ಉದ್ದಿನ ಗದ್ದಿಯಲ್ಲೇ ಉರಿದೋಲೋ ಬಣ್ಣದಾ ಲಕ್ಕಿಯೇ
ಉದ್ದಿನ ಗದ್ದಿಯಲ್ಲೇ ಉರಿದೋಲೋ ಕೋಲೇ || ೧ ||
ಕಾಲೂ ನೋಡಿದರೇ ಕಡಗೆಂಪೂ ಬಣ್ಣದಾ ಲಕ್ಕಿಗೇ
ರಟ್ಟೇ ಮೇನೇ ಪಟ್ಟೇ ಹೊಳೀದೋಲೋ ಕೋಲೇ || ೨ ||
ಕಣ್ಣ ನೋಡಿದರೇ ಗುರುಗುಂಜೀ ಬಣ್ಣದ ಲಕ್ಕಿಗೇ
ಕಣ್ಣು ನೋಡಿದರೇ ಗುರುಗುಂಜಿಯೋ ಕೋಲೇ || ೩ ||
ಯೆಲ್ಲಿಂದೇ ಯೆಲ್ಲೀಗೇ ಹಾರೂರೂ ಬಣ್ಣದಾ ಲಕ್ಕಿಯೇ
ಮೇಲೇಳೂ ಗಗನಕ್ಕೇ ಹಾರಿದವೋ ಕೋಲೇ || ೪ ||
ಅಲ್ಲಿಂದೇ ಯೆಲ್ ಹೋಗೇ ಕುಂತೋರೋ ಬಣ್ಣದಾ ಲಕ್ಕಿಯೇ?
ಆಲಾದಾ ಮರಕೆ ಹೋಗೇ ಕುಳೀತೋರೋ ಕೊಲೇ || ೫ ||
ಕಾಯ್ ಬಿಟ್ಟ್ ಹಣ್ಣಾ ಮೆಲವೊಲೇ ಬಣ್ಣದಾ ಲಕ್ಕಿಯೇ
ಹಣ್ಣ ತಿಂದಿ ಬೀಜಾ ಉಗೂಳಿದವೋ ಕೋಲೇ || ೬ ||
ಬಿದ್ದಾ ಬೀಜ್ಯಾಲ್ಲಾ ಬೆರಗಂಡೂ ಬಣ್ಣದಾ ಲಕ್ಕಿಯೇ
ಬಿದ್ದಾ ಬೀಜ್ಯಾಲ್ಲಾ ಬೆರಗಂಡೋ ಕೋಲೇ || ೭ ||
ಅಲ್ಲಿಂದೆ ಯೆಲ್ಲೀಗೇ ಹಾರ್‍ಯೋರೂ ಬಣ್ಣದಾ ಲಕ್ಕಿಯೇ
ಕಡಲೇಳೂ ಸಮುದೂರಕೇ ಹಾರಿದವೋ ಕೋಲೇ || ೮ ||
ಬೇಲೆಮೇನ್ ಹೋಗೇ ಕುಳಿತೋರೂ ಬಣ್ಣದಾ ಲಕ್ಕಿಯೇ
ಲಾಸುರು ದಾವಿರನೇ ಕುಡಿದೋರೂ ಕೋಲೇ || ೯ ||
*****
ಹೇಳಿದವರು: ಧಾಕು ನಾಯ್ಕ, ಅರಗಾ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.