ಒಮ್ಮೆ ಒಂದು ಪಕ್ಷಿ, ಗೂಡಿನಲ್ಲಿಟ್ಟ, ಮೊಟ್ಟೆಯನ್ನು ದಿಟ್ಟಿಸಿ ನೋಡುತಿತ್ತು. ಈ ಮೊಟ್ಟೆಯಿಂದ ಹೊರ ಬರುವ ನನ್ನ ಮರಿ ಹಕ್ಕಿ, ಎಷ್ಟು ಕಠಿಣ ಜಗತ್ತನ್ನು ಎದುರಿಸಬೇಕೆಂದು ಯೋಚಿಸುತಿತ್ತು. ಗಾಳಿ-ಮಳೆ, ಗುಡುಗು-ಮಿಂಚು, ಶತ್ರುಮಿತ್ರರ ಹಾವಳಿಯಿಂದ ಹೇ...

ಪರಿಸರವನುಳಿಸಲಿಕೆಂದು ನೂರೊಂದು ತರದೊಳೋದಿಹರುಪಾಯವನು ಹೂಡುವರು ಪರಿಸರಕೆಂದುನ್ನತದಧ್ಯಯನ ಪೀಠವಿರುತಿಹುದು ಪರಿಣಾಮದೊಳೊಂದು ಟಿಪ್ಯೂಪೇಪರನುಳಿಸಿ ಕರವಸ್ತ್ರಕೆಳಸುವ ಮನವನನುಗೊಳಿಸದಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...

ಬೇಟಕಾರ ಬಂದ ಮಾದ, ಹಹ್ಹ! ಏನು ಬೇಟವೋ! ಬೇಡಿ ಸತ್ತು ಸುಣ್ಣವಾದ, ಹಹ್ಹ! ಏನು ಬೇಟವೊ! ಮಾದಿ ಕತ್ತನೊಲೆದುದೇನು! ಅತ್ತ, ಇತ್ತ, ಸಿಡಿದುದೇನು! ಮಾದ, ಪಾಪ, ಮಿಡಿದುದೇನು! ಹಹ್ಹ! ಏನು ಬೇಟವೊ! ಕಯ್ಯ ಮುಗಿದ, ಕಾಲ ಹಿಡಿದ, ಹಹ್ಹ! ಏನು ಬೇಟವೋ! ರೊಯ್ಯ...

ಪ್ರಾಣೇಶನಿಗೆ ದೊಡ್ಡ ಯೋಚನೆಯಾಗಿದೆ: “ರಮೇಶನು ಬುದ್ಧಿವಂತ, ವಿದ್ಯಾವಂತ, ಚೆನ್ನಾಗಿ ಸಂಪಾದಿಸಿದ ಶ್ರೀಮಂತ, ಯಾರಿಗೂ ಕೆಟ್ಟುದು ಮಾಡಿದವ ನಲ್ಲ ಮಾಡಬೇಕೆಂದುಕೊಂಡವನೂ ಅಲ್ಲ. ಆದರೂ ಅವನಿಗೇಕೆ ಇಷ್ಟು ಭಯಂಕರ ವಾದ ಸಾವು ಬಂತು? “ಜೀವನವೆನ್ನುವುದು ಇಷ...

ಇನ್ನೇನು ನಾ ಬೇಡಲಿ ನಿನ್ನ ನನ್ನ ಮನವೇ ನಿನ್ನದಾಗಿದೆ ನನ್ನ ಮನವ ನಡೆಸುವಾತ ನೀನು ನನ್ನದೆಲ್ಲವು ಈಗೊ ನಿನ್ನದಾಗಿದೆ ಆಕಾಶದೆತ್ತರಕ್ಕು ಹಾರಲಿ ನಾನು ಬುವಿಪಾತಾಳದಲಿ ಅಡಗಲಿ ನಾನು ಗಾಳಿಯಲಿ ತೇಲಲಿ ನಾನು ನನ್ನ ಮನವೆಲ್ಲ ತುಂಬಲಿ ನೀನು ಅನಂತಕೋಟಿ ಬ...

ನಮ್ಮ ಮನೆಗೆ ತಂದೆವು ಟಿ.ವಿ ನೋಡಬೇಕಿತ್ತಾಗ ನಮ್ಮ ಠೀವಿ ಬಗೆಬಗೆಯ ಚಾನೆಲ್ ಇದರಲ್ಲಿ ಅಪರಿಮಿತ ಸಂತೋಷ ನಮ್ಮ ಮನದಲ್ಲಿ ಅಪ್ಪನಿಗೆ ನ್ಯೂಸ್ ನೋಡುವ ಚಟ ತಂಗಿಗೆ ಕಾರ್ಟೂನ್ ಬೇಕೆಂಬ ಹಠ ಧಾರಾವಾಹಿ ನೋಡಲು ಕಾತರ ಅಮ್ಮನಿಗೆ ಕ್ರಿಕೆಟ್‌ನಲ್ಲಿ ಕುತೂಹಲ ತ...

ಕನಸಿಗನ ಕನವರಿಕೆ ಕವನ ಅಲ್ಲಲ್ಲಿ ವಾಕ್ಯ ಮುರಿದ ವ್ಯಾಕರಣ ತನಗೆ ತಾನೇ ಬದ್ಧ ಉಳಿದಂತೆ ಎಲ್ಲವೂ ಅಸಂಬದ್ಧ ಕಾರ್ಯವ ಹುಡುಕುವುದು ಕಾರಣ ಮಧ್ಯರಾತ್ರಿ ಮಲಗಿದ ಧರಿತ್ರಿ ವಿಸ್ಮಯ ತುಂಬಿದ ಜನನಿಬಿಡ ಸಂಜ್ಞೆ ಬಿಂಬಿಸುವ ಹಾಗೆ ದಿಂಬಿನ ಮೇಲೆ ಬಿಂಬ ಮಗ್ಗುಲ...

ಸುಪ್ತಿಯೊಳು ಭವವಿಲ್ಲ ಸ್ವಪ್ನದೊಳು ಋತವಿಲ್ಲ ಜಾಗರದಿ ಋತಜುಷ್ಟ ಭವವೇಳ್ವುದು ಜಾಗರದಿ ರಸದತ್ತ ಕುಡಿವರಿವ ಭವದೊಳಗೆ ಹಿಂಜರಿದು ಋತ ಸತ್ಯಕೆಡೆಗೊಡುವುದು ಭಾವಾವಲಂಬಿಯೀ ಸತ್ಯವೆಂಬಿಹದ ಬೆಲೆ ಸ್ವರ್ಗಾದಿ ಲೋಕಗಳಿಗದುವೆ ತಲವು ಇಂದ್ರಾಗ್ನಿವರುಣರನು ದೇ...

ಗೊಲ್ಲರ ಹಟ್ಟಿಯಾಚೆಗಿನ ಕಾಡಿನಲ್ಲಿ ಬೀಡು ಬಿಟ್ಟಿವೆ ಗೊಲ್ಲತಿಯರ ಕುಟೀರ ಶಿಲುಬೆಗೇರುವ ಯಾತನಾ ಶಿಬಿರ ತಿಂಗಳಿಗೊಂದಾವರ್ತಿ ಊರ ಹೊರಗೆ ನಲುಗುವ ಗೊಲ್ಲತಿಯರ ಹೆಣ್ಣು ಸಂವೇದನೆಗಳು ಊರೊಳಗಿದ್ದರೆ ಬಾಣಂತಿ, ಮುಟ್ಟಾದ ಹೆಣ್ಣು ಮನೆಯಲ್ಲಿ ಹಾವು ಚೇಳು ಬ...

ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ ಹೊಸದೊಂದು ಭಯಂಕರ ಮಾಹಿತಿಯೊಂದನ್ನು ಹೊರಗಡೆವಿದ್ದು ಭವ್ಯ ಭಾರತದಲ್ಲಿಂದು- ಒಟ್ಟು ೧೮೬೬ ನೋಂದಾಯಿತ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆಂದು ಅಧಿಕೃತವಾಗಿ ಘೋಷಿಸಿರುವುದು. ಕಳೆದ ವರ್ಷ ೨೦೧೪ ಮಾರ್ಚಿನಿಂದ ೨...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....