ಶಬ್ದ ಸಾಲದು ತಂದೆ ನಿಮ್ಮ ಪ್ರೀತಿಯ ಮುಂದೆ
ಪಂಚಗುರುಗಳ ಗಾನ ಗುರುಸ೦ಗಮಾ
ಗಗನ ಸಾಲದು ಗುರುವೆ ಕಡಲು ಸಾಲದು ಗುರುವೆ
ಪರಮ ಪ೦ಚಾಚಾರ್ಯ ಶಿವಸಂಗಮಾ ।।
ಕಮಲ ಮಲ್ಲಿಗೆ ನೀವೆ ವಿಮಲ ಸಂಪಿಗೆ ನೀವೆ
ಹೂವಿಗಿಂತಲು ಹೂವು ನಿಮ್ಮಮಿಲನ
ಲಿಂಗದೊಲವೇ ಒಲವು ಲಿಂಗ ಬಲವೇ ಬಲವು
ವಿಶ್ವವೊಂದೇ ಕುಲವು ಜ್ಞಾನ ಮಿಲನ
ಓಂ ನಮೋ ಓಂ ನಮೋ ಓಂ ನಮೋ ಶಿವಮಂತ್ರ
ಪಂಚ ಪಂಚಾಕ್ಷರಿಯ ಮಂತ್ರಪುರುಷ
ಮುಕ್ಕೋಟಿ ಶಿವಮಂತ್ರ ನೂರ್ಕೋಟಿ ಮಾಮಂತ್ರ
ಪ್ರತ್ಯಕ್ಷ ಪ್ರತ್ಯಕ್ಷ ಪರಮಹರುಷ
ತೆಂಗು ಬಾಳೆಯು ನೀವೆ ಮಾವು ಮಲ್ಲಿಗೆ ನೀವೆ
ಗುರುಲಿಂಗ ಜಂಗಮದ ತೋಟ ಕಂಡೆ
ಗೌರಿ ಹುಣ್ಣಿಮೆ ನೀವೆ ಶೀಗಿ ಹುಣ್ಣಿಮೆ ನೀವೆ
ಶಿವರಾತ್ರಿ ಕಾರ್ತಿಕದ ಪೂಜೆ ಕಂಡೆ
*****


















