ವಿವಿಧರೀತಿಯಲ್ಲಿ ಹೆದರಿಸಿ ತನ್ನ ಪ್ರತಾಪ ವನ್ನು ಮೆರೆಸಿಬಿಟ್ಟೆನೆಂಬ ಅಹಂಕಾರದಿಂದ ಮುಂದ್ವರಿಯುತ್ತಿರಲು ಕೆಲವು ಯೌವನಸ್ಥರ ಗುಪ್ತಭೋಧನೆಯಿಂದ ಉತ್ತೇಜನ ಹೊಂದಿದ ಶುದ್ಧ ಪಟಿಂಗ ನೊಬ್ಬನು– “ಕ್ವಚಿತ್ ಕಾಣೆ ಭವೇತ್ಸಾಧು ಸ್ವಚಿತ್ ಕಾಣೀ ಪತಿವ್ರತಾ” ಎನ್ನುತ್ತಾ ವಾಗ್ದೇವಿಯ ಮುಖವನ್ನು ಈಕ್ಷಿಸಿ ಗಹಗಹಿಸಿ ನಕ್ಕನು.
ಕವನಕಟ್ಟಿ ನಿಂದೆಯನ್ನು ಇನ್ನೊಬ್ಬನು ಮಾಡಿದನು. ಆಗ ಮತ್ತೊ ಬ್ಬನು ಅವನಂತೆಯೇ ಇನ್ನೊಂದು ಕುಚೋದ್ಯರೂಪವಾದ ಪದ್ಯ ಮಾಡಿ ರಾಗದಿಂದ ಹಾಡಿ ತನ್ನ ಸಂಗಡಿಗರ ಸಮೇತ ನಕ್ಕನು.
ಕುಹಕಿಗಳಾದ ಬೇರೆ ಕೆಲವರು ನಿರಾತಂಕವಾಗಿ ನಗಲಿಕ್ಕೆ ಪ್ರಾರಂಭಿ ಸಿದರು. ಆಬಾಚಾರ್ಯನು ಸುಮ್ಮಗಿರದೆ ಹಿಡುಕೊಂಡಿರುವ ಬೆತ್ತವನ್ನು ಬೀರುತ್ತಾ ಆ ದುರ್ಜನರನ್ನು ಓಡಿಸಿಕೊಂಡು ಹೋದನು. ತಕ್ಕಷ್ಟು ದೂರ ದಲ್ಲಿ ಅವರು ಬೇರೆ ತಂಡಗಳಾಗಿ ನಿಂತುಕೊಂಡು ವಿವಿಧ ಹಾಸ್ಯಕರವಾದ ಪದ್ಯಗಳನ್ನು ರಚಿಸಿ ಆಚಾರ್ಯರಿಗೆ ನಮಸ್ಕಾರ ಹಾಕಿರೋ ಎಂದರು. ಪೋಕ ರೆಲ್ಲರೂ ಕೈಚಪ್ಪರಿಸಿದರು.
ವಾಗ್ದೇವಿಯ ತಂದೆ ತಾಯಿಗಳು ಹೆಚ್ಚು ವ್ಯಥೆಯನ್ನು ತಾಳಿ ವಾಗ್ದೇವಿ ಯನ್ನು ಇಂಧ ಸಮೂಹದ ಮಧ್ಯದಿಂದ ತಕ್ಕೊಂಡು ಬಂದದ್ದು ದೊಡ್ಡ ಹೇಸಾಟನಾಯಿತೆಂದರು. ಆಬಾಚಾರ್ಯನು ಶುದ್ಧ ಬುದ್ಧಿ ಹೀನನಂತೆ ವರ್ತಿ ಸುತ್ತಾನೆಂಬ ನಾಚಿಕೆಯನ್ನು ಸಹಿಸಲಾರದೆ ವ್ಯಾಕುಲದಿಂದ ಅವರೆಲ್ಲರು ಮಠಕ್ಕೆ ಹಿಂತಿರುಗಿ ಬಂದರು. ಒಡನೆ ವಾಗ್ದೇವಿಯು ಚಂಚಲನೇತ್ರರನ್ನು ಕಂಡು ಮಳೆಯ ನೀರಂತೆ ಕಣ್ಣುಗಳಿಂದ ಜಲಧಾರೆಯನ್ನು ಸುರಿಸಿಕೊಳ್ಳುತ್ತ ತನಗಂದಾದ ಮಾನಭಂಗದ ವೃತ್ತಾಂತವನ್ನು ವಿವರಿಸಿ; ಪ್ರಾಣವು ಈಗಲೇ ಈ ಭ್ರಷ್ಟಶರೀರವನ್ನು ತೊಲಗಿ ಹೋದರೆ ಧನ್ಯಳಾಗುತ್ತಿದ್ದೆನೆಂದು ಬಹು ಪರಿಯಿಂದ ಮರುಗಿದಳು. ಸನ್ಯಾಸಿಯು ಮಿತಿಮಾರಿದ ಕೋಪದಿಂದ ನಡು ಗುತ್ತಾ ಔಡುಗಳನ್ನು ಕಚ್ಚಿಕೊಂಡು, ಕಣ್ಣಾಲಿಗಳನ್ನು ಗರಗರನೆ ತಿರುಗಿಸುವ ಬರಕ್ಕೆ ವಾಗ್ದೇವಿಯ ದೂಷಕರನ್ನು ಆವಾಗಲೇ ಸನ್ಯಾಸಿಯು ಕೊಂದು ಹಾಕಿ ಬಿಡುವ ಯೋಚನೆಯಲ್ಲಿರುವನೋ ಎಂಬ ದೊಡ್ಡ ಭೀತಿಯು ಅವಳ ಮನಸ್ಸಿಗೆ ಹೊಕ್ಕಿತು. ಸೂರ್ಯನು ಪಶ್ಚಿಮಕಡಲಿಗೆ ಬೀಳಬೇಕಾದರೆ ಆ ಕುನ್ನಿಗಳಿಗೆ ಬುದ್ಧಿ ಕಲಿಸದಿದ್ದರೆ ತನ್ನ ಮುಖಾವಲೋಕನವೇ ಮಾಡ ಬೇಡೆಂದು ಚಂಚಲನೇತ್ರರು ವಾಗ್ದೇವಿಗೆ ಸಮಾಧಾನಗೊಳಿಸಿ ಕಳುಹಿಸಿ ವೆಂಕಟಪತಿ ಆಚಾರ್ಯನನ್ನು ಕೂಡಲೇ ಬರಮಾಡಿಕೊಳ್ಳುವುದಕ್ಕೆ ಜನದ ಮೇಲೆ ಜನವನ್ನು ಕಳುಹಿಸಿಕೊಟ್ಟರು.
ನದೀ ಸ್ಪಾನಕ್ಕೆ ಹೋಗಿರುವ ವೆಂಕಟಪತಿಯು ಧಣಿಯ ಆಜ್ಞೆಯಾಯಿ ತೆಂಬ ವಚನ ಕಿವಿಗೆ ಬಿದ್ದ ಕ್ಷಣ ತೀವ್ರವಾಗಿ ಸ್ನಾನವನ್ನು ತೀರಿಸಿಕೊಂಡು ಶ್ರೀಪಾದಂಗಳ ಸಮಾಪಕ್ಕೆ ಬಂದು ಪ್ರಣಾಮಮಾಡಿ ಅವರ ಮುಖವನ್ನು ಈಕ್ಷಿಸುವಾಗ ಯಮನನ್ಮಾದರೂ ಕಣ್ಣುಬಿಟ್ಟು ನೋಡಬಹುದು, ಸಿಟ್ಟಿನಿಂದ ಮುಖ ವಿಕಾರವಾದ ಚಂಚಲನೇತ್ರರನ್ನು ನೋಡಲಿಕ್ಕೆ ಭಯವಾಗಿ ತಲೆ ಯನ್ನು ಬಾಗಿಸಿಕೊಂಡು ನಿಂತನು. ಅರೆಘಳಿಗೆ ಪರಿಯಂತರ ಮಾತಾಡದೆ ಸುಮ್ಮನಿದ್ದ ಮೇಲೆ “ನಮ್ಮ ಪ್ರಿಯಳನ್ನು ಹೀನಿಸಿದ ನಾಯಿಗಳ್ಯಾರು ವೆಂಕ ಟಪತೀ! ಗೊತ್ತಿದ್ದರೆ ಹೇಳು; ಇಲ್ಲವಾದರೆ ಬೇಗ ತಿಳುಕೊಂಡು ಅರಿಕೆ ಮಾಡು; ಈ ಸಣ್ಣ ಕೆಲಸ ನಿನ್ನಿಂದಾಗದಿದ್ದರೆ ಮನೆಗೆ ನಡೆದುಬಿಡು. ನಮ್ಮ ಮುಂದೆ ದಂಡವಶ್ ನಿಂತುಕೋಬ್ಯಾಡ” ಎಂದು ಧನಿಗಳ ಅಪ್ಪಣೆ ಯಾಯಿತು. ಕೊಂಚ ಸಮಯ ಕೊಟ್ಟರೆ ವಿಚಾರಿಸಿ ಸಕಲ ವೃತ್ತಾಂತವನ್ನು ಪೂರ್ಣವಾಗಿ ಅರಿಕೆಮಾಡುವದಾಗಿ ವಿಜ್ಞಾಪಿಸಿ ವೆಂಕಟಪತಿ ಆಚಾರ್ಯನು ವಾಗ್ದೇವಿಯನ್ನೂ ಅವಳ ತಂದೆತಾಯಿಗಳನ್ನೂ ಅವಳ ಪತಿಯನ್ನೂ ಕಂಡು ಅವರನ್ನು ಅವಮರ್ಯಾದಿ ಮಾಡಿದ ಪೋಕರಿಗಳ್ಯಾರೆಂಬ ಅನುಭವವನ್ನು ತಕ್ಕಮಟ್ಟಿಗೆ ಸಂಗ್ರಹಿಸಿ ಪುನಃ ನದಿಯ ಬಳಿಗೆ ಹೋಗಿ ಪ್ರಥಮತಃ ತನಗೆ ಮಾತಾಡಲಿಕ್ಕೆ ಸಿಕ್ಕಿದ ತಿಪ್ಪಾಶಾಸ್ತ್ರಿಯ ಸಂಗಡ ಸಂಭಾಷಣೆಯನ್ನು ಮಾಡಿ, ತಿಳಿಯಬೇಕಾಗಿರುವ ಸಮಾಚಾರವನ್ನು ಆದ್ಯಂತ ಅರಿತುಕೊಂಡು, ಮಠಕ್ಕೆ ಮರಳಿ ಚಂಚಲನೇತ್ರರಿಗೆ ತಿಳಿಸಿದನು.
ಬಹಿರಂಗವಾಗಿ ಕೆಣಕುವಷ್ಟು ಧೈರ್ಯಗೊಂಡ ಕಡುಮೂರ್ಬರನ್ನು ತಾಮಸವಿಲ್ಲದೆ ಶಿಕ್ಷಿಸಿದನಕ ಭಿಕ್ಷೆ ತಕ್ಕೊಳ್ಳಲಾರೆನೆಂದು ಚಂಚಲನೇತ್ರರು ಹಟಹಿಡಿದರು.
ವಾಗ್ದೇವಿಯು ನಾಚಿಕೆಯಿಂದ ಮೋರೆಯೆತ್ತಲಾರದೆ ಕತ್ತಲೆಕೋಣೆ =ಯನ್ನು ಪ್ರವೇಶಿಸಿ ಕಣ್ಣೀರು ಸುರಿಸುತ್ತಾ ಕೂತುಕೊಂಡಳು. ಅವಳ ತಂದೆ ತಾಯಿಗಳು ಬಹು ಖಿನ್ನರಾಗಿ ಅಲ್ಲಲ್ಲಿ ಅಡಗಿಕೊಂಡರು. ಆಬಾಚಾರ್ಯನು ಹಂದಿಯಂತೆ ನಾಚಿಕೆಯನ್ನು ತೊರೆದುಬಿಟ್ಟು ಅಂದು ಊಟಕ್ಕೆ ಎಲೆಹಾಕು ವಾಗ ಎಷ್ಟು ಹೊತ್ತಾಗುವುದೋ ಎಂಬ ಯೋಚನೆಯಲ್ಲಿಯೇ ಬಿದ್ದನು ವಾಗ್ದೇವಿಯ ಚಿಂತೆಗೆ ತುದಿಮೊದಲೇ ಇರಲಿಲ್ಲ. ಭಾಗೀರಧಿಯು ಎಷ್ಟಾ ವರ್ತಿ ಕರೆದಾಗ್ಯೂ ಅವಳು ಪ್ರತ್ಯುತ್ತರ ಕೊಡದೆ ಇದ್ದುಕೊಂಡಳು.
*****
ಮುಂದುವರೆಯುವುದು