೧.೬ ಸಾರಾಂಶ

೧. ಹಣದ ಆವಿಷ್ಕಾರಕ್ಕೂ ಮೊದಲು ವಸ್ತುವಿನಿಮಯ ವ್ಯವಸ್ಥೆ ಅನುಷ್ಠಾನದಲ್ಲಿತ್ತು. ಸರಕುಗಳಿಗೆ ಬದಲಾಗಿ ಸರಕುಗಳನ್ನು ಮತ್ತು ಸೇವೆಗಳಿಗೆ ಬದಲಾಗಿ ಸೇವೆಗಳನ್ನು ವಿನಿಮಯ ಮಾಡುವ ವ್ಯವಸ್ಥೆಯದು.

೨. ವಸ್ತು ವಿನಿಮಯ ವ್ಯವಸ್ಥೆಯ ದೋಷಗಳಿಂದಾಗಿ ಹಣದ ಆವಿಷ್ಕಾರವಾಯಿತು. ಅದಕ್ಕೂ ಮೊದಲು ಸ್ತ್ರೀಯರನ್ನು, ಗುಲಾಮರನ್ನು, ಸಾಕುಪ್ರಾಣಿಗಳನ್ನು, ದವಸಧಾನ್ಯಗಳನ್ನು, ತಪ್ಪಳ, ಚರ್ಮ, ಆನೆದಂತ, ತಂಬಾಕು, ಚಾಹುಡಿ, ಹರಳುಕಲ್ಲು, ಉಪ್ಪು ಇತ್ಯಾದಿಗಳನ್ನು ವಿನಿಮಯ ಮಾಧ್ಯಮವಾಗಿ ಬಳಸಲಾಗುತ್ತಿತ್ತು. ಹಣದ ಉಗಮವು ಮೂರು ಹಂತದಲ್ಲಾಯಿತು.
ಅ. ಸರಕುಗಳನ್ನು ವಿನಿಮಯ ಮಾಧ್ಯಮವಾಗಿ ಬಳಸುತ್ತಿದ್ದ ಹಂತ
ಆ. ಸರಕು ರೂಪದ ಹಣ, ಲೋಹದ ಹಣ ಮತ್ತು ಕಾಗದದ ಹಣದ ಆವಿಷ್ಕಾರ
ಇ. ಉದರಿ ಹಣದ ಬಳಕೆ.

೩. ಹಣವು ಒಂದು ಸರ್ವ ಸಮ್ಮತ ವಿನಿಮಯ ಮಾಧ್ಯಮವಾಗಿದೆ. ಅದರ ಕಾರ್ಯಗಳನ್ನು ಸ್ಥಿರ ಮತ್ತು ಚಲನಾತ್ಮಕ ಕಾರ್ಯಗಳೆಂದು ವರ್ಗೀಕರಿಸಲಾಗುತ್ತದೆ. ಪ್ರಧಾನ ಮತ್ತು ಆನುಷಂಗಿಕ ಕಾರ್ಯಗಳು ಸ್ಥಿರಕಾರ್ಯಗಳಾಗಿವೆ. ಉಳಿದವುಗಳು ಚಲನಾತ್ಮಕ ಕಾರ್ಯಗಳಾಗಿವೆ.

 

*****