Home / ಲೇಖನ / ವಿಜ್ಞಾನ / ಸ್ಮಾರ್ಟ್ ಫೋನ್‌ಗಳು

ಸ್ಮಾರ್ಟ್ ಫೋನ್‌ಗಳು

mobile-616012_640ಈ ಸ್ಮಾರ್ಟ್ ಫೋನುಗಳು ಪರ್ಸನಲ್ ಆರ್ಗನ್ಶೆಜರ್ ಮತ್ತು ಸೆಲ್ಯೂಲರ್ ಫೋನ್‌ಗಳ ಸಮ್ಮಿಶ್ರಣವಾಗಿದೆ. ನಿಸ್ತಂತು ಫೋನು ಮತ್ತು ಎಲೆಕ್ಟ್ರಿಕಲ್ ಆರ್ಗನೈಜರ್ ಎರಡನ್ನು ಹೊಂದಿರುವವರಿಗೆ ಇದು ಅತ್ಯಂತ ಸಹಕಾರಿಯಾಗಬಲ್ಲ ಉಪಕರಣವಾಗಿದೆ. ಕೀಬೋರ್ಡ್ ಮತ್ತು ಒಳಗಡೆಗೆ ಸ್ಕ್ರೀನ್ ಹೊಂದಿರುವ ಇದು ಸಂಪರ್ಕ ಮತ್ತು ಸಂಘಟನೆ ಎರಡನ್ನು ಒಳಗೊಂಡ ಆಧುನಿಕ ತಂತ್ರಜ್ಞಾನದ ಆವಿಷ್ಕಾರವಾಗಿದೆ. ಅಮೇರಿಕಾ ಸೇರಿದಂತೆ ಯೂರೋಪಿನ ಹಲವಾರು ರಾಷ್ಟ್ರಗಳ ಗಮನ ಸೆಳೆಯಲು ವಿಫಲವಾದರೂ ಇದರ ಕಲ್ಪನೆ ಮಾತ್ರ ಅದ್ಭುತಪಾದದ್ದು ಈಗಾಗಲೇ ಸೆಲ್ಯೂಲರ್ ಫೋನ್ ವಿಶ್ವವಿಖ್ಯಾತಿಗಳಿಸಿರುವ ಮೋಟರೋಲಾ ಮತ್ತು ಕ್ವಾಲ್‌ಕಾಮ್ ಎರಡೂ ಕಂಪನಿಗಳು ಈ ದಿಸೆಯಲ್ಲಿ ಸ್ಪರ್ಧಾತ್ಮಕವಾಗಿ ತಯಾರಿಸುತ್ತ ಮಾರುಕಟ್ಟೆಗೆ ಬಿಡುಗಡೆಗೆ ಸೆಣಸುತ್ತಲಿದೆ.

ಈ ದಿನಗಳಲ್ಲಿ ಉಪಯೋಗಿಸುತ್ತಿರುವ ಸೆಲ್‌ಫೋನ್‌ಗಳಿಗಿಂತ ಎರಡುಪಟ್ಟು ಭಾರವಾದ ಈ ಸ್ಮಾರ್ಟ್ ಫೋನ್ ಬಹುಮುಖ ಸೇವೆಯನ್ನು ನೀಡುತ್ತದೆ. ಇದರಲ್ಲಿ L.C.Dಸ್ಕ್ರೀನ್ ಮತ್ತು ಜನಪ್ರಿಯ ಚಿತ್ರಗಳನ್ನು ಹೊಂದಿದೆ. ೩ ಕಾಮನ್‌ನ ಫಾಮ್ ಉಪಕರಣವನ್ನು ಉಪಯೋಗಿಸಿದವರಿಗೆ ಇದು ಸುಪರಿಚಿತ. ಅಂದರೆ ಪಿಡಿಕ್ಯು ಡಿಜಿಟಲ್ ದೃಶ್ಯಗಳನ್ನು ಒಳಗೊಂಡ ನಿಸ್ತಂತು (ವೈರ್‌ಲೆಸ್) ಫೋನ್ ಮತ್ತು ಫಾರ್ಮ್ ಆರ್ಗನೈಜರ್ ಹೊಂದಿದೆ.

ಸಿ.ಡಿ.ಎಂ.ಎ. ಪ್ರೊಟೊಕಾಲ್, ಡಿಜಿಟಲ್‌ಫೋನ್ ತರಹವೇ ಪಿಡಿಕ್ಯೂ ಸಹ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ. ‘ವಾಯ್ಸ್ ಮೇಲ್’ ಕರೆಮಾಡುವವರ ಪರಿಚಯ, ಚಿಕ್ಕದಾದ ಸಂದೇಶ ಸೇವೆ. ಹೀಗೆ ದೂರವಾಣಿ ಸಂಬಂಧಿತ ಎಲ್ಲ ಸೇವೆಗಳು ಡಯಲ್ ಪ್ಯಾಡ್‌ಮೂಲಕ ನಡೆಯುತ್ತವೆ. ಮುಟ್ಟಿದ ತಕ್ಷಣ ತೆರೆದುಕೊಳ್ಳು ಕೀಪ್ಯಾಡ್ ಸ್ಕ್ರೀನನ್ನು ಕ್ರಿಯಾಶೀಲಗೊಳಿಸುತ್ತದೆ. ನಿಮಗೆ ಅಗತ್ಯವಾದ ಮಾಹಿತಿಗಳನ್ನು ಒದಗಿಸುತ್ತದೆ. ಈ ಫೋನ್ ಬಳಕೆಯಿಂದ ಗಮನಾರ್ಹ ಉಳಿತಾಯ ಮಾಡಬಹುದಲ್ಲದೇ ತಕ್ಷಣದಲ್ಲೇ ನಿಮ್ಮ ಅಂದಿನ ಕಾರ್ಯಕ್ರಮ ವಿವರ, ವಿಳಾಸಗಳು, ಪ್ರಮುಖ ವ್ಯಕ್ತಿಗಳ ದೂರವಾಣಿ ಸಂಖ್ಯೆಗಳನ್ನು ಒದಗಿಸುವುದರ ಮೂಲಕ ಉಪಕಾರಿಯಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...