ರಾಮ ನಾಮ ಸುಖವೋ
ಸೀತಾರಾಮ ನಾಮ ಸುಖವೋ
ಭರತನ ಭಕುತಿ ಸುಖವೋ
ಲಕ್ಷ್ಮಣನ ಸೇವೆ ಸುಖವೋ
ಹನುಮನ ಭಕ್ತಿ ಸುಖವೋ
ಸೀತೆಯ ಮನ ಸುಖವೋ
ದಂಡಕಾರಣ್ಯ ಸುಖವೋ
ಪಂಪಾರಣ್ಯ ಸುಖವೋ
ವಾಲಿ ಸುಗ್ರೀವರ ಕಥೆ ಸುಖವೋ
ಲಂಕಾದಹನ ಸುಖವೋ
ಶ್ರೀರಾಮ ಪಟ್ಟಾಭಿಷೇಕ ಸುಖವೋ
ಸೀತಾಮಾತೆಯ ತ್ಯಾಗ ಸುಖವೋ
ವಾಲ್ಮೀಕಿಯಾಶ್ರಮ ಸುಖವೋ
ಲವಕುಶರ ಶ್ರವಣ ಸುಖವೋ
ಪದ ಸುಖವೋ ಜನಪದ ಸುಖವೋ
ಹಾಡ ಸುಖವೋ ಇದು ನಾಡ ಸುಖವೋ
*****