ಅಂದುಕೊಳ್ಳುವುದೊಂದು
ಆಗುವುದು ಮತ್ತೊಂದು|
ಆಸೆಪಡುವುದೊಂದು
ನಿರಾಸೆ ತರುವುದಿನ್ನೊಂದು||

ಮನ ಬಯಸುವುದೊಂದು
ವಿಧಿ ನೀಡುವುದಿನ್ನೊಂದು|
ಹೀಗೆಯೇ ಜೀವನ
ಆ ವಿಧಿಯ ವಿದಿವಿಧಾನ|
ಅದರೂ ಭಯಪಡದೆ
ಬಾಳಸಾಗಿಸಬೇಕು
ಗುರಿ ಸಾಧಿಸುವ ಛಲವಿರಬೇಕು||

ದೇವರು, ಧರ್ಮ
ಸತ್ಯದ ಅರಿವಿರಬೇಕು|
ಅನುದಿನ ಆರಾಧಿಸಿ
ನಿತ್ಯ ಆಚರಿಸಿ ಅನುಸರಿಸಿ
ನಡೆಯಲೇಬೇಕು|
ಕಾಯಕವ ಮಾಡುತ
ಹರಿಯ ಭಜಿಸುತ್ತಿರಬೇಕು||

ಏನೇ ಬಂದರು ಎದುರಿಸಬೇಕು
ಈಜಿ ಈ ಸಂಸಾರವನು ಸಾಗಲೂ ಬೇಕು|
ಸಂಕುಚಿತ ಭಾವನೆಯ ಕೈಬಿಡಬೇಕು
ಎಲ್ಲವು ಹರಿಚಿತ್ತವೆಂದೆನ್ನುತಲಿ
ಅವನಿಗರ್ಪಿಸಿ ಸಾಗುತಿರಬೇಕು||
*****