ಚಿಮ್ಮುತ ನಿರಿಯನು ಬನದಲಿ ಬಂದಳು ಬಿಂಕದ ಸಿಂಗಾರಿ; ಹೊಮ್ಮಿದ ಹಸುರಲಿ ಮೆರೆಯಿತು ಹಕ್ಕಿ ಕೊರಲಿನ ದನಿದೋರಿ. ಹೇಳೆಲೆ ಹಕ್ಕಿ, ಚೆಲುವನು ಸಿಕ್ಕಿ, ನನಗೆ ಮದುವೆಯೆಂದು? ಆಳಿಬ್ಬಿಬ್ಬರು ಕೇರಿಯ ಸುತ್ತಿ, ಹೆಗಲಲಿ ಹೊತ್ತಂದು! ಹಕ್ಕಿಯೇ ಹೇಳೈ, ಒಸಗೆಯ ...

ಒರತೆಗಳು ಬೆರೆಯುವುವು ಹೊಳೆಯ ಬಳಿ ಸಂದು; ಹೊಳೆ ಹರಿದು ಕಡಲಲ್ಲಿ ಕೂಡುವುವು ಬಂದು; ಗಗನದೊಳು ಗಾಳಿಗಳು ಹಗಲೆಲ್ಲ ಬೆಂದು ಸುಳಿಯುವುವು ಬಯಸಿಕೊಂಡೊಂದನೊಂದು, ಧರಣಿಯೊಳಗಾವುದೂ ಒಂಟಿಯಿಹುದಿಲ್ಲ- ಸೆಳೆವೊಂದು ದಿವ್ಯವಿಧಿಯಿಂದ ಜಗವೆಲ್ಲ ಬೇರೆ ಇರಲಾರದ...

ಭಾವಗಳು, ರಾಗಗಳು, ಬಗೆಬಗೆಯ ಭೋಗಗಳು, ಆವಾವುವಲೆಯುವುವು ಮನುಜನೆದೆಯ, ಕಾಮರಾಯಂಗೆಲ್ಲ ಕುಲಪುರೋಹಿತರಾಗಿ ಹೋಮಾಗ್ನಿಯನು ಬೀಸಿ ಕೆರಳಿಸುವುವು. ನೆನೆನೆನೆದು ಮೈಮರೆತು ನಲಿಯುವೆನು ಮತ್ತೆಮ ತ್ತನುಭವಿಸಿ ಆ ದಿನದ ಸುಖದ ಹೊತ್ತ, ಅಂದು ಬೆಟ್ಟದ ತುದಿಯ ...

ಮೇಲುನೋಟಕೆ ಮರೆಯಲಾರಳು ಹಲವು ಹೆಣ್ಗಳ ಪರಿಯೊಳು; ಅವಳ ಚೆಲುವನು ನಾನೆ ಅರಿಯೆನು ನಗುವತನಕೊಲಿದೆನ್ನೊಳು. ಆಗ ಕಂಡೆನು ಕಣ್ಣ ಹೊಳಪನು, ಒಲುಮೆ ತುಳುಕುವ ಬೆಳಕನು. ಈಗ ನೋಡಳು, ನಾಚಿ ನುಲಿವಳು, ನಾನು ನೋಡಲು ಮುನಿವಳು; ಏನೆ ಮಾಡಲಿ, ಹಿಡಿಯಬಲ್ಲೆನು ಕ...

ಕಂಡಿರ ಸುಂದರಿ ಕಮಲೆಯನು? ಕಂಡಿರ ಕೋಮಲೆ ವಿಮಲೆಯನು? ಧೀರನವೊಲು ದಿಗ್ವಿಜಯವ ಮಾಡಲು ಊರಿನ ಗಡಿಯನ್ನು ದಾಟಿದಳು. ಅವಳನು ಕಂಡರೆ ಒಲಿಯುವುದೇ, ಅವಳನೆ ಎಂದಿಗು ಒಲಿಯುವುದೇ. ಅವಳನು ಮಾಡಿದ ಬಿದಿ ತಾ ಮಾಡನು ಇನ್ನಾ ಚೆಂದದ ಚೆಲುವೆಯನು. ಕಮಲೇ, ನೀನೇ ರ...

ನನ್ನ ಪ್ರೇಮದ ಹುಡುಗಿ ತಾವರೆಯ ಹೊಸಕೆಂಪು, ತಾವರೆಯ ಹೊಸ ಅರಳ ಹೊಳೆವ ಕೆಂಪು. ನನ್ನ ಪ್ರೇಮದ ಹುಡುಗಿ ಕೊಳಲ ಮೆಲುನುಡಿಯಿಂಪು, ಕೊಳಲು ಮೋಹಿಸಿ ನುಡಿವ ಗಾನದಿಂಪು. ಬೆಳೆಬೆಳೆಯುತೆಷ್ಟೆಷ್ಟು ಬಿನ್ನಾಣ, ಎಲೆ ಚೆಲುವೆ, ಮುಳುಗಿದೆನು ಅಷ್ಟಷ್ಟು ಪ್ರೇಮದ...

ಬೇಟಕಾರ ಬಂದ ಮಾದ, ಹಹ್ಹ! ಏನು ಬೇಟವೋ! ಬೇಡಿ ಸತ್ತು ಸುಣ್ಣವಾದ, ಹಹ್ಹ! ಏನು ಬೇಟವೊ! ಮಾದಿ ಕತ್ತನೊಲೆದುದೇನು! ಅತ್ತ, ಇತ್ತ, ಸಿಡಿದುದೇನು! ಮಾದ, ಪಾಪ, ಮಿಡಿದುದೇನು! ಹಹ್ಹ! ಏನು ಬೇಟವೊ! ಕಯ್ಯ ಮುಗಿದ, ಕಾಲ ಹಿಡಿದ, ಹಹ್ಹ! ಏನು ಬೇಟವೋ! ರೊಯ್ಯ...

ಮಾನವಾಗಿ ತಾನು ಬದುಕಿ, ಹೀನ ಬಡತನವೇನೆ ಇರಲಿ, ನಾಚಿಕೊಳುವ ನೀಚತೊತ್ತ ಆಚೆನೂಕು, ಏನೆ ಇರಲಿ, ಏನೆ ಇರಲಿ, ಏನೆ ಇರಲಿ, ಕಷ್ಟನಿಷ್ಟುರವೇನೆ ಇರಲಿ, ಮೆರೆವ ಪದವಿ ವರಹಮುದ್ರೆ, ಆಳು ಚಿನ್ನ, ಏನೆ ಇರಲಿ! ಹೊಟ್ಟೆಗಿಷ್ಟು ಹಿಟ್ಟು ಗಂಜಿ, ಬಟ್ಟೆ ಚಿಂದಿ,...

(ಹಳೆಯ ಕಥೆ) ಮಾಲೆಗಳು, ಮಾಲೆಗಳು ಬೀದಿ ಮನೆಮನೆಗೆ; ಮುತ್ತುಗಳ ಸೇಸೆಗಳು ತಲೆಯೊಳಗೆ ಮಿನುಗೆ; ಮಾಳಿಗೆಗಳೊಲೆದಾಡಿ ಹಿಗ್ಗು ಮುಗ್ಗಾಗೆ; ಎತ್ತಿದಾ ಗುಡಿ ದೀಪಗೋಪುರವ ಬೆಳಗೆ- ಒಂದು ವರುಷದ ಕೆಳಗೆ ನನಗೆ ಮೆರವಣಿಗೆ! ಗಾಳಿ ನೊರೆಕೀಳುವುದು ವಾದ್ಯಗಳ ಮೊ...

ಬೇಸಗೆಯಲಿ ಸಂಜೆಯಾಯಿತು; ಕೆಲಸವ ಮುತ್ತಜ್ಜ ತೀರಿಸಿಕೊಂಡ. ಹಟ್ಟಿಯ ಬಾಗಿಲ ಬಳಿಯಲಿ ನೋಡುತ ಹೊಂಬಿಸಿಲಲಿ ಕುಳಿತುಕೊಂಡ. ಅಲ್ಲಿಯೆ ಹಸುರಮೇಲಾಡುತಲಿದ್ದಳು ಅಜ್ಜನ ಮುದ್ದಿನ ಪುಟ್ಟ ಮೊಮ್ಮಗಳು. ಕಂಡಳು ಕೂಗಿಕೊಂಡಣ್ಣನು ಬರುವುದ ಆಡುತ, ಹೊಳೆಯಂಚಿನಿಂದ ...