ಕನ್ನಡದ ಗಂಡಸರೆ ಧ್ವನಿ ನೀಡಿ ಕನ್ನಡಕೆ
ಕೋಲು ಕೋಲೆನ್ನಿರೊ
ಕಂಚಿನ ಧ್ವನಿ ನೀಡಿ
ಕಹಳೆಯ ಧ್ವನಿ ನೀಡಿ
ಶಂಖದ ಧ್ವನಿ ನೀಡಿ
ಕೋಲು….
ಕನ್ನಡದ ಕನ್ನೆಯರೆ ಧ್ವನಿ ನೀಡಿ ಕನ್ನಡಕೆ
ಕೋಲು ಕೋಲೆನ್ನಿರೊ
ಚಿನ್ನದ ಧ್ವನಿ ನೀಡಿ
ರನ್ನದ ಧ್ವನಿ ನೀಡಿ
ಬೆಳ್ಳಿಯ ಧ್ವನಿ ನೀಡಿ
ಕೋಲು….
ಹಾಡು ಕರೆಯುವುದೋ ಕನ್ನಡ
ನಾಡು ಕರೆಯುವುದೊ
ಕೋಲು ಕೋಲೆನ್ನಿರೊ
ಕಾಲಿನ ಗೆಜ್ಜೆ ಕರೆಯುವುದೋ ಪ್ರತಿ
ಹೆಜ್ಜೆ ಕರೆಯುವುದೊ
ಕೋಲು….
ಹೂವಿನ ಕೋಲು ತನ್ನಿರೊ
ನವಿಲಿನ ಕೋಲು ತನ್ನಿರೊ
ಕೋಲು ಕೋಲೆನ್ನಿರೊ
ಕುಣಿಯುವ ಕೋಲು ತನ್ನಿರೊ
ಹಾಡುವ ಕೋಲು ತನ್ನಿರೊ
ಕೋಲು….
ದಾರಿ ದಾರಿಗೆ ಹೂವ ಚೆಲ್ಲಿರೊ
ಕೇರಿ ಕೇರಿಗೆ ಬಣ್ಣವ ಚೆಲ್ಲಿರೊ
ಕೋಲು ಕೋಲೆನ್ನಿರೊ
ಕನ್ನಡಮ್ಮನ ಮುಂದೆ ಮಲ್ಲಿಗೆ ಚೆಲ್ಲಿರೊ
ಶ್ರೀ ಗಂಧವ ಚೆಲ್ಲಿರೊ
ಕೋಲು….
ಕನ್ನಡ ಜನಪದ ಹಾಡುಗಳ ಹಾಡಿರೊ
ಕನ್ನಡದ ಜನಪರ ಹಾಡುಗಳ ಹಾಡಿರೊ
ಕೋಲು ಕೋಲೆನ್ನಿರೊ
ಕನ್ನಡದ ಮುನ್ನಡೆಯ ಹಾಡುಗಳ ಹಾಡಿರೊ
ಕನ್ನಡದ ಜಯಭೇರಿ ಹಾಡುಗಳ ಹಾಡಿರೊ
ಕೋಲು….
ಕನ್ನಡಮ್ಮನಿಗೆ ಜಯವೆನ್ನಿರೋ
ಕನ್ನಡ ತಾಯಿ ಚಿರವೆನ್ನಿರೋ
ಕೋಲು….
*****