ಕಾಲಕಾಲಕೆ ಕಂಡೆನ್ನ ನೋಟಕೊದಗಿದ ಬೀಜ
ಗಳನಲ್ಲಲ್ಲೇ ಹೆಕ್ಕಿ ಸುರಿದಿಹೆನಿಲ್ಲಿ ನಲಿವಿನಲಿ
ಕ್ಷುಲ್ಲವಿದು ಕಾಳಲ್ಲ ಕಾಸಿನಾ ಮರವಲ್ಲವೆನ್ನದಿರಿ
ಬಲ್ಲಿರಾದೊಡೆಲ್ಲ ಹಸುರಿಂಗು ಬೆಲೆಯಿಕ್ಕು
ಜಲದ ಕಣ್ಣಲ್ಲಿ ಮೆಲ್ಲ ಮೆಲ್ಲನೆ ಬಕ್ಕು – ವಿಜ್ಞಾನೇಶ್ವರಾ
*****
Latest posts by ಚಂದ್ರಶೇಖರ ಎ ಪಿ (see all)
- ಎನಗ್ಯಾಕೆ ಕಾವ್ಯದ ಹಂಗು ? - April 12, 2021
- ತನುವೊಲಿವ ಮೊದಲಿತ್ತ ಮನವೊಲಿಯ ಬೇಕಲ್ಲಾ ? - April 5, 2021
- ಹಾಗೂ ಹೀಗೂ ದಿನದ ಗುಣವೇ ಕುಸಿದಿರಲಿನ್ನೆನ್ನದೇನು ? - March 29, 2021