ಉಮರನ ಒಸಗೆ – ೫೩

ಮರುನುಡಿಯನಾರುಮಿದಕಾಡದಿರೆ ಮೇಣೊರ್‍ವ ಸೊಟ್ಟುಗೊರಲಿನ ಜಾಣನಿಂತು ಬಾಯ್ವಿಟ್ಟಂ: "ಎನ್ನ ಸೊಟ್ಟನು ನೋಡಿ ನಗುತಿರ್‍ಪರೆಲ್ಲರುಂ; ಎನ್ನಪ್ಪ ಕುಂಬರಗೆ ಕೈನಡುಕಮೇನೋ!" *****

ಬೆನಕ ನೀನು ಬರಬೇಕು

ಬೆನಕ ನೀ ಬರಬೇಕೊ ನಮ್ಮನೆಗೆ ಬರಬೇಕೊ ಪಲ್ಲಕಿ ಗಿಲ್ಲಕಿ ಬೇಡವೆಂದಿ ಮೂಷಿಕವಾಹನವೊಂದೇ ಸಾಕೆಂದಿ ಮೆಲ್ಲನೆ ಬರುತೀಯೋ ಘಲ್ಲನೆ ಬರುತೀಯೋ ಹೇಗಾದರು ನೀ ಬರಬೇಕೋ ಗದ್ದೆ ಬದುವಲ್ಲಿ ಹುಷಾರಾಗಿ ಬಾರೋ ಬಿದ್ದರೆ ಬಿದಿಗೆಯ ಚಂದ್ರ ನಗುತಾನೋ...

ನಾಳೀಜಂಘ

ಬಾನ ಗೂಡಾರವನು, ಬೆಟ್ಟ, ನಡುಗೋಲಂತೆ ತುಟ್ಟತುದಿಗೋಪುರದ ಮೇಲೆತ್ತಿ ಹಿಡಿದಂತೆ ನಿಂತಿರಲು ದೂರದೊಳು, ಸುತ್ತ ನಭವಿಳಿದಿರಲು ಸಂಜೆರಂಗಿನ ಮೋಡ ಅದನಂದಗೊಳಿಸಿರಲು, ಸರಸಿಯೊಳು ಝಗಝಗಿಸಿ ರವಿಯ ಛವಿಯಾರುವೊಲು ಹಕ್ಕಿವಿಂಡಿಂಚರಿಸಿ ಮರದೊಳಡಗುತಲಿರಲು, ಬೈಗಿನ ಮಲರ್ವುಡಿಯೊ ಎಂಬ ತೆರ ಕಣಿವೆಯೊಳು...