ಸಾಹಸ

ಸಾಹಸ

ಚಿತ್ರ: ವಾಡ್ರಯಾನೊ
ಚಿತ್ರ: ವಾಡ್ರಯಾನೊ

ನೀವು ನೀರಿನಲ್ಲಿ ಹಾರಿಕೊಳ್ಳುತ್ತೀರಿ. ಆ ವಿಪುಲವಾದ ಜಲರಾಶಿಯು ನಮ್ಮನ್ನು ಹೆದರಿಸುವುದಿಲ್ಲ. ನೀವು ಕೈಕಾಲುಗಳನ್ನು ಬಡಿಯುತ್ತೀರಿ.  ಅದರೊಡನಯೇ ಈಸಕಲಿಸಿದೆ ನಿಮ್ಮ ಗುರುವಿಗೆ ಧನ್ಯವಾದಗಳನ್ನು ಅರ್ಪಿಸುತ್ತೀರಿ. ನೀವು ತೆರೆಗಳ ಮೇಲೆ ಅಧಿಕಾರವನ್ನು ನಡೆಸುತ್ತೀರಿ. ಹಾಗೂ ಬದುಕಿಕೊಂಡು ಹೊರೆಬೀಳುತ್ತೀರಿ. ನೀವು ವೀರರಾಗುತ್ತೀರಿ.

ನೀವು ನಿದ್ರೆಹೋದಾಗ ‘ಬೆಂಕಿ ಬೆಂಕಿ’ ಎಂಬ ಮಾತು ಬೆಚ್ಚಿಬೀಳುವಂತೆ ಮಾಡಿತು. ನೀವು ಹಾಸಿಗೆಯೊಳಗಿಂದಲೇ ಕೂಗಿಕೊಳ್ಳುತ್ತೀರಿ. ಎದುರಿಗೆ ಬೆಂಕಿಯ ಕೆನ್ನಾಲಗೆಗಳು ಕಾಣಿಸಿಕೊಳ್ಳುತ್ತವೆ. ನೀವು ಆ ಘಾತುಕನಾದ ಭಯದಿಂದ ತ್ರಸ್ತರಾಗುವದಿಲ್ಲ. ಹೊಗೆ, ಕಿಡಿ, ಜ್ವಾಲೆ ಇವುಗಳೊಳಗಿಂದೆ ನೀವು ಹೊರಟೆದ್ದು ಓಡುವಿರಿ. ಮತ್ತು ನಿಮ್ಮನ್ನು ನೀವು ಉಳಿಸಿಕೊಳ್ಳುತ್ತೀರಿ. ಇದು ಸಾಹಸದ ಕೆಲಸವು.

ಬಹಳ ದಿನಗಳ ಹಿಂದೆ ನಾನು ಇಂಗ್ಲೆಂಡಿನಲ್ಲಿ ಒಂದು ಮಕ್ಕಳ ಶಾಲೆಗೆ ಹೋಗಿದ್ದೆನು. ಅಲ್ಲಿ ಮೂರರಿಂದ ಏಳು ವರುಷಗಳ ವರೆಗಿನ ವಿದ್ಯಾರ್ಥಿಗಳಿದ್ದರು. ಅವರಲ್ಲಿ ಬಾಲಕರೂ ಇದ್ದರು. ಅವರೆಲ್ಲರೂ ನೇಯುವುದು, ಚಿತ್ರ ತೆಗೆಯುವುದು, ಕಥೆ ಹೇಳುವುದು-ಕೇಳುವುದು, ಹಾಡುವುದು ಮೊದಲಾದವುಗಳಲ್ಲಿ ತೊಡಗಿದ್ದರು.

ಅವರ ಅಧ್ಯಾಪಕರು ನನಗೆ ಹೇಳಿದ್ದೇನೆಂದರೆ- “ನಾವು ಇನ್ನು ಬೆಂಕಿಯಿಂದ ಬದುಕಿಕೊಳ್ಳುವ ಅಭ್ಯಾಸವನ್ನು ಮಾಡುವೆವು. ಬೆಂಕಿಯು ಸತ್ಯಸತ್ಯವಾಗಿ ಹತ್ತಿಲ್ಲ. ಆದರೆ ಭಯದ ಲಕ್ಷಣ ಕಂಡರೆ ಯಾವ ಪ್ರಕಾರ ಲಗುಬಗೆಯಿಂದ ಎದ್ದು ಓಡಿಹೋಗತಕ್ಕದ್ದೆಂಬುದನ್ನು ಮಕ್ಕಳಿಗೆ ಕಲಿಸುವದಿದೆ.”

ಅವರು ಸೀಟಿ ಊದಿದ ಕೂಡಲೇ ಮಕ್ಕಳು ತಮ್ಮತಮ್ಮ ಪುಸ್ತಕ, ಪೇನ್ಶಿಲು, ಹೆಣೆಯುವ ದಾರ ಬಿಟ್ಟುಕೊಟ್ಟರು. ಹಾಗೂ ಎದ್ದುನಿಂತು ಕೊಂಡರು. ಇನ್ನೊಂದು ಸಂಕೇತದಂತೆ ಎಲ್ಲರೂ ಒಬ್ಬರ ಹಿಂದೆ ಒಬ್ಬರಾಗಿ ಹೊರಗೆ ಬಯಲಲ್ಲಿ ಬಂದುಬಿಟ್ವರು. ಕೆಲವೇ ಕ್ಷಣಗಳಲ್ಲಿ ವರ್ಗಗಳೆಲ್ಲ ತೆರೆವಾಗಿಹೋದವು. ಆ ಚಿಕ್ಕಮಕ್ಮಳು ಬೆಂಕಿಯ ಹೆದರಿಕೆಯನ್ನು ಎದುರಿಸಲಿಕ್ಕೂ ಸಾಹಸಿಗಳಾಗಲಿಕ್ಕೂ ಕಲಿತರು.

ನೀವು ಯಾರ ಸಂರಕ್ಷಣೆಯ ಸಲುವಾಗಿ ಈಸುವಿರಿ? ನಮ್ಮ ಸಂರಕ್ಷಣೆಯ ಸಲುವಾಗಿ.

ನೀವು ಯಾರನ್ನು ಉಳಿಸುವದಕ್ಕಾಗಿ ಬೆಂಕಿಯ ಜ್ವಾಲೆಗಳೊಳಗಿಂದ ಹೊರಬಿದ್ದಿರಿ? ನಮ್ಮನ್ನು ನಾವು ಉಳಿಸಿಕೊಳ್ಳುವ ಸಲುವಾಗಿ.

ಮಕ್ಕಳೇ, ಯಾರನ್ನು ಕಾಪಾಡುವುದಕ್ಕಾಗಿ ಬೆಂಕಿಯ ಹೆದರಿಕೆಯನ್ನು ಎದುರಿಸಿದಿರಿ? ನಮ್ಮ ಸಂರಕ್ಷಣೆಯ ಸಲುವಾಗಿ.

ಪ್ರತಿಯೊಂದು ಪ್ರಸಂಗದಲ್ಲಿ ಸಾಹಸದ ಪ್ರದರ್ಶನವನ್ನು ನಮ್ಮ ಸಂರಕ್ಷಣೆಗಾಗಿ ಮಾಡಲಾಯಿತು. ಇದೇನು ಅನುಚಿತವೇ? ಎಷ್ಟೂ ಇಲ್ಲ.

ಜೀವನವನ್ನು ಸಂರಕ್ಷಿಸುವುದೂ ಅದನ್ನು ಉಳಿಸಿಕೊಳ್ಳಲು ವೀರಗುರಾವುದೂ ಸರ್ವಥಾ ಉಚಿತವಾಗಿದೆ. ಆದರೆ ಒಂದು ವೀರತನವು ಇದಕ್ಕೂ ಹಿರಿದಾಗಿದೆ. ಯಾವುದು ಹೆರರನ್ನು ಸಂರಕ್ಷಿಸುವುದಕ್ಕಾಗಿ ಕಾರ್ಯರೂಪದಲ್ಲಿ ತರಲಾಗುವುದೋ! ಅದೇ ವೀರತನ.
* * * *

ನಾನು ನಿಮಗೆ ಮಾಧವನ ಆ ಕಥೆಯನ್ನು ಹೇಳುತ್ತೇವೆ. ಅದನ್ನು ಭವಭೂತಿಯು ಬರೆದಿದ್ದಾನೆ. ಮಾಧವನು ದೇವಾಲಯದ ಹೊರಗಡೆಯಲ್ಲಿ ಚಪಗಾಲು ಹಾಕಿಕೊಂಡು ಕುಳಿತಿದ್ದನು, ಆಗ ಅವನು ದುಃಖಪೂರ್ಣವಾದ ಒಂದು ಸ್ವರವನ್ನು ಕೇಳಿದನು.

ಒಳಗೆ ಹೋಗುವುದಕ್ಕೆ ಅವನು ಒಂದು ದಾರಿಯನ್ನು ಕಂಡು ಕೊಂಡನು. ಹಾಗೂ ಚಾಮುಂಡೇಶ್ವರಿ ದೇವಿಯ ಗರ್ಭಗುಡಿಯಲ್ಲಿ ಅವನು ಇಣಿಕಿ ನೋಡಿದನು.

ಭಯಂಕರಳಾದ ಅ ದೇವಿಗೆ ಬಲಿಕೊಡುವ ಸಲುವಾಗಿ ಒಬ್ಬ ಬಾಲಿಕೆಯನ್ನು ಅಲ್ಲಿ ಅಣಿಗೊಳಿಸಿದ್ದರು ಅವಳು ನಿರ್ಗತಿಕಳಾದ ಮಾಲತಿ. ಆ ಯುವತಿಯನ್ನು ಸುಪ್ತಾವಸ್ತೆಯಲ್ಲಿಯೇ ಅಲ್ಲಿಗೆ ತರಲಾಗಿತ್ತು. ಅಲ್ಲಿ ಪೂಜಾರಿ ಹಾಗೂ ಪೂಜಾರತಿಯ ಹತ್ತಿರ ಅವಳು ಒಬ್ಬಂಟಿಗಳಾಗಿದ್ದಳು. ಪೂಜಾರಿಯು ತನ್ನ ಚೂರಿಯಮ್ನ ಮೇಲಕ್ಕೆತ್ತಿದ ಹೊತ್ತಿಗೆ ಅವಳು ತನ್ನ ಪ್ರೇಮಿಯಾದ ಮಾಧವನನ್ನು ಧ್ಯಾನಿಸುತ್ತಿದ್ದಳು. “ಮಾಧವಾ. ಹೃದಯೇಶ್ವರಾ, ನಾನು ಪ್ರಾರ್ಥಿಸುವದೇನಂದರೆ-ನನ್ನ ಮರಣವಾದ ಬಳಿಕ ಸಹ ನಿನ್ನ ನೆನಪಿನಲ್ಲಿ ಉಳಿಯೆಬಲ್ಲೆನು. ಯಾವ ಪ್ರೇಮವು ನನ್ನ ಹಿರಿದಾದ ಹಾಗೂ ಸವಿಯಾದ ನೆನಹಿನಲ್ಲಿ ಸುರಕ್ಷಿತವಾಗಿರುತ್ತದೆಯೋ ಅದು ಮರಣ ಹೊಂದುವುದಿಲ್ಲ.”

ವೀರಮಾಧವನು ಒಮ್ಮೆ ಅಬ್ಬರಿಸಿ ಅ ಬಲಿಗೃಹವನ್ನು ನುಗ್ಗಿದನು. ಪೂಜಾರಿಯೊಡನೆ ಆತನು ಘೋರಯುದ್ಧ ನಡೆಸಿದನು. ಮಾಲತಿಯನ್ನು ಉಳಿಸಿಕೊಂಡನು.

ಮಾಧವನು ಅ ಸಾಹಸದ ಪ್ರಯೋಗವನ್ನು ಯಾರ ಸಲುವಾಗಿ ಮಾಡಿದನು? ಅವನು ಸ್ವಂತದ ಸಲುವಾಗಿ ಕಾದಾಡಿದನೇ? ಹಾಗಾದರೆ ಅವನ ಸಾಹಸಕ್ಕೆ ಕೇವಲ ಇದೇ ಕಾರಣವಿರಲಿಲ್ಲ. ಅವನು ಹೆರವರನ್ನು ಕಾಪಾಡುವ ಸಲುವಾಗಿಯೂ ಕಾದಾಡಿದನು. ಅವನು ಒಬ್ಬ ದುಃಖಿಯ ಅರ್ತಸ್ವರವನ್ನು ಕೇಳಿದನು. ಅದು ಅವನ ವೀರಹೃದಯಕ್ಕೆ ನೇರವಾಗಿ ಹೋಗಿ ತಲುಪಿತು.

* * * *

ನೀವು ಒಂದಿಷ್ಟು ಯೋಚಿಸಿದರೆ ಈ ಪ್ರಕಾರದ ಕಣ್ಣಾರೆ ಕಂಡ ಅವೆಷ್ಟೋ ಘಟನೆಗಳು ನಮಗೆ ನೆನಪಾಗುವವು. ಯಾವ ಬಗೆಯಿಂದ ಒಬ್ಬ ವ್ಯೆಕ್ತಿಯು ಭಯದ ಲಕ್ಷಣವನ್ನು ಕಾಣುತ್ತಲೇ ಬೇರೊಬ್ಬ ಪುರುಷನಿಗಾಗಲಿ ಸ್ತ್ರೀಯಳಿಗಾಗಲಿ ಮಗುವಿಗಾಗಲಿ ಸಹಾಯ ನೀಡುವ ಸಲುವಾಗಿ ಅದು ಹೇಗೆ ಮುಂದುವರಿದು ಹೋಗುತ್ತಾನೆಂಬುದನ್ನು ನೀವು ನಿಶ್ಚಯವಾಗಿಯೂ ನೋಡಬಹುದು.

ನೀವು ವೃತ್ತಪತ್ರಗಳಲ್ಲಿ ಇಲ್ಲವೆ ಕಥೆಗಳಲ್ಲಿ ಸಹ ಈ ಪ್ರಕಾರದ ಸಾಹಸಪೂರ್ಣವಾದ ಘಟನೆಗಳ ಬಗೆಗೆ ತಪ್ಪದೆ ಓದುವಿರಿ. ನೀವು ಮತ್ತಾವ ಮಾತನ್ನು ಕೇಳುವಿರೆಂದರೆ-ಬೆಂಕಿ ನಂದಿಸುವವರು ಜ್ವಾಲೆಗಳಿಗೆ ತುತ್ತಾದ ಮನೆಯ ಜನರನ್ನು ಅದು ಹೇಗೆ ಉಳಿಸಿಕೊಳ್ಳುತ್ತಾರೆ, ಕಣಿಗಳಲ್ಲಿ ಕೆಲಸ ಮಾಡುವವರು ಆಳವಾದ ತಗ್ಗಿನಲ್ಲಿಳಿದು ತನ್ನ ಸಂಗಡಿಗರನ್ನು ನೀರು, ಬೆಂಕಿ ಹಾಗೂ ಉಸಿರುಗಟ್ಟಿಸುವ ವಾಯು ಇವುಗಳಿಂದ ಬದುಕಿಸುವ ಸಲುವಾಗಿ ಅದು ಹೇಗೆ ಹೊರತೆಗೆಯುತ್ತಾರೆ, ಭೂಕಂಪದಿಂದ ನಡುಗುವ ಮನೆಗಳೊಳಗಿಂದ ಮೆನೆಯ ಗೋಡೆಗಳು ಕುಪ್ಪಳಿಸುವ ಅಂಜಿಕೆಯಿದ್ದರೂ ಜನರು ದುರ್ಬಲ ವ್ಯಕ್ತಿಗಳನ್ನು ಹೊರಗೆ ತರುವ ಸಾಹಸವನ್ನು ಹೇಗೆ ಮಾಡುತ್ತಾರೆ. ಇಲ್ಲವಾದರೆ ಅವರು ದಬ್ಬುಗೆಯ ಕೆಳಗೆ ನುಜ್ಜಾಗಿ ಹೇಗೆ ಸತ್ತುಹೋಗುತ್ತಾರೆ. ನಾಗರಿಕರು ತಮ್ಮ ನಗರವನ್ನು ಅಥವಾ ಮಾತೃ ಭೂಮಿಯನ್ನು ಕಾಪಾಡಲು ಶತ್ರುಗಳನ್ನು ಅದೆಂತು ಎದುರಿಸುತ್ತಾರೆ. ಹಸಿವು ನೀರಡಿಕೆಗಳನ್ನು ಹೇಗೆ ತಾಳಿಕೊಳ್ಳುತ್ತಾರೆ. ಗಾಯಾಳು ಸಹ ಹೇಗೆ ಅಗಿಬಿಡುತ್ತಾರೆ.

ಈ ಬಗೆಯಾಗಿ ನಾವು ಎರಡು ಪ್ರಕಾರದ ಸಾಹಸವನ್ನು ಕಂಡೆವು. ತಮ್ಮ ಸಹಾಯದ ಸಲುವಾಗಿ ಕಾರ್ಯರೂಪದಲ್ಲಿ ತರಲಾಗುವ ಸಾಹಸವು ಒಂದಾದರೆ, ಇನ್ನೊಂದು ಹೆರವರ ಸಹಾಯದ ಸಲುವಾಗಿ ಮಾಡಿದ ಸಾಹಸ.

* * * *

ನಾನು ನಿಮಗೆ ವೀರ ವಿಭೀಷಣನ ಕಥೆಯನ್ನು ಹೇಳುತ್ತೇನೆ. ಅವನು ಒಂದು ಅದೆಂಥ ಗಂಡಾಂತರವನ್ನು ಎದುರಿಸಿದನೆಂದರೆ- ಅದು ಮೃತ್ಯುವಿನ ಗಂಡಾಂತರಕ್ಕಿಂತಲೂ ಭಯಾನಕವಾಗಿತ್ತು. ಅವನು ಒಬ್ಬ ರಾಜನ ಸಿಟ್ಟನ್ನು ಎದುರಿಸಿದನು. ಹಾಗೂ ಅವನು ಅತನಿಗೆ ಬುದ್ಧಿವಂತಿಕೆಯ ಒಂದು ಸಲಹೆಯನ್ನು ಕೊಟ್ಟನು. ಹಾಗೆ ಮಾಡುವ ಸಾಹಸವು ಇನ್ನಾರಿಂದಲೂ ಆಗಿರಲಿಲ್ಲ.

ಲಂಕೆಯ ರಾಕ್ಷಸರಾಜನು ಹತ್ತು ತಲೆಯ ರಾವಣನೆಂದು ಹೆಸರಾಗಿದ್ದನು. ಅವನು ಶ್ರೀ ಸೀತಾಮಾತೆಯನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಅವಳ ಪತಿಯಿಂದ ದೂರವಾದ ಲಂಕಾದ್ವೀಪದಲ್ಲಿದ್ದ ತನ್ನ ಅರಮನೆಗೆ ತೆಗೆದು ಕೊಂಡು ಹೋಗಿದ್ದನು. ಯಾವ ಅರಮನೆಯಲ್ಲಿ ಮತ್ತು, ಯಾವ ಹೊದೋಟ ದಲ್ಲಿ ರಾಜಕುಮಾರಿಯಾದ ಸೀತಾಮಾತೆಯನ್ನು ಬಂಧಿಸಿಟ್ಟಿದ್ದನೋ ಅದು ಬಹಳ ವಿಶಾಲವೂ ಮೋಹಕವೂ ಆಗಿತ್ತು, ಆದರೇನು? ಅವಳು ದುಃಖಿ ಯಾಗಿದ್ದಳು. ಅವಳು ಹಗಲೂ ಇರುಳೂ ಅಳುತ್ತಿದ್ದಳು. ತನ್ನ ಸ್ವಾಮಿ ಯಾದ ರಾಮನನ್ನು ಪುನಃ ನೋಡುವೆನೋ ಇಲ್ಲವೋ ಎಂಬ ವಿಶ್ವಾಸವೂ ಅವಳಿಗಿದ್ದಿಲ್ಲ.

ಯಶಸ್ವಿಯಾದ ರಾಮನಿಗೆ ವಾನರ ರಾಜನಾದ ಹನುಮಂತನಿಂದ ತನ್ನ ಸತಿಯನ್ನು ಯಾವ ಸ್ಥಳದಲ್ಲಿ ಬಂಧಿಸಿಡಲಾಗಿದೆಯೆಂಬ ಶೋಧವು ತಿಳಿದುಬಂದಿತು. ಅವನು ತನ್ನ ಸುಶೀಲ ಬಂಧುವಾದ ಲಕ್ಷ್ಮಣ ಹಾಗೂ ಉಳಿದ ವೀರರ ಒಂದು ದೊಡ್ಡ ಸೇನೆಯನ್ನು ತೆಗೆದುಕೊಂಡು ಬಂಧಿನಿಯಾದ ಸೀತಾಮಾತೆಯ ನೆರವಿಗೆ ನಡೆದನು.

ರಾಕ್ಷಸರಾಜನಾದ ರಾವಣನಿಗೆ ರಾಮನು ಬರುವನೆಂಬ ಸಮಾಚಾರವು ತಿಳಿದುಬರಲು ಅವನು ಅಂಜಿಸತ್ತು ನಡುಗಹತ್ತಿದನು.

ಅಗ ಅವನಿಗೆ ಎರಡು ಪ್ರಕಾರದ ಸಲಹೆಗಳು ದೊರೆತವು. ಅವನ ಓಲಗದ ಒಂದು ಗುಂಪಿನವರು ಅವನ ಸಿಂಹಾಸನದ ಸುತ್ತುಮುತ್ತು ನೆರೆದು ಹೇಳತೊಡಗಿದ್ದೇನೆಂದರೆ- “ಎಲ್ಲವೂ ಚೆನ್ನಾಗಿದೆ. ಮಹಾ ದೊರಗಳೇ! ಆಂಜುವೆಂಥದೇನೊ ಇಲ್ಲ. ದೇವತೆಗಳೂ ಅಸುರರು ಎನ್ನದೆ ಇಬ್ಬರನ್ನೂ ನೀವು ಗೆದ್ದುಕೊಂಡಿರುತ್ತೀರಿ. ರಾಮ ಹಾಗೂ ಅವನ ಸಂಗಡಿಗನಾದ ಹನುಮಂತನ ಕಪಿಗಳನ್ನು ಗೆಲ್ಲವುದು ಕಠಿಣವೇನಲ್ಲ.”

ಈ ಮಾತಿನ ಬೂಟಾಳರು ರಾಜನ ಬಳಿಯಿಂದ ಕದಲುತ್ತಲೇ ಅವನ ಬಂಧುವಾದ ವಿಭೀಷಣನು ಅಲ್ಲಿಗೆ ಬಂದನು. ಹಾಗೂ ಅವನ ಮುಂದೆ ಮಂಡೆಗಾಲೂರಿ ಅವನ ಕಾಲಿಗೆ ಬಿದ್ದನು. ಬಳಿಕ ಎದ್ದು ಆ ಸಿಂಹಾಸನದ ಎಡಮಗ್ಗುಲಲ್ಲಿ ಕುಳಿತುಕೊಂಡು ಹೇಳಿದ್ದೇನೆಂದರೆ- “ನನ್ನಣ್ಣನೇ, ನೀನು ಸುಖದಿಂದ ಇರಬೇಕೆನ್ನುತ್ತಿದ್ದರೆ ಈ ಲಂಕೆಯಂಥ ಸುಂದರ ದ್ವೀಪದ ಸಿಂಹಾಸನವನ್ನು ಸಂರಕ್ಷಿಸಬೇಕೆನ್ನುತ್ತಿದ್ದರೆ ಚೆಲುವೆಯಾದ ಸೀತಾದೇವಿಯನ್ನು ಮರಳಿ ಕೊಡು. ಯಾಕಂದರೆ ಅವರು ಹೆರವರ ಹೆಂಡತಿ. ರಾಮನ ಬಳಿಗೆ ಹೋಗು. ಅವನಿಗೆ ಕ್ಷಮೆ ಕೇಳಿಕೋ. ಅವನು ನಿನ್ನನ್ನು ನಾಶಗೊಳಿಸಲಾರನು. ಇಷ್ಟೊಂದು ದುಸ್ಸಾಹಸಿಯೂ ಅಭಿಮಾನಿಯೂ ಆಗಬೇಡ.”

ಇನ್ನೊಬ್ಬ ಬುಧ್ಧಿಶಾಲಿ ವ್ಯಕ್ತಿಯಾದ ಮಲಯಾವನನು ಈ ಮಾತು ಕೇಳಿ ಸಂತುಷ್ಟನಾದನು. ಅವನು ರಾಕ್ಷಸರಾಜನಿಗೆ ಆಗ್ರಹಪೂರ್ವಕವಾಗಿ ಹೇಳಿದ್ದೇನಂದರೆ- “ನಿನ್ನ ತಮ್ಮನ ಮಾತನ್ನು ವಿಚಾರಿಸು. ಯಾಕಂದರೆ ಅದು ಸತ್ಯವನ್ನು ಉಸುರಿದೆ.”

“ನೀವಿಬ್ಬರೂ ದುರುದ್ದೇಶದವರಾಗಿರುವಿರಿ” ಎಂದು ರಾಜನು ಮರು ನುಡಿದು “ಯಾಕಂದರೆ ನೀವು ನನ್ನ ಶತ್ರುವಿನ ಪಕ್ಷ ಕಟ್ಟುತ್ತೀರಿ.”

ಆ ಹತ್ತು ತಲೆಯವನ ಕಣ್ಣುಗಳಿಂದ ಸಿಟ್ಟಿನ ಕಿಡಿಗಳು ಅವೆಷ್ಟು ಹೊರಬೀಳೆಹತ್ತಿದವೆಂದರೆ- ಮಲಯಾವನನಂತೂ ಅಂಜಿ ಕೋಣೆಬಿಟ್ಟು ಓಡಿ ಹೋದನು. ಅದರೆ ವಿಭೀಷಣನು ತನ್ನ ಆತ್ಮಬಲದಿಂದ ಅಲ್ಲಿಯೇ ಸ್ಥಿರವಾಗಿ ಕುಳಿತುಬಿಟ್ವು- “ಸ್ವಾಮಿ, ಪ್ರತಿ ಒಬ್ಬ ಮನುಷ್ಯನ ಹೃದಯದಲ್ಲಿ ವಿವೇಕ ಹಾಗೂ ಅವಿವೇಕ ಇವೆರಡೂ ನಲೆಸಿರುತ್ತದೆ. ಯಾರ ಹೃದಯದಲ್ಲಿ ಹೆಚ್ಚು ವಿವೇಕವಿರುವದೋ ಅವರ ಜೀವನವು ಸುಖಕರವಾಗಿರುತ್ತದೆ. ಅಲ್ಲಿ ಅವಿವೇಕದ ರಾಜ್ಯವಿದ್ದರೆ ಕೇಳುವುದೇನು? ದುಃಖವೇ ದುಃಖ. ಅಣ್ಣಾ, ನಿನ್ನ ಹೃದಯದಲ್ಲಿ ಅವಿವೇಕವು ಮನೆಮಾಡಿದೆಯೆಂಬ ಅಂಜಿಕೆ ನನಗಿದೆ. ಯಾಕಂದರೆ ನಿನ್ನನ್ನು ಬೂಟಾಟಿಕೆಯಿಂದ ಹೊಗಳುವವರ ಮಾತಿಗೆ ನೀನು ಕಿವಿಗೊಡುತ್ತೀ. ಅವರು ನಿನಗೆ ನಿಜವಾದ ಮಿತ್ರರಾಗಲಾರರು.”

ಇಷ್ಟು ನುಡಿದು ಆತನು ನಿಶ್ಶಬ್ದನಾದನು ಮತ್ತು ಅವನು ರಾಜನ ಪಾದಗಳಿಗೆ ಮತ್ತೊಮ್ಮೆ ಎರಗಿದನು.

ರಾವಣನು ಅಬ್ಬರಿಸಿದನು. “ದುಷ್ಟಾ, ನೀನು ಸಹ ಶತ್ರುಗಳೊಳಗಿನವನೇ ಆಗಿರುವೆ. ಸಾಕು. ಇಂಥ ಮೂರ್ಖತನದ ಮಾತುಗಳನ್ನು ಇನ್ನೊಮ್ಮೆ ನುಡಿಯದಿರು. ಇಂಥ ಮಾತುಗಳನ್ನು ನೀನು ಅರಣ್ಯವಾಸಿಗಳಾದ ಸಾಧು- ಸನ್ಯಾಸಿಗಳ ಹತ್ತಿರ ಹೋಗಿ ಹೇಳು. ಯಾವ ಶತ್ರುವಿನೊಡನ ಯುದ್ಧ ಮಾಡಿದರೂ ಯಾವನು ಗೆಲುವನ್ನೆ ಪಡೆದಿರುವನೋ ಅವನ ಮುಂದೆ ಮಾತು ಬೇಡ.”  ಹೀಗೆ ನುಡಿಯುತ್ತ ಅವನು ತನ್ನ ವೀರ ಬಂಧುವಾದ ವಿಭೀಷಣನಿಗೆ ಒಂದು ಏಟು ಕೊಟ್ಟುಬಿಟ್ಟನು.

ಮನದಲ್ಲಿ ವ್ಯಥಿತನಾಗಿ ವಿಭೀಷಣನು ಎದ್ದು ಕುಳಿತನು ಹಾಗೂ ರಾಜಮಂದಿರವನ್ನು ಬಿಟ್ಟುಕೊಟ್ಟು ಹೊರಟು ಹೋದನು.

ತುಸು ಸಹ ಮನದಲ್ಲಿ ಅಂಜಿಕೊಳ್ಳದೆ ಅವನು ಏನೆಲ್ಲವನ್ನು ರಾವಣನಿಗೆ ಖಂಡತುಂಡವಾಗಿ ಹೇಳಿದನು. ಹಾಗೂ ಆ ಹತ್ತು ತೆಲೆಯವನು ಅವನ ಮಾತು ಕೇಳಲಿಚ್ಛಿಸದಿದ್ದರೆ ಅವನು ಹೊರಟುಹೋಗುವ ಹೊರತು ಇನ್ನೇನು ಮಾಡಬಲ್ಲನು ?

ವಿಭೀಷಣನ ಈ ಕಾರ್ಯವು ಶಾರೀರಿಕ ಸಾಹಸದ ಕಾರ್ಯ. ಯಾಕೆಂದರೆ ಅವನು ತನ್ನ ಅಣ್ಣನ ಪೆಟ್ಟಿಗೆ ಅಂಜಲಿಲ್ಲ. ಅದೊಂದು ಆತ್ಮನಿರ್ಭಯತೆಯ ಕಾರ್ಯವೂ ಆಗಿತ್ತು, ಅದೆಷ್ಟೋ ಶಾರೀರಿಕ ಬಲವಿದ್ದರೂ ರಾಜಾಸ್ಥಾನ ದೊಳಗಿನ ಇನ್ನಾರ ಬಾಯಿಂದಲೂ ಅ ಮಾತುಗಳು ಹೊರಬಿದ್ದಿರಲಿಲ್ಲ. ಅತನಾದರೋ ರಾಜನಿಗೆ ಹೇಳಲಿಕ್ಕೆ ಸ್ವಲ್ಪವೂ ಸಂಕೋಚಪಡಲಿಲ್ಲ. ಇದು ಮನಸ್ಸಿನ ಸಾಹಸವಾಗಿದೆ. ಇದಕ್ಕೆ ನಾವು ನೈತಿಕ ಬಲವೆನ್ನುತ್ತೇವೆ.
* * * *

ಇಂಥ ಸಾಹಸವು ಇಜರಾಯಿಲದ ಮುಂದಾಳುವಾದ ಮೂಸಾನಲ್ಲಿಯೂ ಇತ್ತು. ಪೀಡಿತರಾದ ಯಹುದಿ ಜನರನ್ನು ಸ್ವತಂತ್ರಗೊಳಿಸಿ ಬಿಡುಯೆಂದು ಅವನು ಮಿತ್ರ ದೇಶದ ರಾಜನಾದ ಫಾರೋನಿಗೆ ಕೇಳಿಕೊಂಡಿದ್ದನು. ಇದೇ ಸಾಹಸವು ಪೈಗಂಬರ ಮಹಮ್ಮೂದನಲ್ಲಿಯೂ ಇತ್ತು. ಅದರಿಂದ ಅವನು ತನ್ನ ಧಾರ್ಮಿಕ ವಿಚಾರಗಳನ್ನು ಅರಬಿ ನಿವಾಸಿಗಳಲ್ಲಿ ಪ್ರಸಾರ ಗೊಳಿಸಿದನು. ಆ ಜನರು ಮರಣಭಯವನ್ನು ತೋರಿಸಿದರೂ ಅವನು ತೆಪ್ಪಗಿರುವುದಕ್ಕೆ ಒಪ್ಪಿಕೊಳ್ಳಲಿಲ್ಲ.

ಗೌತಮ ಬುದ್ಧನಲ್ಲಿಯೂ ಇಂಥ ಸಾಹಸವೇ ಇತ್ತು. ಅವನು ಭಾರತ ವಾಸಿಗಳಿಗೆ ಒಂದು ನವೀನವೂ ಉಚ್ಛವೂ ಅದ ದಾರಿಯನ್ನು ತೋರಿಸಿದನು. ಹಾಗೂ ಅವನು ಬೋಧಿ ವೃಕ್ಷದ ಕೆಳಗೆ ದುಷ್ಟ ಪ್ರೇತಾತ್ಮಗಳಿಂದ ಪೀಡಿಸಲ್ಪಟ್ಟರೂ ಅಂಜಲಿಲ್ಲ.

ಈ ಸಾಹಸವು ಈಸಾಮಸೀಹನಲ್ಲಿಯೂ ಇತ್ತು. “ಅನ್ಯರನ್ನು ಪ್ರೀತಿಸು” ಎಂದು ಅವನು ಜನರಿಗೆ ಉಪದೇಶ ಮಾಡಿದನು. ಜರುಸಲೇಮಿನ ಧರ್ಮಾಚಾರ್ಯರು ಅಂಥ ಉಪದೇಶಕ್ಕೆ ಅಡ್ಡಿ ಮಾಡಿದರೂ ಅವನು ಅದಕ್ಕಂಜಲಿಲ್ಲ. ಶೂಲಕ್ಕೇರಿಸಿಬಿಟ್ವ ರೋಮನರಿಗೂ ಅಂಜಲಿಲ್ಲ.

ನಾನು ಈಗ ಸಾಹಸದ ಮೂರು ತರಗತಿಗಳನ್ನೂ ಮೂರು ಪರಿಮಾಣಗಳನ್ನೂ ನಿರೂಪಿಸಿದ್ದೇನೆ.

ಶಾರೀರಿಕ ಸಾಹಸವು ನಮ್ಮ ಆತ್ಮಸಂರಕ್ಷಣೆಯ ಸಲುವಾಗಿ ಉಪಯುಕ್ತವಾಗಿರುತ್ತದೆ.

ಯಾವ ಸಾಹಸವು ಮಿತ್ರರು, ನರೆಯವರು ಹಾಗೂ ಕಷ್ಟದಲ್ಲಿ ಸಿಲುಕಿದ ಮಾತೃಭೂಮಿ ಇವುಗಳ ಸಲುವಾಗಿ ತೋರಿಸಲಾಗುವದೋ ಅದು ಇನ್ನೊಂದು ಸಾಹಸ.

ಕೊನೆಯಲ್ಲಿ ನೈತಿಕ ಸಾಹಸವು ಬರುತ್ತದೆ. ಅನ್ಯಾಯಿಯಾದ ಮನುಷ್ಯನು ಅದೆಷ್ಟೇ ಬಲಶಾಲಿಯಾಗಿದ್ದರೂ ಅವನನ್ನು ಅದು ಎದುರಿಸಲಿಕ್ಕೆ ಕಲಿಸುತ್ತದೆ ಮತ್ತು ಸತ್ಯ-ನ್ಯಾಯಗಳ ಧ್ವನಿಯನ್ನು ಅವನ ಕಿವಿಗೆ ತಲಪಿಸುತ್ತದೆ.
* * * *

ಅಲಮೋಡೆಯ ರಾಜನ ಅರಣ್ಯಪ್ರದೇಶದ ಮೇಲೆ ಕೆಲವು ದಾಳಿಗಾರರು ಏರಿಬರುವೆವೆಂದು ತಿಳಿಸಿದರು. ಅವರನ್ನು ಕೊಂದು ಓಡಿಹೋಗುವುದಕ್ಕಾಗಿ ಒಂದು ಹೊಸ ಸೇನೆಯು ಅಣಿಗೊಂಡಿತು. ಅದರಲ್ಲಿ ಕೆಲವೊಂದು ಜನರು ತಮ್ಮ ಹೆಸರು ಕೊಟ್ಟರು. ಪ್ರತಿಯೊಬ್ಬನಿಗೂ ಒಂದೊಂದು ದೊಡ್ಡ ಕತ್ತಿ ಕೊಡಲಾಯಿತು.

“ಮುಂದುವರಿಯಿರಿ” ಎಂದು ರಾಜನು ಆಜ್ಞಾಪಿಸಿದನು.

ಅದೇ ಉಸುರಿಗೆ ಎಲ್ಲರೂ ಬಹು ತೀವ್ರವಾದ ಕೋಲಾಹಲದೊಡನೆ ತಮ್ಮ ಒರೆಯೊಳಗಿಂದ ಕತ್ತಿಯನ್ನು ಹಿರಿದು ಮೇಲಕ್ಕೆತ್ತಿ ಝಳಪಿಸುತ್ತ ಅವರೆಲ್ಲರೂ ಬಲವಾಗಿ ಬೊಬ್ಬಿರಿದರು.

“ಇದು ಏನು?” ಎಂದು ರಾಜನು ಕೇಳಿದನು.

ಅವರು ಮರುನುಡಿದದ್ದೇನೆಂದರೆ- “ಪ್ರಭುಗಳೇ, ನಾವು ಸನ್ನದ್ಧರಾಗಿ ನಿಂತಿದ್ದೇವೆ. ಇದರಿಂದ ನಮ್ಮ ಶತ್ರುಗಳೆಂಬವರು ನಮ್ಮ ಅಸಾವಧಾನವನ್ನು ಬಗೆದು ನಮ್ಮ ಮೇಲೆ ಏರಿ ಬರಲಾರರು.”

“ನೀವು ಅಂಜಿ ಗಾಬರಿಗೊಂಡಿದ್ದೀರಿ” ಎಂದು ರಾಜನು ನುಡಿದು “ನಿಮ್ಮಿಂದ ಯಾವ ಕೆಲಸವೂ ಅಗುವದಿಲ್ಲ. ಹೋಗಿರಿ. ನಿಮ್ಮ ನಿಮ್ಮ, ಮನೆಗಳಿಗೆ ಮರಳಿರಿ.”

ಈ ಪ್ರಕಾರ ಕತ್ತಿಯನ್ನು ಹಿರಿದು ಝಳಪಿಸುವುದಕ್ಯೂ ಕೂಗಿ ಬೊಬ್ಬಿರಿಯುವುದಕ್ಕೂ ರಾಜನು ಎಷ್ಟೂ ಮಹತ್ವ ಕೊಡಲಿಲ್ಲ ವೆನ್ನುವುದನ್ನು ನೀವು ತಿಳಿದಿರಿ. ನಿಜವಾದ ವೀರತೆಯಲ್ಲಿ ತೂರಾಟವಾಗಲಿ ಕತ್ತಿಯ ಖಣಖಣಾಟವಾಗಲಿ ಅವಶ್ಯವಿರುವದಿಲ್ಲವೆಂದು ಅವನಿಗೆ ಗೊತ್ತಿತ್ತು.

ಇದಕ್ಕೆ ವಿಪರೀತವಾಗಿ ಕೆಳಗೆ ಬರೆದ ಕಥೆಯಲ್ಲಿ, ಒಂದು ಕಾರ್ಯವನ್ನು ಜನರು ಅದೆಷ್ಟು ಶಾಂತಿಪೂರ್ವಕವಾಗಿ ಕೊನೆಗಾಣಿಸಿದರೆಂಬುದೂ ಹಾಗೂ ಯಾವ ಪ್ರಕಾರ ಸಮುದ್ರದ ಮಹಾ ಕುತ್ತುಗಳ ಎದುರಿನಲ್ಲಿಯೂ ಅವರು ವೀರತೆಯಿಂದ ಅಚಲವಾಗಿ ನಿಂತರೆಂಬುದೂ ನಿಮಗೆ ಕಂಡುಬರುವುದು.

ಕ್ರಿ. ಶ. ೧೯೧೦ ನೇ ಮಾರ್ಚ ತಿಂಗಳ ಕೊನೆಯಲ್ಲಿ ಸ್ಕಾಟಲಂಡಿನ ಒಂದು ಹಡಗು ಆಸ್ಟ್ರೇಲಿಯದ ಪ್ರಯಾಣಿಕರನ್ನು ಆಶಾದ್ವೀಪಕ್ಕೆ ತರುತ್ತಿತ್ತು. ಆಕಾಶದಲ್ಲಿ ಮೋಡದ ಹೆಸರು ಸಹ ಇರಲಿಲ್ಲ. ಸಮುದ್ರವು ನೀಲವೂ ಶಾಂತವೂ ಆಗಿತ್ತು.

ಅಕಸ್ಮಾತ್ತಾಗಿ, ಅಸ್ಟ್ರೇಲಿಯದ ಪಶ್ಚಿಮತೀರದಿಂದ ೬ ಮೈಲಿನ ಅಂತರ ಇರುವಾಗ ಹಡಗವು ಒಂದು ಬಂಡೆಗಲ್ಲಿಗೆ ಹೋಗಿ ಅಪ್ಪಳಿಸಿತು. ಹಡಗಿನ ಕೆಲಸಗಾರರೆಲ್ಲರೂ ಒಮ್ಮೆಲೆ ಅತ್ತ ಇತ್ತ ಓಡಾಡತೊತಗಿದರು. ಎಲ್ಲರೂ ತಂತಮ್ಮ ಕಾರ್ಯದಲ್ಲಿ ಮೈಮರೆತವರಾಗಿದ್ದರು. ಸೀಟಿಗಳ ಸದ್ದು ಕೇಳಿಬರತೊಡಗಿತು. ಆದರೆ ಆ ಗಲಬಿಲಿಗೆ ಮೋಸವಾಗಲಿ ಭಯವಾಗಲಿ ಕಾರಣವಾಗಿರಲಿಲ್ಲ.

ಒಂದು ಕಟ್ಟಾಣತಿಯು ದುಮುದುಮಿಸಿತು- “ಚಿಕ್ಕ ದೋಣಿಗಳನ್ನು ಹತ್ತಿರಿ.”

ಪ್ರಯಾಣಿಕರು ಸಂರಕ್ಷಣೆಯ ಕವಚಗಳನ್ನು ತೊಟ್ಟುಕೊಂಡರು.

ಕಣ್ಣಿಲ್ಲದ ಒಬ್ಬ ವ್ಯಕ್ತಿಯು ತನ್ನ ಆಳಿನ ಕೈಯಾಸರೆಯಿಂದ ಡೆಕ್ಕದ ಮೇಲೆ ಬಂದನು. ಎಲ್ಲರೂ ಅವನಿಗೆ ದಾರಿಯನ್ನು ಬಿಟ್ಟುಕೊಟ್ಟರು. ಅವನು ದುರ್ಬಲನಾಗಿದ್ದನು. ಮೊದಲು ಅವನಿಗೆ ಸಹಾಯ ಸಿಗಲೆಂದು ಎಲ್ಲರೂ ಆಶಿಸುತ್ತಿದ್ದರು.

ಕೆಲವು ಕ್ಷಣಗಳು ಕಳೆಯುವಷ್ಟರಲ್ಲಿ ಹಡಗವು ತೆರವಾಗಿಬಿಟ್ಟಿತು. ಮತ್ತು ಅದು ಶೀಘ್ರವಾಗಿಯೇ ತಳಕ್ಕಿಳಿದುಹೋಯಿತು.

ದೋಣಿಯ ಮೇಲೆ ಕುಳಿತುಕೊಂಡಿದ್ದ ಒಬ್ಬ ಸ್ತ್ರೀಯು ಹಾಡಲಾರಂಭಿಸಿದಳು. ಆದರೇನು? ತೆರೆಗಳ ಕೀಸರುಬಾಸರಿನಿಂದ ನಡುನಡುವೆ ಹಾಡಿನ ಧ್ವನಿಯು ತಡೆದು ನಿಲ್ಲುತ್ತಿತ್ತು. ಒಂದರ್ಧ ಚುಟಿಕೆ ಅಂಬಿಗನ ಕಿವಿಯಲ್ಲಿ ಬಿದ್ದಾಗ ಅವನ ತೋಳುಗಳಿಗೆ ಅದರಿಂದ ಬಲ ಬರುತ್ತಿತ್ತು.

“ತೀರದೆಡೆಗೆ ಸಾಗಿರಿ | ಅಂಬಿಗರೇ |
ತೀರದದೆಗೆ ಸಾಗಿರಿ||”

ಅವರೆಲ್ಲರೂ ಕೊನೆಗೆ ಹಡಗಿನ ಕುತ್ತಿನಿಂದ ಬದುಕುಳಿದು ತೀರವನ್ನು ತಲಪಿದರು. ಹಾಗೂ ದಯಾಲುವಾದ ಅಂಬಿಗರಿಂದ ದಡಕ್ಕೆ ತರಲ್ಪಟ್ಟರು.

ಒಬ್ಬ ಪ್ರಯಾಣಿಕನ ಪ್ರಾಣವೂ ಹೋಗಲಿಲ್ಲ. ಈ ರೀತಿಯಾಗಿ ನಾಲ್ಕು ನೂರಾ ಐವತ್ತು, ವ್ಯಕ್ತಿಗಳು: ತಮ್ಮ ಶಾಂತವೂ ಸಂಯತವೂ ಆದ ಸ್ವಭಾವದಿಂದ ತಮ್ಮ ಸಂರಕ್ಷಣೆ ಮಾಡಿಕೊಂಡರು.
* * * *

ಇನ್ನು, ನಾನು ನಿಮಗೆ ಶಾಂತಿಪೂರ್ಣವಾದ ಸಾಹಸಿಗರ ಒಂದು ವಿಷಯವನ್ನು ವಿವರಿಸುತ್ತೇನೆ. ಇನ್ನಾವ ಪ್ರದರ್ಶನವೂ ಇಲ್ಲದೆ ಮುನ್ನುಗ್ಗಿ ಅವರು ಕೆಲವೊಂದು ಉಪಯುಕ್ತವೂ ಸುತ್ಯರ್ಹವೂ ಅದ ಕಾರ್ಯಗಳನ್ನು ಮಾಡಿದ್ದಾರೆ.

ಒಂದೂರಿಗೆ ತೀರ ಹತ್ತಿರದಲ್ಲಿ ಒಂದು ಆಳವಾದ ಹೊಳೆ ಹರಿಯುತ್ತಿತ್ತು. ಊರಲ್ಲಿ ಬರಿಯ ಹಿಂದುಗಳ ಮನೆಗೆಳೇ ಐನೂರು ಇದ್ದವು. ಅ ಊರವರು ಅವರಿಗೆ ಭಗವಾನ್‌ ಬುದ್ಧರವರ ಉಪದೇಶವನ್ನು ಕೇಳಿದ್ದಿಲ್ಲ. ಬುದ್ಧ ದೇವರು ಅವರ ಬಳಿಗೆ ಹೋಗಬೇಕೆಂದೂ ಅವರಿಗೆ ತಮ್ಮ ಉತ್ಕೃಷ್ಟ ಮಾರ್ಗವನ್ನು ಹೇಳಿಕೊಡಬೇಕೆಂದೂ ನಿಶ್ಚಯಿಸಿದರು.

ಅವರು ಒಂದು ವಿಶಾಲವಾದ ವೃಕ್ಷದ ಕೆಳಗೆ ಕುಳಿತುಕೊಂಡರು. ಶಾಖೆಗಳು ಹೊಳೆಯ ತೀರದವರೆಗೆ ಹಬ್ಬಿಕೊಂಡಿದ್ದವು. ಗ್ರಾಮವಾಸಿಗಳೆಲ್ಲರು ನದಿಯ ಆಚೆಯ ದಂಡೆಯ ಮೇಲೆ ಸಹ ನೆರೆದಿದ್ದರು. ಅಗ ಬುದ್ಧದೇವರು ತಮ್ಮ ಮಾತೆತ್ತಿ, ಪವಿತ್ರತೆ ಹಾಗೂ ಪ್ರೇಮ ಇವುಗಳ ಸಂದೇಶವನ್ನು ತಿಳಿಸಿದರು. ಅವರ ಉಪದೇಶವು ಒಂದು ಚಮತ್ಕಾರಿಕವಾದ ರೀತಿಯಲ್ಲಿ ಆ ಹರಿಯುತ್ತಿರುವ ನೀರಿನ ಮೇಲೆ ನದಿಯ ಮಗ್ಗುಲಿನ ತೀರದವರಗೆ ತಲಪಿತು ಆದರೂ ಆ ಜನರು ಅವರ ವಚನಗಳನ್ನು ನಂಬುವುದಕ್ಕೆ ಒಪ್ಪಿಕೊಳ್ಳಲಿಲ್ಲ. ಹಾಗೂ ಅವರ ವಿರುದ್ಧವಾಗಿಯೇ ಗಳಪತೊಡಗಿದರು.

ಅವರೊಳಗಿನ ಒಬ್ಬನು ಮಾತ್ರ ಇನ್ನಿಷ್ಟು ತಿಳಕೊಳ್ಳಲು ಇಚ್ಛಿಸುತ್ತಿದ್ದನು. ಅವನು ಬುದ್ಧದೇವರ ಬಳಿಗೆ ಹೋಗಬೇಕೆಂದು ಬಯಸಿದನು. ಆದರೆ ಅಲ್ಲಿ ಯಾವ ನಾವೆಯೂ ಇರಲಿಲ್ಲ. ದೋಣಿಯೂ ಇರಲಿಲ್ಲ. ಅ ಮನುಷ್ಯನು ಮನಸ್ಸಿನಲ್ಲಿ ದೃಢವಾದ ಸಾಹಸವನ್ನು ನೆಲೆಗೊಳಿಸಿ ಅಳವಾದ ನೀರಮೇಲೆ ನಡೆಯಲು ಆರಂಭಿಸಿದನು. ಈ ಬಗೆಯಾಗಿ ಅವನು ಆ ಗುರುಗಳ ಸನ್ನಿಧಿಗೆ ಬಂದನು. ಅವರಿಗೆ ಅವನು ಪ್ರಣಾಮ ಮಾಡಿ ತುಂಬ ಹರುಷದಿಂದ ಅವರ ಉಪದೇಶವನ್ನು ಕೇಳಿದನು.

ಕಥೆಯಲ್ಲಿ ಹೇಳಲಾಗಿರುವಂತೆ ಅ ಮನುಷ್ಯನು ನಡೆದುಕೊಂಡು ನದಿಯನ್ನು ದಾಟಿದನೆನ್ನುವುದು ನಮಗೆ ತಿಳಿಯದು. ಅವರೂ ಅವನು ಯಾವ ಮಾರ್ಗದಲ್ಲಿ ನಡೆದುಕೊಂಡು, ಪ್ರತಿಯೊಂದು ಪ್ರಕಾರದಿಂದ ಸಾಹಸದ ಪರಿಚಯವನ್ನು ಮಾಡಿಕೊಟ್ಟನೋ ಆ ಮಾರ್ಗವು ಉತ್ನತಿಪಥದೆಡೆಗೆ ಕರೆದೊಯ್ಯುತ್ತದೆ. ಅವನ ಉದಾಹರಣೆಯಿಂದ ಊರೊಳಗಿನ ಇನ್ನುಳಿದವರು ಸಹ ಬುದ್ಧ ದೇವರ ಉಪದೇಶವನ್ನು ಕೇಳಿದರು. ಅವರ ಅಂತಃಕರಣಗಳು ಆ ಅತ್ಯಂತ ಶುದ್ದ ವಿಚಾರಗಳ ಕಡೆಗೆ ತೆರೆದುಬಿಟ್ವವು.
* * * *

ನದಿಯನ್ನು ಲಂಘಿಸಬಲ್ಲ ಒಂದು ಸಾಹಸವಿದ್ದರೆ ಮನುಷ್ಯನನ್ನು ನ್ಯಾಯಪಥದ ಮೇಲೆ ತೆಗೆದುಕೊಂಡು ಹೋಗುವ ಇನ್ನೊಂದು ಸಾಹಸವಿರುತ್ತದೆ. ಆದರೆ ಸತ್ಯಪಥದ ಮೇಲೆ ನಡೆಯಲು ಆರಂಭಿಸುವ ಅಪೇಕ್ಷೆಯನ್ನು ಅವರಲ್ಲಿ ದೃಢಗೊಳಿಸುವುದಕ್ಕಾಗಿ ಯಾವ ಸಾಹಸವು ಬೇಕಾಗುತ್ತದೆಯೋ ಅದು ಅವುಗಳಿಗಿಂತ ಹಿರಿಯದು.

ಕೋಳಿ ಹಾಗೂ ಅದರ ಪಿಳ್ಳಿ ಇವುಗಳ ಒಂದು ಉದಾಹರಣೆಯನ್ನು ಕೇಳಿರಿ.

ಗೌತಮ ಬುದ್ಧರು ತಮ್ಮ ಶಿಷ್ಯರಿಗೆ ಹೇಳಿದ್ದೇನಂದರೆ- ನೀವು ನಿಮ್ಮ ಮಟ್ಟಿಗೆ ಸಂಪೂರ್ಣ ಪ್ರಯತ್ನ ಮಾಡಿರಿ. ಆ ಪ್ರಯತ್ನದ ಫಲವು ನಮಗೆ ಸಿಕ್ಕೇ ಸಿಗುವುದೆಂಬುದರ ಮೇಲೆ ವಿಶ್ವಾಸವಿಡಿರಿ.

ಅವರು ಮತ್ತೂ ಹೇಳಿದರು- ಕೋಳಿಯು ತತ್ತಿಯಿಟ್ವು ಅದಕ್ಕೆ ಕಾವು ಕೊಡುವದಾದರೂ, ತನ್ನ ಪಿಳ್ಳೆಗಳು ತಮ್ಮ ಚುಂಚುವಿನಿಂದ ತತ್ತಿ ಯೊಡೆದು ಸೂರ್ಯಪ್ರಕಾಶದಲ್ಲಿ ಬಂದುಬಿಡುವುದಕ್ಕೆ ಸಮರ್ಥವಾಗಲೆನ್ನುವ ವಿಷಯವನ್ನು ಕುರಿತು ಒಂದಿಷ್ಟೂ ಚಿಂತಿಸುವುದಿಲ್ಲ. ಅದೇ ಪ್ರಕಾರ ನೀವಿನ್ನು ಹೆಚ್ಚಾಗಿ ಅಂಜತಕ್ಕದ್ದಲ್ಲ. ನೀವು ಸತ್ಯ ಮಾರ್ಗವನ್ನು ದೃಢವಾಗಿ ಅನುಸರಿಸಿದರೆ ಪ್ರಕಾಶವನ್ನು ನಿಶ್ಚಯವಾಗಿ ತಲಪುವಿರಿ.

ಸರಿಯಾದ ದಾರಿಯಲ್ಲಿ ನಡೆಯುವುದು, ಆವೇಗ- ಮೂಢ ವಿಚಾರ- ಸಂಕಟಗಳನ್ನು ಎದುರಿಸುವುದು, ಯಾವಾಗಲೂ ಮುಂದೆ ಪ್ರಕಾಶದ ಕಡೆಗೇ ಸಾಗುವ ಪ್ರಯತ್ನದಲ್ಲಿ ತೊಡಗುವುದು ಇವೇ ನಿಜವಾದ ಸಾಹಸಗಳಾಗಿವೆ.
* * * *

ಪ್ರಾಚೀನ ಕಾಲದಲ್ಲಿ ಬ್ರಹ್ಮದತ್ತನೆಂಬ ರಾಜನು ಬನಾರಸದಲ್ಲಿ ಆಳುತ್ತಿದ್ದನು. ಅವನ ಶತ್ರುಗಳಲ್ಲೊಬ್ಬನಾದ ಯಾವುದೊ ಒಂದು ದೇಶದ ಅರಸನು ತನ್ನ ಆನೆಗೆ ಯುದ್ಧ ಶಿಕ್ಷಣವನ್ನು ಕೊಡುತ್ತಿದ್ದನು.

ಯುದ್ದ ಘೋಷಣೆ ಅಗಿಬಿಟ್ಟಿತು. ಆ ವಿಶಾಲವಾದ ಆನೆಯು ತನ್ನ ಒಡೆಯನಾದ ರಾಜನನ್ನು ಬನಾರಸ ಕೋಟೆಯವರೆಗೆ ತೆಗೆದುಕೊಂಡು ಬಂದಿತು.

ಮುತ್ತಿಗೆ ಹಾಕಿದ ಆ ಸೈನಿಕರು ಕೋಟೆಯ ಗೋಡೆಯ ಮೇಲಿನಿಂದ ಕುದಿಯುತ್ತಿರುವ ದ್ರವ್ಯವನ್ನೂ ಕಿಂಡಿಗಳಿಂದ ಬೀಸುಗಲ್ಲುಗಳನ್ನೂ ಸುರಿಸ ತೊಡಗಿದರು. ಆ ಭಯಂಕರವಾದ ಸುರಿಮಳೆಯ ಮುಂದೆ ಆನೆಯು ಒಮ್ಮೆಲೆ ಹಿಂಜರಿದುಬಿಟ್ಟಿತು. ಅದರೆ ಯಾವ ಮನುಷ್ಯನು ಅದನ್ನು ಈಲು ಮಾಡಿದ್ದನೋ ಅವನು ಅದರ ಬಳಿಗೆ ಓಡಿಬಂದು ಹೇಳಿದ್ದೇನೆಂದರೆ-

“ಎಲೆ ಆನೆಯೇ, ನೀನೇನೋ ವೀರನು. ವೀರನಂತೆ ಕಾರ್ಯ ಮಾಡು. ಹಾಗೂ ಅಗಸೆಯನ್ನು ಕೆಡಹಿ ಹುಡಿಗೂಡಿಸು.”

ಈ ಶಬ್ಧಗಳಿಂದ ಹುರುಪುಗೊಂಡು ಆ ವಿಶಾಲವಾದ ಪ್ರಾಣಿಯು ಅಗಸೆಗೆ ಒಂದು ಬಲವಾದ ಪೆಟ್ಟು ಕೊಟ್ಟಿತು. ಒಳಗೆ ಪ್ರವೇಶ ಮಾಡಿತು. ಹಾಗೂ ರಾಜನಿಗೆ ಗೆಲವನ್ನು ತಂದುಕೊಟ್ಟಿತು.

ಸಾಹಸವು ಈ ರೀತಿಯಾಗಿ ಬಾಧೆಗಳನ್ನೂ ಗಂಡಾಂತರಗಳನ್ನೂ ಗೆದ್ದು ವಿಜಯ ಪಥವನ್ನು ಸುಗಮಗೊಳಿಸುತ್ತದೆ.

ಮನುಷ್ಯನಿರಿಲಿ ಪಶುವಿರಲಿ, ಯಾರಿದ್ದರೂ ಅವರಿಗೆ ಹೊಗಳಿಕೆಯ ಶಬ್ದಗಳು ಅದಾವ ಪ್ರಕಾರ ಸಹಾಯವನ್ನು ತಂದೊದಗಿಸುವವು, ನೋಡಿರಿ!

ಮುಸಲ್ಮಾನರ ಒಂದು ಉತ್ತಮವಾದ ಪುಸ್ತಕದಲ್ಲಿ ಉದಾರ ಹೃದಯದ ವ್ಯಕ್ತಿಯಾದ ಅಬುಸೈಯದನ ಒಂದು ಕಥೆ ಇದೆ. ಅದು ನಮಗೆ ಒಂದು ಒಳ್ಳೆಯ ಉದಾಹರಣೆ ಕೊಡುತ್ತದೆ.

ಒಮ್ಮೆ ಅವನು ಜ್ವರದಿಂದ ಪೀಡಿತನಾಗಿದ್ದನು. ಅವನ ಮಿತ್ರರು ಅವನ ಸ್ವಾಸ್ಥ್ಯದ ಸಮಾಚಾರವನ್ನು ಕೇಳಬೇಕೆಂದು ಅವನ ಮನೆಗೆ ಹೋದರು.

ಕವಿಯ ಮಗನು ಅವರನ್ನು ಬಾಗಿಲಲ್ಲಿ ಸ್ವಾಗತಿಸಿದನು. ಅವನ ತುಟಿಯ ಮೇಲೆ ಮುಗುಳುನಗೆ ಇತ್ತು. ಯಾಕೆಂದರೆ ರೋಗಿಯು ಮೊದಲಿನಿಂದಲೂ ಒಳಿತಾಗಿದ್ದನು. ಆ ಜನರು ಅವನ ಕೋಣೆಯನ್ನು ತಲುಪಿ ಅಲ್ಲಿ ಕುಳಿತು ಕೊಂಡರು. ತನ್ನ ನಿರಂತರವಾದ ಹಾಸ್ಯ ಸ್ವಭಾವಕ್ಕೆ ಅನುಸಾರವಾಗಿ ಅವನು ಮಾತಾಡುವುದನ್ನು ಕೇಳಿ ಎಲ್ಲರಿಗೂ ಬಲು ಸೋಜಿಗವೆನಸಿತು. ಬಳಿಕ ಜ್ವರ ಬಿಡಹತ್ತಿದ್ದರಿಂದ ಅವನಿಗೆ ನಿದ್ರೆಯು ಬಂದು ಆವರಿಸಿತು ಹಾಗೂ ಜನರೂ ಮಲಗಿಬಿಟ್ಟರು.

ಸಾಯಂಕಾಲಕ್ಕೆ ಎಲ್ಲರೂ ಎದ್ದು ಕುಳಿತರು. ಅಬು ಸೈಯದನು ಅಭ್ಯಾಗತರನ್ನು ಜಲಪಾನದಿಂದ ಸತ್ಕಾರಗೊಳಿಸಿದನು. ಕೋಣೆಯನ್ನು ಸುವಾಸಿತ ಗೊಳಿಸುವ ಸಲುವಾಗಿ ಊದಬತ್ತಿಗಳನ್ನು ಹೊತ್ತಿಸಿಕೊಟ್ಟನು.

ಅಬುಸೈಯದನು ಪ್ರಾರ್ಥನೆ ಮುಗಿಸಿ ಎದ್ದುಕುಳಿತು ಒಂದು ಚಿಕ್ಕದಾದ ಸ್ವರಚಿತ ಕವಿತೆಯನ್ನೋದಲು ಆರಂಭಿಸಿದನು.

“ದುಃಖದ ಸಮಯದಲ್ಲಿ ನಿರಾಶನಾಗಬೇಡ- ಯಾಕಂದರೆ ಪ್ರಸನ್ನತೆಯ ಒಂದು ಗಳಿಗೆಯು ನಿನ್ನ ಸರ್ವ ದುಃಖಗಳನ್ನು ಹೊಡೆದೋಡಿಸಿ ಬಿಡುವದು.”

ಮರುಭೂಮಿಯ ಚುರುಕಾದ ಉರಿಗಾಳಿಯು ಹರಿದುಬರುತ್ತಿದೆ. ಆದರೆ ಅದು ತಂಗಾಳಿಯಾಗಿ ಮಾರ್ಪಡಬಲ್ಲದು.

ಕಾರ್ಮೋಡಗಳು ಮುಗಿಲಲ್ಲಿ ಹಣೆದುಕೊಂಡಿವೆ. ಆದರೆ ಅವು ಜಲ ಪ್ರಳಯ ಮಾಡುವ ಮೊದಲೇ ಹಾರಿ ಹೋಗಬಲ್ಲವು.

ಬೆಂಕಿ ಹತ್ತಬಲ್ಲದು. ಆದರೆ ನಿಮ್ಮ ಗಂಟುಗಳೂ ಪೆಟ್ಟಿಗೆಗಳೂ ನಂದಿ ಬಿಡುವದುಂಟು.

ದುಃಖವು ಬರುತ್ತದೆ. ಆದರೆ ಹೊರಟೂ ಹೋಗುತ್ತದೆ. ಆದಕಾರಣ ವಿಪತ್ತು, ಬಂದಾಗ ಎದೆಗಾರನಾಗು.

ಸಮಯವು ಎಲ್ಲ ಸೋಜಿಗಗಳಲ್ಲಿ ಹಿರಿಯದು. ಈಶ್ವರನ ಕೃಪೆಯಿಂದ ನೀನು ಯಾವಾಗಲೂ ಸ್ವಕಲ್ಯಾಣ ಚಿಂತನೆ ಮಾಡಬೇಕು.”

ಈ ವಿಚಾರಗಳಿಂದ ತುಂಬಿದ ಸುಂದರ ಕವಿತೆಯನ್ನು ಕೇಳಿ ಎಲ್ಲರೂ ಉಲ್ಲಾಸವನ್ನೂ ಉತ್ಸಾಹವನ್ನೂ ಅನುಭವಿಸುತ್ತ ತಂತಮ್ಮ ಮನೆಗೆ ತಿರುಗಿ ಹೋದರು. ಈ ಪ್ರಕಾರ ಒಬ್ಬ ರೋಗಿ ಮಿತ್ರನು ತನ್ನ ನಿರೋಗಿ ಮಿತ್ರರಿಗೆ ಸಹಾಯ ಮಾಡಿದನು.

ಯಾರು ಸ್ವಯಂ ಸಾಹಸಿಯೋ ಅವನೇ ಬೇರೊಬ್ಬರಿಗೆ ಸಾಹಸವನ್ನು ನೀಡಬಲ್ಲನೆಂಬುದು ನಿಶ್ಚಯ. ಅದೇ ಪ್ರಕಾರ ಜ್ವಲಿಸುತ್ತಿರುವ ಮೇಣ ಬತ್ತಿಯು ತನ್ನ ಜ್ವಾಲೆಯಿಂದ ಇನ್ನೊಂದು ಮೇಣಬತ್ತಿಯೂ ಪ್ರಜ್ವಲಿಸುವಂತೆ ಮಾಡಬಲ್ಲದು.

ವೀರ ಬಾಲಕ ಬಾಲಕಿಯರೇ, ನೀವು ಕಥೆಯನ್ನು ಅಭ್ಯಸಿಸಿದಿರಿ. ನೀವು ಬೇರೊಬ್ಬರಿಗೆ ಸಾಹಸ ನೀಡುವುದನ್ನು ಕಲಿಯಿರಿ; ಹಾಗೂ ಸ್ವಯಂ ಸಾಹಸಿಗಳೂ ಅಗಿರಿ.
*****

ಹಿಂದಿ ಮೂಲ: ಶ್ರೀ ತಾಯಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದೇ ಯುಗಾದಿ
Next post ಅಧರ

ಸಣ್ಣ ಕತೆ

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಕಂಬದಹಳ್ಳಿಗೆ ಭೇಟಿ

  ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…