ಅಡ್ಡಾದಿಡ್ಡಿ ಮಾತುಗಳ ತುಂಬಿ
ಒತ್ತಿ ಮೆತ್ತಿದ ಗೋಡೆಗಳ
ಮುಸಿ ಮುಸಿ ಅಳು ಕೇಳಿಸುತ್ತಿದ್ದರೆ
ದಾರಿ ಬಿಡಿ –

ಕನಸುಗಳಿಗೆ ಕೈಚಾಚಿದ
ಮನಸುಗಳ ಎದೆ ಹಗುರಾಗಲು ಬಯಸಿ
ಏನೆಲ್ಲ ಬಾಚಿತೋಚಬೇಕಾಗಿದೆ
ದಾರಿಬಿಡಿ –

ಹೆಪ್ಪು ಗಟ್ಟಿದ ಹಾದಿಯೊಡೆದು
ಸಹನೆಯ ಮೆಟ್ಟಲುಗಳು ತುಳಿದು
ಏರುವ ದಿನ್ನೆ ದಿನ್ನೆಗಳಿಗೆ
ನೀವೂ ಸಹಕರಿಸುವದಾದರೆ
ಈಗಲೇ ದಾರಿಬಿಡಿ –

ಸೌಜನ್ಯದ ಗಟ್ಟಿಮಾತುಗಳು
ಭೂಮಿಗೆ ಅರ್ಥಕೊಡಲು
ಉಲಿವ ಧ್ವನಿಗೆ ನಿಮ್ಮ ಕರಳು ಕುಟುಕಿದರೆ
ನಿವಾಗಿಯೇ ಸರಿದುಬಿಡಿ.
*****

ಪುಸ್ತಕ: ಇರುವಿಕೆ