ಇದ್ದಾಗ ಕಣ್ಣಿಗೆ ಕ್ಷಣಮಾತ್ರವೂ ಬೀಳದೆ ಸತ್ತಾಗ
ಸರ್ಕಲ್ಲು ಪಾರ್ಕುಗಳ ಮಧ್ಯೆ ಎದ್ದು ನಿಲ್ಲುವವರು
ಕಂಡಕಂಡವರ ಕೈಯ ಚಲಾವಣೆಗೆ ಸಿಕ್ಕಿ
ನಾಣ್ಯವಾಗುವವರು.
ಅಂಚೆಯಲ್ಲಿ ಸಂಚರಿಸುತ್ತ ಊರೂರಲ್ಲಿ ಸದೆಬಡಿಸಿಕೊಳ್ಳುವ
ತಾಳ್ಮೆ ತಳೆದವರು.
ದೇಶಭಕ್ತಿಯ ದತ್ತುಮಕ್ಕಳ ನಂಚಿಕೆಗೆ ಸಾಕಷ್ಟು
ಸರಕು ಬಿಟ್ಟು ಸರಿವವರು.
ಮಾಡುವ ಅನಾಚಾರಕ್ಕೆಲ್ಲ ಮನೆ ಮುಂದಿನ
ಬೃಂದಾವನವಾಗುವವರು.
ಬೆತ್ತಲೆ ಜನಕ್ಕೆ ಬಟ್ಟೆಯಾಗುವವರು.
*****
ಸೂಪರ್ ಸರ್