ಬರೆದವರು: Thomas Hardy / Tess of the d’Urbervilles
ಎಲ್ಲರಿಗೂ ಮಲ್ಲಿಯನ್ನು ಸಮಾಧಾನಸಡಿಸುವುದು ದುಸ್ಸಾಧ್ಯ ವಾಯಿತು. ಅವಳು ಅಳುವುದಿಲ್ಲ. ಮಾತೂ ಆಡುವುದಿಲ್ಲ. ಕರ್ತ ತ್ವವೇ ಇಲ್ಲದ ಅಚೇತನ ಮೂರ್ತಿಯಂತೆ ಕುಳಿತಲ್ಲಿ ಕುಳಿತಿರುತ್ತಾಳೆ. ಕಣ್ಣು ಬಿಟ್ಟಿದೆ. ಎನನ್ನೂ ನೋಡತ್ತಿಲ್ಲ. ಬಾಯಿ ಮುಚ್ಚಿದೆ: ತುಟ ಪಿಟಕ್ಕೆನ್ನುವುದಿಲ್ಲ. ಮಖವು ಗಂಭೀರವಾಗಿದೆ. ಎಳ್ಳಷ್ಟು ಚಲನ ವಿಲ್ಲ: ಹೋಗಿ ಮಗ್ಗುಲಲ್ಲಿ ಕುಳಿತುಕೊಂಡು ಮಾತನಾಡಿಸಿದರೆ, ಎರಡು ಸಲವೋ ಮೂರುಸಲವೋ ಕೂಗಿದರಿ,’ಆಂ’ ಎಂದು ಎಲ್ಲಿಯೋ ಪಾತಾಳ ಕುಹರದಿಂದ ಎದ್ದು ಬಂದವಳಂತೆ, ಉತ್ತರ ಕೊಡುತ್ತಾಳೆ. ಮತ್ತೆ ಪ್ರಬಲ ಪ್ರಯತ್ನದಿಂದ ನೀರಿನ ಮೇಲಕ್ಕೆ ತಲೆಯೆತ್ತಿದ್ದ ಮೀನನ್ನು ಯಾವುದೋ ಅಜ್ಷಾತಶಕ್ತಿಯು ಎಳೆದುಕೊಂಡು ಹೋದರೆ ನೀರು ಮತ್ತೆ ನಿಶ್ಚಲವಾಗುನಂತೆ ತಣ್ಣಗಾಗುತ್ತಾಳೆ, ಆದರೆ ನೋಡಿದ ವರಿಗೆಲ್ಲಾ ಬಿರುಗಾಳಿಯಲ್ಲಿ ಅಲ್ಲೋಲ ಕಲ್ಲೋಲವಾಗಿ ಮಹಾಕ್ಷೋಭ ದಲ್ಲ ಸಿಕ್ಕಿ ಒದ್ದಾಡುತ್ತಿರುವ ಸಾಗರವನ್ನು ಕಂಡಂತೆ ಆಗಿ ಗಾಬರಿಯಾಗುತ್ತದೆ. ಎಲ್ಲಿಯೋ ಸಣ್ಣಗೆ ಉಸಿರಾಡುತ್ತಿದೆ. ಕಣ್ಣಿಟ್ಟು ನೋಡಿದರೆ ಎದೆಯು ಉಬ್ಬುತ್ತಿರುವುದೂ ಇಳಿಯುತ್ತಿರುವುದೂ ಕಾಣಿ ಸುತ್ತದೆ. ಅದಷ್ಟು ಬಿಟ್ಟರೆ ಅಲ್ಲಿ ಸೋಫಾದಮೇಲೆ ಕುಳಿತಿರು ವುದು ಶಿಲಾಮೂರ್ತಿಯೋ, ಮನುಷ್ಯ ವಿಗ್ರಹವೋ ಅದನ್ನು ಯಾರೂ ಹೇಳುವುದಕ್ಕೇ ಸಾಧ್ಯವಿಲ್ಲ.
ನಾಯಕನಿಗೆ ಒಮ್ಮೊಮ್ಮೆ “ಆ ಮೇಷ್ಟ್ರಾದರೂ ಬಂದಕ್ಕೆ ಇವಳ ಸಹಜವಾದ ನಗು ಬಂದೀತೇನೋ ?’ ಅನಿಸುತ್ತದೆ. ಅವರಿಗೆ ಏನು ಮಾಡುವುದಕ್ಕೂ ತೋರದು. ಅವನ ಬಲವಂತಕ್ಕೆ ಏನೋ ಊಟದ ಶಾಸ್ತ್ರ ಮಾಡುತ್ತಾಳೆ : ಹಾಸುಗೆಯಲ್ಲಿ ಮಲಗಿದರೂ ಮುಸುಕು ಹಾಕಿ ಕೊಂಡು ಅಳುತ್ತಾಳೆ. ಮೈಯೆಲ್ಲಾ ಜ್ವರ ಬಂದಹಾಗೆ ಸುಡುತ್ತದೆ.
ಅವಳ ದುಃಖದ ಆಳವನ್ನೂ ಯಾರೂ ತಿಳಿಯಲಾರರು: ಅದರ ಪರಿಹಾರವಂತೂ ಗೊತ್ತೇ ಇಲ್ಲ.
ಮಲ್ಲಣ್ಣ ಆಗಾಗ ತತ್ವ ಹೇಳಿಕೊಂಡು ಕಣ್ಣೀರು ಒರೆಸಿಕೊಳ್ಳು ತ್ತಾನೆ. ಆ ದಂಪತಿಗಳು ತನ್ನು ಆತ್ಮೀಯರು ಯಾರೋ ಹೋದರೆ ಆಗುವಂತೆ ಆಗಿರುವ ಮನಶ್ಶೂನ್ಯತೆಯನ್ನು ಅನುಭವಿಸುತ್ತಿದ್ದಾರೆ.
ಕೆಂಪಿಯು ಒಂದು ವಿಚಿತ್ರವಾದ ರೀತಿಯಲ್ಲಿ ಎಲ್ಲರ ಮನಸ್ಸಿ ನಲ್ಲೂ ನಿಂತು ತಾನಿಲ್ಲದಿರುವಿಕೆಯನ್ನು, ತನ್ನ ಅಭಾವವನ್ನು ತೋರಿಸು ತ್ರಿದ್ದಾಳೆ.
ಮೂರು ದಿನವಾಯಿತು. ನಾಯಕನಿಗೆ ನರಸಿಂಹಯ್ಯ ಬಂದಿಲ್ಲ ವಲ್ಲ ಎಂದು ಚಿಂತೆ. ಬೆಂಗಳೂರಿಗೆ ಹೋಗಿರುವುದು ಗೊತ್ತು. ಅವನ ವಿಳಾಸ ತಿಳಿದಿದ್ದರೆ ಟಿಲಿಗ್ರಾ೦ ಆದರೂ ಕಳುಹಿಸಬಹುದಿತ್ತು. ಅದೂ ಗೊತ್ತಿಲ್ಲ. ಏನೋ ಟಾಗೂರ್ ಬಂದಿರುವರಂತೆ ! ಅವರನ್ನು ನೋಡು ವುದಕ್ಕೆ ಹೋಗಿದ್ದಾನೆ : ಎಲ್ಲಿ ಇಳಿದಿದ್ದಾನೋ ಗೊತ್ತಿಲ್ಲ.
ಆದಿನ ಮಧ್ಯಾಹ್ನ ಶಂಭುರಾಮಯ್ಯನು ಬಂದು “ನಾಳೆ ರವೀಂದ್ರನಾಥ ಟಾಗೂರರು ಬರುತ್ತಾರಂತೆ” ಎಂದು ಸುದ್ದಿಯನ್ನು ಹೇಳಿದನು. ಇನ್ನೂ ಆ ಮಾತು ಮುಗಿಯುತ್ತಿದ್ದ ಹಾಗೆಯೇ ನರಸಿಂಹ ಯ್ಯನು ಬಂದನು. ಅವನಿಗೂ ಮೊಕ ಇಳಿದುಹೋಗಿತ್ತು. ಅವನ ಜೊತೆಯಲ್ಲಿ ಅವನ ತಾಯಿಯೂ ಬಂದಿದ್ದರು.
ನಾಯಕನು ಅವನನ್ನು ಕಂಡ ಕೂಡಲೇ ಬಡವನು ನಿಧಿಯನ್ನು ಕಂಡಂತೆ ಹರಿಸಿದನು. ಅವನಿಗೆ ಇನ್ನು ಮಲ್ಲಿಯು ಉಳಿದಳು ಎನ್ನಿಸಿತು. “ಬನ್ನಿ” ಎಂದು ಸೋಫಾದಲ್ಲಿ ಕೂರಿಸಿದನು.
ನರಸಿಂಹಯ್ಯನು ” ಕೆಂಪಮ್ಮನವರು ಹೋಗಿಬಿಟ್ಟರಂತೆ ?” ಎಂದು ವಿಚಾರಿಸಿದನು.
ನಾಯಕನು “ಕೆಂಪಮ್ಮನೋರು ಏನೋ ವಯಸ್ಸಾಗಿತ್ತು. ಹೋದರು. ಯಾವೊತ್ತಿದ್ದರೂ ಹೋಗಬೇಕಾದ್ದು. ಅವರ ಮಗಳೂ ಏನಾದಾಳೋ ಅಂತ ದಿಗಿಲಾಗದೆ.” ಎಂದು ತನ್ನ ನೋವನ್ನು ತಾನೇ ನುಂಗಿಕೊಂಡು ಹೇಳಿದನು.
ನರಸಿಂಹಯ್ಯನಿಗೆ ಆ ನೋವು, ಆ ನುಡಿ, ನೋಡಿ, ಕೇಳಿ ಎದೆ ಯಲ್ಲಿ ಚುರ್ ಎಂದಿತು : “ಏನಂದಿರಿ, ಸಾರ್, ಹಾಗೆ ಇನ್ನೊಂದು ಘಟ ಹೋಗಬೇಕಾದರೆ, ಅದಕ್ಕೆ ಬದಲಾಗಿ ಈ ಘಟ ಕೊಟ್ಟು, ಆ ಘಟ ಉಳಿಸೋದಲ್ಲವೆ, ಸಾರ್ ! ಅಪ್ಪಣೆಯಾಗಲಿ ದೊಡ್ಡಮ್ಮನೋರು ಎಲ್ಲಿ? ಚಿಕ್ಕಮ್ಮನೋರು ಎಲ್ಲಿ?”
“ಮಲ್ಲೀ !” ನಾಯಕನು ಕೂಗಿದನು.
ಮಲ್ಲಿಯು ಏನೋ ಬೆಟ್ಟ ಕಿತ್ತಿಟ್ಟ ಆಯಾಸಸಟ್ಟು ಉಸಿರು ಮೊಗಚಲಾರದೆ ಅಳುತ್ತಿರುವಳಂತೆ ಬಂದಳು. ಅವಳ ಕಣ್ಣಿನಲ್ಲಿ ಮೊದಲ ತೇಜಸ್ಸಿಲ್ಲ.. ಮೊಕದಲ್ಲಿ ಕಾಂತಿಯಿಲ್ಲ. ನಡಗೆಯಲ್ಲಿ ಬೆಡಗಿಲ್ಲ. ದೇಹದಲ್ಲಿ ಯೌವನದ ಸೊಕ್ಕಿಲ್ಲ. ಬಂದಳು. ನರಸಿಂಹ ಯ್ಯನನ್ನು ನೋಡುತ್ತಲೂ ಅವಳ ದುಃಖದ ಕೆರೆಯು ಕಟ್ಟಿ ಒಡೆ ಯಿತು. ಮೂರು ದಿವಸಗಳಿಂದ ಬಂದು ಬಂದು ಒಡ್ಡು ಒಡ್ಡಿ ಮಳೆ ಕರೆಯುವೆನೆಂದು ಹೆದರಿಸಿ ಹೆದರಿಸಿ ಸುಮ್ಮನೆ ಕವಿಚಿಕೊಂಡಿದ್ದ ಮೋಡ ಇಂದು ಹಠಾತ್ತಾಗಿ ಕುಂಭದ್ರೋಣವನ್ನು ಕರಿಯಲಾರಂಭಿಸಿತು. ಮಲ್ಲಿಯು “ಮೇಷ್ಟ್ರೇ ! ನಮ್ಮ ಅಮ್ಮ ಹೋದಳು. ನಾನು ತಬ್ಬಲಿ ಯಾದೆನಲ್ಲಾ ! ಅಯ್ಯೊ ! ನನಗಿನ್ನಾರು ಗತಿ? ಎಂದು ಹೋ ಎಂದು ಅತ್ತುಬಿಟ್ಟಳು.
ಅಳುವಿನ ಭರದಲ್ಲಿ ಅಯ್ಯೋ ಎಂದು ಬಿದ್ದಳು. ನಾಯಕನು ಥಟ್ಟನೆದ್ದು ಅವಳನ್ನು ಹಿಡಿದುಕೊಂಡು ಸೋಫಾದಮೇಲೆ ಇಟ್ಟನು. ಅವಳ ಅಳು ಅಸದೃಶವಾಗಿತ್ತು. ಮಾನವನತಿಯಾದ ಹೆಣ್ಣು ಎಡೆಯ ಮೇಲೆ ಸೆರಗು ಹಾರಿಹೋಗುವುದರ ಅರಿವೂ ಇಲ್ಲದೆ, ಎದೆ ಎಡೆ ಬಡಿದು ಕೊಂಡು ಅತ್ತಳು.
ಎಲ್ಲರಿಗೂ ಅದರಲ್ಲಿ ಶಂಭುರಾಮಯ್ಯ, ನಾಯಕ ಇಬ್ಬರಿಗೂ ಆಶ್ಚರ್ಯ. ಮೂರು ದಿನದಿಂದ ಉಸಿರೆತ್ತಿ ಆಳದವಳು ಇವತ್ತು ಮೇಷ್ಟ್ರ ಮೆಕ ನೋಡಿ ಇಷ್ಟು ಅಳುತ್ತಿದ್ದಾಳಲ್ಲ ಎಂದು ವಿಸ್ಮಯಾನ್ವಿತರಾದರು. ಅಳುವಿಗೂ ಕಟ್ಟೆಯೊಡೆದು. ಬರಬೇಕಾದರೆ ಸಮಾನಶೀಲ, ಸಮ ವಯಸ್ಸುಗಳು ಬೇಕೇನು. ನಾಯಕನಿಗೆ ತನ್ನ ಸರ್ವಸ್ವವನ್ನೂ ಒಪ್ಪಿಸಿ ದ್ದರೂ ಅವನ ಮುಂದೆ ಅವಳು ಅಳಲಿಲ್ಲ. ತನ್ನನ್ನು ತನ್ನ ಪ್ರತಿಬಿಂಬ ವೆಂಬಂತೆ ನೋಡಿಕೊಳ್ಳುತ್ತಿರುವ ರಾಣಿಯ ಬಳಿ ಅಳಲಿಲ್ಲ. ತನ್ನ ತಂದೆಯೆಂದುಕೊಂಡಿರುವ ಮಲ್ಲಣ್ಣನ ಬಳಿ ಅಳಲಿಲ್ಲ. ತಂದೆಯೆ ಆಪ್ತ ಸ್ನೇಹಿತನಾಗಿರುವ ಶಂಭುರಾಮಯ್ಯನ ಬಳಿ ಅಳಲಿಲ್ಲ. ತಾಯಿಗೆ ತಾಯಾಗಿ ಉಪಚರಿಸುವ ಅನಂದಮ್ಮನ ಹತ್ತಿರ ಅಳಲಿಲ್ಲ. ನರಸಿಂಹ ಯ್ಯನನ್ನು ಕಂಡೇಕೆ ಅಳಬೇಕು? ಅದೇ ಸ್ವಭಾವ. ಅದೇನೋ ಹೃದಯ ಕೆಲವರನ್ನು ತನ್ನವರು ಎಂದುಕೊಳ್ಳುವುದು : ತನ್ನವರು ಎಂದುಕೊಳ್ಳುವುದಕ್ಕೆ ಏನು ಕಾರಣ ಎಂಬುದನ್ನು ಮಾತ್ರ ತನಗೂ ತಿಳಿಯದು, ಇತರರಿಗೂ ತಿಳಿಯದು.
ಮಲ್ಲಿಯು ಗಟ್ಟಿಯಾಗಿ ಅಳುವುದನ್ನು ಕೇಳಿ ರಾಣಿ, ಮಲ್ಲಣ್ಣ, ಎಲ್ಲರೂ ಬಂದರು. ರಾಣಿಯು ಮಲ್ಲಿಯ ಮಗ್ಗುಲಲ್ಲಿ ಕುಳಿತು ಸಮಾ ಧಾನ ಮಾಡಲು ಹೋದಳು. ನರಸಿಂಹಯ್ಯನ್ನು ‘ಬೇಡಿ, ಸುಮ್ಮನಿರಿ’, ಎಂದು ಸನ್ನೆ ಮಾಡಿದನು. ಎಲ್ಲರೂ ನಟರಾಗಿ ಅವಳೊಡನೆ ಅತ್ತರು. ಆನಂದಮ್ಮನೂ ಒಂದು “ಮೂಲೆಯಲ್ಲಿ ನಿಂತಿದ್ದಾಳೆ.
ನರಸಿಂಹಯ್ಯನಿಗೆ ಒಂದು ಗಳಿಗೆ ಏನು ಮಾಡಲೂ ತೋರಲಿಲ್ಲ. ಕೂಡಲೇ “ಮಲ್ಲಮ್ಮಣ್ಣಿ
” ಎಂದು ಕೂಗಿದನು. ಧ್ವನಿಯು ದೃಢ ವಾಗಿತ್ತು : ಕಂಚಿನಹಾಗಿತ್ತು : ಮೊಳಗಿತು. ಮಲ್ಲಿಯು ತಲೆಯೆತ್ತಿ ನೋಡಿದಳು.
“ಏನಾಯಿತೆಂದು ಅಳುತ್ತಿದ್ದೀರಿ ! ನಿಮ್ಮನ್ನು ಬಿಟ್ಟು ನಿಮ್ಮ ತಾಯಿ ಇಲ್ಲಿಗೆ ಬಂದಾಗ ಆ ಎರಡು ಮಕ್ಕಳನ್ನು ಮಾಡಿಕೊಂಡು ತಮ್ಮ ದುಃಖವನ್ನು ಮರೆಸಿಕೊಂಡರು. ಹಾಗೆ ನೀವು ಒಬ್ಬ ತಾಯಿಗೆ ಬದಲು ಇಬ್ಬರು ತಾಯಿಯರನ್ನೂ ಒಬ್ಬ ಅಣ್ಣನನ್ನೂ ಮಾಡಿಕೊಂಡು ಆ ಹೋದ ತಾಯಿಯ ದುಃಖವನ್ನು ಮರೆಯಿರಿ. ಇದೋ, ಈ ಆನಂದಮ್ಮ ಒಬ್ಬರು ತಾಯಿ, ನಮ್ಮ ತಾಯಿ ಒಬ್ಬರು ತಾಯಿ, ನಾನು ಒಬ್ಬ ಅಣ್ಣ, ಒಂದಕ್ಕೆ ಮೂರು ಸಿಕ್ಕಿತು. ಆ ತಾಯಿಯ ಅಭಿ ಮಾನವೋ ಎನ್ನವಿರೇನೋ? ನೀವೇ ಎಷ್ಟು ಸಲ ಹೇಳಿಲ್ಲ: ಆನಂದಮ್ಮನವರ ಅಭಿಮಾನ ನಮ್ಮಮ್ಮನ ಅಭಿಮಾನಕ್ಕಿಂತ ದೊಡ್ಡದು ಎಂದು? ಜೊತೆಗೆ ಇದೋ ನಮ್ಮ ತಾಯಿ ನನ್ನನ್ನು ಬೇಕಾದರೆ ನಿಮಗೆ ಅಣ್ಣನಾಗಿ ಮಗನಾಗಿ ದತ್ತು ಕೊಡುವುದಕ್ಕೆ ಸಿದ್ಧರಾಗಿದ್ದಾರೆ. ಅಥವಾ ನೀವೇ ಅವರಿಗೆ ದತ್ತುವಾಗಿ ಹೆಣ್ಣು ಮಗಳಾಗಿ ನಮ್ಮ ಕುಟುಂಬಕ್ಕೆ ಬನ್ನಿ. ಕಾಣಿರಾ! “ದುಃಖೇ ದುಃಖಾಧಿರ್ಕಾ ಪಶ್ಯೇತ್, ಸೌಖ್ಯೇ ಸೌಖ್ಯಾಧಿಕಾನ್ ತಥಾ’
” ನಮಗೆ ವಿವೇಕವಿರುವುದು ಪ್ರತಿಯೊಂದನ್ನೂ ಯಥಾಸ್ಥಾನ ವಾಗಿ ನೋಡುವುದಕ್ಕೆ, ನೀನು ಮದುವೆಯಾಗಿ ಗಂಡನ ಮನೆಗೆ ಹೋದಾಗ ತಾಯಿಯ ಮನೆ ತುಂಬಿತೋ ಬರಿದಾಯಿತೋ ? ಮುಂ ದಿನ ಮಂಗಳವನ್ನು ನೆನೆದು ತಾಯಿ ತಂದೆಯರು ಅಂದಿನ ವಿರಹವನ್ನು ಸೈರಿಸುವಂತೆ ಕೆಂಪಮ್ಮನವರ ಆತ್ಮ ಈ ಗೂಡನ್ನು ಬಿಟ್ಟು ಆಕಾಶಕ್ಕೆ ಹಾರಿ ಸ್ವತಂತ್ರವಾಯಿತೆಂದು ದುಃಖವನ್ನೊತ್ತಿ ಸಹಿಸಿ ಕೊಳ್ಳಬೇಕಾದ ಕಾಲವಿದು. ನೀವು ಹೇಳುವ ತತ್ವಗಳೇನಾಯಿತು? ಓದಿದ ಭಗವ ದ್ಗೀತೆಯೇನಾಯಿತು? ನೀವು ಒಬ್ಬರಿಗಾಗಿ ಅಳುತ್ತಿದ್ದೀರಿ. ನಿಮಗಾಗಿ ಇಷ್ಟು ಜನರು ಅಳುತ್ತಿದ್ದಾರೆ. ಇದು ವಿವೇಕವೇ? ಬೇಡಿ. ಬಿಡಿ ನಮ್ಮಮ್ಮ. ‘ ಸಂತೋಷಂ ಜನಯೇತ್ ಪ್ರಾಜ್ಞಃ ತದೇವ ಈಶ್ವರ ಪೂಜನಂ’ ಎಂದು ನೀವೇ ಹೇಳುತ್ತ, ನಾನು ಇರುವವರೆಗೂ ಒಬ್ಬರ ಕಣ್ಣಲ್ಲಿ ನನಗಾಗಿ ನೀರು ಬರದಂತೆ ನೋಡಿಕೊಳ್ಳಬೇಕು ಎಂದು ಹೇಳುವುದಿಲ್ಲವೆ ? ಅದನ್ನು ಈಗ ಅನುಸರಿಸಿ. ಆಪತ್ಕಾಲದಲ್ಲಿ ಒದ ಗದ ಬುದಿಯೇಕೆ? ಆ ಬುದ್ಧಿಯನ್ನು ಈಗ ಉಪಯೋಗಿಸಿ.”
ಹೀಗೆಯೇ, ಕರುಣಾಪರವಾದ ಹೃದಯದಿಂದ ಹೊರ ಹೊಮ್ಮಿದ ಆ ವಿಶ್ವಾಸ ವಾಕ್ಯಗಳಲ್ಲಿ ಅದೇನು ಅಮೃತವಿತ್ತೋ? ಅಥವಾ ಹೊರ ಹೊಮ್ಮಿ ಕಟ್ಟೆಯನ್ನೊಡೆದು ಬಂದ ದುಃಖವು ಹರಿದು ಹೋಗಿ ಹೃದಯವವು ತನ್ನ ಪೂರ್ವದ ಶಾಂತಸ್ಥಿತಿಯನ್ನು ಕೈಕೊಂಡಿತೊ? ಮಲ್ಲಿಯು ಕಣ್ಣೊರೆಸಿಕೊಂಡಳು. ಸೆರಗನ್ನು ನಡುವಿಗೆ ಕಟ್ಟಿದಳು. ಎದ್ದು ಬಂದು ನರಸಿಂಹಯ್ಯನ ಬಳಿ ಬೊಗ್ಗಿ ಮಂಡಿಯೂರಿ ಕುಳಿತು. ಕಾಲು ಮುಟ್ಟಿ ಕಣ್ಣಿಗೆ ಒತ್ತಿಕೊಂಡು ಹೇಳಿದಳು: “ಗುರುವೇ ನಿನ್ನ ಮಾತಿನಲ್ಲಿ ವಿವೇಕವಿದೆ : ಮಾಧುರ್ಯವಿದೆ : ಅಮೃತವಿದೆ. ನಿನ್ನ ಮಾತು ಕೇಳಿ ನನಗೂ ವಿವೇಕ ಬಂತು. ಭಗವದ್ಗೀತೆಯ ‘ ಗತಾ ಸೂನ್ ಆಗತಾಸೂನ್ಂಶ್ಚ, ನಾನು ಶೋಚಂತಿ ಪಂಡಿತಾ :’ ಎಂಬುದನ್ನು ಅರ್ಥಮಾಡಿಕೊಂಡು ಅದರಂತೆ ನಡೆಯುವೆನು. ನಿಮ್ಮ ಚರಣ: ಕೃಪೆಯು ನನಗೆ ಶಕ್ತಿಯನ್ನು ಕೊಡಲಿ, ಗುರುದೇವ ?
“ತಾಯಿ, ಈ ದಾಸನು ಗುರುವಾಗಲೂ ಗುರುದೇವನಾಗಲೂ ಅರ್ಹನಲ್ಲ. ಭರತಖಂಡವೆಲ್ಲವೂ ಗುರುದೇವನೆಂದು ಗೌರವಿಸುವ. ಕವೀಂದ್ರ ರವೀಂದ್ರರು ಇಲ್ಲಿಗೆ ದಯಮಾಡಿಸುವರು. ತಾವು ನನ್ನ ಮೇಲೆ ಕೃಪೆಮಾಡಿ ಬನ್ನಿ. ಅಲ್ಲಿ ಆ ಮಹಾಪುರುಷನ ಸನ್ನಿಧಿಯಲ್ಲಿ ತಮ್ಮ ವಿವೇಕವು ದೃಢವಾಗುವುದು : ತಮ್ಮ ದುಃಖವು ದೂರವಾಗು ವುದು. ನಾನಾಗಲೇ ಹೇಳಿದುತೆ, ಇದೋ ಇಬ್ಬರು ತಾಯಿಯರು ಎಲ್ಲದಕ್ಕಿಂತ ಹೆಚ್ಚಾಗಿ ಎಲ್ಲರಿಗೂ ಆಶ್ರಯ ಕೊಡುವ ನಾಯಕರು. ನಿಮ್ಮ ಎದುರಿಗೇ ಇರುವಾಗ, ನಿಮ್ಮನ್ನು ಸರ್ವಸ್ವವೆಂದು ತಿಳಿದು’ ನಿಮ್ಮ ಸರ್ವಸ್ವವಾಗಿರುವಾಗ, ನೀವು ಇರುವುದೆಷ್ಟು ಎಂಬುದನ್ನು ಗಮನಿಸದೆ, ಹೋದುದಕ್ಕಾಗಿ ಅಳುವುದೇ? ತಾಯಿ ಈ ದುಃಖ ಇಲ್ಲಿಗೆ ನಿನುಗೆ ಗುರುದೇವನ ದಯೆಯಿಂದ ನಿವಾರಣನಾಗಲಿ.” ಎಂದು ತಾನೂ ಇದ್ದು, ಸರಳವಾಗಿ ಸಹಜವಾಗಿ ಆಶೀರ್ವಾದ ಭಾವದಲ್ಲಿ, ತನ್ನ ಬಾಯಿಂದ ಬಂದ ಭಾವವನ್ನು ಕೈಯ್ಯಿಂದಕೊಟ್ಟು ಅನುಗ್ರಹಿಸುವನಂತೆ ಮಲ್ಲಿಯ ತಲೆಯ ಮೇಲೆ ಕೈಯನ್ನಿಟ್ಟನು. ಮಲ್ಲಿಗೆ ನರಸಿಂಹಯ್ಯನ ಕೈಯ್ಯಿ೦ದ ಏನೋ ಅಮೃತದ ಸೋನೆ ಯೊಂದು ಇಳಿದು ತನ್ನ ದೇಹನನ್ನೆಲ್ಲಾ ವ್ಯಾಪಿಸಿದಂತೆ ಆಯಿತು. ತಾಯಿಯನ್ನು ಕಳೆದುಕೊಂಡನೆಂಬ ಭಾವದಿಂದ ದೇಹವೆಲ್ಲಾ ಬರಿದಾಗಿದ್ದುದನ್ನು ತನ್ನ ದೇಹದಲ್ಲಿದ್ದ ಶೂನ್ಯತೆಯನ್ನು ಆ ಭಾವವು ತುಂಬಿದಂತಾಯಿತು. ತನ್ನಲ್ಲಿದ್ದ ಕಾಳಿನ್ನೆಲ್ಲಾ ಸುರಿದು ಬಿಟ್ಟ ಮೇಲೆ ಸೊಪ್ಪಾಗಿ ಬಿದ್ದಿದ್ದ ಬಟ್ಟೆಯ ಚೀಲವು ಮತ್ತೆನನ್ನಾದರೂ ತುಂಬಿದರೆ, ಮತ್ತೆ ದಪ್ಪವಾಗಿ, ಬಿಗಿಯಾಗಿ ಕೂತುಕೊಳ್ಳುವಂತೆ ಆಯಿತು. ಆವಳಿಗೆ ಹೋದ ತಾಯಿಯೊಡನೆ ಏನೋ ಹೋಗಿತ್ತು ಎಂದು ಗೊತ್ತಿ ದ್ದರೂ ಹೋಗಿದ್ದುದು ಏನು ಎಂಬುದು ತಿಳಿಯದು: ಈಗ ಏನೋ ಬಂದು ಸೇರಿದೆ ಎಂಬುದೂ ಗೊತ್ತು : ಆದರೆ ಬಂದು ಸೇರಿದುದು ಏನು ಎಂಬುದು ತಿಳಿಯದು. ಅಂತೂ ಸ್ವ-ಸ್ಥಳಾದಳು. ಸಹಜ ಭಾವಾ ಪನ್ನಳಾದಳು.
ಕತ್ತಲೆಯ ಮನೆಯಲ್ಲಿ ತುಂಬಿದ್ದ ಏನನ್ನೋ ಚದುರಿಸಿ, ಅದರ ಸ್ಥಾನವನ್ನು ದೀಪದ ಬೆಳಕು ಹಿಡಿದಂತಾಯಿತು. ಮೂರು ನಾಲ್ಕು ದಿನಗಳಿಂದ ನಗೆಯನ್ನು ಕಾಣದೆ ಮುಗಿಲ ಹಿಂದಿನ ತಿಂಗಳಂತೆ ಇದ್ದ ಮಲ್ಲಿಯ ಮೊಗವು ಇವೊತ್ತು ನೋವನೊತ್ತಿ, ದುಃಖವನ್ನು ತುಳಿದು ಹೊರ ಬರುವ ನಗೆಯನ್ನು ಕಂಡಿತು.
ನಾಯಕನು ಬಿಸಿಲು ಮಳೆಯ ಹಗಲಿನಂತಾದನು. ಶಂಭು ರಾಮಯ್ಯ ಆನಂದಮ್ಮ ಮೀನೇ ನಿಟ್ಟುಸಿರು ಬಿಟ್ಟು ಸ್ವಸ್ಥರಾದರು. ಮಲ್ಲಣ್ಣನು ಏನೋ ಆವೇಶ ಬಂದಂತೆ,
“ಬುದ್ಧಿ ಯನರ ಮಾತು ನಿಜ. ಏನು ಹಾಳು ಸಂಸಾರವೋ ? ಈ ಸಂಸಾರವೆಂಬುದು ಲೊಳಲೊಟ್ಟೆ. ”
ಯಾರಿಗೆ ಯಾರುಂಟು ಎರವಿನ ಸಂಸಾರ ನೀರಗುಳ್ಳೇಯಂತೆ ತೋರುವ ಸಂಸಾರ॥
ಎಂದು ತತ್ವವನ್ನು ಹಾಡಿಕೊಳ್ಳುತ್ತಾ, ಕಣ್ಣೀರು ಒರಸಿಕೊಂಡು ಹೊರಟು ಹೋದನು.
ರಾಣಿಯು “ಬಾವ್ವ : ಮೊಕ ತೊಳೆದುಕೊಡುತ್ತೀನಿ” ಎಂದಳು. ಮಲ್ಲಿಯು ಮಗುವಿನಂತೆ ಕೋಮಲವಾದ ದನಿಯಲ್ಲಿ ನಾಯಕನನ್ನೂ ಮೇಸ್ಟ್ರನ್ನೂ ಮಿಕ್ಕವರನ್ನೂ ಬೀಳ್ಕೊಂಡು ಹೋದಳು.
ಮೊದಲನೆಯ ಮಳೆಯಲ್ಲಿ ನೆಂದು ಬಿಸಿಲಿನ ಬೇಗೆಯನ್ನೂ ಬೇಸ ಗೆಯ ಧೂಳನ್ನೂ ತೊಳೆದುಕೊಂಡು ರಮ್ಯವಾದ ಪ್ರಕೃತಿಯಂತೆ ಮಲ್ಲಿಯು ಹೊಸಬಳಂತಾಗಿದ್ದಳು.
ನರಸಿಂಹಯ್ಯನು ನಾಯಕನೊಡನೆ ಇನ್ನೂ ಅಷ್ಟು ಮಾತನಾಡು ತ್ತಿದ್ದನು- “ಕವೀಂದ್ರರು ದರ್ಶನ ಕೊಡಲು ಒಪ್ಪಿದ್ದಾರೆ. ನಾಳೆ ಮಧ್ಯಾಹ್ನ ಮೂರು ಗಂಟೆಗೆ ಅವರ ದರ್ಶನ. ಸಂಜೆಗೆ ಕಾಲೇಜಿನಲ್ಲಿ ಭಾಷಣವಿದೆ. ನಾಡಿದ್ದು ವರದಾಚಾರ್ಯರ ನಾಟಕಕ್ಕೆ ಬರುತ್ತಾರೆ. ನಾಳೆ ನಾದಿದ್ದು ಸಾಧ್ಯವಾದಷ್ಟು ಸಲ ಅವರ ದರ್ಶನ ಮಾಡಿ ಕೃತಾ ರ್ಥರಾಗಬೇಕು.” ಎಂದನು. ನಾಯಕನೂ ಆಗಬಹುದು ಎಂದನು. ಅವನಿಗೆ ಸಂತೋಷ; ಆಶ್ಚರ್ಯ – ತಾಯಿವಿರಹದಿಂದ ತಬ್ಬಲಿಯಾದ ಎಳೆ ಗುರುವಿನಂತೆ ಒದ್ದಾಡುತ್ತಿದ್ದ ಮಲ್ಲಿ ನರಸಿಂಹಯ್ಯನ ಮಾತಿನಿಂದ ದ್ವಸ್ಥಟಳಾದಳಲ್ಲಾ ಎಂದು ಅವನ ಸಂತೋಷಕ್ಕೆ ಮೇರೆಯಿಲ್ಲ : ತಮ್ಮ ಕೈಯಲ್ಲಾಗದೆ ಕಾರ್ಯವನ್ನೂ ಅವನು ಮಾಡಬಲ್ಲನೆಂದು ಆಶ್ಚರ್ಯ. ಅವನು ನಂಸಿಂಹಯ್ಯನನ್ನು ನಾನಾ ಭಾವ ಭಂಗಿಗಳಲ್ಲಿ ನೋಡಿದ್ದ. ಆದರಿಂದು, ಈದಿನ, ಇದ್ದಷ್ಟು ಗಂಭೀರವಾಗಿ, ಯಾವೊತ್ತೂ ನೋಡಿರಲಿಲ್ಲ. *****
ಮಲ್ಲಿ- ೩೬
ನರಸಿಂಹಯ್ಯನು ಸಪರಿವಾರನಾದ ನಾಯಕನನ್ನು ಕರೆದುಕೊಂಡು ರವೀಂದ್ರರ ದರ್ಶನಕ್ಕೆ ಹೋದನು. ಆ ವೇಳೆಗೆ ಕಾಲೇಜಿನ ಹುಡುಗ ರೆಲ್ಲ ಬಂದು ಸೇರಿಕೊಂಡಿದ್ದಾರೆ. ರವೀಂದ್ರರು ಸಕಾಲದಲ್ಲಿ ಈಚೆಗೆ ಬಂದರು. ಪರ್ವತ ಶಿಖರದಲ್ಲಿ ಯಾವಗಾಳಿಗೂ ಸಿಕ್ಕದೆ ನಿಶ್ಚಲವಾಗಿ, ಗಂಭೀರವಾಗಿ, ಸೌಮ್ಯವಾಗಿರುವ ಸರೋವರವು ಎದ್ದು ನಡೆದು ಬಂದಂತೆ ಬಂದರು. ಆ ವಿಶಾಲವಾದ ಮುಖದಲ್ಲಿ ಎದ್ದು ಕಾಣುವ ಮೂಗು ಆ ವಿಶಾಲವಾದ ಹಣೆಯನ್ನು ಹೊತ್ತು ನಿಂತಿರುವಂತಿದೆ. ಪೊದೆಯಂತಿರುವ ಹುಬ್ಬುಗಳ ಹಿಂದಿನಿಂದ ಎರಡು ದೀಪಗಳಂತೆ ಕಣ್ಣು ಗಳು ಹೊಳೆಯುತ್ತಿವೆ: ಆದರೆ ದೀಪದ ತೀವ್ರ ಕಾಂತಿಯಿಲ್ಲ: ಅಲ್ಲಿ ಸೌಮ್ಯವಾಗಿ ಅನುಗ್ರಾಹಕವಾಗಿರುವ ಕಾಂತಿಯನ್ನು ಹಿಡಿದು ತುಂಬಿ- ಟ್ಟಿರುವಂತಿದೆ. ಯಾರಾದರೂ ಹೌದೇ ಎಂದು ಸಂದೇಹ ಪಟ್ಟರೆ ಹೌದು ಎಂದು ದೃಢಪಡಿಸುವುದಕ್ಕೊ ಎಂಬಂತೆ, ಮುಖವನ್ನು ವ್ಯಾಸಿಸಿ ರುವ ಎಳೆನಗೆಯು ಸಾಕ್ಷಿಕೊಡಲು ಮುಂದೆ ನುಗ್ಗುತ್ತಿದೆ. ವರ್ಷಾಂತರ ಗಳಿಂದ ಸುಮಾರು ಅರ್ಧಶತಮಾನಕಾಲ ಲೋಕಹಿತಾರ್ಥವಾಗಿ ಆಚರಿಸಿರುವ ದೀರ್ಘತಪಸ್ಸಿನಂತೆ ನೀಳವಾದ ಗಡ್ಡವು ಮೆರೆಯುತ್ತ ಆ ಎತ್ತರವಾದ ದೇಹಕ್ಕೆ ಎಂಬಂತೆ ಮುಖಮಂಡಲಕ್ಕೆ ಏನೋ ಅಪೂರ್ವ ವಾದ ರೀತಿಯಲ್ಲಿ ಶೋಭಾಕರವಾಗಿದೆ. ಉನ್ನತವಾದ ದೇಹ, ಧರಿಸಿರುವ ಆ ಕಪಿನಿಯಂತಹ ಆಂಜೂರವರ್ಣದ ಲುಂಗಿ, ಠೀವಿ ಯಿಂದ ನಡೆಯುವ ಭಂಗಿ, ಎಲ್ಲವೂ ಆ ಮಹಾಪುರುಷನನ್ನು ನೋಡಿದವರೆಲ್ಲಾ ಭಕ್ತಿಯ ಕಾಣಿಕೆಯನ್ನು ಒಪ್ಪಿಸುವಂತೆ ಬಲಾತ್ಕರಿ- ಸುವಂತಿದೆ. ಎಲ್ಲರಿಗೂ ಆ ಶಾರದಾಭಕ್ತನ ದರ್ಶನದಿಂದ ಹೃದಯ ಮನಸ್ಸುಗಳು ಶುದ್ಧವಾಗಿ ಗಂಗಾಸ್ನಾನಮಾಡಿ ಪವಿತ್ರವಾದಂತೆ ಆಗಿದೆ. ವಿಶ್ವಭಾರತಿಯನ್ನು; ಸ್ಥಾಪಿಸಿ ಭರತಖಂಡದ ಪ್ರಾಚೀನ ಸಂಸ್ಕೃತಿಯ ದಿವ್ಯ ಪ್ರಭಾವವನ್ನು ಲೋಕದಲ್ಲಿ ಹರಡಿದ ಮಹನೀಯನನ್ನು ನೋಡಿ ಎಲ್ಲರ ಕಣ್ಣಗಳಲ್ಲಿಯೂ ಆನಂದವುಕ್ಕಿ ಕಂಬನಿಯಾಗಿ ಸೂಸುತ್ತಿದೆ. ಶಾಂತಿನಿಕೇತನದ : ಶಾಂತಿದೂತನನ್ನು ನೋಡಿ, ಜಗತ್ತಿನ ದುಃಖಭಾರ ದಿಂದ ಜೊಗ್ಗಿರುವಂತೆ ನಿದಾನವಾಗಿ ನಡೆದು ಬರುವ ಆ ಜೀವ ಪ್ರತಿಮ ನನ್ನು ನೋಡಿ ಎಲ್ಲರ ಮನಸ್ಸಿನಲ್ಲಿಯೂ ಅಪೂರ್ವವಾದ ಶಾಂತಿಯು ನೆಲಸಿದೆ.
ನರಸಿಂಹಯ್ಯನು ಆ ಭವ್ಯ ರೂಪರಾಶಿಗೆ ‘ಯಸ್ಸರ್ವಭೂತಾಂತರಾತ್ಮಾಸನೋ ವಿಷ್ಣುಃ ಪ್ರಸೀದತು’ ಎಂದು ಸಾಷ್ಟಾಂಗ ನಮಸ್ಕಾರ ಮಾಡಿದನು. ಅದನ್ನು ಕಂಡು ಸರ್ವರೂ ನಮಸ್ಕಾರ ಮಾಡಿದರು. ಟಾಗೋರರು ಎಲ್ಲರಿಗೂ ಆಶೀರ್ವಾದ ಮಾಡಿ, ಕೈಮುಗಿದು ತಮಗಾಗಿ ಸಿದ್ದವಾಗಿದ್ದ ಆಸನದಲ್ಲಿ ಕುಳಿತರು. ಎಲ್ಲರೂ ತಾವು ತಂದಿದ್ದ ಫಲಪುಪ್ಪ ಗಳನ್ನು ಒಪ್ಪಿಸಿದರು. ನಾಯಕನು ಹಾರವನ್ನೊಸ್ಸಿದನು-ರಾಣಿಯು ಒಂದು ತಟ್ಟೆಯತುಂಬಾ ಸೊಗಸಾದ ಕಿತ್ತಳೆಯ ಹಣ್ಣುಗಳನ್ನು ಒಪ್ಪಿಸಿ ದಳು. ಮಲ್ಲಿಯು ಸೊಗಸಾದ ಅಂಜೂರಗಳನ್ನು ಪೇರಿಸಿದ್ದ ತಟ್ಟೆಯನ್ನು ಮುಂದಿಟ್ಟು ಆ ಮಹಾಪುರುಷನ ಪಾದಗಳನ್ನು ಕಣ್ಣಿಗೆ ಒತ್ತಿಕೊಂಡಳು.
ಟಾಗೋರರು ನಗುತ್ತಾ “ಈ ತರುಣ ತಂಡವನ್ನು ಆರಾಧಿಸಿ ಅನಂತರ ನಿಮ್ಮೊಡನೆ ಮಾತನಾಡುವೆನು- ಆಗಬಹುದಷ್ಟೆ ! ” ಎಂದು ಆರಂಭಿಸಿದರು.
ತರುಣರು ಏನೋ ಜಗತ್ಪಿತನ ಸಾನ್ನಿಧ್ಯದಲ್ಲಿ ಕುಳಿತಿರುವಂತೆ ಸಂತೋಷಪಡುತ್ತಾ ನಿರಾಳವಾಗಿ ಏನೂ ಸೊಕ್ಕು ಸೊಟ್ಟಗಳಿಲ್ಲದ ಪೂರ್ಣಶುದ್ದ ಮನಸ್ಸಿನಿಂದ ಮಾತನಾಡಿದರು :
“ತಾವು ಕವಿಗಳು-ಕವಿತೆ ತಮಗೆ ಹೇಗೆ ಬರುತ್ತದೆ?”
“ಕೋಗಿಲೆಗೆ ಹಾಡುವುದು ಗೊತ್ತು. ಹಾಡುವುದು ಹೇಗೆ ಎನ್ನುವುದು ಅದಕ್ಕೇನು ಗೊತ್ತು. ಹಾಗೆ ನನಗೂ ಕವಿತೆ ಕಟ್ಟುವುದು ಗೊತ್ತು : ಅದು ಹೇಗೆ ಬರುತ್ತದೆ ಎನ್ನುವುದು ಗೊತ್ತಿಲ್ಲ. ಕೋಗಿಲೆಯ ಕತ್ತಿನಲ್ಲಿ ಹಾಡುವ ಸಾಧನವನ್ನು ಇಟ್ಟವನು ಅದನ್ನು ವಿವರಿಸಬಲ್ಲ.”
“ನಾವು ಕವಿಗಳು ಆಗಬೇಕಾದರೆ ಏನು ಮಾಡಬೇಕು? ”
“ಕವಿತೆಯನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ ! ಕವಿಯಾಗು ವುದು ಅದಕ್ಕಿಂತ ಕಷ್ಟ!”
“ರಾಧಾಕೃಣನ್ ಅವರು ತಮ್ಮ ಕವಿತೆಗಳನ್ನು ಕುರಿತು ಒಂದು ಪುಸ್ತಕ ಬರೆದಿದ್ದಾರೆ. ಅಲ್ಲವೆ?”
“ಹೌದು ಅದರಲ್ಲಿ ನನ್ನ ವೇದಾಂತವನ್ನು ಕುರಿತು ಚರ್ಚಿಸಿದ್ದಾರೆ. ಅದರೆ ಅವರು ವೇದಾಂತಿಗಳು. ಅವರು ತಮ ವೇದಾಂತವನ್ನು ನನ್ನಲ್ಲಿ ಕಂಡರು ಎಂದು ನನಗೆ ತೋರುತ್ತದೆ. ಕಬ್ಬಿನಲ್ಲಿ ಸಕ್ಕರೆ ಎಷ್ಟಿದೆ? ಆ ಸಕ್ಕರೆ ಎಂಥದು? ಎಂಬುದನ್ನೆಲ್ಲ ಸೈನ್ಸು ಹೇಳಬಹುದು. ಆದರೆ ಸಕ್ಕರೆಯನ್ನು ತಂದ ಕಬ್ಬಿಗೆ ಅದೆಲ್ಲ ಗೊತ್ತೇನು? ಹಾಗೆ ನನ್ನ ಪಾಡಿಗೆ ನಾನು ಹಾಡಿಕೊಳ್ಳುತ್ತೇನೆ . ಅದರಲ್ಲಿ ಅವರು ವೇದಾಂತ ಕಾಣುತ್ತಾರೆ. ನಾನು ನಿಮ್ಮನ್ನು ಕೆಲವು ಪ್ರಶ್ನೆಗಳನ್ನು ಕೇಳಲೆ ? ”
“ಆಗಬಹುದು.”
“ನಿಮ್ಮ ದೇಶದಲ್ಲಿ ಪ್ರ ಸಿದ್ದ ರಾದ ಕಾದಂಬರಿಕಾರರು ಯಾರು? ಕವಿಗಳು ಯಾರು?”
ಹುಡುಗರು ಒಬ್ಬ ರ ಮೊಕ ಒಬ್ಬರು ನೋಡಿಕೊಂಡರು: “ಇನ್ನೂ ನಾವು ಬಂಗುಳೀ ಮರಾಠೀ ತೆಲುಗು ನಾನೆಲ್ಲುಗಳ ಕನ್ನಡರೂಪನನ್ನೇ ಓಡುತ್ತಿದ್ದೇವೆ ನಮ್ಮಲ್ಲಿ ಕವಿತೆ ಬರೆಯುವುದಕ್ಕಿಂತ ಕಾವ್ಯ ಓದುವ ಪದ್ಧತಿ ಚನ್ನಾಗಿ ಬೆಳದಿದೆ. ಅಭಿನವ ಕಾಲಿದಾಸರು ಇದ್ದರು?
ಟಾಗೋರರು ಒಂದು ಗಳಿಗೆ ಎದುರಿದ್ದ ಮರವನ್ನು ನೋಡುತ್ತಿದ್ದರು.
“ಹೌದು ಕಾವ್ಯ ಓದುವುದು ಕಾವ್ಯ ಬರೆಯುವುದಕ್ಕಿಂತ ಒಳ್ಳೆಯದು. ಆದರೆ ಹಣ್ಣು ತಿನ್ನುವುದು ಅನೇಕರು ಬಲ್ಲರು. ಹಾಗೆ ತಿಂದು ಸಂತೋಷಪಡುವುದೂ ಒಂದು ಭಾಗ್ಯ, ಹಾಗೆಂದು ತಿನ್ನುವು ದಕ್ಕೆ ಹಣ್ಣು ಬೆಳೆಯುವವರು ಬೇಡವೆ? ”
“ಬೇಕು. ಆದರೆ ಕವಿಗಳಾಗುವುದು ಹೇಗೆ ?”
“ನಾವು ಕೋಗಿಲೆಯ ಚಿತ್ರ ಬರೆಯ ಬಹುದು. ಕೋಗಿಲೆ ಯನ್ನು ಹುಟ್ಟಿಸುವುದು ಕಷ್ಟ. ಅದನ್ನೂ ನಾನು ಒಪ್ಪುತ್ತೇನೆ. ನೀವೆಲ್ಲರೂ ಪ್ರಯತ್ನ ಮಾಡಿ, ಕೋಗಿಲಿಗೆ ಕೂಗಬೇಕು ಎನ್ನಿಸುತ್ತದೆ. ನಿಮ್ಮಲ್ಲಿ ನಾಟಕ, ಸಂಗೀತ, ಎರಡರಲ್ಲಿಯೂ ವಿದ್ವಾಂಸರಿದ್ದ ಮೇಲೆ ನಾಟಕ ಬರೆಯುವವರೂ ಇರಬೇಕಲ್ಲವೆ ?”
“ಇದ್ದಾರೆ. ಮೈಸೂರಿನಲ್ಲಿ ರಾಜಕವಿ ತಿರುಮಲೆ ಶ್ರೀನಿವಾ ಯ್ಯಂಗಾರ್ಯರು, ಬೆಂಗಳೂರಿನಲ್ಲಿ ವಿದ್ವಾನ್ ವೆಂಕಟಾಚಾರ್ಯರು” ಇಬ್ಬರೂ ಸೊಗಸಾಗಿ ನಾಟಕ ಬರೆಯುತ್ತಾರೆ. ”
“ಅವರು ಬರೆದಿರುವ ನಾಟಕಗಳು; ?
“ಶ್ರೀನಿವಾಸಯಂಗಾರ್ಯರು ಬರೆದಿರುವ ಮನ್ಮಥವಿಜಯ ವೆಂಕ ಟಾಚಾರ್ಯರ ಭೋಜಪ್ರಬಂಧ ಎರಡೂ ಒಳ್ಳೆಯ ನಾಟಕೆಗಳು.”
“ಅದರ ಮೇಲೆ ಯಾರಾದರೂ ವಿಸ್ತಾರವಾಗಿ ವ್ಯಾಖ್ಯಾನ ಬರೆ ವಿರುವರೆ? *
“ಇಲ್ಲ ”
“ನೀವು ಸಾಹಿತ್ಯ ಪ್ರಿಯರು ಆ ಕೆಲಸಮಾಡಿ. ಸಂಗೀತಗಾರ ನಿಗೆ ತನ್ನ ಸಂಗೀತ ಕೇಳು ತಲೆದೂಗುವವರು ಎದುರಿಗೆ ಇದ್ದಂತೆಲ್ಲ ಉತ್ಸಾಹವು ಬರುವ ಹಾಗೆ, ಸಾಹಿತಿಗೂ ಕವಿಗೂ ತನ್ನನ್ನು ಮೆಚ್ಚು ವವರ ಬಳಗ ಇರಬೇಕು. ನಮ್ಮಲ್ಲಿ ಬಹು ಬೇಗ ದೋಷವನ್ನು ತೋರಿ ಸುವ ಗುಣವಿದೆ. ಆದರೆ ದೋಷವನ್ನು ಹಿಂದಿಟ್ಟು ಗುಣವನ್ನು ಮೆಚ್ಚುವ ಅಭ್ಯಾಸ ಇನ್ನೂ ಬೆಳೆದಿಲ್ಲ. ಅಪೂರ್ಣತೆ ಹೋಗುವುದು ಪೂರ್ಣವಾದಾಗ. ಪೂರ್ಣ ವಾಗುವವರೆಗೂ ಬೆಳೆಯಲಿ. ಸಂಗೀತ ದಲ್ಲಿ ಬರಿಯ ತಾಳ ಗಮನಿಸಿದರೆ ಸಾಕೆ? ಹೀಗೆ ಇದೆ ಈಗ. ಇದು ತಪ್ಪಲಿ. ಅಗೋ ಐದು ಗಂಟೆಯಾಯಿತು. ಇನ್ನು ನನಗೆ ಅವಕಾಶ ವಿಲ್ಲ. ನಿಮ್ಮಲ್ಲಿ ಯೂನಿವರ್ಸಿಟಿ ಹುಟ್ಟಿ ಹಾಕಿದ್ದೀರಿ. ಕಲಕತ್ತೆಯ ಮುಖರ್ಜಿ, ಮದರಾಸಿನ ರಾಧಾಕೃಷ್ಣನ್, ಬೊಂಬಾಯಿನ ಷಾ ಆಂಧ್ರದ ಸಿ. ಆರ್. ರೆಡ್ಡಿ ಇವರನ್ನು ನಿಮ್ಮ ‘ಮಹಾರಾಜರೂ ದಿವಾವರೂ ಆಸೆ ಯಿಂದ ತಂದಿದ್ದಾರೆ. ನಿಮ್ಮ ಎನ್. ಎಸ್. ಸುಬ್ಬರಾಯರು ವಿದ್ಯಾ ವಂತರು : ಕೀರ್ತಿವಂತರು. ಈ ಮಹನೀಯರುಗಳಂತೆ ನೀವೂ ವಿದ್ಯಾ ವಂತರಾಗಿ : ಕೀರ್ತಿವಂತರಾಗಿ. ಎಲ್ಲದಕ್ಕಿಂತ ಹೆಚ್ಚಾಗಿ ವಿದ್ಯಾವಂತ ರನ್ನೂ ಕೀರ್ತಿವಂತರನ್ನೂ ಕಂಡು ಮೆಚ್ಚಿಕೊಳ್ಳುವ ಭಾವವನ್ನು ಬಳೆ ಯಿಸಿ ಕೊಳ್ಳಿ. ”
ವಿದ್ಯಾರ್ಥಿಗಳು ಕವೀಂದ್ರರ ಆಶೀರ್ವಾದವನ್ನು ಪಡೆದು ಹೊರ ಟರು. ಅವರು ಮರ್ಯಾದೆಯಾಗಿ ಬೀಳ್ಕೊಂಡ ಆ ಗುಂಪನ್ನು ನೋಡಿ, “ನಿಮ್ಮ ಹುಡುಗರು ತೇಜಸ್ವಿಗಳಾಗಿದ್ದಾರೆ. ಮುಂದಿನ ಭಾರತದಲ್ಲಿ ಮೈಸೂರಿಗೆ ಗಣ್ಯವಾದ ಸ್ಥಾನವಿದೆ. ” ಎಂದರು.
ನರಸಿಂಹಯ್ಯನಿಗೆ ಅದನ್ನು ಕೇಳಿ ಆನಂದವಾಯಿತು: ನಾಯಕನನ್ನು ಮಾತಾಡುವಂತೆ ಪ್ರೇರಿಸಿದನು: ಅವನೂ ಅವನ ಸಂತೋಷ ದಲ್ಲಿ ಭಾಗಿಯಾಗಿದ್ದ. “ಮುಂದಿನ ಭಾರತದಲ್ಲಿ ಮೈಸೂರಿಗೆ ಗಣ್ಯವಾದ ಸಾನವಿದೆ ಎಂದಿರಿ. ಭಾರತದ ಮುಂದಿನ ಗತಿಯೇನು? ” ಎಂದು ಕೇಳಿದನು.
ಕನೀಂದ್ರರು ನಕ್ಕರು: “ನೀವೂ ನಮ್ಮಂತೆ : ನಾವೂ ನಿಮ್ಮಂತೆ. ಇಬ್ಬರೂ ಬಿರುದು ಪಡೆದವರು. ನಿಮ್ಮ ಕಥೆಯನ್ನು ನರಸಿಂಹಯ್ಯನನರು ಹೇಳಿದರು. ನೀವು ಬೇಟೆಯಲ್ಲಿ ನಿಸ್ಸೀಮರು : ನಾನು ಹಾಡುಕಟ್ಟುವುದರಲ್ಲಿ. ಆಯಿತು. ಈಗ ಮೊದಲನೆಯದಾಗಿ ರಾಜಕೀಯವಾಗಿ ಹೇಳುವುದಾದರೆ, ಮುಂಖಂಡರು ಅನೇಕರಿಗೆ ಈ ಬ್ರಿಟಷ್ ಸಿಂಹನನ್ನು ಎದುರಿಸುವ ವಿಧಾನ ತಿಳಿಯದು. ಆ ದಕ್ಷಿಣ ಆಫ್ರಿಕದಿಂದ ಬಂದಿರುವ ಗಾಂಧಿ ಇರುವರಲ್ಲ. ಅವರು ಚಂಪಾರಣ್ಯ ದಲ್ಲಿ ಗೆದ್ದಿದ್ದಾರೆ. ಬಹುಶಃ ಆತನು ಮುಂದಿನ ಲೀಡರ್. ಮಿಕ್ಕವ ರೆಲ್ಲ ಮಾತು, ಮಾತು: ಆತ ಹಾಗಿಲ್ಲ: ಕೆಲಸಕ್ಕೆ ನುಗ್ಗುತ್ತಾರೆ.”
“ತಾವು ಏಕೆ ರಾಜಕೀಯಕ್ಕೆ ನುಗ್ಗುವುದಿಲ್ಲ ?”
“ನಾನು ಒಂದು ವಿಧವಾಗಿ ರಾಜಕೀಯದಲ್ಲಿಯೇ ಇದ್ದೇನೆ. ನಮ್ಮ ದೇಶದ ಕಡೆಗೆ ಪ್ರಪಂಚದ ಕಣ್ಣು ತಿರುಗಿದರೆ ಅದೂ ಒಂದು ಗೆಲುವು. ಅದಕ್ಕೆ ನಾನು ಮಾಡಿದ ಪ್ರಯತ್ನ ಅಷ್ಟು ಸಫಲವಾಗಿದೆ. ನಮ್ಮ ಶಾಂತಿನಿಕೇತನ, ವಿಶ್ವಭಾರತಿ, ಎಲ್ಲರಿಂದಲೂ ಮನ್ನಣೆ ಪಡೆಯಲಿ ಎಂದು ನಾನು ಮಾಡುತ್ತಿರುವ ಯತ್ನವೂ ಅದೇ ಗುರಿಯೇ! ಈಗ ನಾನು ಇಂಡಿಯವನ್ನೆಲ್ಲ ಸುತ್ತಿ ಬರುತ್ತಿರುವುದೂ ಅದಕ್ಕಾಗಿಯೇ! ಆಗಲಿ. ಇನ್ನು ಹೊತ್ತಾಯಿತಲ್ಲವೆ ?”
ಕನೀಂದ್ರರು ಎದ್ದರು. ಎಲ್ಲರೂ ಅವರನ್ನು ಬೀಳ್ಕೊಂಡರು. ಮಲ್ಲಿಯು ಮತ್ತೆ ನಮಸ್ಕಾರ ಮಾಡಿದಳು. ಈಚೆಗೆ ಬರುತ್ತಾ “ಈಗ ಹೇಗಿದ್ದೀರಿ ಮಲ್ಲಮ್ಮಣ್ಣಿ ?” ಎಂದು ನರಸಿಂಹಯ್ಯನು ಕೇಳಿದನು. ಅವಳ ಅರಳಿದ ಮುಖದಲ್ಲಿ ಮಿನುಗಿದ ನಗೆ ಉತ್ತರಕೊಟ್ಟಿತು.
*****