Home / ಕವನ / ಕವಿತೆ / ಕೊಳದಾಗ್ ತೇಲ್ತಿದ್ ಬೆಂಡು

ಕೊಳದಾಗ್ ತೇಲ್ತಿದ್ ಬೆಂಡು

ಬೂಮೀಗ್ ಗೋಂದ್ ಆಕ್ ಅಂಟೀಸ್ದಂಗೆ
ಅತ್ತಾಗ್ ಇತ್ತಾಗ್ ಅಳ್ಳಾಡ್ದಂಗೆ |
ಕೋಳದಾಗ್ ನಿಂತಿತ್ ನೀರು.
ಗಂಡನ್ ತುಟೀಗ್ ಯೆಡ್ತಿ ಮುತ್ತು
ಕುಂತಂಗ್ ಕೊಳದಾಗ್ ಕುಂತ್ಕೊಂಡಿತ್ತು
ಒಂದ್ ಚಿಕ್ ಬೆಂಡಿನ್ ಚೂರು. ೧

ಪಡಕಾನೇಗೆ ತಗದ್ ಗೇಟಿಂದ
ಕುಡಕರ್ ನುಗ್ದಂಗ್ ಅತ್ತಾಗಿಂದ
ಕೊಳಕ್ಕ್ ಒಂದ್ ಒಳೆ ನುಗ್ತು !
ತನ್ ಪಾಡ್ ತಂಗ್ ಅಂತ್ ಕುಂತಿದ್ದ್ ಬೆಂಡು
ನುಗ್ಗಿದ್ ನೀರಿಗ್ ಕೈ ಮುಕ್ಕೊಂಡು
ಅದರ್ ದಾರೀಗೆ ಬಗ್ತು ! ೨

ಸಮಯಕ್ಕ್ ದುಮುಕಿದ್ ಸಾಲ್ಗಾರ್ರಂಗೆ
ಅತ್ತೂ ದಿಕ್ಕಿಂದ್ ದೆಯ್ಗೋಳಂಗೆ |
ಕೊಳಕೆ ನೀರ್ ನುಗ್ಗೊಯ್ತು !
ತೇಲ್ತಿದ್ ಬೆಂಡು ಕೊಳದ್ ಒಳೀಕೆ
ಗಿರ್ರಂತ್ ತಿರಗೋ ಆಳ್ ಸುಳಿಗೆ
ಸಿಕ್ಕೊಂಡ್ ಪಡಚಾಗೋಯ್ತು ! ೩

ಅದನ ಕಂಡೋರ್ ಎಲ್ರು ಬೆರತು
‘ಅಯ್ಯೋ ಪಾಪ’ ಅಂದ್ರೆ ವೊರತು
ಮುಳಗೋದ್ ತಪ್ಪೀಸ್ನಿಲ್ಲ !
ಕೊಳಕೊಂದ್ ಚಿಕ್ದಾಗ್ ಕಟ್ಟೆ ಕಟ್ಟಿ
ಬೆಂಡಿನ್ ಬದಸೋಕ್ ನೀರ್ ತಡದಿಟ್ಟಿ
ಉಳಸ್ಬೌದಾಗಿತ್ತಲ್ಲ ! ೪
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...