ಅಲ್ಲಲ್ಲಿ ಓಡುವ ನನ್ನ ಮನವೆ
ಆನಂದದ ನೆಲೆಯಲ್ಲಿ ನಿಲ್ಲು ಮನವೆ
ಇಲ್ಲಿ ಧ್ಯಾನ, ಸಾಧನೆ ತಪವು ಎಲ್ಲ.
ಈರ್ಷೆ, ಅಸೂಯೆ, ಆತಂಕವಿಲ್ಲ
ಉದಯ ರವಿಯ ಕಿರಣ ಸೊಬಗೆಲ್ಲ
ಊರ್ಧ್ವಗಾಮಿಯಾಗಿ ನುಡಿ ಸೊಲ್ಲ.
ಋಷಿ ಮುನಿಯ ಮನದ ಸತ್ಯವೇ ಬೆಲ್ಲ
ಎಲ್ಲಿದ್ದರೂ ತಿಳಿ, ತಿಳಿವನ್ನು ತಿಳಿಗೊಳದಿನಿಂದು
ಏನು ಮಾಡಿದರೇನು `ನಾನು ಎಂಬುದ ತಿಳಿ ಇಂದು.
ಐರಾವತವನ ನೇರು, ಐದು ವೇದದ ಸಾರ ತಿಳಿದು
ಒಂದೇ ಒಂದು ಸತ್ಯವೆಂದು ತಿಳಿ
ಓ ಜಸ್ಸು ತುಂಬಲಿ, ಬಾಳ ಮುನ್ನಡೆಯಲಿ.
ಔತಣವಿದು ಓಂಕಾರ ಸವಿಯಲು
ಅಂತವಿಲ್ಲದ ಪಾರದಲಿ ಅನಂತವಾಗಿ ಬೆಳೆದು
ಆಃಹಾ ಎಂದು ಸವಿ ಅಮೃತವ ಜಿಹ್ವೆಗೆ ಸುರಿದು.

****