ದೇವಾಲಯದಲ್ಲಿ ಕುಳಿತಿದ್ದ ಓರ್‍ವ ಸ್ವಾಮಿಗಳ ಬಳಿ ಒಬ್ಬ ಶಿಷ್ಯ ಬಂದ. ಅವನಿಗೆ ಧ್ಯಾನ ಕಲಿಯುವ ಬಲು ಕಾತುರ.

ಗುರುಗಳ ಮುಂದೆ ಕೈ ಜೋಡಿಸಿ “ನನಗೆ ಧ್ಯಾನ ಕಲಿಸಬೇಕೆಂದು” ಬಿನ್ನವಿಸಿಕೊಂಡ.
“ಊಟ ಮಾಡಿದೆಯಾ? ಹೊಟ್ಟೆ ತುಂಬಿತೇ? ಮೊದಲು ಜೀರ್‍ಣಿಸಿಕೊ. ಹೊಟ್ಟೆ ಸ್ವಚ್ಛವಾಲಿ.” ಎಂದರು. “ಆಯಿತು ಗುರುಗಳೇ, ಇನ್ನು ಧ್ಯಾನ ಕಲಿಸುವಿರಾ?” ಎಂದ ಶಿಷ್ಯ.

“ಮೊದಲು ಅಡ್ಡಾಡಿ ವಿಹರಿಸಿ, ಗಾಳಿ ಕುಡಿದು ಬಾ” ಎಂದರು ಗುರುಗಳು.

“ಆಯಿತು ಗುರುಗಳೇ, ಇನ್ನು ಧ್ಯಾನ ಕಲಿಸುವಿರಾ?” ಎಂದ ಶಿಷ್ಯ.

“ವಿಹರಿಸಿ, ಶ್ವಾಸ ಕೋಶ ಸ್ವಚ್ಛವಾಯಿತೆ? ಪ್ರಾಣದಲ್ಲಿ ನೆಲೆ ನಿಲ್ಲು,” ಎಂದರು ಗುರುಗಳು.

“ನೀನಿಂತಾಗ ಪ್ರಾಣ ನಿಲ್ಲುತ್ತದೆ, ನೀಕುಳಿತಾಗ ಕೂಡುತ್ತದೆ” ಎಂದರು ಗುರುಗಳು.

“ನಿನ್ನಲ್ಲಿರುವ ಧ್ಯಾನಕ್ಕೆ ಹುಡುಕಾಟ ಬೇಡ” ಎಂದಾಗ ಗುರುಗಳು, ಶಿಷ್ಯ ತೃಪ್ತನಾದ ಸಹಜ ಧ್ಯಾನದಲ್ಲಿ.
*****