“ನಾನು ಕುಳ್ಳಾಗಿದ್ದೇನೆ, ಇನ್ನಷ್ಟು ಎತ್ತರವಿದ್ದರೆ ಎಷ್ಟು ಚೆನ್ನ?” ಎಂದು ಕುಳ್ಳರು ಅನೇಕ ಬಾರಿ ಅಂದುಕೊಂಡಿರುತ್ತಾರೆ. ಅಲ್ಲವೇ ಆದರೆ ವ್ಯಕ್ತಿಯ ದೇಹದ ಉದ್ದ ಅಥವಾ ಗಿಡ್ಡಗೊಳ್ಳುವ ಕ್ರಿಯೆ ನಡೆದು ನಿಲ್ಲುವುದು ೧೮ ನೇ ವರ್ಷದೂಳಗೆ. ಅಂಜಬೇಕಿಲ್ಲ, ಆತಂಕ ಪಡಬೇಕಿಲ್ಲ ಖರ್ಚು ಮಾಡಿ ಚಿಕಿತ್ಸೆಗೆ ಸಿದ್ಧರಿದ್ದರೆ ಆಯಿತು. ಕನಿಷ್ಟ ೪ ಇಂಚು ತನಕ ನ್ಯಾಚುರಲ್ ಆಗಿಯೇ ಬೆಳೆಯಬಹುದು. ಕೇವಲ ಕುಳ್ಳರಿರುವರಿಗಷ್ಟೇ ಅಲ್ಲ ಕಾಲುಗಳು ಅಸಮವಾಗಿದ್ದು ಗಟ್ಟಿ ಇದ್ದರೂ ಕುಂಟುತ್ತ ನಡೆಯುವವರಿಗೂ ಈ ಚಿಕಿತ್ಸೆ ವರದಾನವಾಗಿದೆ. ಕುಳ್ಳರೆಂದು ನಾಚಿಕೆ ಪಡುವ ಭಯವಿಲ್ಲದೇ ನಾನು ಯಾರಿಗೇನು ಕಡಿಮೆ ಎಂದು ಬೀಗಬಹುದು. ಆದರೆ ಕಾಲನ್ನು ಉದ್ದಗೊಳಿಸುವ ಚಿಕಿತ್ಸೆಯನ್ನು ೧೬ ರಿಂದ ೩೫ ವರ್ಷದೊಳಗಿರುವವರು ಮಾತ್ರ ಮಾಡಿಸಿಕೊಳ್ಳಬೇಕಾಗುತ್ತದೆ.

ಇಂಥಹ ಆಶಾದಾಯಕವಾದ ಕುಳ್ಳರಿಗೆ ವರದಾನವಾದ ಚಿಕಿತ್ಸೆಯನ್ನು ರಷ್ಯದ ಲಿಜಾರೊವ್ ಅವರು ಮೊದಲಿಗೆ ಕಂಡು ಹಿಡಿದರು. ಇವರು ಅಪ್ರತಿಮ ಮೂಳೆ ತಜ್ಞರೆಂದು ವಿಶ್ವವಿಖ್ಯಾತಿ ಪಡೆದವರು. ಕೃತಕ ವ್ಯವಸ್ಥೆಯು ಮುರಿದ ಮೂಳೆಗಳನ್ನು ಜೋಡಿಸುವುದು, ಸರಿಪಡಿಸುವುದು ಇದ್ದದ್ದೇ ಆದರೂ ಸಹಜವಾಗಿ ನಿಂತುಹೋಗಿರುವ ಮೂಳೆಗಳ ಬೆಳವಣಿಗೆಯನ್ನು ಮತ್ತೆ ವೃದ್ಧಿಗೊಳಿಸುವುದೇ ಈ ಚಿಕಿತ್ಸೆಯ ಸಾಧನೆಯಾಗಿದೆ.

ಮೊಳಕಾಲಿನ ಕೆಳಗಿರುವ ಮೂಳೆಗೆ ೧.೮ ಮಿಲಿಮೀಟರ್ ನ್ಯಾಸದ ತಂತಿಗಳನ್ನು ಪೋಣಿಸಿ ಅದನ್ನು ಕಾಲಿಗೆ ಜೋಡಿಸಿರುವ ಪಿಕ್ಸರ್‌ಗಳ ತಿರುಗುಣೆಗೆ ಸುತ್ತಿ ಮೇಲ್ಮುಖ ಒತ್ತಡ ಸೃಷ್ಟಿ ಮಾಡುವುದೇ ಈ ಶಸ್ತ್ರ ಚಿಕಿತ್ಸೆಯ ಒಳಗುಟ್ಟು. ಪಿಕ್ಸರ್‌ಗಿರುವ ತಂತಿ ಸುತ್ತಿದ ತಿರುಗಣೆಗೆಗಳನ್ನು ಸ್ಪಾನರ್‌ನಿಂದ ಪ್ರತಿನಿತ್ಯ ಒಂದು ಸುತ್ತು ತಿರುಗಿಸುತ್ತ ಹೋದರೆ ಮೂಳೆಗಳ ಮೇಲೆ ಒತ್ತಡ ಉಂಟಾಗಿ ಸಹಜವಾಗಿಯೇ ಬೆಳೆಯತೊಡಗುತ್ತವೆ. ಕಾಲಿನ ಏಡಿಯ ಮೇಲಿರುವ ಮೂಳೆಗೂ ತಂತಿ ಜೋಡಿಸಿ, ತಂತಿಯನ್ನು ಹೊರಕ್ಕೆಳೆದು ಪಿಕ್ಸ್‌ರ್‌ಗೆ ಜೋಡಿಸಿ ‌ಇಡೀ ಮೂಳೆಯ ಮೇಲೆ ಒತ್ತಡ ಸ್ಪಷ್ಟಿಸಿದಾಗ ಸಹಜವಾಗಿಯೇ ಅದು ಬೆಳೆಯಲು ಆರಂಭ ವಾಗುತ್ತದೆ. ಹೀಗೆ ಮೊಳಕಾಲಿನ ಕೀಲು, ಪಾದದ ಕೀಲುಗಳಲ್ಲಿಯೂ ಇಂಚುಗಳಷ್ಟು ಕಾಲನ್ನು ಬೆಳೆಸಬಹುದು. ಮೂಳೆಯನ್ನು ಮತ್ತೆ ಬೆಳಸಬೇಕೆಂದರೆ ಇನ್ನು ೬ ತಿಂಗಳ ನಂತರ ಇಂಥಹ ಚಿಕಿತ್ಸೆ ಮಾಡಬೇಕಾಗುತ್ತದೆ. ಒಮ್ಮೆ ಚಿಕಿತ್ಸೆಗೆ ಒಳಗಾದ ವ್ಯಕ್ತಿ ಮತ್ತೊಮ್ಮೆ ಚಿಕಿತ್ಸೆ ಪಡೆಯಬೇಕಾದರೆ ೮ ತಿಂಗಳ ಅಂತರವಾದರೂ ಬೇಕು. ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆ ಔಷಧಿ ಹಾಗೂ ಕೃತಕ ವಸ್ತುಗಳನ್ನು ಬೆಳೆಸದೇ ನಡೆಸಲಾಗುವ ಇಂಥಹ ಚಿಕಿತ್ಸೆಯಿಂದ ಯಾವುದೇ ಅಪಾಯವಿಲ್ಲ. ಪೂರ್ಣ ಚಕಿತ್ಸೆಗೆ ತಗಲುವ ವೆಚ್ಚ ೩೫ ರಿಂದ ೫೦ ಸಾವಿರ ರೂಪಾಯಿಗಳು.

ಭಾರತದಲ್ಲಿ ಇಂಥಹ ಯಶಸ್ವಿ ಚಿಕಿತ್ಸೆ ನಡೆಸುತ್ತಿರುವ ದಾ|| ರಾಜೀವ್ ಶರ್ಮ ಅವರು ನೇರವಾಗಿ ರಷ್ಯದ ತಜ್ಞ ಪ್ರೊ. ಜಿ.ಎ. ಲಿಜಾರೋವ್ ಅವರಿಂದ ತರಬೇತಿ ಪಡೆದು ಬಂದವರು. ಭಾರತದ ಮಟ್ಟಕ್ಕೆ ಮೂಳೆ ಬೆಳೆಸುವ ಚಿಕಿತ್ಸೆಯಲ್ಲಿ ಪಾರಂಗತರು. ಇವರ ಚಿಕಿತ್ಸೆಯಲ್ಲಿ ಈಗಾಗಲೇ ಗಿಡ್ಡಕಾಲಿನ ಹೆಣ್ಣು ಅಥವಾ ಗಂಡುಗಳ ಚಿಕಿತ್ಸೆಯ ಪರಿಮಿತಿಯಲ್ಲಿ ತೊಡಗಿ ಗುಣಮುಖರಾಗಿದ್ದಾರೆ.
*****