Home / ಲೇಖನ / ಸಾಹಿತ್ಯ / ಯಾವ ಮಾದರಿಯೂ ಇಲ್ಲ

ಯಾವ ಮಾದರಿಯೂ ಇಲ್ಲ

ಗುರುವಿಂಗೆ ಗುರುವಿಲ್ಲ
ಲಿಂಗಕ್ಕೆ ಲಿಂಗವಿಲ್ಲ
ಜಂಗಮಕ್ಕೆ ಜಂಗಮವಿಲ್ಲ
ನನಗೆ ನಾನಿಲ್ಲ
ಕಣ್ದೆರೆದು ನೋಡುವಡೆ ಆರಿಗೆ ಆರೂ ಇಲ್ಲ
ಕಪಿಲಸಿದ್ಧಮಲ್ಲಿಕಾರ್ಜುನಾ

ಸಿದ್ಧರಾಮನ ವಚನ ಇದು. ಮಾದರಿಗಳನ್ನು ಅನುಸರಿಸುವವರು ಹೇಳಹೆಸರಿಲ್ಲದಾಗುತ್ತಾರೆ.

ಏಸು ಕ್ರಿಸ್ತ ಕ್ರಿಶ್ಚಿಯನ್ ಅಲ್ಲ, ಬುದ್ಧ ಬೌದ್ಧನಲ್ಲ, ಮಾರ್ಕ್ಸ್ ಮಾರ್ಕ್ಸ್‌ವಾದಿಯಲ್ಲ. ಕ್ರಿಸ್ತನನ್ನು ಅನುಸರಿಸಿದವರು ಕ್ರಿಶ್ಚಿಯನ್ನರು, ಬುದ್ಧನನ್ನು ಅನುಸರಿಸಿದವರು ಬೌದ್ಧರು, ಮಾರ್ಕ್ಸ್‌ನನ್ನು ಅನುಸರಿಸಿದವರು ಮಾರ್ಕ್ಸವಾದಿಗಳಾದರು. ನಾವು ಯಾರನ್ನು ಮಹಾಪುರುಷರು ಎಂದು ಗುರುತಿಸಿಕೊಂಡಿದ್ದೇವೆಯೋ ಅವರೆಲ್ಲರ ಮೇಲೂ ಇತರರ ಪ್ರಭಾವಗಳಿದ್ದರೂ ಅವರು ಯಾವ ಮಾದರಿಯನ್ನೂ ಅನುಕರಿಸದೆ, ಯಾರಂತೆಯೋ ಅಗಲು ಬಯಸದೆ ಬೆಳೆದವರು.

ಹಾಗೆಯೇ ಗುರು ಎಂಬ ಗುರುವಿಗೆ ಗುರುವೂ ಇಲ್ಲ. ಲಿಂಗ ಅನ್ನುವ ಲಿಂಗಕ್ಕೆ ಲಿಂಗವೂ ಇಲ್ಲ, ಜಂಗಮಕ್ಕೆ ಬೇರೆ ಇನ್ನೊಬ್ಬ ಜಂಗಮವಿಲ್ಲ. ಗುರು, ಲಿಂಗ ಮತ್ತು ಜಂಗಮ ಎಂಬವು ಮನುಷ್ಯ ವ್ಯಕ್ತಿಯಾಗಲೀ ವಸ್ತುವಾಗಲೀ ಅಲ್ಲ. ಅವು ಪರಿಕಲ್ಪನೆಗಳು. ಹಾಗೆಯೇ ನಾನು ಎಂಬುದು ಕೂಡ ಕಲ್ಪನೆಯೇ, ನಾನು ಎಂಬ ಕಲ್ಪನೆಗೆ ಬದ್ಧವಾಗಿರುವಷ್ಟು ಕಾಲವೂ ನನಗೆ ಒಂದು ಮಾದರಿ ಬೇಕು ಎಂದು ಹುಡುಕುತ್ತಲೇ ಇರುತ್ತೇನೆ. ನಿಜವಾಗಿ ಕಣ್ತೆರೆದು ನೋಡಿದರೆ ನಾನು ಎಂಬ ಕಲ್ಪನೆಗೆ ಆಧಾರವೇ ಇಲ್ಲ ಎಂಬುದು ಹೊಳೆದೀತು. ಅಷ್ಟೇ ಯಾಕೆ, ಯಾರಿಗೆ ಯಾರೂ ಇಲ್ಲ ಅನ್ನುವುದೂ ಅರಿವಿಗೆ ಬಂದೀತು. ಮಾದರಿಗಳ ನಿರಾಕಣೆಯ ಜೊತೆಗೇ `ನನಗೆ ನಾನಿಲ್ಲ’ ಅನ್ನುವ ಮಾತು `ನಾನೇ, ಎಲ್ಲವೂ ನನ್ನಿಷ್ಟದಂತೆಯೇ’ ಅನ್ನುವ ಭ್ರಮೆಯ ಅಹಂಕಾರವನ್ನೂ ನಿರಾಕರಿಸುವುದನ್ನು ಗಮನಿಸಿ, ಯಾರ ಹಾಗೆಯೋ ಆಗುವುದೂ ಅಲ್ಲ, `ನಾನೇ’ ಆಗುವುದೂ ಅಲ್ಲ, ಅಂದಮೇಲೆ ದಾರಿ ಯಾವುದು ಎಂಬ ಹುಡುಕಾಟಕ್ಕೆ ತೊಡಗಿಸುವಂತೆ ಇದೆ ಸಿದ್ಧರಾಮನ ಈ ವಚನ.
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...