ಚಿತ್ರ: ಮಥಿಯಸ್ ವೇವರಿಂಗ್
ಚಿತ್ರ: ಮಥಿಯಸ್ ವೇವರಿಂಗ್

ಐತಿಹಾಸಿಕ ಕಾಲದಿಂದ ಹಿಡಿದು ಇಂದಿನವರೆಗೂ ಸೋಲಿನ ಕಹಿಯನ್ನು ಅನುಭವಿಸಿದ ಆಥವಾ ದೂರದಿಂದ ಕಂಡು ಪಲಾಯನ ಗೈಯ್ಯುವ ಸೈನಿಕರು ಸರ್ವೇ ಸಾಮಾನ್ಯ. ಆದರೆ ಸೋಲನ್ನೇ ಆರಿಯದ ಸೈನಿಕರು ಕೆಲವೇ ವರ್ಷಗಳಲ್ಲಿ ರಣರಂಗಕ್ಕೆ ಧುಮುಕಲಿದ್ದಾರೆ ಎಂದರೆ ಆಶ್ಚರ್ಯ ಮತ್ತು ಸಂತೋಷದ ಸಂಗತಿಯೇ. ಮಾನವ ಸಹಜವಾದ ಸೋಲು ಗೆಲುವು ಭೂಮಿಯಲ್ಲಿ ಇದ್ದದ್ದೆ ಆದರೆ ಮಾನವರೇ ಅಲ್ಲದೆ ಮಾನವರಂತೆ ಯುದ್ಧ ವೈಖರಿಯಲ್ಲಿ ತೊಡಗುವ ಸೋಲನ್ನು ಅರಿಯದ ಸೈನಿಕರು ಸಿಕ್ಕುವುದೆಂದರೆ ಮನುಷ್ಯರಲ್ಲದೆ ರಾಕ್ಷಸರೆ!? ರಾಕ್ಷಸಿ ಶಕ್ತಿಯುಳ್ಳ ಮನುಷ್ಯರಲ್ಲದ ರೋಬಟ್ ಸೈನಿಕರಿಂದಲೇ ಈ ಸಾಧನೆ ನಿಜ, ಮಾನವ ಶಕ್ತಿಯ ಹತ್ತಾರುಪಟ್ಟು ಹೆಚ್ಚಿನ ಶಕ್ತಿಯನ್ನು ಹೊಂದಿದ ರೋಬಟ್ ಮಾನವರು ಈಗಾಗಲೇ ಫ್ಯಾಕ್ಟರಿಗಳಲ್ಲಿ ವಿದೇಶಿ ಅಡುಗೆ ಮನೆಗಳಲ್ಲಿ ಕೆಲಸ ನಿರ್ವಹಿಸುತ್ತಲಿವೆ. ಹತ್ತು ಜನ ಮಾಡುವ ಕೆಲಸವನ್ನು ಒಬ್ಬ ರೋಬಟ್ ಮನುಷ್ಯ ಕೆಲವೇ ಘಂಟೆಗಳಲ್ಲಿ ಮಾಡುವುದಾದರೆ ೧೦ ಜನ ಸೈನಿಕರಿಗೆ ತರಬೇತಿ ನೀಡಿ ಅವರ ಸಂಬಳ ಸಾರಿಗೆ, ಇತರೆ ಖರ್ಚುಗಳನ್ನೆಲ್ಲ ನಿಭಾಯಿಸುವುದಕ್ಕಿಂತಲೂ ಒಬ್ಬ ರೋಬನನ್ನು ಯುದ್ಧಕ್ಕೆ ತೊಡಗಿಸಿದರೆ ಎದುರಿಗಿದ್ದ ಮನುಷ್ಯ ಸೈನಿಕರಾಗಲಿ, ಮದ್ದು ಗುಂಡುಗಳಾಗಲಿ ಎಲ್ಲವೂ ಸಪಾಟ್ ಆಗುತ್ತದೆ!!

ಅಮೇರಿದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾದ ಜೆಟ್ ಪ್ರೊಪುಲಶನ್ ಪ್ರಯೋಗಾಲಯ ಇದಕ್ಕಾಗಿ ಅಭಿವೃದ್ದಿ ಪಡಿಸಿದ ಯಂತ್ರಜ್ಞಾನವನ್ನು
ಬೆಳೆಸಿಕೊಂಡಿದೆ. ಮನೆಗೆಲಸಕ್ಕಾಗಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವಂತೆ ಯುದ್ಧದಲ್ಲಿಯೂ ಕೂಡ ಕೈಯಲ್ಲಿ ಪಿಸ್ತೂಲು, ರೈಫಲ್‌ಗಳ ಗುಂಡಿ ಅದುಮುವ, ಮುಂದೆ ಮುಂದೆ ನುಗ್ಗುವ, ಗಂಡು ಖಾಲಿಯಾದಾಗ ತುಂಬುವ, ಮತ್ತು ಗುರಿ ಇಟ್ಟು ಶತೃಸೈನ್ಯವನ್ನು ನಾಶಪಡಿಸುವ ಯಾಂತ್ರೀಕೃತ ಯಂತ್ರಗಳನ್ನಳವಡಿಸಿದ ರೋಬಟ್‌ಗಳನ್ನು ಸಿದ್ಧಗೊಳಿಸುತ್ತಿದೆ. ರೋಬಟ್ ಸೈನಿಕರು ಭಾರವಿರದೆ ಹಗುರವಾಗಿದ್ದು ಸುಲಭವಾಗಿ ಚಲಿಸುತ್ತವೆಯಂತೆ
ಇವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಬಹುದು.
*****