ಅರ್ಜುನ ಜೋಗಿ

ಪೀಠಿಕೆ

“ಅರ್ಜುನ ಜೋಗಿ” ಎಂದು ಹಸರಿನಿದ ಕಥನಗೀತದಲ್ಲಿ ಅರ್ಜುನ ಮತ್ತು ಆತ ಜಾಲಗುನ್ನಿಯನ್ನು ಮಾಡಿ ಕದ್ದುಕೊಂಡು ಹೋದ ಹೆಂಗಸು ಸುಭದ್ರೆ ಎಂದು ತಿಳಿಸಿದ್ದರು. ಇವರು ಮಹಾಭಾರತದ ಅರ್ಜುನ ಸುಭದ್ರೆ ಅಲ್ಲ. ಮಹಾಭಾರತದ ಕಥೆಯ ಪಾಠಗಳಲ್ಲಿ ಅರ್ಜುನನು ಜೋಗಿ ವೇಷ ತೊಟ್ಟು ಕಳಿಸಿದ ಹಲವು ಗೀತ ಪಾಠಗಳಿವೆಯಾದರೂ ಇಲ್ಲಿ ಹೆಸರುಗಳನ್ನು ಬಿಟ್ಟರೆ ಇದೊಂದು ಬಹಳ ಜನಪ್ರಿಯವಾದ ಜನಪದ ಕಥೆಯ ಪಾಠ. ಇಲ್ಲಿ ಏಳು ಮಂದಿ ಮಕ್ಕಳು ಒಬ್ಬ ತಾಯಿಗೆ ಮತ್ತು ಅವರಿಗೂ, ಮಹಾಭಾರತ ಕಥೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವೇ ಇದೆ. ಹಿಂದಿನ ಕಾಲದ ಹಲವು ಗೀತಗಳಲ್ಲಿಯಂತೆ ಯುದ್ಧಕ್ಕೆ ಹೋಗಲು ದಂಡಿನ ಕರೆಯೋಲೆ. ಬರುವದು ಇಲ್ಲೂ ಇದೆ. ಸಶಕ್ತ ಗಂಡು ಹುಡುಗರು ಪ್ರಾಯ ಬರುವಾಗ ಆ ಕಾಲದ ಯುದ್ಧದಲ್ಲಿ ಬಳಸುವ ಆಯುಧಗಳನ್ನು ಉಪಯೋಗಿಸುವುದನ್ನು ಕಲಿತಿರುತ್ತಿದ್ದರು. ದಂಡಾಡಲು ಹಿರಿಯನು ಹೂರಡುವ ಮೂದಲು- ತಾಯಿ ಅಡಿಗೆ ಮಾಡುವ, ಬಚ್ಚಲ ನೀರು ಕಾಯಿಸುವ ಸಂಕ್ಷಿಪ್ತ ಬಣ್ಣನೆ, ಬೇಕಾದ ವಿವರಗಳು ಇಲ್ಲಿವೆ. ಇಲ್ಲಿ ದೇವರ ಪೂಜೆ ಮಾಡಿ, ಉಂಡು, ಕುದುರೆ ಹತ್ತಿದ ಏಳು ಜನರಿಗೆ ಹೆಂಡಿರು ಚಿನ್ನದ ಆರತಿಯನ್ನು ಬೆಳಗಿ ಕಳಿಸುವ ಸುಂದರ ಚಿತ್ರಣವೂ ಇದೆ.

ಅವರು ಹೋದ ಮೇಲೆ ಬಂದ ಅರ್ಜುನ ಜೋಗಿಯು ತಾಳ ಹೊಡೆದು ಬಂದು ಕೂತನು. ಇವನು ಮಾಂತ್ರಿಕ ಶಕ್ತಿಯುಳ್ಳ ದುಷ್ಟ. ಆರು ಜನರು ಮಡದಿಯರು ‘ಪಡಿಧಾನ್ಯ ಕೊಡುವೆ. ಅಂದರೆ, ‘ಕಿರಿಯ ಸುಭದ್ರೆಯೇ ಪಡಿ ಕೊಡಬೇಕು’ ಎಂದು ಹೇಳುವನು. ಹೆಂಗಳೆಯರು ಕೈಕೈ ಹಿಡಿದು ನಿಂತಾಗವನು ಮಂಡಲ ಬರೆದು- “ಅದರಲ್ಲಿ ಕೊಡಬೇಕು’ ಎಂದನು. ಕಿರಿಯ ಸುಭದ್ರೆಯ ಅಂದ-ಚೆಂದ ಅಸಾಧಾರಣ. ಆರು ಅಕ್ಕಂದಿರು ತಂಗಿಯನ್ನು ಹಿಡಿದವರು ಅವನು ಎಲ್ಲರೂ ಬಿಡಿರೆಂದು ಹೇಳಲು ಬಿಟ್ಟರು. ಮಾಂತ್ರಿಕ ಹರಳನ್ನು ಒಗೆದು ಅವಳನ್ನು ಜಾಲಗುನ್ನಿ ರೂಪಕ್ಕೆ ಪಲಿವರ್ತಿನದನು. ಈ ಮಾಂತ್ರಿಕ ನಾಯಿಯೊಡನೆ ನಡೆದನು. ಹಿರಿಯನಿಗೆ ಈ ಘಟನೆಯ ತಾರುಕ್‌ ಆಯಿತು, ಕಿರಿಯಳನ್ನು ಒಯ್ದದ್ದೇ ಅವರಿಗೆ ಸ್ಪಷ್ಟ ತಿಳಿಯದಿದ್ದರೂ “ಏನೋ ಅನಾಹುತವಾಯಿತೆಂ’ದು ಮರಳುವ ಎತ್ತುಗಡೆ ಮಾಡಿದರು. ಹೆಜ್ಜೆ ಹೆಜ್ಜೆಗೂ ಕಥನ ಕಲೆಯ ಸ್ಪರ್ಶವಿರುವದು ಇಲ್ಲಿ ಕಾಣುತ್ತದೆ. ನುಡಿತದಲ್ಲಿ ಸಿದ್ಧಶೈಲಿಯ ಸಾಲುಗಳು ಅಲ್ಲಲ್ಲಿ ಮಿನುಗುತ್ತವೆ. ವಿಷಯ ತಿಳಿದ ಏಳು ಮಂದಿ ಶೋಧನೆಗಾಗಿ ಹೊರಟರು. ಅಪಹರಿನಿದಾಗ ಮೂರು ಅಂಗಳ ಗರ್ಭಣ ಹಿರಿಯನ ಹಂಡತಿ. ಸುಭದೈ ಜೋಗಿಗೆ,

ತನ್ನವರು ಏಳು ಮಂದಿ ಬಂದರ ನನ್ನನ್ನು ಕೂಲ್ಲುವರೆಂ’ದು ಬೆದರಿಸುತ್ತಾಳೆ. ಬಂದ ಅವರನ್ನು ಜೋಗಿ ಹರಳು ಹೊಡೆದು ಕಲ್ಲು ಮಾಡಿದ. ಏರಿಯನ ಗರ್ಭಣ ಹಂಡತಿಗೆ ಮಗ ಹುಟ್ಟ ಬಾಲ್ಯದಲ್ಲಿ ‘ಸ್ಕೂಲಿಗೆ ಹೋಗುವ’ ಎಂದಿದ್ದು, ಶಾಲೆಯ ಹುಡಗರು ಚೆಂಡಿನ ಆಟವನ್ನು ಗೆದ್ದು ಹುಡುಗನಿಗೆ ‘ರಂಡೆಗೆ ಹುಟ್ಟಿದ ಪೋರ’ ಎಂದುದೂ, ಅಪ್ಪ ಇಲ್ಲದೆ ಹುಟ್ಟಿದವ ಎಂದುದೂ ಹಲವು ಕಥೆಗಳಲ್ಲಿ ಬರುವಂತಹದೇ. ಒಂದು ನೆನುಪು ಆಗಲು ಚಂಡಿಕೆಗೆ ಗಂಟು ಹಾಕಿದುದು, ಸ್ನಾನ ಮಾಡಿಸುವಾಗ ತಾಯಿ ಕೇಳುವದು, ಹುಡುಗನ ತಂದೆ ಮತ್ತು ಅವನ ತಮ್ಮಂದಿರೂ, ಚಿಕ್ಕತಾಯಿಯ (ಜಾಲಗುನ್ನಿ ಆದದ್ದು) ಶೋಧಕ್ಕೆ ಹೋದುದನ್ನು ಹೇಳಿದ್ದು ಸಂಕ್ಷಿಪ್ತವಾಗಿ ಸರಿಯಾಗಿ ಬಣ್ಣತವಾಗಿದೆ. ಮುಂದ ಶೋಧ ಪ್ರಯಾಣ ಮಾಡಿದ ಹುಡುಗ ಅಜ್ಜಬ್ಬಿಯ ಮನಗೆ ಹೋಗಿ ಉಳಿದು, ಮುಂದೆ ಅವ ದಂಡೆ ಕಟ್ಟಿ ಚಿಕ್ಕಿಗೆ ಚೀಟಿ ಬರೆದು ಕಳಿಸಿದ್ದು ಸಮರ್ಪಕವಾಗಿದೆ. ಮುಂದೆ ಜೋಗಿಯ ಪ್ರಾಣ ಏಳು ಸಮುದ್ರದಾಚೆಯ ಪಂಜರದ ಗಿಳಿಯಲ್ಲಿರುವದನ್ನು ತಿಳಿದು ಚಿಕ್ಕತಾಯಿ ಹೇಳುವಳು. ಹುಡುಗ ಹರಳಿನ ಸಹಾಯದಿಂದ ಸಮುದ್ರದಾಟಿ ಹೋಗಿ ನವಿಲನ್ನು ಮಂತ್ರಿಸಿದ ಹರಳು ಹೊಡೆದು ಮುದ್ದೆ ಮಾಡಿದ್ದು, ಕ್ರಮೇಣ ಕೈಕಾಲು ರುಂಡ ಮುರಿದು ಕೊಂದಾಗ ಜೋಗಿ ಸಾಯುವುದು… ಹಲವು ಕಥೆಗಳಲ್ಲಿ ಬರುವ ಆಶಯ ಭಾಗವಾಗಿರುತ್ತಿದ್ದು. ವಿವರ ಹೆಚ್ಚು ಬೆಳೆಸದೆಯೇ ಕಥೆ ಮುಂದುವರಿಸಿರುವದು ಇಲ್ಲಿದೆ. ಅಲ್ಲಲ್ಲಿ ನಿರೂಪಣೆಯ ಜಾಣ್ಮೆಕಾಣುತ್ತದೆ. ಹುಡುಗನು ತನಗೆ ಆಶ್ರಯ ನೀಡಿದ್ದ ಅಜ್ಜಿಗೆ ಜೋಗಿಯ ಸಂಪತ್ತನ್ನು ಕೊಟ್ಟು, ಚಿಕ್ಕಿಯೊಡನೆ ಹೊರಟು ಮಂತ್ರಿಸಿದ ಹರಳಿನಿಂದ ಎಲ್ಲರನ್ನೂ ಮನುಷ್ಯರನ್ನಾ ಗಿ ಮಾಡಿ ಮರಳುವದು ಒಳ್ಳೇ ಕಥಾ ಸರಣಿಯಲ್ಲಿದೆ. “ಮಗಳೂ ನಾನೇ ಮಗನೂ ನಾನೇ” ಕಥನ ಗೀತವು ಗ್ರೀಕ್‌ ರುದ್ರ ನಾಟಕಗಳ ವಸ್ತುವಿನ ನೆನಪು ಮಾಡುವ ದುಃಖಾಂತ ಗೀತಗಳಲ್ಲಿ ಒಂದಾಗಿದೆ. ಈ ಗೀತದ ನಡೆಯಲ್ಲಿ ಸವೇಗವಾದ, ಹಿತಮಿತವಾದ ಕಥನವಿದೆ. ಇಲ್ಲಿನ ತಂಗಿಯು- ಅಣ್ಣನು ಧರಿಸಿದ್ದ ಆಭರಣಗಳನ್ನು ತನ್ನ ಗಂಡನು ಮೈಮೇಲೆ ಧರಿಸುವಂತೆ ಮಾಡಲು ಕರೆಯಲು ಬಂದ ಅಣ್ಣನನ್ನು ಕತ್ತಿಯಿಂದ ಕೊಲ್ಲುತ್ತಾಳೆ. ಕೇವಲ ಎರಡು ಆಭರಣ. ಉಂಗುರ ಮತ್ತು ಬೆಳ್ಳಿಯ ನೇವಳದ ಸಲುವಾಗಿ ಕೊಲೆಯನ್ನು ಮಾಡುವುದು ವಾಸ್ತವಿಕವಾದ ನೆಲೆಯಲ್ಲಿ ಸಾಧ್ಯವಿದೆ. ಯುರಿಪಿಡೀಸನ ‘ಮೀಡಿಯಾ’ ರುದ್ರ ನಾಟಕದಲ್ಲಿ- ಮೀಡಿಯಾಳಿಗೆ ತನ್ನ ಗಂಡ ಬೇರೆ ಹೆಂಗಸನ್ನು ಮದುವೆಯಾಗಲಿರುವನೆಂಬ ಕ್ರೋಧದಲ್ಲಿ ಭಯಂಕರವಾದ ರೀತಿಯಲ್ಲಿ ಅವಳನ್ನ, ತನಗೆ ಗಂಡನ ಮೇಲೆ ಮತ್ತೆ ಸೇಡುತೀರಿಸಿಕೊಳ್ಳಲು ಮಕ್ಕಳನ್ನೂ ವಧಿಸುವುದಕ್ಕೆ ಒಂದು ರೀತಿಯಿಂದ ಪ್ರಬಲವಾದ ಕಾರಣವಿರುವಂತೆ, ಇಲ್ಲಿನ ತಂಗಿ ಅಣ್ಣನ ಕೊಲೆ ಮಾಡಲು ಬಲವತ್ತರವಾದ ಕಾರಣವಿರುವುದಿಲ್ಲ. ನನ್ನ ಗಂಡ ಬಡವ. ನೀನು ಧರಿಸಿರುವ ಆಭರಣಗಳನ್ನು ಕೊಡು, ಅವನು ಧರಿಸುವದನ್ನು ನಾನು ನೋಡಬೇಕು’ ಎಂದ್ದಿದ್ದರೆ, ಅಣ್ಣನು ತಾನಾಗಿಯೇ ಅವನ್ನು ಕೊಡಬಹುದಾಗಿತ್ತು. ಆದರೆ, ಆಸೆಯತಕ್ಕಯಲ್ಲಿ ಮುಂದಾಗುವವಳಗೆ ಇಂಥ ವಿವೀಕದಿಂದ ನಡಯುವುದು ಸಾಧ್ಯವಿರಲಲ್ಲ. ಹಗೆ ಈ ದುರಂತಕ್ಕೆ ಬಲವಾದ ಕಾರಣವಿಲ್ಲದಿದ್ದರೂ ಅನರ್ಥವು ನಡೆಯುವುದು. ಇಲ್ಲಿನ ತಂಗಿಯ ವಿಶಿಷ್ಟ ಪಾತ್ರದಲ್ಲಿ ಅವಳು ತನಗಾಗಿ ಈ ಆಭರಣಗಳನ್ನು ಬಯಸಲಿಲ್ಲ, ಗಂಡನ ಪ್ರೇಮ ಮತ್ತು ಬಹುಶಃ ಸುಂದರನಾಗಿದ್ದ ಅವನ ಆಕರ್ಷಣೆಗೆ ಆಭರಣಗಳು ಹೆಚ್ಚು ಸೊಬಗನ್ನು ನೀಡುತ್ತವೆ, ತನ್ನ ಗಂಡನ ಪ್ರಣಯದಲ್ಲಿ ಹೆಚ್ಚು ಸೊಗಸು ತನಗೆ ಲಭಿಸುವುದು ಎಂದು ಅವಳು ಭಾವಿಸಿದ್ದಳು ಎಂದು ಊಹಿಸಬಹುದು.

ಇಲ್ಲಿ ಮೂಲ ಗೀತದಲ್ಲಿ ಅವಳು ಸಾರಾಯಿ ಕುಡಿದು ಅದರ ಆಮಲಿನಿಂದ ಈ ಹೇಯ ಕೃತ್ಯವನ್ನು ಮಾಡಿದ್ದಳೆಂದು ಚಿತ್ರಣ ಇದ್ದಿರಬಹುದಾದರೂ ನಿರೂಪಣೆಯಲ್ಲಿ ಈ ಬಗ್ಗೆ ಯಾವುದೇ ಸೂಚನೆ ಕಾಣುವುದಿಲ್ಲ; ದುರಂತನಾಯಕಿಯೂ ಅವಳಾಗಲಿಲ್ಲ. ಆದರೆ, ಇಲ್ಲಿನ ದುಃಖದ, ದುರಂತದ ತೀವ್ರತೆಯು ಹೆಚ್ಚುವುದು ಅಣ್ಣ-ತಂಗಿಯರ ತಂದೆ- ತಾಯಿ ಇಬ್ಬರೂ ಕುರುಡಾಗಿದ್ದರೆಂದು ಪ್ರಾರಂಭವಾಗುವುದು. ಕೊನೆಯಲ್ಲೂ ಸಹ ಹೃದಯಸ್ಪರ್ಶಿಯಾಗುವಂತೆ ಮುಕ್ತಾಯವು ಬರುವುದಕ್ಕೆ ಸಹಾಯಕವಾಗಿ ನಿರೂಪಣೆಯು ಕಲೆಗಾರಿಕೆಗೆ ಮೇಲ್ಮೆಯನ್ನು ತರುತ್ತದೆ. ಗಂಡನಿಗೆ ತನ್ನ ಪ್ರೇಮವನ್ನು ತೋರಿಸುವಲ್ಲಿ ಅವಳ ಅನ್ಯಾಯದ ಫಲದ ಕುರಿತು ಅವಳ ಕುರುಡತನವನ್ನು ಕಥಾನಕವು ಸೂಚಿಸುತ್ತದೆ. ಅವಳ ಗಂಡನು ಭಾವನ ಮತ್ತು ಇಬ್ಬರ ಹೆಣ ಸುಡಲು ಗುಡಸಲಿಗೆ ಬೆಂಕಿ ಹಚ್ಚುವ ರೌದ್ರ ಸೇಡಿನ ಚಿತ್ರಣದಿಂದ ಕಥಾನಕಕ್ಕೆ ವಿಶೇಷ ಶಕಿ ಬರುತದೆ. ಮುಂದ ಅತ್ತಯ ಮನಗೆ ಹೋದಾಗ, ಅತ್ತಯು ತನ್ನ ಮಗ-ಮಗಳು ಬರಲಲ್ಲವಂದು ತಿಳಿಯದ ಸನ್ನಿವೇಶವು, ಅಳಿಯ ಅತ್ತೆ-ಮಾವಂದಿರಿಗೆ. ಹೇಳುವ ರೀತಿ ತುಂಬ ಕಲಾತ್ಮಕವಾಗಿದೆ. ‘ನನಗೆ ತಾಯಿಯಿಲ್ಲ. ನೀವೇ ನನ್ನ ತಾಯಿ-ತಂದೆ… ನಾನೇ ನಿಮ್ಮ ಮಗ-ಮಗಳು, ನಿಮಗೆ ಆಧಾರ ನಾನೇ ಎನ್ನುವ ನಾಟಕೀಯ ಮುಕ್ತಾಯವು ಒಳ್ಳೇ ಧಾರಾವಾಹಿಯಾಗುವ ಸಾಧ್ಯತೆಯನ್ನು ತೋರಿಸುತ್ತದೆ. ‘ನಿಮ್ಮ ಮಗ ನಾನೇ… ನಿಮ್ಮನ್ನು ಸಲುಹುವವ ನಾನೇ’ ಎಂದು ಅಳಿಯ ಹೇಳುವ ಹಾಗೂ ಅತ್ತೆ-ಮಾವ ಇವರ ಮಾತುಗಳು ಒಳ್ಳೇ ಸಮಂಜಸವಾದವುಗಳು. ಕುರುಡರಾದುದರಿಂದ “ನೀವು ಯಾರು?’ ಎಂದು ಅವರು ಅಳಿಯನನ್ನೇ ಕೇಳುತ್ತಾರೆ. ಇದು ತೀರ ವಿರಳ. ‘ತಾಯಿ-ತಂದೇ, ನಾನೇ ನಿಮ್ಮ ಮಗ’ ಎಂದನು ಅಳಿಯ. ಅಳಿಯ-ಮಗಳ ಮನೆ ತಿಂಗಳ ರಾಜ್ಯದಲ್ಲಿದೆ ಎಂಬುದು, ಅವರ ಮನೆ ದೂರದವಿತು ಎಂದು ಸೂಚಿಸುತದೆ. “ಘಾತಕ ಅಣ್ಣ” ಪ್ರನದ್ಧವಾದ ಒಂದು ಕಥಯ ಪಾಠಾಂತರವಾಗಿದ. ಆದರ, ಇಲ್ಲಿಯೂ ಪವಾಡದಿಂದ ಹಾವು ಕಚ್ಚಿ ಮಡಿದ ಅಣ್ಣನ ಜೀವವನ್ನು ಬದುಕಿಸುವುದಿದೆ. ಈ ಬದುಕಿಸಿದ್ದು ಬುದ್ಧಿವಂತ ಎತ್ತು. ಇದರಲ್ಲಿ ಹಲವು ವೈಶಿಷ್ಟಗಳುಂಟು. ಎತ್ತುಗಳ ಮೇಲೆ ಕೂತು ಸವಾರಿ ಮಾಡುವುದಿತ್ತು ಹಂದಿನ ಕಾಲದಲ್ಲ. ಬುದ್ದಿವಂತ ಎತ್ತು ಕುದುರೆ ಸಾಲೆಯಲ್ಲಿತ್ತು. ಅದನ್ನೇರಿಕೊಂಡು ಬೇಕಾದ ವೇಷಭೂಷಣ ತೊಟ್ಟು ತಂಗಿಯನ್ನು ಹಬ್ಬಕ್ಕೆ ಕರೆಯಲು ಹೋದ ಅಣ್ಣನನ್ನು ತಂಗಿಯು ಮಾತಾಡಿಸುವಲ್ಲಿ ಸಿದ್ಧವಾದ ಮಾತಿನ ಸರಣಿ ಕಾಣುತ್ತದೆ. ಮೆಟ್ಟಿ(ಕಟ್ಟಿದ) ಹೂ ದಂಡೆ ಮಾಡಿದ ತಂಗಿಯು- – ತೌರಮನೆಗೆ ಹೊರಡಲು ಬೇಕಾದ ರೇಶ್ಮೆ ಪಟ್ಟೆ ಉಟ್ಟು, ಬೇಕಾದ ಚಿನ್ನ ಧರಿಸಿ ಸಿದ್ಧಳಾದಳು. ತಂಗಿಯನ್ನು ಮುಂದೆ ಕುಳ್ಳಿಸಿಕೊಂಡ ಅಣ್ಣ ಅಡವಿಯ ದಾರಿಯನ್ನು ಹಿಡಿದ. ಅದು ಸಮೀಪದ ದಾರಿ ಎಂದು ಸಮಜಾಯಿಸಲು ನೋಡಿದನು. ತಂಗಿಯ ಆಭರಣಗಳ ಆಸೆಯಿಂದ ತಂಗಿಯನ್ನು ಕೊಲಲ್ಲು ಚೂರಿಯನ್ನು ತೆಗೆದ ಅಣ್ಣ ಅವಳ ಕೈಯನ್ನು, ಕಣ್ಣನ್ನು ಕಟ್ಟಿ ಕಲ್ಲನ್ನು ಮರಿಸಿದುದು ಯಾಕೆ? ಕಲ್ಲನ್ನೆತ್ತಿ ತಂಗಿಯನ್ನು ಕೊಲ್ಲಲು ಬಯಸಿದ್ದರೆ ಚೂರಿ ತೆಗೆದುದು ಯಾಕೆ? ಎಂದು ತಿಳಿಯಲಿಲ್ಲ. ಇಲ್ಲಿನ ‘ಹುಳ’ ಅಂದರೆ ನಾಗರಹಾವು, ಸರ್ಪ ಎನ್ನಲು ಹಳ್ಳಿಗರು ಬಳಸುವ ಶಬ್ದ. ಸರ್ಪ ಕಚ್ಚಿದ್ದನ್ನು ‘ಹುಳ ಮುಚ್ಚಿತು’ ಎನ್ನುವ ರೂಢಿ.

‘ಹುಳ ಮುಟ್ಟಿದ್ದಕ್ಕೆ ಮದ್ದು ಹೇಳು’ ಎಂದ ಅಣ್ಣನಿಗೆ ‘ಕಣ್ಣು, ಕೈ ಬಿಚ್ಚು’ ಎಂದು ತಂಗಿ ಹೇಳಿದರೂ ಅಣ್ಣನು ಅವಳ ಕಣ್ಣು, ಕೈ ಬಿಡಿಸಲಿಲ್ಲ. ಅವನ ದುಷ್ಟ ಆಸೆಯ ಕಾರಣ ಅವಳು ಅವನಿಗೆ ಮದ್ದನ್ನು ಹೇಳಲೇ ಇಲ್ಲ, ಬುದ್ಧಿವಂತ ಎತ್ತು ಅದೇ ಸ್ಥಿತಿಯಲ್ಲಿ ತಂಗಿಯನ್ನು ತ್‌ರಿಗೆ ಕರೆತಂದಿತು; ತಾಯಿಗೆ ಕಣ್ಣು-ಕೈ ಬಿಡಿಸಲು ಮಗಳು ಹೇಳಿದಳು. ತಾಯಿಯು ದುಃಖದಿಂದ ಹೊರಳಾಡಿದ್ದನ್ನು ನೋಡಿದ ಎತ್ತು ಓಡಿ ಹೋಗಿ ಮದ್ದನ್ನು ತಂದು ಅಣ್ಣನನ್ನು ಬದುಕಿಸಿತು. ಇಲ್ಲಿ ಇನ್ನೂ ವಿವರ ಬೇಕಾಗಿತ್ತು. ಮೂಲ ಗೀತದಲ್ಲಿ ಮುಂಗುಸಿ ಮತ್ತು ಹಾವಿನ ಹೋರಾಟದ ಬಣ್ಣನೆಯಿತ್ತು. ಏನೋ ಮುಂಗುಸಿಯು ಸರ್ಪದ ವಿಷ ಪರಿಹಾರದ ಬೇರನ್ನು ಕಿತ್ತುದನ್ನು ನೋಡಿ ಎತ್ತು ಅದನ್ನು ತಂದು ಅಣ್ಣನಿಗೆ ಬಾಯಿಗೆ ಹಾಕಿ ಬದುಕಿಸಿದ್ದರಬಹುದೇನೋ. ಹೀಗೆ ಒಂದು ನಿರೂಪಣಯ ಕೂರತ ಇದ್ದರೂ, ಸರಳವಾಗಿ ಸಂಭಾಷಣಯನ್ನು ತಂದು ಕಥನವನ್ನು ಮುಗಿಸಿದ ಜಾಣ್ಮೆ ಇಲ್ಲಿದೆ. ಗಂಡನಿಗೆ ತನ್ನ ಅಣ್ಣ ಮಾಡಿದ್ದ ದ್ರೋಹವನ್ನು ತಿಳಿಸಲಿಲ್ಲ ಅವಳು. ಉತ್ತರ ಕನ್ನಡದಲ್ಲಿ (ಬೇರಡ ಸಹಾ) ಕ್ಷಾತ್ರ ಪರಂಪರೆಯುಳ್ಳ ದೀವರ (ನಾಮಧಾರಿ ಎಂದು ಪ್ರಸಿದ್ಧಿ ಪಡೆದ), ಹಳೇ ವೈಕರ ಸೈನ್ಯ ಸಾಹಸದ ಇನ್ನೊಂದು ಕಥನಗೀತ- “ನನಗೇ ಕುದ್ರಿಗೇ ವಂದೇ ಸೊಡ್ಡೆ”. ‘ಸೊಡ್ಡೆ’– ಸುಡಲು ಒಯ್ಯುವ ಸ್ಥಳ ಸ್ಮಶಾನ. ‘ಇಲ್ಲನ ಹಾಲಪ್ಪ ದೊರಿಯ ಕತ ಲಾಯಕದ’ ಎಂದ ನಿರೂಪರ ಸೌ. ಮಾನ ರಾಮ ನಾಯ್ಕ, ನನಗೆ ಮೊದಲೇ ಹೇಳಿದ್ದ ಸ್ವಾರಸ್ಯವಾದ ಗೀತ ಇದು, ಸಂದೇಹವಿಲ್ಲ. ಹಾಲಪ್ಪ ದೊರೆ ದೀವರವನು ಎಂದು ಗೀತದಲ್ಲಿ ಉಲ್ಲೇಖ ಬಂದಿಲ್ಲ. ಹೀಗಿದ್ದರೂ ವೀರಪುತ್ರರನ್ನು ಪಡೆದಿದ್ದ ಹಾಲಪ್ಪ ದೀವರವನೇ ಇದ್ದಿರಬಹುದು. ಮೂವರು ಮಕ್ಕಳ ತಂದೆ ಹಾಲಪ್ಪ ದೊರೆ ಮಕ್ಕಳಿಗೆ ಕ್ಷಾತ್ರ ಪರಂಪರೆಯ ವಿದ್ಯೆ ಕಲಿಸಲು ತನ್ನ ಮುಪ್ಪಿನ ಕಾಲದಲ್ಲಿ ಶಾನಭಾಗರಿಗೆ ಅಪ್ಪಣೆ ಮಾಡಿದನು. ಶಾನಭಾಗರು ವದ್ಯ ಕಲಿಸಿದ ಮಲೆ, ಅಡವಿಗೆ ಕಳಿಸಿ ಗರಡಿ ಕಂಬ ತರಿಸಲು ಹೀಳದ ಮೇಲೆ ತಲೆ ಕೆಳಗೆ ಮಾಡಿ, ಕಾಲು ಮೇಲೆ ಮಾಡಿ ಗರಡಿ ಸಾಧಕ ಸಹ ಕಲಿಸಿದ ವಿವರವು ಲಕ್ಷಿಸತಕ್ಕದ್ದಾಗಿದೆ.

ದಂಡಿನ ಕರೆ ಬಂತು- ಮೂವರು ಯುದ್ಧಕ್ಕೆ ಹೊರಟು ಕುದುರೆಯೇರಿ ಹೋಗಿ, ಯುದ್ಧ ಮಾಡಿದ ಚಮತ್ಕಾರಿಕ ಬಣ್ಣನೆ ಸ್ವಾರಸ್ಯವಾಗಿದೆ. ಇಲ್ಲಿಯೂ ಹಾರುವರ ದಂಡನ್ನು ಹಾರಾಡಿ ಕಡಿದ ಉಲ್ಲೇಖವಿದೆ. ತುರುಕರ ದಂಡನ್ನು ತುದಿಕಾಲಲ್ಲಿ ಕಡಿದ, ಮೊಗಲರ ಮುಡುಗಿದ ದಂಡಾಳುಗಳ ಸೈನ್ಯವನ್ನು ನಾಶ ಮಾಡಿ ಕುದುರೆಯ ಮೇಲೆಯೇ ತಿರುಗಿದವನನ್ನು ಕಳ್ಳರು ಮುಂದೆ, ಹಿಂದೆ ನಿಂತು ಗುಂಡಿಕ್ಕಿ ಕೊಂದರು. ಮಹಾವೀರನು- ‘ಅಡಗಿ ತನ್ನನ್ನು ಹೇಡಿಗಳಂತೆ ಗುಂಡಿಕ್ಕಿ ಕೊಲ್ಲುವವರು ಹೆಂಗಸರಿಗಿಂತ ಕಡೆಯಾದರಿ’ ಎಂದು ಹೀಯಾಳಿಸಿ, ಕುದುರೆಯ ಕೊರಳಿಗೆ- ‘ತನಗೂ, ತನ್ನ ಕುದುರೆಗೂ ಒಂದೇ ಸುಡು ಜಾಗ’ ಎಂದು ಬರೆದದ್ದನ್ನು ಕಟ್ಟಿ ಮನೆಗೆ ಬಂದಾಗಲೂ, ‘ವಿಜಯದ ಆರತಿ ತನ್ನಿ’ ಎಂದು ಹೇಳಿದ ವೀರನು ಅಸಾಮಾನ್ಯ ಧೀರ ಸೈನಿಕನೇ. ಹಿತಮಿತವಾಗಿ, ಸರಳ ಸುಂದರವಾಗಿ ನಿರೂಪಿಸಿದ ಈ ವೀರಶ್ರೀ ಗಾಥೆಯು ಮೆಚ್ಚುವಂತಹದು. “ಅತ್ತ ನಾಗಮ್ಮಸೂಸ ಹೂನ್ನ ಮ್ಮ” ಕಥನ ಗೀತವು ಪ್ರಾರಂಭ ಭಾಗದಲ್ಲಿ ಉತ್ತಮವಾಗಿ ನಿರೂಪಿತವಾಗಿದೆ. ಮುಂದೆ ಶಂಕೆಯಿಂದ ಸತಿಯನ್ನು ಕೊಂದ ಪತಿ, ರಣಹದ್ದಿನ ವೇಷದಿಂದ ಅರಳಿಯ ಮರದ ಮೇಲೆ ಕೂತ ಎಂಬಲ್ಲಿಯವರೆಗೆ ಉತ್ತಮವೇ ಆಗಿದೆ. ಮುಂದೆ ಕೊಲ್ಲಿಸಲ್ಪಟ್ಟ ಹೊನ್ನಮ್ಮನು ಕೆರೆಯಲ್ಲಿ ಅರಳಿದ ಕಮಲವಾಗಿ ಯಾರ ಕೈಗೂ ಸಿಗದೆಯೇ ಕೊಂದ ಗಂಡನ ಕೈಗೆ ಹೂವು ಸಿಕ್ಕ ಬಣ್ಣನೆಯು ಹಲವು ಗೀತಗಳಲ್ಲಿಯೂ ಇರುವುದು. ಅಲ್ಲದೆ, ಈ ಅಸಹಜವಾದ ನಿರೂಪಣೆಯಿಂದ ಕಥನಗೀತದ ಮೇಲೆ ಕುಗ್ಗಿದೆ ಎಂದೇ ನನ್ನ ಅಭಿಪ್ರಾಯ. ನಾಗಮ್ಮನ ಮಗನು ದಂಡಿಗೆ ಹೋಗುವಾಗ, ‘ಸೂಸಯನ್ನು ನೀರಿಗಾಗಲಿ, ಬೆಂಕಿಗಾಗಲಿ ಹೊರಗೆ ಕಳಿಸಬೇಡ’ ಎಂದು ತಾಯಿಗೆ ಹೇಳಿ ಹೋಗಿದ್ದನು. ನಾಗಮ್ಮನು ಬಳೆಗಾರ ಬಂದಾಗ. ‘ಅವನಿಂದ ಬಳೆ ತೊಡಿಸಿಕೋ’ ಎಂದು ಅತ್ತೆ ಹೇಳಿದ ಮೇಲೆ ಹೊನ್ನಮ್ಮ ಬಳೆ ತೊಡಿಸಿಕೊಂಡಿದ್ದು- ಗಂಡನಿಗೆ ಅಲ್ಲಿ ಸ್ವಪ್ನದಿಂದ ತಿಳಿದುಬಂದಿದ್ದು… ಇದೆಲ್ಲ ಚೆನ್ನಾಗಿಯೇ ಬಂದಿದೆ. ಆದರೆ, ಇದರಲ್ಲಿ ಹೊನ್ನಮ್ಮ ಅತ್ತೆಯ ಮಾತನ್ನು ಪಾಲಿಸಿದಳು. ಅವಳ ತಪ್ಪೇನೂ ಇರಲಿಲ್ಲ ಎಂಬುದು ಗಂಡನಿಗೆ ತಿಳಿಯಲೇ ಇಲ್ಲ. ತಾಯಿ ಹೇಳಿದ ಮೇಲೆ ಮಡದಿ ಆರತಿ ತಂದುದು, ನೀರು ತಂದುದು ಸರಿಯಾದ ಬಣ್ಣನೆಯೇ ಆಗಿದೆ. ಸಂಶಯ ಪಿಶಾಚಿಯ ತೆಕ್ಕೆಯಲ್ಲಿದ್ದ ಗಂಡನಿಗೆ ತಿಳಿಯಲೇ ಇಲ್ಲ. ತಾಳ್ಮೆಯೇ ಬರಲಿಲ್ಲ. ಇದು ಸಹಜವಾದ ಮಾನುಷೀ ದೌರ್ಬಲ್ಯ. ಇದರಿಂದ ನಿರಪರಾಧಿಗೆ ಘೋರ ಶಿಕ್ಷೆ ಮಾಡಿದುದು ಸಹಜವಾಗಿಯೇ ರೂಪಿತವಾಗಿರುವುದು. ಆದರೂ ಹೊನ್ನಮ್ಮನು ಔದಾರ್ಯದಿಂದ ಗಂಡನನ್ನು ಕ್ಷಮಿಸಿದ ಬಣ್ಣನೆಯಲ್ಲಿ ಕಾವ್ಯನ್ಯಾಯವನ್ನು ಸರಿಯಾಗಿ ಪಾಲಿಸಲಿಲ್ಲವಂದೇ ತೋರುತ್ತದ. ಇಲ್ಲಿ ಸ್ತ್ರೀಯ ಪ್ರತಿಭಟನಯ ಅಂಶವೇ ಕಾಣುವುದಿಲ್ಲ. ಅದನ್ನು ತೋರಿಸಿದ್ದರೆ ಗೀತದ ಸತ್ವವು ಹಿರಿದಾಗಿರುತ್ತಿತ್ತು. ಬಂದ ಅವಳ ಏಳು ಜನ ಅಣ್ಣಂದಿರೂ ಭಾವನ ಘೋರ ಅಪರಾಧವನ್ನು ಮಾತಿನಿಂದಲಾದರೂ ಪ್ರತಿಭಟಿಸದಿದ್ದುದು ಗೀತ ನಿರೂಪಣೆಯಲ್ಲಿನ ಇನ್ನೂಂದು ದೋಷವಾಗಿದೆ. “ಕಂಚಮ್ಮ” ಕಥನಗೀತವು ಪ್ರಖ್ಯಾತಳಾದ, ಶ್ರೇಷ್ಠ ನಿರೂಪರಿ– ಬಳಯಮ್ಮ ಪುಟ್ಟು ನಾಯ್ಕ ಹೊಸಾಕುಳಿ ಇವರು ಹೇಳಿದ್ದು. ಕೆಂಚಮ್ಮನ ಹರಕೆ ‘ಮಗ ಹುಟ್ಟಿದರೆ ಗಾರಹೊಳೆಗೆ ತಾನು ಬಲಿಯಾಗುವೆ’ ಎಂಬುದು ನಮ್ಮ ಕನ್ನ ಡದ ವೀರ ರಮಣಿಯರ, ವೀರರ ಬಲಿದಾನದ ಗಾಥೆಗೆ ಇನ್ನೊಂದು ಜೋಡಣೆಯಾಗಿದೆ. ‘ಕೆಂಚು’ ಎಂದರೆ- ಮರದ ನಡುವಿನ ಗಟ್ಟಿಯಾದ ತಿರುಳು, ಅಂಧ ಮನಸ್ಸಿನ ದೃಢತೆಯ ಸಂಕೇವೂ ‘ಕೆಂಚಮ್ಮ’ ಎಂಬ ಹೆಸರಿನಲ್ಲಿದೆ. ವಾಸ್ತವಿಕ ನಲಯಲ್ಲಿ ಕಂಚಮ್ಮ ಹರಕಯನ್ನು ತೀರಿಸಲು ಹೂಳೆಯಲ್ಲಿ ಬಿದ್ದು ಮುಳುಗಿ ಬಲಿಯಾಗಿದ್ದಿರಬೇಕು, ನಮ್ಮ ಜನಪದರು ಇಂಥ ಕೆಚ್ಚಿನ ವೀರರಿಗೆ ವೀರರಮಣಿಯರಿಗೆ ದೇವತ್ತ ವನ್ನು ಕಲ್ಪಿಸಿ, ಪವಾಡ ರೂಪದಲ್ಲಿ ಅವರ ಕೊನೆಯನ್ನು ಬಣ್ಣಿಸುವ ಚಟವೇ ಹಲವು ಗೀತ-ಕಡೆಗಳಲಿ ಕಾಣುತದೆ. ಕಂಚಮ್ಮಣಿಗೆ ಗಂಡಾಗಲಿ, ಹಣ್ಣಾಗಲಿ ಹುಟ್ಟುವ ಬನಿರೇ ಆಗಿದ್ದಿರಲಿಲ್ಲ. ಅದನ್ನು ನಿರೂಪಕಿಯು– ‘ಮುಟ್ಟಳ ಕೆಂಚಮ್ಮ’ ಎಂಬ ಪ್ರಾರಂಭದ ನುಡಿಯಲ್ಲೇ ಸೂಚಿಸಿದ್ದಳು. ಮುಟ್ಟಾಗಿದ್ದವಳು ತಿಂಗಳು ತಿಂಗಳೂ ಮುಟ್ಟಾಗಿ ನಡೆಯುತ್ತಿದ್ದಳು. ಕೆಂಚಮ್ಮ ಅವಳು ಮುಟ್ಟಾಗಿ ಮೀಯಲು ಹರಿವ ನದಿಗೆ ಹೋಗಿ ಮುಳುಗಿ ಮಿಂದಳು. ಹೀಗೆ ಶುದ್ಧಳಾಗಿ ಕನ್ನೆಯರಿಗೆ ಕೈಮುಗಿದು. ಹರಕೆಯನ್ನು ಹೇಳಿಕೊಂಡಳು. ಇಲ್ಲಿ ಕನ್ನೆಯರು `ನದೀ ದೇವತೆಗಳು ನದಿಯಲ್ಲಿ ಮಧ್ಯಾಹ್ನ ದ ಬಿಸಿಲಿನಲ್ಲಿ ಹಾವಸೆಯು ನೀರಿನಲ್ಲಿ ಪ್ರತಿಫಲಿಸಿದಾಗ ನದೀ ದೇವತೆಗಳು ಮಿಂದರು’ ಎಂದು ಜನರು ನಂಬಿ ನುಡಿಯುತ್ತಾರೆ. ಅಂಥ ಏಳು ಮಂದಿ ಜಲದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ, ‘ಬಂಜೆ ಎಂಬುದನ್ನು ತಪ್ಪಿಸಲು ತನಗೆ ಸಂತತಿ ಕರುಣಿಸಿದರೆ ಗಾರ ಹೊಳೆಯಲ್ಲಿ ಬಿದ್ದು ಬಲಿಯಾಗುವೆ’ ಎಂದು ಹೇಳಿ ಹರಕೆಯನ್ನು ಹೊತ್ತಳು ಕೆಂಚಮ್ಮ. ಕಂಚಮ್ಮ ಮುಟ್ಟಾಗೊಂದು ಅಂಗಳಾ, ಮುಟಾಗಿರುವಲ್ಲ ಮುಟ್ಟಾಗದ ಒಂದು ತಿಂಗಳು… ಹೀಗೆಲ್ಲ ತಿದ್ದಿಕೊಳ್ಳಬೇಕು. ಯಾಕಂದರೆ, ಗರ್ಭಿಣಿಯಾದಾಗ ಮುಟ್ಟಾಗುವದೇ ಇಲ್ಲ. ಇಲ್ಲಿ ಬಸುರಿಯ ಬಯಕೆಯ, ಸೀಮಂತದ ಯಾವುದೇ ಬಣ್ಣನೆ ಮಾಡದೆ ಒಂಬತ್ತು ತಿಂಗಳಾಗಿ ಗಂಡು ಮಗುವನ್ನು ಹಡೆದಳು ಎಂದು ತಿಳಿಸಿದ್ದು ವಿಶೇಷ. ಚಿನ್ನದುಂಗುರದಿಂದ ಬಾಣಂತಿಯ ಬೆನ್ನು ತಿಕ್ಕಿದ್ದು, ಎಣ್ಣೆ ತಿಕ್ಕಿದ್ದರಿಂದ, ಸೀಗೆ ಹುಡಿಯಿಂದ ಮೀಯಿಸಿದ ಸಣ್ಣ ವಿವರ ಇಲ್ಲಿದೆ. ಕೆಂಚಮ್ಮನು ಹೊಳೆಗೆ ಬೀಳಲು ಹೊರಟಾಗ ಕತ್ರಿ ಹಿಡಿದವರು, ಕೋವಿ ಹಿಡಿದವರು ತಡೆಯಲು ಬಂದರು. ಆಕೆ ಲೆಕ್ಕಿಸದೆ ಹೊಳೆಗೆ ಮೀಯಲು ಹೋಗಿ ತಾಯಿ ಬಳಗಕ್ಕೂ, ತಂದಯ ಬಳಗಕ್ಕೂ, ಗಂಡನ ಬಳಗಕ್ಕೂ (ಮೂರು) ಓಲೆ ಬರೆದ ಕಂಚಮ್ಮ ಓದು-ಬರೆಹ ಬಲ್ಲವಳು. ತಂದೆಯು ತಾಯಿಯೊಡನೆ, ‘ಒಂದೇ ಮಗಳನ್ನು ಹೊಳೆಗೆ ಆಹುತಿ ಕೊಡುವ’ ಎಂದು ದುಃಖಿಸಿ ಹೇಳುವುದಿದೆ. ಗಂಡನು ಬಂದು ಕೂತಾಗಿನ ಸಂಭಾಷಣೆಯೂ ಚಿಕ್ಕದಾಗಿ ಬಂದಿದೆ. ‘ಕಂದಯ್ಯನ ಗೊಡವ ಇಲ್ಲ; ಹೂಗಳ ಗೂಡವ ಇಲ್ಲ; ತಂದಯ, ತಾಯಿಯ, ಅಣ್ಣನ, ತಮ್ಮನ ಯಾರ ಗೊಡವೆಯೂ ಇಲ್ಲ’ ಎಂಬ ಆಕೆಯ ನುಡಿಯು ಕೆಂಚಮ್ಮನ ದೃಢ ಮನಸ್ಸನ್ನು ಚೆನ್ನಾಗಿ ನಿರೂಪಿಸಿದೆ. ಕೆಂಚಮ್ಮನು, ‘ಗಂಡನಿಗೆ ತನ್ನ ತಂಗಿಯನ್ನು ಮದುವೆ ಮಾಡಿ ಕೊಡಿ’ ಎಂದು ಹೇಳಲು ಮರೆಯಲಿಲ್ಲ. ಹೊಳೆಗೆ ಬೀಳಲು ಬಂದಾಗ ಹಣ್ಣು, ಹೂಗಳ ರಾಶಿಯನ್ನೇ ಬಳಗದವರು ತಂದರು, ಹೊಳೆಗೆ ಪೂಜೆ ಸಲ್ಲಿಸಿದ ಕೆಂಚಮ್ಮ ಹೊಳೆಯಲ್ಲಿ ಹಾರಿದ್ದಿರಬೇಕು. ಆ ಸಾಲುಗಳು ಇಲ್ಲಿ ಹಾರಿಹೋಗಿವೆ. ಮಗನನ್ನು ಸಲಹಕೂಳ್ಳಲು ತಂಗಿಯನ್ನು ಗಂಡಣಿಗೆ ಮದುವ. ಮಾಡಿಸಲು ಹಳ ಹೊಳೆಯಲ್ಲಿ ಬೀಳುವಷ್ಟರಲ್ಲಿ, ‘ದೇವಲೋಕದಿಂದ ದಂಡಿಗೆ (ಪಲ್ಲಕ್ಕಿ) ಬಂದು, ಕೆಂಚಮ್ಮ ಅದರಲ್ಲಿ ಕೂತುಕೊಂಡು ಸ್ವರ್ಗಕ್ಕೆ ಹೋದಳು’ ಎಂದು, ನದಿಗೆ ಹಾರಿ ಪ್ರಾಣದ ಆಹುತಿ ನೀಡಿದ್ದ ಕೆಂಚಮ್ಮನಿಗೆ ಸೌ.ಕುಮಾರ್ಯದಿಂದ ದೇವಲೋಕಕ್ಕೆ ಸೇರಿಸಲು ನಾಟಕೀಯವಾಗಿ ಪಲ್ಲಕ್ಕೆಯನ್ನು ಕಳಿಸಿದ ಬಣ್ಣನೆಯಿದೆ. ಕನ್ನ ಡದ ವೀರರು ಕಟ್ಟಾಯದ ಭಾಷೆಯನ್ನು ಸಲ್ಲಿಸಲು ವೀರಮರಣವನ್ನು ಪಡೆದುದರ ಒಂದು ಉದಾಹರಣೆಯಿಂದ ಈ ಬಲಿದಾನದ ವೈಶಿಷ್ಟ್ಯವನ್ನು ತಿಳಿಸಲಾಗಿದೆ. ಒಂದೆರಡು ಲೋಪದೋಷಗಳಿದ್ದರೂ ಈ ಕಥನ ಗೀತ ಉತ್ತಮ ರೀತಿಯಲ್ಲಿ ನಿರೂಪಿತವಾಗಿದೆ. “ಅತ್ತ ಗೌರಮ್ಮ ಸೂಸ ಹೂನ್ನ ಮ್ಮ” ಕಥನ ಗೀತವು ಅರ್ಧ ಭಾಗದಲ್ಲ ಶ್ರೇಷ್ಠತಯನ್ನು ಮೆರೆದುದು ಮುಂದೆ ನಿರೂಪಕಿಯು ಸುಖಾಂತವಾಗಿ ಮುಗಿಸುವ ಚಾಪಲ್ಯದಿಂದಾಗಿ ಗಂಡನಿಂದ ಕೊಲ್ಲಲ್ಪಟ್ಟ, ಅಣ್ಣಂದಿರಿಂದ ಸುಡಲ್ಪಟ್ಟ ವಳನ್ನು ತಾವರೆ ಹೂ ಮಾಡಿ ಗೀತದ ಏರಿಮೆಯೇ ಕುಗ್ಗುವಂತೆ ಆಗಿದೆ. ಇಲ್ಲಿಯೂ ಸಹ ಅರಸು, ದಂಡಿಗೆ ಹೋಗಲು ಹೊರಟು – ಸೊಸೆಯನ್ನು ನೀರಿಗೆ ಕಳಿಸಬೇಡ, ಬೆಂಕಿಗೆ ಕಳಿಸಬೇಡ’ ಎಂದು ಹೇಳಿಹೋದ. ಇಲ್ಲಿ ಮದುವಯಾದರೂ ಹಂಡತಿಯನ್ನು ಮನೆಯಲ್ಲಿ ಇ೦ನಿ, ಯುದ್ಧ ಮಾಡಲು ಹೂರಟ ಗಂಡನು ಸುಂದರಿಯಾದ ತನ್ನ ಹೆಂಡತಿಯು ಮನೆಯ ಹೊರಗೆ ಹೋದರೆ, ಹೊಸಲು ದಾಟಿದರೆ, ಕಾಮುಕ ಗಂಡಸರ ದೃಷ್ಟಿಗೆ ಬಿದ್ದು, ಶೀಲಭ್ರಷ್ಟಳಾಗಬಹುದು ಎಂಬ ಸಂದೇಹ ಪಡುವಂಥವನು ಮತ್ತು ತನ್ನ ಅಪ್ಪಣೆ ಮೀರಿ ನೀರಿಗೆ ಅವಳು ಹೋದಾಗ ಕ್ರೂರತನದಿಂದ ಅವಳನ್ನು ಬೇರೆ ಯಾವ ತಪ್ಪು ಕಾಣದಿದ್ದರೂ ಕೊಲ್ಲುವಂಥ ನರಾಧಮನಾಗಿದ್ದಾನೆ. ಆತ ದಂಡಿಗೆ ಹೋಗುವೆ’ ಎಂದುದು ತನ್ನ ಹೆಂಡತಿಯ ನಿಷ್ಠೆಯನ್ನು ಪರೀಕ್ಷಿಸುವ ಸಲುವಾಗಿ ಮಾತ್ರ ಎಂದು ಈ ಗೀತದಲ್ಲಿ ತೋರುತ್ತದೆ. ಅವನು ಸುಂದರನಾಗಿ ನಿರಿವಂತನಾಗಿದ್ದ ಎಂಬುದು ಆತನ ಹಂಡತಿ ಬೆಳ್ಳಿಯ ಕೂಡ. ಚಿನ್ನ ದ ಕೊಡ ತಕ್ಕೊಂಡು ನೀರಿಗೆ ಹೋದಳೆಂಬುದರಿಂದ ಸೂಚಿತವಾಗಿದೆ. ಗಂಡನು ಆಗ ಕರಗೆ ಬಂದಿದ್ದನ್ನು ಆಳದ ಹೂನ್ನಮ್ಮ ಅವನ ಕ್ರೂರ ಶಿಕ್ಷಗೆ ಹದರಿದ್ದು, ಮುತ್ತಿನ ಕಣ್ಣೀರನ್ನು ಬಿಟ್ಟಳು ಎಂಬುದರಿಂದ ಸೂಚಿತವಾಗಿದೆ. ತಿರುಗಿ ಬಂದವಳು ಕುದುರೆಗೆ ಆರತಿಯನ್ನು ತಂದರೂ ಅವನ ಕ್ರೋಧ ಇಳಿಯಲಿಲ್ಲ. ‘ನಿನ್ನ ಸೊಸೆಯನ್ನು ತೌರಮನೆಗೆ ಕರೆದುಕೊಂಡು ಹೋಗುವೆ’ ಎಂದು ಸುಳ್ಳನ್ನು ಹೇಳಿ ಅಡವಿಗೆ ಒಯ್ದು, ಅವಳ ಶಿರಚ್ಛೇದ ಮಾಡಿದನು. ದಾರಿ ತಪ್ಪಿತು ಎಂದ ಹೆಂಡತಿಗೆ ಸಬೂದು ಹೇಳಿ ಮೋಸ ಮಾಡಿದನು. ಇತ್ತ ಅವಳ ತಾಯಿಗೆ ಸ್ವಪ್ನ ಬದ್ದು ಮಗಳನ್ನು ಅಳಿಯ ಮೋಸದಿಂದ ಕೂಂದನಂಬುದು ತಿಳಿಯಿತೆಂಬುದು ಉತ್ತಮವಾದ ಜೋಡಣೆ. ಮಕ್ಕಳಿಗೆ ತಿಳಿಸಿ ಅವರು ಹೊರಟು ಬಂದರು. ನಿಜವಾಗಿ ಈ ಗೀತ ಅಸಾಧಾರಣವಾಗಿ ಏರಿಮಯನ್ನು ಪಡದ ಸಂದರ್ಭವು ಯಾವುದೆಂದರೆ, ಹೆಂಡತಿಯನ್ನು ಕೊಂದು ಬಂದ ಮಗನನ್ನು ಕೊಲ್ಲಲು ತಾಯಿಯು ಖಡ್ಗವನ್ನು ಹಿಡಿದು ಹೊಸ್ತಿಲಲ್ಲಿ ಕೂತು ಕೊಂಡಿದ್ದುದು. ಮಗನು ಮಾಡಿದ ಅನ್ಯಾಯವನ್ನು ತಾಯಿಯು ಪ್ರತಿಭಟಿಸಿ ಮಗನ ಮೇಲಿನ ಮಮತೆಯನ್ನು ಬಿಟ್ಟಿದ್ದು ಅದ್ಭುತವಾದ ಕಲ್ಪನೆಯಾಗಿದೆ; ಕನ್ನಡಿತಿಯರ ಕೆಚ್ಚು ಇದರಿಂದ ತಿಳಿದು ಬರುವಂತಿದೆ. ಅದರೆ, ತಾಯಿ ಮಗನನ್ನು ಕೂಲ್ಲುವುದನ್ನು ತಬ್ದಿಸಲು ಗೀತರಚನಯನ್ನು ಮಾಡಿದವಳೋ, ಮುಂದೆ ಅದನ್ನು ಹೇಳಿದ ಹೆಂಗಸೋ ಅಣ್ಣಂದಿರೆ ಅಡವಿಯಲ್ಲಿ ಹೋಗಿ ಅವಳ ಹೆಣವನ್ನು ಸುಟ್ಟು ಬೂದಿ ಮಾಡಿದುದನ್ನು ತಿಳಿಸಿಯೂ ಕೃತ್ರಿಮವಾಗಿ ಸುಖಾಂತವಾಗಿ ಮಾಡಿದುದು ಇದರ ಹಿಡಿಮೆಗೆ ಕುಂದು ಅಗಿದೆ. ಸರಳವಾಗಿ ಹೇಳದ ಈ ಗೀತವು ಈ ಅನ್‌ಚತ್ಯವನ್ನು ಯೀರಿಯೂ ಉತ್ತಮವಾಗಿದೆ. ಪ್ರಖ್ಯಾತ ಜರ್ಮನ ಮನೋವಿಜ್ಞಾನಿ ಕಾರ್ಲೆಯರಿಗೆ ಅವರು ಪ್ರತಿಪಾದಿಸಿದ್ದ “ಟೆರ್ರಿಬಲ್‌ ಮದರ್‌’- ಭಯಂಕರ ತಾಯಿ ಎಂಬುದನ್ನು ನೆನಪಿಗೆ ತರುತ್ತಾಳೆ ಇಲ್ಲಿನ ವೀರಮಾತೆ. “ಕೋಳಿ ಜನ್ಮ” ಗೀತದ ಕಥೆಯು ತಕ್ಕಮಟ್ಟಿಗೆ ಜನವ್ರಿಯವಾಗಿದ. ‘ಗೇಣುಗಡ್ಡದ ಕುಳ್ಳ’ ಕಥೆಯಲ್ಲಿ ಗಡ್ಡದ ಕುಳ್ಳನು ರಾಜನ ಮಗಳ ಲಗ್ನ ವಾಗಲು ಬರುವಾಗ ಬೇರೆ ಬೇರೆ ಪ್ರಾಣಿಗಳನ್ನು ತನ್ನ ಕಿವಿಯಲ್ಲಿ ಅಡಗಿಸಿಕೊಂಡು ಬಂದುದರ ಆಶಯಗಳ ನೆನಪು ಈ ಗೀತ ಕಥೆಯಲ್ಲಿ ಆಗುತ್ತದೆ. ಅಲ್ಲದ, ಗೊಂಡರ ಪದದಲ್ಲಿ ಮತ್ತು ಬೇರೆ ಕಥೆಯಲ್ಲೂ ಕೋಳಿಯು ರಾಜನ ಮಗಳನ್ನು ಮದುವೆಯಾಗಲು ಹೋದುದಿದೆ. ಅಲ್ಲಿ ಕುಳ್ಳ ಜಕ್ಕ ರೂಪದ ಮನುಷ್ಯ. ಉಳದ ಪಾಠಗಳ ಕೋಳಿಯು ದೇವತಾಶಕ್ತಿಯುಳ್ಳದಾಗಿ ಕಾಣಲು ಕೋಳಿಯಾಗಿದ್ದರೂ ಮುಂದೆ ರೂಪಪರಾವರ್ತನದಿಂದ ಮನುಷ್ಯ ರೂಪ ಪಡೆಯುವುದು. ಇಲ್ಲಿನ ಕೋಳಯನ್ನು ಬಹಳ ಮಹತ್ವಾಕಾಂಕ್ಷಯುಳ್ಳ ಮನುಷ್ಯನ ಪ್ರತಣಧಿ ಎನ್ನಬಹುದು. ಅವನಿಗೆ ಮಾಟಗಾರಿಕೆಯ ಶಕ್ತಿ ಇರುತ್ತದೆ. ನಮ್ಮ ‘ಕೋಳಿ ಜನ್ಮ’ ಗೀತದ ಕೋಳಿಗೆ ಚಿನ್ನದ ವರುಣ(ವರ್ಣ) ಅಂದರೆ ಇದು ಸಾಮಾನ್ಯ ಕೋಳಿಯಲ್ಲ ಮತ್ತು ಮಾತಾಡುವ ಶಕ್ತಿಯುಳ್ಳ ಮನುಷ್ಯನ ಪ್ರತಿನಿಧಿ. ಆದರೆ, ಇಲ್ಲಿ ನಿರೂಪಕಳು ಮನುಷ್ಯ ರೂಪವನ್ನು ಕೋಳಿಯು ಮದುವೆಯಾದಾಗ ಪಡೆದುದನ್ನು ತಿಳಿಸದಿರುವುದು ದೊಡ್ಡ ಲೋಪವಾಗಿದೆ. ನಾಲ್ಕಾಣೆಗೆ ಕೋಳಿಯನ್ನು ಅಜ್ಜಿಯು ಕೊಂಡಿದ್ದಳು. ಆಗಿನ ಸೋಯಿ ಕಾಲದ ದರ ಇದು. ಈ ಕಾಲದಲ್ಲಿ ಕಡಿಮೆಯೆಂದರೆ ಎಪ್ಪತ್ತೈದು ರೂಪಾಯಿ ಕೋಳಿಯ ಬೆಟೆ. ಮಾಟದ ಶಂಯಿಂದ ದೂಡ್ಡ ಭಯಂಕರ ಪ್ರಾಣಗಳನ್ನು ಚಕ್ಕದಾಗಿ ಮಾಡಿ, ರವಿಯಲ್ಲಟ್ಟು ರಾಜನ ಮನೆಗೆ ಹೋಗಿ ಮಗಳನ್ನು ಮದುವೆಯಾಗುವ ಎಂದಂತೆ ಮದುವೆಯಾಯಿತು. ಆದರೆ, ಆದ ಮೇಲೆ ಮನುಷ್ಯ ರೂಪ ಅದಕ್ಕೆ ಬರಲಿಲ್ಲ, ಅದನ್ನು ಇಲ್ಲಿ ತಿಳಿಸಲಿಲ್ಲ. ಮಕ್ಕಳ ಮನರಂಜನೆಗೆ ಈ ಗೀತ ಕಥೆ ಯೋಗ್ಯವಾಗಿದೆ.

‘ಕಾಸೀ ದೇಸಾಂತ್ರೇ ನೆಡುದಾನೇ’ ಚಿಕ್ಕ ಗೀತದಲ್ಲಿ ಪ್ರಸಿದ್ಧವಾದ, “ತಿಮ್ಮಕ್ಕನ ಪದಗಳು” ಗ್ರಂಥದಲ್ಲಿರುವ ‘ಮಾರಕ್ಕ ದೇವಿಯ ಮದುವೆ’ ಎಂಬ ಕಥನ ಗೀತದ ಹೋದಿಕೆಯಿದೆ. ಅಮ್ಮಕ್ಕ ಹೇಳಿದ ಹಾಡಿನಲ್ಲನ ‘ಮಂಡಲಗೊಂಡಿತ್ತೀ ಗುರುಗುಂಜೀ’ ಎಂಬ ಧ್ವನಿರಮ್ಯವಾದ ಸಾಲಿನ ಮಹತ್ವವು ‘ಸಂಗಡ ಗುಲಗಂಜೀ ಬಲ ಬಂದು’ ಎಂಬ ಸಾಲಿನಲ್ಲಿ ಇಲ್ಲ. ಅಲ್ಲಿನ ಗುರುಗುಂಜಿಯು ಮಾರಕ್ಕನು ಖುತುಮತಿಯಾಗಿದ್ದುದನ್ನು ಸೂಚಿಸುತ್ತದೆ. ಇಲ್ಲಿನ ಗುಲಗಂಜಿ ಶಬ್ದಕ್ಕೆ- ‘ಬಲಬಂದು’ ಎಂಬ ಶಬ್ದ ಜೋಡಣೆಯಾಗಿ ಅರ್ಥವು ದುರ್ಬಲವಾಗಿದೆ. ಅಲ್ಲಿನ ಮಂಡಲಗೊಂಡ ಗುರುಗುಂಜಿಯ ಬಣ್ಣವು ಖುತುಮತಿಯ ಯೋನಿ ಸೂಚಕವಾಗಿರುತದೆ. ಇಲ್ಲಿ ಅಣ್ಣನು. ಸೋದರಭಾವನಿಗೆ ತಂಗಿಯನ್ನು ಲಗ್ನ ಮಾಡಿಕೂಡಲು ಮನಸ್ಸಿದ್ದವನಾದರೂ, ‘ಹನ್ನೆ ರಡು ವರ್ಷದ ತಲದಂಡಿನ ಕಾಳಗಕ್ಕೆ ಹೋಗಿ ಬಂದು ಧಾರೆ ಎರೆಯುವೆ’ ಎಂದುದು ವ್ಯಾವಹಾರಿಕ ವಿಚಾರವಲ್ಲ. ತಂಗಿಗೆ ಹೇಳುವ, ‘ಗೆಂಟ ಕಟ್ಟ ಲು ಬೇಡಾ’ ಎಂಬುದು ಕರುಗಣಿ ಉಡುವ ಹುಡುಗೆಯು ತರುಣಿಯಾಗಿ ಸೆರಗಿನ ಗಂಟನ್ನು ಎದೆ ಮೇಲೆ ಕಟ್ಟುವ ಹಾಲಕ್ಕಿ ಹೆಂಗಸರ ರೂಢಿಯನ್ನು ನೆನಪಿಗೆ ತರುತದೆ. ಅಣ್ಣ ಐದು ಖಂಡುಗ ಬೀಜ ಬಿತ್ತುವಷ್ಟು ವಿಸ್ತಾರವಾದ ಗದ್ದಿಗಳ ಒಡಯ, ನಿರಿವಂತ. ಅದರಿಂದಲೇ ಮನೆಯು ಕಲ್ಲು ಕದ, ಕಲ್ಲು ಮಾಳಿಗೆಯುಳ್ಳದ್ದಾಗಿರಲು ಸಾಧ್ಯವಾದುದು. ಇಲ್ಲಿನ ಸಲುಜಾಣನ ಹಂಚಕಯೂ ಹೂಸದಲ್ಲ, ಅತ್ತಿಗೆಯ ಮೇಲೆ ಮೋಹ ಮಾಡಿ ಬಂದ ಮೈದುನನೂ ಆಕೆ ಕದ ತೆಗೆಯದಿದ್ದಾಗ, ಅವಳು ಹೊರಗೆ ಬರುವಂತೆ ಮಾಡಲು ಕೊಟ್ಟಿಗೆಯ ದನಗಳನ್ನು ಬಿಡುವುದಿದೆ. ತಿಮ್ಮಕ್ಕನ ಪದದಲ್ಲೂ ಇದೇ ಹಂಚಿಕೆಯಿದೆ. ಇಲ್ಲಿ ಬಣ್ಣ ಹಚ್ಚದ ಡಾಬನ್ನು ಹಡಿದುಕೂಂಡು ಹುಡುಗಿ ಮಾಲಕ್ಷ್ಮ ಕಲ್ಲು ಮಾಳಗ ಇಳಿದು ಬಂದುದರಲ್ಲಿ ಸ್ವಲ್ಪ ಮಾತ್ರ ವೈಶಿಷ್ಟ್ಯವಿದೆ. ಪ್ರಾಯದ ಮದವತಿ ಮಾಲಕ್ಷ್ಮಿಯು ಸುಲಭವಾಗಿ ಸೋದರ ಭಾವನಿಗೆ ಈಲಾಗುತ್ತಾಳೆ. ಅವಳು ತನ್ನ ನ್ನು ಒಲಿದವಳು ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ಸಲುಜಾಣನು ಅತ್ತಿಯ ಮಗನಲ್ಲ ಯಂತಾಗಿ ಹೇಳಿದುದು, ಅವನು ಜಾಣ ಎಂಬುದನ್ನು ಸೂಚಿಸುತ್ತದೆ. ಪಗಡೆಯಾಡುವದು ಇಲ್ಲಿ ಇಲ್ಲ. ಇಬ್ಬರೂ ಸಹಭೋಜನ ಮಾಡಿದ್ದಷ್ಟರಲ್ಲಿ ಅಣ್ಣನು ಹಿಂತಿರುಗಿ ಬಂದುದಿದೆ. ಪಗಡೆಯಾಟ ಮೂಲಗೀತದಲ್ಲಿದ್ದಿರಬೇಕು. ಅಣ್ಣನಿಗೆ ಸ್ವಪ್ನ ಬಿದ್ದು ಬರುವ ಪ್ರಸಂಗ ಇಲ್ಲಿಲ್ಲ. ಮಾಲಕ್ಷ್ಮಗೆ ಪ್ರಾಯ ಬಂದುದು ಅಣ್ಣನಿಗೆ ಅಳದಿದ್ದಿರಲಿಲ್ಲ ಎಂದು ಅಳವಂತಿದ. ಅವಳು ಕಿರುಗಣಿ ಉಡುತ್ತಿದ್ದಳು. ಕಿರುಗಣಿ ಉಡುವಾಗ ಬರೇ ಸೊಂಟದವರೆಗೆ ಸೀರೆ ಸುತ್ತಿ, ರವಕೆ ಹಾಕಿಕೊಳ್ಳುವ ಪದ್ಧತಿ ಹಿಂದೆ ಇತ್ತು. ಇತ್ತೀಚೆಗೆ ಕಿರುಗಣಿ ಉಡುವುದನ್ನು ಬಿಟ್ಟು ಹುಡುಗಿಯರು ಅಂಗಿಯನ್ನಾಗಲಿ, ಸ್ಮರ್ಟ ಆಗಲಿ ಧರಿಸುವುದು ರೂಢವಾಗಿದೆ. ಅದರೆ, ಈ ಗೀತದ ರಚನೆಯ ಕಾಲವು ಹಳೇ ಕಾಲ. ಅದರಿಂದ ಕಿರುಗಣಿಯನ್ನು ಉಟ್ಟ ತಂಗಿಯ ಪ್ರಾಯ ಬಂದು, ಮೊಲೆ ಮೂಡಿಬಂದುದು ಅಣ್ಣನಿಗೆ ತಿಳಿಯದೆಯೇ ‘ತಂಗಿ ಇನ್ನೂ ಚಿಕ್ಕವಳು’ ಎಂದು ‘ತಾನು ಯುದ್ಧಕ್ಕೆ ಹೋಗಿ ಬರುವೆ’ ಎಂದು ಹೇಳಿ ಯುದ್ಧಕ್ಕೆ ಹೋಗಲು ಹೊರಟವನು ದನಗಳ ಗುಂಪನ್ನು ಹೊರಗೆ ದಬ್ಬಿದ್ದನ್ನು ನೋಡಿ ಮರಳಿ ಮನೆಗೆ ಬಂದನು. ಆಗ ತಂಗಿಯು ಭಾವನೂಡನ ಊಟ ಮಾಡಿ, ಚಂದವಾಗಿ ಉಳದಿದ್ದರಿಂದ ‘ಪ್ರಾಯ ಬಂದಿದೆ ಅವಳಿಗೆ’ ಎಂದು ತಿಳಿದ ಅಣ್ಣನು ತಾನೇ ಭಾವನೊಡನೆ ಜತೆಯಾಗಿದ್ದುದನ್ನು ನೋಡಿ, “ಇನ್ನು ಮದುವೆ. ಮಾಡಿಕೊಳ್ಳಿ’ ಎಂದು ಹೇಳಿ ದೇಶಾಂತರಕ್ಕೆ ಹೋದನು ಎಂಬಲ್ಲಿಗೆ ಮುಕ್ತಾಯವಾಗಿದೆ. ಕಲವು ಬವರಗಳ ಕೂರತಯದ್ದ ಈ ಪಾಠದಲ್ಲ ವೃಶಿಷ್ಟ್ಯಗಳು ಇರುವುದ೦ಂದ ಇದಕ್ಕೆ ತಕ್ಕಮಟ್ಟಿಗಿನ ಗುಣ ಬಂದಿರುತ್ತದೆ. ಇಲ್ಲಿ ತನ್ನ ತಂಗಿಯನ್ನು ಬೇರೆ ಕಡೆಗೆ ಮದುವೆ ಮಾಡಿ ಕಳಿಸಲಾರದ ಅಣ್ಣನ ಪ್ರೇಮದ ಚಿತ್ರಣವಿದೆ. ಅದು ಸೋದರ ಭಾವನೊಡನೆ ಅವಳು ಮದುವೆಯಾದರೂ ಡವರಮನೆಗೆ ಎರದಾಗುವಳು ಎಂಬ ಬೇಸರ ಅಣನಿಗಿತು. ಸುಪ್ರಸಿದ್ಧವಾದ “ಕಾಳಂಗರಾಯ” ಕಥನಗೀತದ ಪ್ರಭಾವವು ಕರ್ನಾಟಕದಲ್ಲಲ್ಲಾ ಪಸರಿಸಿದ್ದಿತು. ಬಿವರವಾಗಿ ನಾಟಕೀಯವಾಗಿ ನಿಬಿಡವಾದ ಕಾವ್ಯ ಗುಣದಿಂದ ಕೂಡಿ ಕರಾಕ್ರ ಸಂಪಾದಿತ- ‘ಕಾಳಿಂಗರಾಯ’ ಕಥನಗೀತವು ಪ್ರನದ್ಧವಾಗಿದೆ. ಡಾ ಎಂ. ಎಸ್‌. ಸುಂಕಾಪುರರು ಸಂಪಾದಿನಿದ ಗ್ರಂಥದಲ್ಲಿ ಚನ್ನಮ್ಮನ ದಂಡಿ’ ಎಂಬ ಹೆಸರಿನಿಂದ ಈ ಕಥನಗೀತವು ಪ್ರಸಿದ್ಧವಾಗಿದೆ. ನನ್ನ ಸಂಗ್ರಹದ “ಕಾಳಂಗರಾಯ” ಅತಿಶಯ ಸಂಂ.ಪ್ರವಾಗಿ, ಸರಳವಾಗಿ ಕಥನವನ್ನು ನಿರೂಪಿಸಿ ಲಗುಬಗನೆ ಮುಗಿದುಹೋಗಿದೆ. ಇಲ್ಲಿನ ಕತ್ತಲರಾಯ ಹೇಗಿದ್ದ ಎಂಬುದನ್ನು ‘ಚಿತ್ರೊಳ್ಳಾ ಬಿನುಮಣ್ಣಾ’ ಎಂದು ಸೂಚಿಸಲಾಗಿದೆ. ಚಿತ್ರದಲ್ಲಿ ಬರುವಂತೆ ಬಿನುಮ ಚಂದವಾಗಿದ್ದನಂತೆ. ಮುಪ್ಪಿನ ಕಾಲದಲ್ಲಿ ಸಂತತಿಗಾಗಿ ಬೇಡಲು ಸೂಲಿಸಕರ (ಸೂರ್ಯಚಕ್ರ) ಸೂರ್ಯದೇವನ ಬಳಿಗೆ ಹೋದನೆಂಬಲ್ಲಿ ಒಂದು ವೈಶಿಷ್ಟ್ಯವಿದೆ. ಸೂರ್ಯ ಕಣ್ಣಿಗೆ ಕಾಣುವ ದೇವರು, ಅವನ ಬಳಿ ಆಸೆಯನ್ನು ತಿಳಿಸಿದಾಗ- ಮಾವಿನ ಹಣ್ಣನ್ನು ದೇವರು ಕೊಟ್ಟು, “ಮಡದಿ ಮಾಲಕ್ಷ್ಮಿಗೆ ಕೊಡು’ ಎಂದು ಹೇಳಿದನು. ಒಂದು ಅವಳು ಅದನ್ನು ತಿನ್ನ ಬೇಕೆಂದು ಕೊಡುವಾಗ ಹೇಳಿದುದು, ಅವಳು ಅದನ್ನು ಕಚ್ಚಿಯೋ, ಕೊಯ್ದೋ ತಿಂದುದು ಇದ್ದ ಸಾಲುಗಳನ್ನು ಹೇಳಲಿಲ್ಲ. ಮುಂದ ಗರ್ಭಿಣಿಯಾಗಿ ಒಂದೂಂದು ಅಂಗಳಲ್ಲೂ ಒಂಬತ್ತು ತಿಂಗಳಲ್ಲಿ ಹಡದುದು ಮಾತ್ರ, ಅವಳಿಗುಂಟಾದ ಬಯಕೆಗಳನ್ನು ಸ್ವಲ್ಪ ವಿವರವಾಗಿ ತಿಳಿಸಿದ್ದು, ನಮ್ಮ ಹೆಂಗಳೆಯರು ಪೂರೈಸಿದರೆಂಬುದು ಇಲ್ಲಿ ಉಕ್ತವಾಗಿಲ್ಲ; ಇಲ್ಲಿ ಸೂಲಗಿತ್ತಿ ಬಂದುದನ್ನು ಹೇಳಲಿಲ್ಲ. ಪುತ್ರ ಜನಿಸಿದ ಮೇಲೆ ಭಟ್ಟರ ಬಳಿಗೆ ಹೋಗಿ ನಾಮಕರಣ ಯಾವುದೆಂದು ಕೇಳಿ ಹುಟ್ಟಿದ ಗಳಿಗೆಯನ್ನು ಕೇಳಿದುದುಂಟು. ಪಂಚಾಂಗ ತೆಗೆದು ನೋಡಿ (ಭಟ್ಟರು ಕೊಟ್ಟ ಹೆಸರು) ‘ಹನ್ನೆರಡು ವರ್ಷ ವಯಸ್ಸಿಗೆ ಕಾಳಿಂಗರಾಯ ಹುಲಿಯ ರೂಹ (ಚಿತ್ರ) ನೋಡಿ ಮಡಿಯುತ್ತಾನೆ’ ಎಂದು ಹೇಳಿದ್ದನ್ನು ಕೇಳಿ ಬಂದನು ರಾಜ. ಹನ್ನರಡು ವರ್ಷ ಪ್ರಾಯದಲ್ಲ ಅಂಬು-ಬಲ್ಲು ಬೇಕಂದು ತಾಯಿಗೆ ಹ ಪಡದು ಹರ್ಕೆ ಬೇಟೆಗೆ ಹೋದನು ಕಾಳಿಂಗ. ಹುತ್ತಿನ ಕೆಳಗೆ ಹುಲಿ ರೂಪನ್ನು (ಬರೇ ಚಿತ್ರ ಎಂದು ಇಲ್ಲಿ ತಿಳಿಯಬಾರದು) ನೋಡಿಯೇ ಮಡಿದನು. ಬಾಲಕರು ಹೇಳಿದ ಮಾತು ಕೇಳಿದ ತಾಯಿ- ತಂದೆ ದುಃಖಪಟ್ಟರು ಮತ್ತು ದೇವಾಲಯದಲ್ಲಿ ಮಗನ ಶವವನ್ನಿಟ್ಟ ರಾಜ- ಹತ್ತು ಹೇರು ಹೊನ್ನ ಕೊಟ್ಟ, ಬಡವನ ಏಳನೆ ಮಗಳು ಹೊನ್ನಮ್ಮನನ್ನು ಸೊಸೆಯಾಗಿ ತಂದನು. (ಹೊನ್ನನ್ನು ಅಳೆದು ಕೊಟ್ಟು ತಂದವಳು ಹೊನ್ನಮ್ಮ.) ಹೊನ್ನಮ್ಮನನ್ನೇ ಚಿನ್ನಮ್ಮ ಎಂದು ಕರೆದುದುಂಟು. ಗೀತದಲ್ಲಿ ತಂದೆ ಹೊನ್ನಮ್ಮನನ್ನು ಸತ್ತವನಿಗೆ ಮದುವೆ ಮಾಡಿಕೊಡುವ ಕಾರ್ಯಕ್ರಮವನ್ನು ಹೇಳದೆ– “ಹಾಳುಬಿದ್ದ ದೇವಾಲಯದಲ್ಲಿ ಹೆಣದೊಡನೆ ಅವಳನ್ನು ಕೂಡಿ ಹಾಕಿ ಕತ್ತಲರಾಯನು ಮೀಡ(ಅಗುಳಿ) ಜಡಿದು ಹೋದ’ ಎಂದು ತಿಳಿಸಿದ್ದು ನಿರೂಪಣೆಯ ಅವಸರದ ಸರಣಿಯನ್ನೇ ತೋರಿಸುತ್ತದೆ. ಮೂರು ಎಳ್ಳುಂಡಗಳನ್ನು ತಾಯಿ ಕೂಟ್ಟ ದಳು ಚನ್ನಮ್ಮನಿಗೆ, ಅವನ್ನು ಮುರಿದು ಬಹುಶಃ ಹಾರಿಹೋದ ಸಾಲುಗಳಲ್ಲಿ ದೇವರಿಗೆ ಅರ್ಪಿಸಿದ್ದಿರಬೇಕು. ಪಾರ್ವತಿಪರಮೇಶ್ವ್ಚರರು ಬಂದರು. ಯಾರೆಂದು ಕೇಳಿದಾಗ, ಅದಕ್ಕ ಹದ್ದು “ಇಲ್ಲಿಲ್ಲ, ಗಂಡನ ಹಣದ ಕೃಹಿಡಿದು ಯೂ ಎಂದು ಹೇಳಿ ಮಾಯವಾದರು ಅವರು. ಬೆಳಗಾದ ಮೇಲೆ ಬಂಕಪಟ್ಟಿಗೆ ಸದ. ತಂದನು ಕತ್ತಲರಾಯ, ಇತ್ತ ಇಬ್ಬರೂ ಪಗಡೆಯಾಟ ಆಡುತ್ತ ಕುಳಿತಿದ್ದರು. ಇದು ಕಥೆಯಲ್ಲಿ ಒಳ್ಳೇ ಸಂದು(ಆಶಯ). ಕತ್ತಲರಾಯ ಅವನು ನೋಡಿ ಬಾಗಿಲು ತೆರೆದು ಹಕ್ಕೆ ಬೇಟೆಗೆ ಹೋಗಿದ್ದು, ಇದು ಕಥಾನಕದ ಚಮತ್ಕಾರ ಆಶಯವಾಗಿದೆ. ವರ್ತಮಾನ ತಿಳಿದು ಅತ್ತೆ ಓಡೋಡಿ ಬಂದು ಚಿನ್ನಮ್ಮನನ್ನು ಕರೆತಂದು ಮುತ ಕಂಡಂತೆ ಸಲುಹಿದಳು. ಈ ಎಲ್ಲಾ ಗೀತಗಳ ನಿರೂಪಣಯಲ್ಲಿ ಎಲ್ಲಿಯೂ ಯಾವುದೇ ಗೋಜಲು ಇಲ್ಲ, ಸಲೀಸಾಗಿ ಹೇಳಲಾಗಿದೆ. ವಿವರ ಇದ್ದರೆ ಒಳ್ಳೆಯದಾಗಿತ್ತು, ಮುಖ್ಯ ಕಥೆಯ ಸಂಕ್ಷಿಪ್ತ ರೂಪವನ್ನ ಷ್ಟೇ ಹೇಳಿ ಮುಗಿಸಲಾಗಿದೆ ಇಲ್ಲಿ. “ಸೂರ್ಯಚಕ್ರ” ಕಥನ ಗೀತವು ಒಂದು ಒಳ್ಳಯ ಕಥನ ಗೀತವಾಗಿದ. ಅಣ್ಣ-ತಮ್ಮ, ತಂಗಿಯರ ಒಬ್ಬರ ಮೇಲೊಬ್ಬರ ಗೌರವ, ಪ್ರೀತಿ ಬಹಳ ಸುಂದರವಾಗಿ ನಿರೂಪಿತವಾಗಿದೆ. ಎಲ್ಲರೂ ತುಂಬಾ ಅನ್ಯೋನ್ಯವಾಗಿದ್ದಾರೆ. ದಂಡಿಗೆ ಹೊರಟಾಗ ಆದ ಅಪಶಕುನಗಳಿಂದ ಹೆದರಿದ ಹೆಂಡತಿ ಬಹಳವಾಗಿ ಗಂಡನನ್ನು ಪ್ರಾರ್ಥಿಸುತ್ತಾಳೆ. ಆದರೂ ಕರ್ತವ್ಯನಿಷ್ಠನಾದ ತಮ್ಮ ಸೂರ್ಯಚಕ್ರ ಅದೊಂದನ್ನೂ ಲೆಕ್ಕಿಸದೆ ದಂಡಿಗೆ ಹೋಗಿ ಕಾದಾಡುತ್ತಾನೆ ಗುಂಡು ತಾಗಿದರೂ ತಿರುಗಿ ಮನೆಗೇ ಬಂದು ಪ್ರಾಣಬಿಡುತ್ತಾನೆ.

 

ಅರ್ಜುನ ಜೋಗಿ
ಇಲ್ಲಿ ತಳುನಾರೇ ಇಲ್ಲಿಯ ಬಹುಗಿದಾಳೇ
ಈಳೀ ಬಾಳೀಯ ಎನುದಾರೇ ತಾನ

ಇಲ್ಲೀ ಈಳೀ ಬಾಳೀಯ ಬನುದಾ ಮಾಯ್ಯಮ್ಮ
ನೀನು ನೇನುದಿ ಕತಿಯಾ ತೊಡಗಿದನೇ ತಾನ

ಮನಸೀಲಿಂದು ಕತೆಯೊಂದೂ ಬರಬೇಕೇ ತಾನ
ಮನಶೀಲಿಂದು ಕಡೆಯೊಂದು ಬರಬೇಕು ಲ೦ದೇಳಿ

ಮನನೀಲಿಂದ ಕಠತಿಯ ಬರಬೇಕು ತಾನ
ವಂದೇ ತಾಯಿಗೂ ಯೇಳಾ ಜನ ಮಗದೀರೂ

ಯೇಳ ಜನ ಮಗದಿರಿಗೂ ಯೇಳ ಹಿಂಡುರೇ ತಾನ
ಯೇಳ ಜನ ಮಗದಿರಿಗೂ ಯೇಳ ಹಿಂಡೂರಾಗಿನ್ನ

ವಂದೆಲ್ಗಾ ವಂದ ದಿನದಲ್ಲೇ ತಾನಾ
ವಂದಲ್ಲಾ ವಂದ ದಿನದಲ್ಲೇ ಲೇಗಿನ್ನು

ದಂಡೀನ ವಾಲೆ ಬಂದಿತೇ ತಾನ
ದಂಡೀನ ವಾಲೆ ಬಂದೀತೂ ಲೀಗಿನ್ನು

ಹೆರೆಯವನಾ ಕೈಲೀ ಸಿಕ್ಕೀತೂ ತಾನ
ಹೆರಿಯವನಾ ಕೈಲೀ ಸಿಕ್ಕೀತೂ ಲೇಗಿನ್ನೆ

ತನ್ನ ತಾಯವ್ವೀ ಕರುದೀದ ತಾನಾ
“ಹಲಗಂಜಿ ಆಗಲೂ ಅನುಮಾಡೇ ತಾನ

ದಂಡಾಡೂಕಾರೂ ಹೋಗಬೇಕೇ ತಾನ
ದಂಡಾಡೂಕಾರು ಹೋಗಬೇಕು ನನ್ನಾ ತಾಯೇ

ಯೆಂಟಾ ದಿನದಲ್ಲೀ ಬರುತ್ತೇನೆ ತಾನಾ
ಯೆಂಟಾ ದಿನುದಲ್ಲಿ ಬರುತ್ತೇನೆ” ಲಂಬೂಕು

ತಾಯವ್ಹೀ ಅಡುಗೀ ಮಾಡದಿಯೇ ತಾನಾ
ದೂಡ್ಡ ಲಟ್ಟಕ್ಕೂ ದೂಡ್ಡ ಯೇಣತಾಡೀ

ದೊಡ್ಡಕ್ಕೀ ತೆಗುದು ಯಸರಿಟ್ಟೀ ತಾನಾ
ಸಣ್ಣ ಲಟ್ಟಕ್ಕೂ ಶಣ್ಣ ಯೇಣೊಂದು ತಾಡೀ

ಶಣ್ಣಕ್ಕೀ ತೆಗುದೂ ಯನಂತು ತಾಯೀ
‘ಹಲಗಂಜೀ ಹಗಲೂಟಕು ಅನುಮಾಡ್ತೇ’ ತಾನಾ

ನೂರೊಂದು ಬಗ್ಯಾದಾ ಕಜ್ಜಾಯ ತಾನಾ
ನೂರೊಂದು ಬಗ್ಯಾದಾ ಕಜ್ಜಾಯ ಲೀಗಿನ್ನೂ

ಮಾಡಿದ್ದಳ್ಕೊಂದು ಗಳಗೀಲಿ ತಾನಾ
ಬಚ್ಚಲಕು ಕಿಚ್ಚಾ ಉರಸಾಳೇ ತಾನಾ
ತನ್ನ ಮಗುದೀರಾ ಕರುದಾಳೇ ತಾನಾ

ತನ್ನ ಮಗುದೀರಾ ಕರದಾದೇ ತಾಯವ್ವ
ಯೆರ್ಡು ಕೈಲ್ಯೆಯ್ದಾ ಶಳುನುಂಚ ತಾನಾ

ಯೆರ್ಡು ಕೈಲ್ಯೆಯ್ದಾ ಶಳುನುಂಚಲಿಡು ತಡುಕಂಡೀ
ಯೆಣ್ಣೀ ಕಂದಾಲಾ ಹಿಡಕಂಡೇ ತಾನ

ಯೆಣ್ಣೀ ಕಂದಾಲ ಹಿಡುಕಂಡೀ ತಾಯವ್ವ
ಬಚ್ಚಲಕೂ ಲಾರು ನೆಡುದಳೆಯೇ ತಾನಾ

ಮೆಯಿಗೆಣ್ಣೀಯಾ ಉಗರಾಡೀ ತಾನಾ
ಮೈಯಿಗೆಣ್ಣೀಯಾ ಉಗರಾಡೀ ಲಾಗಿನ್ನು

ಯೇಳು ಜನ ಮಗದೀರೂ ಮಿಂದರೇನೋ ತಾನಾ
ಯೇಳು ಜನ ಮಗದೀರೂ ಮಿಂದಿನ್ನು ವಗುದರೇ

ದೇವರ ಶೈವಾಗೀ ನಿಲುವರೇ ತಾನಾ
ದೇವರು ಶೈವಾಗೀ ನಿತ್ತಾರೇ ಲಾಗಿನ್ನು

ಕಾಯೊಡುದಿ ಕೈಯೊಂದ ಮುಗುದರೆಯೇ ತಾನಾ
ಕಾಯೊಡುದಿ ಕೈಯೊಂದ ಮುಗುದಾರೆ ಲಾಗಿನ್ನು

ಮಾಳೂಗೀಗಾರೂ ನಡುದಾರೆಯೇ ತಾನಾ
ಮಾಳೂಗೀ ವಳುಗೇ ನೆಡುದಾರೇ ಮಗುದೀರ

ಯೇಳು ಮಗುಡದಿಡಿಗೂ ಯಳು ಬಾಳೇ ತಾನಾ
ಯೇಳು ಮಗದಿರಿಗೂ ಯಳ ಬಾಳಲಟ್ಟನ್ನೂ

ಯೇಳು ಮಣಿಯೊಂದು ಲಿಟ್ಟಿದೋ ತಾನಾ
ಯೇಳೂ ಮಣಿಯೊಂದು ಲಿಟ್ಟಿದೇ ತಾಯವ್ವ

ಮಾಡಿದ ಕಜ್ಜಾಯ್ಯ ಬಡುಸದಿಯೇ ತಾನಾ
ಮಾಡಿದ ಕಜ್ಜಾಯ್ಯ ತಪ್ಪದೆ ಬಡಸಾಳೇ

ಕಾಸುದಾ ತುಪ್ಪ ಯೆರುದಾಳೆಯೇ ತಾನಾ
ಕಾಸದಾ ತುಪ್ಪ ಯೆರುದೀ ಹಿಂತಿರುಗೋ ತಾನಾ

ಉಂಡೇ ಕೈಬಾಯಾ ತೊಳುದರೆಯೇ ತಾನಾ
ಉಂಡೀ ಕೈಬಾಯಾ ತೊಳುದರೇ ಮಗದೀರೂ

ತೂಗೂ ಮಂಚದ ಮೇನೇ ಕುಂತಾರೆಯೇ ತಾನಾ
ತೂಗೂ ಮಂಚದ ಮೇನೇ ಕುಂತಾರೇ ಮಗುದೀರು

ತಾಯೀ ಮಾಳುಗಿಗೂ ನೆಡದಾಳೆ ತಾನಾ
ಅಯೊಳ್ಳಾ ಹಣ್ಣಡುಕೇ ಸೊಲುದಿಟ್ಟಾ ಬೆಳೆಯಾಲೇ

ಹಾಲೀಸಲಿ ಬೆಂದ ತೆನಿ ಸುಣ್ಣಾ ತಾನಾ
ಹಾಲೀಸಲಿ ಬೆಂದಾ ತೆನಿ ಸುಣ್ಣಾ ತಡುಕಂಡೀ

ಮಗುನಾ ಯೆದುರಾರೂ ಬರುವಳೇ ತಾನಾ
ಮಗುನಾ ಯೆದುರಾರೂ ಬಂದಾಳೆ ತಾಯವ್ವ

ಯೆಲಿ ತಿಂದು ರಜುವಾರು ಉಗುಳರೇ ತಾನಾ
ಯೆಲಿ ತಿಂದು ರಜು ವೊಂದಾ ಉಗುಳಾರೇ ಮಗುವೀರೂ

ತಾಯಿ ಮಾಳುಗಿಗೇ ನೆಡುದಾಳೇ ತಾನಾ
ತಾಯಿ ಮಾಳುಗಿಗೇ ನೆಡುದಾಳೆ ಲಾಗಿನ್ನು

ಮಗದಿರು ಮಾಳುಗಿಗೂ ನೆಡುದಾರೆಯೆ ತಾನಾ
ಮಗುದಿರು ಮಾಳುಗಿಗೂ ನೆಡುದಿರು ಲಾಗಿನ್ನು

ಪೆಟ್ಟುಗಿ ಬಾಯೇ ಬಿಡುಸಾರೆ ತಾನಾ
ಪೆಟ್ಟುಗಿ ಬಾಯಾ ಬಿಡುಸಾರೆ ಮಗದೀರು

ತಮ್ಮ ಮುಸ್ತಾಡೀ ತಗುದರೆಯೇ ತಾನ
ತಮ್ಮ ಮುಸ್ತಾಡೀ ತಗುದಾರೇ ಮಗುದೀರೂ

ಯೇಳುಜನ ಮಗುದೀರು ಮುಸ್ತಾಡಿಲಿರುಸರೆಯೇ ತಾನಾ
ತಮ್ಮ ಮುಸ್ತಾಡಿ ಲಿಟುಕಂಡಿ ಲಾಗಿನ್ನು

ಮಾಳುಗಿಗಿಂದ ಹೆರುಗೇ ಹೈಟರೇ ತಾನಾ
ಮಾಳುಗಿಗಿಂದ ಹೆರುಗೇ ಹೈಟಾರೇ ಮಗುದೀರೂ

ಕುದುರೆ ಸಾಲೀಗೇ ನಡುದರೆಯೇ ತಾನಾ
ಕುದುರೆ ಸಾಲೀಗೇ ನೆಡುದರು ತಮದಿರೂ

ಯೇಳೂ ಜನ ಅಣತಮ್ಮದೀರೂ ಯೇಳೂ ಕುದುರೆ ತಾನಾ
ಯೇಳೂ ಪಟವೊಂದಾ ಹಿಡುದರೆಯೇ ತಾನಾ

ಯೇಳೂ ಪಟವೊಂದಾ ಹಿಡುದಾರಣತಮದೀರೂ
ಬಂದೀ ಬಾಗದಲ್ಲಿ ನಿಲುವಾರೊ ತಾನಾ

ಬಂದೀ ಬಾಗ್ಗಾದಲ್ಲಿ ನೀಲುವಾರಣತಮದೀರು
ಯೇಳಜನಕ್ಕ ತಂಗದೀರೂ ಬರವಾರೋ ತಾನಾ

ಚಿನ್ನವಾ ಕುಟ್ಟಿ ಚಿನ್ನದಾರುತೀಯೇ ಕಟ್ಟಕಂಡೇ
ಬೆಳ್ಳಿ ಕುಟ್ಟಿ ಬೆಳ್ಳಿಯ ಆರುತೀಯೇ ತಾನಾ

ಬೆಳ್ಳಿ ಕುಟ್ಟಿ ಬೆಳ್ಳಿಯಾ ಲಾರುತೀ ತಡೂಕಂಡೇ
ಕುದುರೀಗಾರೂತೇ ಬೆಳುಗರೆಯೇ ತಾನಾ

ಕುದುರಿಗೊಂದು ಚಬುಕೀ ಹೊಡುದರೆಯೇ ತಾನಾ
ಆರು ತಿಂಗಳ ನಡುಹಾದೀ ಅರು ಗಳಿಗಿಲಿ ತೊಳಿಬೇಕು.

ಅರುಣದಲಿ ನಿಲಬೇಕೂ ತಾನಾ
ಕುದುರಿಗೊಂದು ಚಬುಕು ಹೊಡದರೆಯೇ ತಾನಾ

ಕುದುರಿಗೊಂದು ಚಬುಕಾ ಹೊಡುದಾರಣತಮದೀರು
ಅರುಣೀಲ್ಲೀ ನೆಡಿದರೇ ತಾನಾ

ಅರುಣೀಲ್ಲೀ ನೆಡುದಾರಣತಮದೀರು
ಆರುಮೂರು ದೀವಾಸಾ ಗಳುದೀವೂ ತಾನಾ

ಅರಮೂರು ದೀನಾವೂ ಗಳುದೀವು ಲಾಗಿನ್ನು
ವಂದಾ ಜೋಗಿಯಾರೂ ಬಂದಿದುನೇ ತಾನಾ

ವಂದಾ ಜೋಗಿಯಾರೂ ಬಂದಿದ ಲಾಗಿನ್ನು
ತಪ್ಪಾತಾಳ ಹೊಯ್ದೀ ಕುಳತಿದನೇ ತಾನಾ

ತಪ್ಪಾತಾಳ ಹೊಯ್ದೀ ಕೂತೀದ ಲಾಜೋಗೀ
ಆರು ಜನಲಕುತಂಗುದೀರೂ ಬಂದಿದುರೇ ತಾನಾ

ದೊಡ್ಡ ಲಚುಗೇಲೀ ದೊಡ್ಡಕ್ಕೇ ಲೊಯ್ಕಂಡೆ
ದೊಡ್ಡ ತೆಂಗೀನಾ ಪಲುಗಾಯೇ ತಾನಾ

ದೊಡ್ಡ ತೆಂಗೀನಾ ಪಲುಗಾಯಾ ತಡುಕಂಡೇ
‘ಇಕ್ಕೊಳ್ಳೋ ಜೋಗೀ ಪಡಿದಾನಾ’ ತಾನಾ

‘ನೀವು ಕೊಟ ಪಡೀ ಮುಟ್ಟು ಜೋಗಿ ತಾನಲ್ಲ
ಸೌಭದ್ರಿ ಕೈ ಪಡಿಯೇ ಬರಬೇಕೂ ತಾನಾ

ಸೌಭದ್ರಿ ಕೈ ಪಡಿಯೇ ಬರಬೇಕೋ’ ಲಂದೇಳೀ
ಯೇನೇಳಿದರೂ ಕೇಳುದಿಲ್ಲಾ ತಾನಾ

ಯೇನೇಳಿದರೂ ಕೇಳುದಿಲ್ಲಾ ಲಾಜೋಗೀ
ಸೌಭದ್ರಿ ದೂಸ್ವಾ ದರುಸದಿಯೇ ತಾನಾ

ಸೌಭದ್ರಿ ದೂಸ್ತಾ ದರುಸದೆ ಲತ್ತೀಲಿಂದ
ಸಣ್ಣಾ ಲಚುಗೀಲಿ ಶಣ್ಣಕ್ಕೀ ತೊಯ್ಯಂದಾ

ಸಣ್ಣಾ ತೆಂಗೀನಾ ಪಲುಗಾಯೀ ತಾನಾ
‘ಅಕ್ಕಳ್ಳೋ ಜೋಗೀ ಪಡಿದಾನಾ’ ತಾನಾ

‘ನೀವೂ ಕೇಟೂಪಡಿ ಮುಟ್ಟೂ ಜೋಗಿಯಲ್ಲಾ
ಸೌಭದ್ರಿ ಕೈಪಡೀ ಬರಬೇಕೋ ತಾನಾ

ಸೌಭದ್ರಿ ಕೈಪಡೀ ಬರಬೇಕೋಲಂದೇಳೀ
ತಪ್ಪಾತಾಳ ಹೊಯ್ದೇ ಕೂತಿದುನೇ ತಾನಾ

ಯೇಳು ಜನ ಲಕುದೀರೂ ಕೈಕೈಯೇ ಲಿಡು ಕಂಡೀ
ಒಂದೇ ಬಾಗ್ಗದಲ್ಲಿ ನಿಲುವರೋ ತಾನಾ

ಒಂದೇ ಬಾಗ್ಗದಲ್ಲಿ ನಿಲವರಕ್ಕ ತಂಗೂದಿರೂ
‘ಇಕ್ಕೂಳ್ಳೂ ಜೋಗೀ ಪಡದಾನಾ ತಾನಾ

ಇಕ್ಕೊಳ್ಳೂ ಜೋಗೀ ಪಡೆದಾನಾ’ ಲಂಬುಕೂ
ಯೋಳೂ ಮಂಡ್ಲ್ಗನೂ ಬರುದನಿಯೆ ತಾನಾ

ಯೇಳೂ ಮಂಡ್ಲವಾ ಬರುದೇ ಯೋಳೂ ಗೆರಿಯಾನೇ ಮಾಡೀ
‘ಯೇಳು ಮಂಡ್ಲದೊಳಗೆ ಬರಬೇಕೂ’ ತಾನಾ

ಹಿ೦ದ ಹಿಡುದುರೇ ಹಿಂದ ಬಿಡೇ ಮುಂದು ಹಿದುದುರೇ ಮುಂದಿ ಬಿಡೇ’
ತೋಳೂಂದ ಉಡುದಾರೂ ‘ಮೂದ್ಗ ಬಡೇ ತಾನಾ

ಹಿಂದೆ ಹಿಡುದಾರ ಹಿಂದೆ ಬಿಟ್ರು, ಮುಂದೆ ಹಿಡುದಾರ ಮುಂದೆ ಬಿಟ್ರು
ತೋಳೊಂದ ಹಿಡುದಾರೂ ಮೊದ್ದ ಬಿಟ್ಟೂ ತಾನಾ

ತೋಳೊಂದ ಹಿಡುದಾರಾ ಮೊದ ಇದ್ದೇ ಬಿಟ್ಟಿರೂ
ಯೆದ್ದಿಲಿವನಾರು ನಿತ್ತಿದನೇ ತಾನಾ

ಯೆದ್ದಿಲಿವನಾರು ನಿತ್ತೀದಾ ಲಾ ಜೋಗೀ
‘ಇಕ್ಕಳೋ ಜೋಗಿ ಲೀಗೇ ಪಡೆದಾನಾ’ ತಾನಾ

‘ಇಕ್ಕಳೋ ಜೋಗಿ ಈಗೇ ಪಡೆದಾನಾ’ ಲಂಬೂಕೂ
ವಂದಳ್ಳು ಮಂತ್ರೀಸಿ ವಗುದನಿಯೇ ತಾನಾ

ವಂದಹಳ್ಳು ಮಂತ್ರೀಸಿ ವಗುದೀದಾ ಲಾಗಿನ್ನು
ಜಾಲುಗುನ್ನಿಯಾಗೀ ನಿತ್ತೀತೂ ತಾನಾ

ಜಾಲುಗುನ್ನಿಯಾಗೀ ನಿತ್ತೀತೂ ಲಾಗಿನ್ನು
ಮತ್ತೋಂದು ಹಳ್ಳು ಮಂತ್ರೀಸೀ ವಗುದನೆಯೇ ತಾನಾ

ಮತ್ತೋಂದು ಹಳ್ಳು ಮಂತ್ರಿಸೀ ವಗುದೇವಾಲಾಗಿನ್ನು
ಜೋಗೀ ಬೆನ್‌ಹತ್ತೀ ನೆಡುದದಿಯೇ ತಾನಾ

ಜೋಗೀ ಬೆನ್‌ಹತ್ತೀ ನೆಡುದಾದೇ ಸೌಭದ್ರೆ
ಆರು ಜನ ಲಕುದೀರು ಲತ್ತೇಲಂಬವಳೀಗೀ

ಬಿದ್ದಿಬಿದಿ ಹೋಡೀಲೊಯ್ತ್ವಾರೆಯೇ ತಾನಾ
ಬಿದ್ದಿಬಿದ್ದಿ ಹೋಡೀಲೊಯ್ತಾರೆಯೇ ಲೀಗಿನ್ನು

“ಮಗುದೀದೀಗ ಯಾವಲೂದಾರ್ಣೇ ಕೊಡಬೇಕೂ?” ತಾನ?
“ಮಗುದೀರೀಗ ಯಾವಲೂದಾರ್ಣೀ ಕೂಡಬೇಕೂ’ಲಂದಿನ್ನು

ಯೆಳು ಜನವಿನ್ನು ತೀಡತಾರೆಯೇ ತಾನಾ
ಯೇಳ ಜನವೀಗಿನ್ನೂ ತೀಡತಾರೇ ಲಾಗಿನ್ನ

ಆರು ಮೂರು ದಿವ್ಸಾ ಕಳುದೀತೂ ತಾನಾ
ಆರು ಮೂರು ದಿವ್ಸಾ ಕಳುದೀತೂ ಲಾಗಿನ್ನು

ಹೆರಿಯವಿಗೂ ತಾರೊಕ್ಲೀ ಲಾಗುತದಿಯೇ ತಾನಾ
ಹೆರಿಯವಿಗೂ ತಾರೊಕ್ಲೀ ಲಾಗುತಾದೇ ಲಾಗಿನ್ನು

ಮನಿಯಲ್ಲು ಬಾಳಾ ಕೆತೂನ ನಡುದದಿಯೇ ತಾನಾ
ಮನಿಯಲ್ಲು ಬಾಳಾ ಕೆತೂನೆ ನಡುದಾದೆಲಂದೇಳೀ

ತನ್ನತಮುದೀರಾ ಯೇಳುಸನಿಯೇ ತಾನಾ
ತನ್ನತಮುದೀರಾ ಯೆಳುಸಾನೇ ಲಾಗಿನ್ನು

“ಅರುಣೀಗೂ ನಾವೂ ಹೋಗುಕಿಲ್ಲಾ ತಾನಾ
ಅರುಣೀಗೂ ನಾವೂ ಹೋಗುಕಿಲ್ಲಾ ತಮ್ಮದೀರೇ

ತಮ್ಮನಿಗೂ ತಾವೂ ಹೋಗಬೇಕೂ ತಾನಾ
ತಮ್ಮನಿಗೂ ತಾವೂ ಹೋಗಬೇಕೂ ತಮುದೀರೇ

ತಮಗೇ ಬಾಳಾ ಸಪುನಾ ಕಂಡೀತೇ ತಾನಾ
ತಮಗೇ ಬಾಳಾ ಸಪುನಾ ಕಂಡೇನೂ ತಮ್ಮದಿರೆ

ಮನಿಯಲಿ ಯಾವ ಕೆತೂನಾ ನಡಿದಿದಯೋ ತಾನಾ
ಮನಿಯಲಿ ಯಾವ ಕೆತೂನಾ ನಡಿದಿದಯೋ’ ಲಂದೇಳೀ

ಅರುಣಿಗೋದ ಪಟೂವಾ ತೊಳಿಲಲ್ಲಾ ತಾನಾ
ಅರುಣಿಗೋದ ಪಟೂವಾ ತೊಳಿಲಿಲಾ- ಅಣ್ಣತಮ್ಮದೀರೂ

ಯೇಳಾ ಕುದುರ್ಯಾ ಲತ್ತಿದುರೋ ತಾನಾ
ಯೇಳು ಕುದುರೀಲತಿಕಂಡಿ ಯೆಳ ಪಟುವಾ ಲಡುಕಂಡಿ

ಕುದುರಿಗೊಂದು ಚಬೂಕಾ ಹೊಡದರೇ ತಾನಾ
“ಆರು ತಿಂಗ್ಳಿಗೆ ನಡೆವಾದೇ ಆರು ಗಳಿಗೇ ತೊಳಿಬೇಕು

ನನು ಮನಿಗು ನಾವೂ ಹೋಗಬೇಕೂ ತಾನಾ
ನನು ಮಣಿಗು ನಾವೂ ಹೋಗಬೇಕೂ” ಲಂದೇಳೀ

ಕುದುರಿಗೊಂದು ಚಬುಕಾ ಹೊಡದರೆಯೇ ತಾನಾ
ಕುದುರಿಗೊಂದು ಚಬುಕಾ ಹೊಡದರಣುತಮುದೀರೂ

ಬಂದೀ ಬಾಗುಲಲ್ಲೀ ನಿತ್ತಿದುರೂ ತಾನಾ
ಬಂದೀ ಬಾಗುಲಲ್ಲೀ ನಿತ್ನಾರಣತಮುದೀರೂ

ಆರು ಜನ ಅಕ್ಕ ತಂಗಿದೀರೂ ತಾಯಿಯೇ ತಾನಾ
ಆರು ಜನ ಅಕ್ಕ ತಂಗಿದೀರೂ ತಾಯಿಯೇ ಲಂಬೋಳೂ

ಚಂಬೂಗೀ ಲುದೂಕಾ ತಡುದರೆಯೇ ತಾನಾ
ಚಂಬುಗೀ ಲುದುಕಾ ತಡುದಾರಕು ತಂಗುದೀರೂ

“ಕಾಲೂ ಶಿರಿ ಮೂಕಾ ತೊಳಾಕಣೀ” ತಾನಾ
“ಕಾಲೂ ಶಿಠಿ ಮೊಕುವಾ ತೊಳೆವಾಕೆ ನನ ತಾಯೇ

ಕಿರಿತಮ್ಮನಿಂಡೂತೀ ಯೆಲ್‌ ಹೋಯ್ತೇ?” ತಾನಾ
“ಯೆಲ್ಲಿಗೋದರೂ ಹೇಳುತ್ತೇನೆ ಮುಗೂದೀರಾ

ಕಾಲು ಶಿರಿಮೊಕುವಾ ತೊಳಕಣೀ ತಾನಾ
ಕಾಲು ಶಿರಿಮೊಕುವಾ ತೊಳಕಣೀ ಮುಗುದೀರಾ

ಅಸುರ ಬಾಯಾರೊಂದಾ ಕುಡುಕಣೀ’ ಡಾನಾ
“ಹಾಲು ಶಿರಿಮೊಕಾ ತೂಳುದಿಲ್ಲಾ ಲಾಸರು ಬಾಯಾರೂಂದಾ ಕುಡುದು ಬೇಡಾ

ಯಲ್ಲಿಗೋದಾರೂ ಹಳಳಬೇಕೂ’ ತಾನಾ
“ಯಲ್ಲಿಗೋದಾರೂ ಯೆನೇಲ್ಲೀ ಮಗೂದೀರಾ

ನೀವ್‌ ಹೋಗಿ ಅರು ಮೂರಾ ದಿನದಲ್ಲಿ ತಾನಾ
ನೀವ್‌ ಹೋಗಿ ಅರು ಮೂರಾ ದಿನದಲ್ಲಿ ಮಗುದೀರಾ

ವಂದಾ ಜೋಗ್ಯಾರೂ ಬಂದಿದುನೋ ತಾನಾ
ತಪ್ಪಾತಾಳಾ ಹೋಯ್ದೀ ಕೂತಿದನೋ ತಾನಾ

ದೊಡ್ಡ ಲಚುಗೇಲಿ ದೋಡ್ಡಕ್ಕಿ ಲೊಯ್ದಂಡೀ
ದೊಡ್ಡ ತೆಂಗಿನ ಪಲುಗಾಯೀ ತಾನಾ

ದೊಡ್ಡ ತೆಂಗಿನ ಪಲುಗಾಯೀ ತಡುಕಂಡೇ
ಆರುಜನಲಕ ಡಂಗದೀರೂ ಬರುವಾರೊ ತಾನಾ

ಅರುಜನಲಕ ತಂಗದೀರೂ ಹೂರುಬಂದಾರೂ ಮಗುದೀರಾ
ಜೋಗಿಗು ಪಡಿಯೊಂದಾ ಕೊಟ್ಟಿದುರೋ ತಾನಾ

ಅವ್ರ ಕೊಡು ಪಡೀ ಮುಟ್ಟುಲಿಲ್ಲ ಕಿಟ್ಟಲಿಲ್ಲಾ

‘ಸೌಬದ್ರಿ ಕೊಟ್ಟು ಪಡೀ ಬರಬೇಕೋ’ ಲಂದಹೇಳೀ
ತಪ್ಪಾತಾಳ ಹೊಯ್ದೀ ಕೂತೀದಾ ತಾನಾ

ತಪ್ಪಾತಾಳ ಹೊಯ್ದೀ ಕೂತೀದಾ ಮಗದಿರಾ
ಸೌಬದ್ರೀ… ದುಸ್ತೊಂದಾ ದರುಸಿದಯೇ ತಾನಾ

ಸೌಬದ್ರೀ… ದುಸ್ತೊಂದಾ ದರುಸಿದೇ ಮಗುದೀರಾ
ನಾನೂ ಕೊಟ್ಟ ಪಡೀನೂ ಮುಟ್ಟಲಿಲ್ಲಾ ತಾನಾ

ತಪ್ಪಾತಾಳ ಹೊಯ್ದೀ ಕೂತಿದನೋ ಮಗದೀರಾ
ಯೇಳು ಜನ ಅಕ್ಕ ತಂಗದಿರೂ ಬಂದೀರೋ ತಾನಾ

ಯೇಳು ಜನ ಅಕ್ಕ ತಂಗದಿರೂ ಬಂದೀರೊ ಮಗುದೀರಾ
ಬಂದೀ ಬಾಗಿಲಲ್ಲೀ ನಿತ್ತಿದರೋ ತಾನಾ

ಬಂದೀ ಬಾಗಿಲಲ್ಲೀ ನಿತ್ತಿದರೋ ಮಗುದೀರಾ
ಜೋಗಿಗು ಪಡಿಯೊಂದಾ ಕೊಟ್ಟಿದರೋ ತಾನಾ

ಜೋಗಿಗು ಪಡಿಯೊಂದಾ ಕೊಟ್ಟಿದರೂ ಮಗದೀರಾ
“ಜಾಲುಗುನ್ನಿ ಮಾಡ್ಕಂಡೀ ಕರ್ಕಂಡೀ ಹೋಗಾನೆ

ಜಾಲುಗುನ್ನಿ ಮಾಡಕೊಂಡೀ ಕರಕೊಂಡೂ ಹೋಗೀದಾ”
“ಹೋದಾ ದಾಠಿಯೊಂದಾ ನಮುಗೇಳೇ ತಾನಾ

ಹೋದಾ ದಾರಿ ನಮಗೇಳೂ” ಲಂದೆ ಹೇಳೀ
ಕುದ್ರಿ ಮೇಲು ಸಂಗ್ತೀ ಕೇಳಿದರೇ ತಾನಾ

ಕುದ್ರಿ ಮೇಲು ಸಂಗ್ತಿ ಕೇಳಿದರೂ ಲಾಗಿನ್ನು
ಆಗುಡ್ಡಿಲತ್ತಾರೇ ಮಾಗುಡ್ಡಿಲೀಳುದಾರೇ

ಮರಗುಡ್ಡೀ ಮರಕಲಕೂ ನೆಡುದರೆಯೇ
ಮರಗುಡ್ಡೀ ಮರಕಲಕೂ ನೆಡುದರೆಯೇ ತಾನಾ

ಹಿಂಡು ಮುಂಡಟ್ಟು ಮುರಕಂಡೇ ತಾನಾ
ಹಂಡು ಮುಂಡಟ್ಟೂ ಮೂರು ಕಂಡಣ್ಣ ತಮ್ಮುದೀರು
ಮರುಗುಡ್ಡೆ ಮರಕ್ಷಕ್ಕೂ ನಡುದರೇ ತಾನಾ

ಆಗುಡ್ಡಿ ಮರಕ್ಷಕ್ಕೂ ನೆಡುದರೆ ಲಣ್ಣತಮುದೀರೂ
ಅಲ್ಲೊಂದು ದೊಡ್ಡ ಹಾಸರಗಲ್ಲಿತ್ತೂ ತಾನಾ

ದೊಡ್ಡ ಹಾಸಿರಗಲ್ಲನ ಮೇಲೆ ಕೂತೇ (ಕಂಡಿ)
ಜೋಗೀ ತಲಿಯೊಂದಾ ನೋಡುತಾನೇ ತಾನಾ

ಜೋಗೀ ತಲಿಯೊಂದಾ ನೋಡುತ್ತಿತ್ತೂ ಸೌಬದ್ರೀ
ಹಿಂದೆ ತಿರುಗಾರೂ ನೋಡೀತೂ ತಾನಾ

ಓಂದೆ ತಿರುಗಾರೂ ನೋಡೀತೂ ಲಾಗಿನ್ನು

ಯೇಳು ಜನಲಣ್ಣತಮ್ಮಂದಿರೂ ನೋಡಿತ್ತೂ ತಾನಾ
ಯೇಳು ಜನಲಣತಮುದೀರೂ ನೋಡಿತ್ತೂ ಸೌಬದ್ರೀ
ಜೋಗೀ ಕೂಡಾರೂ ಹೇಳಿತೂ ತಾನಾ

ಜೋಗೀ ಕೂಡಾರೂ ಹೇಳಿತೂ ಲಾಗಿನ್ನೂ
“ಯೇಳು ಪಟು ಹಿಡುಕಂಡೀ ಯೇಳು ಕುದ್ರೀ ಹತ್ತಕಂಡೀ
ಯೇಳು ಜನಲಣತಮ್ಮದಿರೂ ಬಂದಾರೂ ತಾನಾ

ಯೇಳು ಜನಲಣತಮ್ಮದಿರೂ ಜೋಗೀ ಈಗೇ
ನಿನ್ನಾ ಈಗಾರೂ ಇಡುದಿಲವೋ ತಾನಾ

ನಿನ್ನಾ ಈಗಾರೂ ಇಡುದಿಲ್ಲಾ” ಲಂಬೂಕೂ
ದಡಬಡನೆದ್ದೀನಿತ್ತೀದಾ ತಾನಾ
ದಡಬಡನೆದ್ದೀನಿತ್ತೀದಾ ಲಾ ಜೋಗೀ

ವಂದೇ ಹಳ್ಳ ಮಂತ್ರಿಸೀ ವಗುದೀದಾ ತಾನಾ
ವಂದೇ ಹಳ್ಳ ಮಂತ್ರಿಸೀ ವಗುದೀದಾ ಲಾಜೋಗೀ
ಹಾಸುರಗಲ್ಲಾಗೀ ಬೆಳುದೀರೇ ತಾನಾ

ಹಾಸುರಗಲ್ಲಾಗೀ ಬೆಳದೀರಣ ತಮುದೀರೂ
ಯೇಳು ಕುದುರಿನೂ ಯೇಳು ಪಟಾವನೂ
ಯೆಟ್ಟು ಜನವಾರೂ ಹಾಸ್ರಗಲ್ಲೂ ತಾನಾ

ಯಟ್ಟು ಜನವಾರೂ ಹಾಸ್ರಗಲ್ಲಾಗೀ ಬಳುದೀರೂ
ಜೋಗೀ ಅದ್ರಾ ಕರುಕಂಡೀ ತನ್ನ ಊರಿಗೆ ನೆಡುದಾನೇ

ತನ್ನ ಊರಿಗೇ ನಡದೀದ ಲಾಗಿನ್ನೂ
ಚಂದದಿಂದವರೂ ಇರುವರೇ ತಾನಾ

ಚಂದದಿಂದವರೂ ಇರುವರೂ ಲಾಗಿನ್ನೂ
ಹೆರಿಯವ ದಂಡಿಗೇ ಹೋಗುವಂಗೇ ಲಾಗಿನ್ನು

ಹೆರಿಯವ ನಿಂಡೂತೀ ಲಂಬುವಳೂ ತಾನಾ
ಹೆರಿಯವ ನಿಂಡೂತೀ ಲಂಬುವಳೂ ಲಾಗಿನ್ನೂ

ಮೂರೂ ತಿಂಗಳುದ ಗರಬೀಣೀ ತಾನಾ
ದಂಡಿಗೋಗುವಾಗೇ ಮೂರು ತಿಂಗ್ಳು ಗರೂಬೀಣೀ

ಆರುಮೂರು ತಿಂಗಳು ಗಳೂದಿತೂ ತಾನಾ
ಆರುಮೂರು ತಿಂಗಳು ಗಳೂದಿತೂ ಲಾಗಿನ್ನು

ಜನುಸಾದೇ ಗಂಡೂ ಕೋಮಾರಾನಾ ತಾನಾ
ಜನುಸಾಳೇ ಗಂಡು ಕೋಮರಾಗೇ ಲಾಗಿನ್ನು

ತಿಂಗಳ ಬಾಲಿನೂ ನೋಡಿದುರೇ ತಾನಾ
ತಿಂಗಳ ಬಾಲಿನೂ ನೋಡಿದುರೇ ಲಾ ಹುಡುಗ
ಆರೂ ತಿಂಗಳು ಹುಡ್ಗನಲ್ಲೇ ತಾನಾ

ಆರೂ ತಿಂಗಳುನಾಂಗೇ ಕಾಣುತಾನೇ ಲಾಗಿನ್ನೂ
ಹಚ್ಚೇತೇ ಲಾವಾ ಕಾಣುತಾನೇ ತಾನಾ
ಹಚ್ಚೇತೇ ಲಾವಾ ಕಾಣುತಾನೇ ಲಾಗಿನ್ನೂ

ಆರು ತಿಂಗಳ ಹುಡುಗನ ನೋಡಿದರೇ ತಾನಾ
ಆರು ತಿಂಗಳ ಹುಡುಗನ ನೋಡಿದರೇ ಲಾಗಿನ್ನೂ

ಹನ್ನೆರಡುವರುಶಿನಾ ಹುಡುಗನೇ ತಾನಾ
ಹನ್ನೆರಡು ವರುಶೀನಾ ಹುಡಗನಾ ಕಂಡಂತೇ
ಹೆಚ್ಚಿತೇ ಲಾವಾ ಬಂದಿದನೇ ತಾನಾ

ಹಚ್ಚತೇ ಲಾವಾ ಬಂದೀದಾಟೀಗಿನ್ನು
ತಾಯಿ ಕೂಡಾವಾ ಹೇಳುತಾನೇ ತಾನಾ

ತಾಯಿ ಕೂಡೂವಾ ಹೇಳುತಾನೇ ಯೇನಂದೀ?
“ಯೆಲ್ಡಾ ಮಕ್ಕಳು ಇಸಗೊಲ್ಕೇ ಹೋಗುತಾರೇ

ಅವ್ರ ಸಂತಿಗೆ ನಾನೂ ಹೋಗುತ್ತೇನೇ ತಾನಾ
ಪಾಟೇ ಪುಸ್ತಕಾ ತರ್ಸಿ ಕೊಡೇ” ತಾನಾ

“ಹಾಲರೂ ಮುರಿಲಿಲ್ಲಾ ಮಗುನೇ ನೆತ್ತಿ ಸುಳಿ ಬಲಿಲಿಲ್ದಾ
ಅಂಗೈಯನೂ ಜಂಗೂ ಬಲಿಲಿಲ್ವೊ ತಾನಾ

ಅಂಗೈಯಿನೂ ಜಂಗೂ ಬಲಿಲಿಲ್ದಾ ಮಗನೇ ಕೇಳೋ
ಮತ್ತೊಂದೂ ವರುಷೆ ಗಳಿಯಲೋ ತಾನಾ

ಮತ್ತೊಂದ ವರುಶೂ ಕಳಿಯಲಿ ಮಗನೇ ಕೇಳೋ
ಇಸಕೂಲಿಗು ನೀನೂ ಹೋಗಲಿಕ್ಕೂ” ತಾನಾ

ಅಟ್ಟೊಂದಾ ಮಾತಾ ಕೇಳೀದಾಲಾ ಹುಡುಗ
ಬಿದ್ದಾ ಮಾರುಗುನಾ ಹಿಡುದಾನೇ ತಾನಾ

ಬಿದ್ದಾ ಮಾರುಗುನಾ ಹಿಡುದಾನಾ ಹುಡುಗಾ
ಚಂಡಾಡೂಕಾರೂ ಹೋಗುತಾನೇ ತಾನಾ

“ಯೆಲ್ದಾ ಮಕ್ಕಳು ಚಂಡಾಡೂಕೆ ಹೋಗುತ್ತಾರೆ
ನಾನು ಅವ್ರ ಸಂಗಾತೀಗೇ ಹೋಗುತ್ತೇನೆ ತಾನಾ

ತಾನೂ ಅವ್ರ ಸಂಗಾತೀಗೇ ಹೋಗುತ್ತೇನೆ” ಲಂದೇಳೀ
ಯೇನನ್‌ ಹೇಳಿದ್ರೂ ಕೇಳೋದಿಲ್ಲಾ ತಾನಾ

ಯೇನನ್‌ ಹೇಳಿದ್ರೂ ಕೇಳೋದಿಲ್ಲಾ ತಾಯಿನೂ
ಅವ್ರಾ ಸಂಗತಿಗೂ ನೆಡುದನೆಯೇ ಲಾ ಹುಡುಗಾ
ಆಡಾಡೀದಾಟಾ ಅವನಿಗೇ ತಾನಾ

ಆಡಾಡೀದಾಟಾ ಅವನೇ ಗೆಲ್ಲೂವಾಗೇ
“ರಂಡಿ ಪೋರಂದೇ”ಳೀ ಬಯ್ತಾರೇ ತಾನಾ

“ರಂಡೀ ಪೋರಂ”ದ ಹೀಳ ಬಯ್ತಾರೇ ಅಬ್ನೀಗೂ
ಅವ್ನಿಗೂ ಬಾಳ ಸಿಟ್ಟು ಬರ್ತದೇ ತಾನಾ

ಅವ್ನಿಗೂ ಬಾಳಾ ಸಿಟ್ಟೂ ಬರ್ತದೆ ಲಾಗಿನ್ನೂ
ಮನೆಯಲ್ಲಿ ಬಂದು ಹೇಳ್ವ ಅಂದ್ರೂ ಹಂಬಲಿಲ್ದಾ ತಾನಾ

ಮನೆಯಲ್ಲಿ ಬಂದು ಹೇಳೂರೂ ಹಂಬಲ ಇಲ್ಲಾಲೇ
ಮರುದಿನ ಚೆಂಡಾಡಕೂ ನಡಿದನೆಯೇ ತಾನಾ

ಮರುದಿನ ಚೆಂಡಾಡಕೂ ನಡುದಾನೇ ಲಾಗಿನ್ನೂ
ಹೂಡಹೂಡಿದ ಚಂಡೂ ಗೆಲುತಾನೇ ತಾನಾ

ಹೂಡಹೂಡಿದ ಚಂಡಾ ಗೆಲುತಾನೇ ಲಾ ಹುಡುಗಾ
ಮತ್ತೆ ಲಾಂಗ್‌ ಹೇಳೇ ಬಯ್ದಾರೇ ತಾನಾ

“ಅಪ್ಪಿಲ್ಲದುಟ್ಟಿದಾ ರಂಡೇ ಪೋರಾನಲ್ಲೋ
ನಮಗೊಂದವಾ ಲಾಟಾ ಕೊಡುದಿಲ್ಲಾ ತಾನಾ

ನಮಗೊಂದವಾ ಲಾಟಾ ಕೊಡು”ಲಂದೇಳಿ
ಹಾಂಗೇ ಹೇಳಾರೂ ಬಯ್ವರೂ ಲವ್ನೀಗೇ ತಾನಾ
ಬಾಳ ಸಿಟ್ಟಾರೂ ಬಂದಿತೂ ತಾನಾ

ಮನ್ಯಲ್‌ ಹೋಗಿ ಹೇಳೂಕೂ ನಂಬಲು ಲಿಲ್ಲಂದೇ
ಪಂಜೀಶರುಗಿಲೀ ವಂದೂಗೆಂಟೂ ತಾನಾ

ಪಂಜೀ ಶರುಗೀಲವಂದು ಗೆಂಟಾಲೊಡಕಂಡೇ
ತನ್ನು ಮನಿಗೇ ಬಂದಿದನೇ ತಾನಾ

ತನ್ನ ಮನಿಗಾರೂ ಬಂದಿದಾ ಲಾಗಿನ್ನೂ
ತಾಯಿ ಲಾಲಾರೂ ಕೊಟ್ಟರೂ ಲಾಗಿನ್ನೂ

ಬಚ್ಚಲರುವನುಗೇ ನೆಡದದಿಯೇ ತಾನಾ
ಬಚ್ಚಲರುವನುಗೇ ನೆಡದಾದೇ ಲಾಗಿನ್ನೂ

ಮೀಸಿ ಅವನಾರೂ ಬಿಟ್ಟಿದೇ ತಾನಾ
ಮೀಸಿ ಅವನಾರೂ ಬಿಟ್ಟಿತೇ ಲಾಗಿನ್ನೂ

ಅವ್ನ ಪಂಜ್ಯಾರೂ ತೊಳದದಿಯೇ ತಾನಾ
ಅವ್ನ ಪಂಜ್ಯಾರೂ ತೊಳೆವಂದೇ ಲಾಗಿನ್ನೂ

‘ಇದುವಂತಾ ಗೆಂಟೋ ಮಗು’ ನಂತೂ ತಾನಾ
‘ಇದುವೆಂತಾ ಗೆಂಟೋ ಮಗ’ನಂಬುತಾ ಲಾಗಿನ್ನೂ

ಅವಲಾಗಾರೂ ಹೇಳುತಾನೇ ತಾನಾ
“ಚಂಡಾಡೂಲೂ ಹೋಗುತ್ತೀದ್ದೇ ನನ್ನಾ ತಾಯೀ

ಹೂಡೂಡಿದ ಚೆಂಡಾ ಗೆಲುತೀದೇ ತಾನಾ
ಹೂಡೂಡಿದ ಚೆಂಡಾ ಗೆಲುತೀದೇ ತಾನಾ

ಹೂಡೂಡಿದ ಚೆಂಡಾ ಗೆಲುತೀದೇ ನನ್ನ ತಾಯೇ
ರಂಡೇ ಪೋರಂದೇ ಬಯ್ವಾರೆಯೇ ತಾನಾ

ರಂಡೇ ಪೋರಂದೇ ಬಯ್ತಿರೋ ನನ್ನ ತಾಯೀ
ನಿನಕೂಡ ಹೇಳ್ಬೇಕಂದ್ರು ಮರತೀತೂ ತಾನಾ

ನಿನಕೂಡ ಹೇಳ್ಬೇಕಂದ್ರು ಮರತೀತೂ ಲಂದೇಳೀ
ಪಂಜೇಶೆರುಗೀಲಿ ವಂದೂ ಗಂಟೂ ತಾನಾ

ಪಂಜೀ ಶೆರುಗೀಲೀ ವಂದು ಗೆಂಟಾಲೊಡುಕಂಡೀ
ಹಂಬಲಿರುವುದಿಲ್ಲ ಅಂದೇ ಬಂದಿದನೇ ತಾನಾ

ಹಂಬಲಿರುವುದಿಲ್ಲ ಅಂದೇ ಬಂದಿದೇ ನನ್ನ ತಾಯೇ
ನಮಗೆ ಅಪ್ಪ ವ್ದ್ಯೇ ಇಲುವೇನೇ ತಾನಾ?

ನಮಗೆ ಅಪ್ಪ ವ್ದ್ಯೇ ಇಲ್ಲಂದೀ ನನ್ನ ತಾಯೇ
ನನ್ನ ಕೂಡಾರೂ ಹೇಳಬೇಕೇ” ತಾನಾ

“ನಿನಗೆ ಅಪ್ಪವ್ನೇ ಆರು ಮಂದಿ ಚಿಕ್ಕಪ್ಪದೀರವ್ರೇ
ಯೇಳೂ ಮಂದ್ಯಾರೂ ಅವ್ರ್ಯಲೋ ತಾನಾ

ಯೇಳೂ ಮಂದ್ಯಾರೂ ಅವ್ಳಲ್ಲೊ ಮಗನೇ ಕೇಳೋ
ಚಿಕ್ಕೀ ಕರುವಾಕೂ ಹೋಗಿದುರೋ ತಾನಾ

ಚಿಕ್ಕೀ ಕರುವಾಕೂ ಹೋಗಿ ಮಗನೇ ಕೇಳೋ
ಕರುವಾಕೆ ಹೋದೋರೂ ಬರಲಿಲ್ಲವೋ ತಾನಾ

ಕರುವಕೆ ಹೋದಾರೂ ಬರುಲಿಲ್ಲ” ಲಂದೇಳಿ
ವೊದಲಾದ ಸಂಗೂತೀ ಕೇಳುತಾದೇ ತಾನಾ

ಮೊದಲಾದ ಸಂಗ್ಲ್ಸೀ ಹೀಳುವಾದೇ ಲಾಗಿನ್ನು
ತಾಯಿ ಕೂಡುವಾ ಹೇಳುತಾನೇ ತಾನಾ

ತಾಯಿ ಕೂಡುವಾ ಹೇಳುತಾನೇ ಯೇನಂದೀ?
“ನನಗೆ ರೊಟ್ಯೊಂದು ಬುತ್ತಿನೂ ಕಟ್ಟಿಕೊಡು

ಅಪ್ಪಚಿಕ್ಕಪ್ಪದೀರಾ ಕರುಕಂಡೀ ತಾನಾ
ಅಪ್ಪಚಿಕ್ಕಪ್ಪದೀರಾ ಕರುಕಂಡೀ ಬರುತ್ತೇನೇ

ನನಗೊಂದಪ್ಪಣಿಯಾ ಕೊಡಬೇಕೇ” ತಾನಾ
“ಹಾಲರು ಮುರಿಲಿಲ್ಲಾ ಮಗನೇ ನೆತ್ತಿಸುಳೀ ಬಲಿಲಿಲ್ಲಾ

ಯಾವುರೀಗವ್ರೂ ನಡುದರೆಯೋ ತಾನಾ
ಯಾವುರೀಗವ್ರೂ ನಡುದರೆಯೋ ಮಗುವೇ ಕೇಳು

ಯೆಲ್ಜೆಂದೇ ನೀನೂ ಹೋಗುವಿಯೋ ತಾನಾ
ಯೆಲ್ಜೆಂದೇ ನೀನೂ ಹೋಗುವಿಯೋ? ಮಗುವೇ ಕೇಳು

ಕರುವಕ್ಕೋದೋರೂ ಬರಲಿಲ್ಲವೋ ತಾನಾ
ಕರುವಕ್ಕೋದೋರೂ ಬರಲಿಲ್ಲ ಮಗನೇ ಕೇಳು

ನಿನ್ನ ಕರವಾಕ್ಯಾರೂ ಹೋಗುತರೆಯೋ? ತಾನಾ
ನಿನ್ನ ಕರುಕ್ಯಾರು ಹೋಗುತರೇ ಮಗುವೇ ಕೇಳು

ಜ್ಯೋತೀ ಕಸುವೋರೂ ಮೊದಲಿಲ್ಲವೋ ತಾನಾ
ಜ್ಯೋತೀ ಕಸುವೋರು ಮೊದ್ದಿಲ್ಲ ಮಗುನೆ ಕೇಳು

ಹೋದರೂಲವ್ರೂ ಬರುವಾರೋ”‘ ತಾನಾ
ಯೇನೆನೇಳೀದ್ರೂ ಕೇಳೂಲಿಲ್ಲಾ ಲಾ ಹುಡುಗಾ

ಮುಚ್ಚು ಮಾಡಾಕಂಡೇ ವರುಗೀದಾ ತಾನಾ
ಮುಚ್ಚು ಮಾಡಾಕಂಡೀ ವರುಗೀದಾ ಲಾಗಿನ್ನು

ಊಟಕ್ಕೇಳಿಸಿರೂ ಯೆಳೂದಿಲ್ದಾ ತಾನಾ
ಊಟಕ್ಕೇಳಿಸಿರೂ ಯೆಳೂದಿಲ್ಲಾ ಲಾಗಿನ್ನು
“ಹೋಗುದಾರೂ ನೀನೂ ಹೊಗುಲಕ್ಕೋ ತಾನಾ

ಹೋಗುದಾರೂ ನೀನೂ ಹೂಗುಲಕ್ಕೋ ಮಗನ ಕೇಳೋ
ಯೆದ್ದೀ ಊಟಾರೂ ಮಾಡುಕಳ್ಳೋ ತಾನಾ

ಯೆದ್ದೀ ಊಟ ಮಾಡುಕಳ್ಳೊ” ಲಂಬೂಕೂ
ಯೆದ್ದೀ ದೇವ್ರ ಪೂಜಿಯಾ ಮಾಡಿದನೋ ತಾನಾ

ಯೆದ್ದೀ ದೇವ್ರ ಪೂಜೀ ಮಾಡೀದಾಲಾಗಿನ್ನು
ಉಂಡೆ ಕೈಬಾಯಾ ತೊಳದಿವನೇ ತಾನಾ

ಉಂಡೇ ಕೈಬಾಯಾ ತೊಳುದೀದಾ ಲಾಗಿನೂ
ರೊಟ್ಟಿ ಬುತ್ಯೊಂದಾ ಕಟುಕೊಟ್ಟು ತಾನಾ

ರೊಟ್ಟಿ ಬುತ್ಯೊಂದಾ ಕಟ್ಟಿಂದೂ ಕೊಟ್ಟಿತ್ತು
ಅದ್ರ ತಕ್ಕಂಡೇ ಹೈಟನೆಯೇ ತಾನಾ

ಅದ್ರ ತಕ್ಕಂಡೇ ಹೈಟೇದಾ ಲಾ ಹುಡುಗಾ
ಬಿದ್ದ ಮಾರೂಗಾ ಹಿಡದೀದಾ ತಾನಾ

ಬಿದ್ದಾ ಮಾರೂಗಾ ಹಿಡುದೀದಾ ಲಾಗಿನ್ನು
ಜೋಗೀಲೂರೀಗೆ ನೆಡದನೆಯೆ ತಾನಾ

ಜೋಗೀಲೂರೀಗೆ ನೆಡದಾನೆ ಲಾಗಿನ್ನು
ಅಲ್ಲೊಂದಜ್ಜವೀ ಮನಿಯಿತ್ತು ತಾನಾ

ಅಲ್ಲೊಂದಜ್ಜವೀ ಮನಿಯಿತ್ತು ಲಾಗಿನ್ನು
ಅಜ್ಜವೀ ಮನೀಗೂ ನೆಡುದಾನೇ ತಾನಾ

ಅಜ್ಜವೀ ಮನೀಗೂ ನೆಡುದಾನೇ ಲಾಗಿನ್ನು
“ನನಗೊಂದು ತಾವಾ ಕೊಡಬೇಕೇ ತಾನಾ

“ನನಗೊಂದು ತಾವಾ ಕೊಡಬೇಕೂ” ಲಂಬೂಕೂ
ಅಜ್ಜೀವ್ವೀಲಾಗೇ ಹೇಳುತಾದೇ ತಾನಾ

ಅಜ್ಜೀವ್ವೀಲಾಗೇ ಹೇಳುತಾದೇ ಲಾಗಿನ್ನು
“ಯಾವೂರಂದ ನೀನೂ ಬಂದ್ಯಲೋ? ತಾನಾ

ಯಾವೂರಂದೀದ್ದೀ ಬಂದಿದ್ದಿ? ಮಗುನೇ ಕೇಳು
ದೇವುತಾಪಿಂಡುನಾಂಗೇ ಕಾಣತ್ಯಲ್ಲೋ ತಾನಾ

ಹಾಳುಬಿದ್ದಾ ಊರೂ ಇದ್ದವಲ್ಲೋ ತಾನಾ
ಹಾಳುಬಿದ್ದಾ ಊರೂ ಇದುವಲ್ಲೊ ಮಗುನೇ ಕೇಳು

ನಮ್ಮೂರಲ್ವೊಂದೂ ಜೋಗಿಯವ್ನೇ ತಾನಾ
ನಮ್ಮೂರಗ್ವೊಂದೂ ಜೋಗಿಯವ್ನೇ ಮಗುವೇ ಕೇಳು

ಯೆಲ್ಲೀದ್ದೋ ವಂದೂ ಹಣ್ಣು ತಂದನೆಯೋ ತಾನಾ
ಯಾವೂರಂದು ವಂದು ಹೆಣ್ಣು ತಂದಿದ ಮಗುನೇ ಕೇಳೂ

ಅದಕೊಂದ್‌ ಹೂಂಗ್ನದಂಡೀ ಕೊಡುತನ್ಯೋ ತಾನಾ
ಅದಕೊಂದ್‌ ಹೂಂಗ್ನದಂಡೀ ಕೊಟುಕಂಡೇ ಮಗುವೇ ಕೇಳೊ
ವಂದು ಶಿದ್ದೇ ಅಕ್ಕೀ ತಂದುಕಂಡೇ ತಾನಾ

ವಂದು ಶಿದ್ದೇ ಅಕ್ಕೀ ಮಗುನೇ ಕೇಳೆಲಾ
ನನ್ನಾ ಸಂಸಾರಾ ಕಳಿತದೆಯೊ ತಾನಾ

“ನನ್ನಾ ಸಂಸಾರಾ ಕಳಿತಾದೇ” ಲಂದೇಳಿ
ಅಟ್ಟ ಸಂಗ್ಯೊಂದಾ ಹೇಳತದೆಯೇ ತಾನಾ

ಅಟ್ಟ ಸಂಗ್ಯೊಂದಾ ಕೇಳೀದಾ ಲಾ ಹುಡುಗಾ
ರೊಟ್ಟೀ ಮತ್ತೊಂದಾ ಬಿಚ್ಚಿದನೇ ತಾನಾ

ರೊಟ್ಟೇ ಮತ್ತೊಂದಾ ಬಿಚ್ಚೀನೆ ಲಾಗಿನ್ನೂ
ಆದರಂದ್‌ವಂದು ಚೂರಾ ತಿಂದೀದಾ ತಾನಾ

ಆದರಂದ್‌ವಂದು ಚೂರಾ ತಿಂದೀದಾ ಲಾಗಿನ್ನೂ
ಅಜ್ಜವ್ವೀಗಾರೂ ಕೊಟ್ಟಿದನೇ ತಾನಾ

ಅಜ್ಜವ್ವೀಗಾರೂ ರೊಟ್ಟಿ ಕೊಟ್ಟೀದ ಲಾಗಿನ್ನು
“ಹೊಟ್ಟೇ ತುಂಬ ನೀನೂ ತಿಂದುಕಣೇ ತಾನಾ

ಹೊಟ್ಟೇ ತುಂಬಾರೂ ತಿಂದಕಣೇ ಲಜ್ಜವ್ವಾ
ನಾನೂ ನೀನಾರೂ ಮನಗೂವಾ ತಾನಾ

ನಾನೂ ನೀನಾರೂ ಮನಗೂವಾ ಲಜ್ಜವ್ವಾ
ಬೆಳಗಾಗೇಲೆದ್ದೀ ನಿನ್ನವಾ ಕೆಲಸಾ ಮಾಡೂ

ನಾನೂಗೂ ಕೂಯ್ದೀ ಕಟತೀನೇ” ತಾನಾ
“ನೀನೂ ಕಟ್ಟೀದ್ರೂ ಚೆಂದವಾಲಾಗವೂ

ನಾಗ್ಲೂವಲಾರೂ ಕಟತೇನೇ’ ತಾನಾ
“ಚೆಂದಾಲಾಗದೀರೇ ಇಲ್ಲವೆ ಲಜ್ಜವ್ವಾ
ನಾನೂವಲಾರೂ ಕಟತೇನೇ ತಾನಾ

ನಾನೂವಲಾರೂ ಕಟತೇನೇ’ ಲಂದೇಳೀ
ಹೂಂಗಾ ಕೊಯ್ದಾರೂ ಕಟತಾನೆ ತಾನಾ

ಹೂಂಗಾ ಕೊಯ್ದಿ ಕಟ್ಟೀದಾ ಲಾಗಿನ್ನು
ಅಜ್ಜವ್ವಿಲದನಾರೂ ತಕ್ಕಂಡೇ ನಡೆದಲೇ ತಾನಾ

ಹೂಂಗ್ನದಂಡ್ಕ್ಯೊಂದು ಕೊಟ್ಟೀತೂ ತಾನಾ
ಹೂಂಗ್ನದಂಡ್ಯೊಂದು ಹಿಡದೀತೂ ತಾನಾ

“ಇಂದೀ ಕಟ್ಟೀದ ಹೂಂಗ್ನ ದಂಡೇ ಚಂದವೇ ತಾನಾ
ಇಂದೀ ಕಟ್ಟೀದ್ದೂ ಚಂದವೇ ಲಜ್ಜವ್ವಾ

ಇಂದೀನ ಹೂಂಗ್ನ ದಂಡೇ ಚಂದವೇ ತಾನಾ
ನಿಮ್ಮನೀಗ್ಯಾರೂ ಬಂದರ್ಯೆ?” ತಾನಾ

“ನನ್ನ ಮೊಮ್ಮಗಾ ಬಂದೀದಾ ಲಾಗಿನ್ನು
ಅವನೆ ಕೊಯ್ದಾರೂ ಕಟ್ಟೀದಾ ತಾನಾ

ಅವನೆ ಕೊಯ್ದಾರೂ ಕಟ್ಟೀದಾ” ಲಂದೇಳೀ
ಅಡುಗೇ ಸಾಮಾನಾ ಕೊಟ್ಟೇತೇ ತಾನಾ

ಅದ್ರ ತಂದಾರೂ ಅಡುಗೇಯ ಮಾಡುಂಡೀ
ಮರುದಿನೇ ಹೂಂಗಾ ಕೊಯ್ದದಾಲಾಗಿನ್ನು

ಮರುದಿನೇ ಲುಂಗಾ ಕೊಯ್ದಿದಾಲಾಗಿನ್ನು
ಆದಾ ಸಂಗ್ರೀಯಟ್ಟೂ ಬರದೀದಾ ತಾನಾ

ಆದಾ ಸಂಗ್ಯಾರು ಬರದೀದ ಲಾಗಿನ್ನು
ಹೂಂಗಿನ ದಂಡೀಯೊಳುಗೆ ಹಾಕಿದನೇ ತಾನಾ

ಹೂಂಗಿನ ದಂಡೀಯೂಳುಗೆ ಹಾರದ ಲಾಗಿನ್ನು
ಅಜ್ಜವೀ ಕೂಡ ಹೇಳುತಾನೆ ತಾನಾ

“ಅಜ್ಜವೀ ಹೂಂಗ್ನ ದಂಡೇಯ ಕೊಟ್ಟಿನ್ನು ಸುಮ್ಮೆಬರುಬೇಡಾ
ಕುಡುಗೀ ಅದ್ರೆ ಕೂಡೇ ಮುಡಿಹೇಳೇ ತಾನಾ

ಕುಡುಗೀ ಅದ್ರೆ ಕೂಡೇ ಮುಡಿಹೇಳೇ ಅಜ್ಜವೀ”
ಹೂಂಗ್ನ ದಂಡ್ಯೊಂದೂ ಕೊಟ್ಟೀತೂ ಲಾಗಿನ್ನು

“ನನ್ನ ಮಾಮ್ಮಗ ನಿನ ಕೂಡೆ ಕುಡ್ಗೆ ಮುಡೀ ಲಂದಾನೆ
ಹುಳವೇ ಹುಪ್ಪೂಡಿ ಇರುತಾದೇ” ತಾನಾ

ಹೂಂಗ್ನ ದಂಡ್ಯೊಂದೂ ಕೊಟ್ಟೀತೂ ಲಾಗಿನ್ನು
“ನನ್ನ ಮೊಮ್ಮಗ ನಿನ ಕೂಡೇ ಕುಡ್ಗ್‌ ಮುಡೀಲೆಂದಾ ತಾನಾ
“ಹುಳವೇ ಹಪ್ಪೂಡೀ ಇರತಾದೇ” ತಾನಾ

ಹೂಂಗ್ನ ದಂಡ್ಯೊಂದೂ ಕುಡಗೇತೂ ತಾನಾ
ಹೂಂಗ್ನ ದಂಡ್ಯೊಂದೂ ಕುಡುಗೇತೂ ಲಾಗಿನ್ನು
ಬರುದಾ ಚೀಟೆಯಾ ಲೆಕ್ಕಿತೇ ತಾನಾ

ಬರುದಾ ಚೀಟ್ಯೊಂದಾ ಹೆಕ್ಕಿನ್ನೂ ವೋದಾದೇ
ಮುತ್ತಿನ ಕಣ್ಣೀರಾ ಬಿಡುತಾದೇ ತಾನಾ

ಮುತ್ತಿನ ಕಣ್ಣೀರೇ ಬಿಡುತಾದೇ ಲಾಗಿನ್ನು
‘ನಾ ಬರೂವರಿಗೇ ಮೂರು ತಿಂಗ್ಳುಗರೂಬೀಣಿ

ನನು ಮಗನಲ್ಲದೆ ಪರುರಲ್ಲಾ ತಾನಾ
ನನು ಮಗನಲ್ಲದೆ ಪರುರಲ್ನಾ’ ಲಂದೇಳಿ

ಹೊರುವಟ್ಟಾಲದುಕೇ ಕೊಟ್ಟದಿಯೋ ತಾನಾ
ಹೊರುವಟ್ಟಾಲದುಕೇ ಕೊಟ್ಟದೇ ಲಾಗಿನ್ನು

“ಲಡುಗಿ ಮಾಡುಕಂಡೇ ಊಣು ನೀನು ತಾನಾ
ಲಡುಗಿ ಮಾಡುಕಂಡೇ ಊಣು ನೀನು” ಅಂಬೂಕೂ
ಅಜ್ಜವಿ ಹೊತ್ಕಂಡೆ ಬಂದೇ ತಾನಾ

ಅಜ್ಜವಿ ಹೊತ್ತಂಡೆ ಬಂದೆ ಸೂಲೀಗಿನೂ
ಅಡುಗೆ ಮಾಡುಕಂಡೇ ಉಂಡಿದುರೇ ತಾನಾ

ಅಡುಗಿ ಮಾಡುಕಂಡೇ ಉಂಡೀರೊ ಲಾಗಿನ್ನು
ಮರುದಿನ ಹೂಂಗಾರೂ ಕೊಯ್ದನೆಯ ತಾನಾ

ಮರುದಿನ ಹೂಂಗಾರೂ ಕೊಯ್ದನೆ ಲಾಗಿನ್ನು
“ಹೂಂಗ್ನ ದಂಡಿಯೊಂದೂ ಕೊಟ್ಟಿನ್ನು ಸುಮ್ಮೆ ಬರೂಬೇಡಾ

ನಾನೊಂದು ಮಾತೇ ಹೇಳುತ್ತೇನೆ ತಾನಾ
ನಾನೊಂದು ಮಾತೇ ಹೇಳುತ್ತೇನೆ ಅಜ್ಜವ್ವಾ

ಜೋಗೀ ಉಂಡುತಿಂದೇ ಊರವಲಿನ ಹೋಗವಾರೂ
ಅದ್ರ ಕೂಡೆ ನಾನೂ ಬರುಹೇಳು ತಾನಾ

ಹೊಂಗ್ನದ ದಂಡ್ಯೊಂದಾ ಕೊಟ್ಟಿನ್ನು ಬರುವಾಗೂ
“ನನ್ನ ಮಗಾನಿನುಕ್ಕೆಲೀ ಬರುವಾಕೆ ತಾನಾ

ನನ್ನ ಮಗಾನಿನುಕ್ಕೆಲೀ ಬರುವಾಕೆ ಹೇಳಾನೇ’
ಜೋಗೀ ಉಂಡು ತಿಂದೀ ಊರುಮೆನೆ ಹೋಗೂಕೂ
ಮಗನಾ ಬುಡುವಾಗೇ ಬರುತಾದೆ ತಾನಾ

ಚಿಕ್ಕಿ ಬರುಬರುವಾ ಆಟದೂರೇ ನೋಡಾನೇ
ಮುಚ್ಚಿ ಮುಡಾಕೀ ವರುಗಾನೇ ತಾನಾ

ಮುಚ್ಚೀ ಮೂಡಾಕಂಡೇ ವರುಗಾನೇ ಲೀಗಿನ್ನೂ
ತಲ್ಯ ಬುಡುದಾಲೇ ಕೂತೇನ್ನೂ ತಾನಾ

ತಲ್ಯ ಬುಡುದಾಲೇ ಕೂತೇನ್ನೂ ಲಾಗಿನ್ನು
ಮೋರೇ ಶರೂಗಾ ತಗುದಾದೇ ತಾನಾ

ಮೋರೇ ಶರುಗಾ ತಗುದಾದೇ ಲಾಗಿನ್ನೂ
ಚಿಕ್ಕಿ ಕಂಡ ಮಗುನೇ ತೀಡುತಾನೇ ತಾನಾ

ಮಗ್ನ ಕಂಡೇ ಚಿಕ್ಕೀ ತೀಡುತಾದೇ ತಾನಾ
ಮಗ್ನ ಕಂಡೇ ಚಿಕ್ಕೀ ತೀಡುತಾದೇ ಲಾಗಿನ್ನು

ಯೆದ್ದಿ ಅವನಾರೂ ಕೂತಿದನೇ ತಾನಾ
ಯೆದ್ದಿ ಅವನಾರೂ ಕೂತೀದಾ ಲಾಗಿನ್ನೂ

“ನಾನೊಂದು ಮಾತಾ ಹಳುತೀದೇ ತಾನಾ
ನಾನೊಂದು ಮಾತಾ ಹೇಳತೇನೇ ಚಿಕ್ಕಿ ಕೇಳೇ

ನಾನೇಳುದಂತೇ ಕೇಳುಬೇಕೇ ತಾನಾ
ನಾನೇಳುದಂತೇ ಕೇಳಬೇಕೂ ಚಿಕ್ಕೀ ಕೇಳೇ

ಹೊಡೆದರೆ ವಂದು ಪೆಟ್ಟಾ ತಿನಬೇಕೇ ತಾನಾ
ಹೊಡೆದರೆ ವಂದು ಪೆಟ್ಟಾ ತಿನಿಬೇಕು ಚಿಕ್ಕೀ ಕೇಳೇ
ನಾನೇಳೂದಾವ್ರೇ ಕೇಳಬೇಕೂ ತಾನಾ

ನೀನು ಊಂಡು ತಿಂದೇ ಊರ ಮೇನೆ ಹೋಗುತೇ
ನಿನಗೇನಾರೂ ಆದ್ರೇ ಹೆಂಗೆ ತಿಳಿಬೇಕು? ತಾನಾ

ನಿನಗೇನಾರೂ ಆದ್ರೆ ನಂಗ್ಯಾಂಗ್‌ ತಿಳಿಬೇಕು?’
ಅಂದೇಳೀ ನೀನೂ ಹೇಳುಬೇಕೂ’ ತಾನಾ

ಅಟ್ಟೊಂದು ಮಾತೂ ಕೇಳಿತೂ ಲಾಗಿನ್ನೂ
ಹಿಂದೆ ತಿರಗಾರೂ ನಡೆದದೆಯೇ ತಾನಾ

ಹಂದೆ ತಿರಗಾರೂ ನಡೆದೀದೇ ಲಾಗಿನ್ನೂ
ಊರ ಮೆನೆ ಹೋದ ಜೋಗಿ ಬಂದಿದಾ ತಾನಾ

ಊರ ಮೆನೆ ಹೋದ ಜೋಗಿ ಬಂದಿದಾ ಲಾಗಿನ್ನೂ
ಉಂಡ ತಿಂದಾರೂ ಮನಗಿದರೂ ತಾನಾ

ಉಂಡ ತಿಂದಾರೂ ಮನಗೀರೂ ಲಾಗಿನ್ನು
ಆಗೊಂದ ಮಾತಾ ಹೇಳುತೇನೇ ತಾನಾ

“ಆ ಊರಾಗೀದ್ದೀ ಈವೂರಾಗೆ ತಂದೀದೇ
ಹೋದಲ್ಲಿ ಯೇನಾದ್ರೂ ಆಗಿದರೇ ತಾನಾ
ಬಂದಲ್ಲಿ ಯೇನಾರೂ ಆಗಿದರೇ

ನನಗ್ಯೇಗೇ ಇಲ್ಲೀ ತಿಳಿಬೇಕು?” ತಾನಾ
“ಇಟುದೀನೆ ಆದರೂ ಯಾವಾ ಸುದ್ದಿ ಇಲ್ಲವೇ
ನಿನಗ್ಯಾರೂ ಹಂಚೂಗೀ ಹೇಳಿದರೂ” ತಾನಾ

“ನನಗ್ಯಾರೂ ಹೇಳವರಿಲ್ಲ ನನಗ್ಯಾರೂ ಕೇಳ್ವರಿಲ್ಲ
ನನ್ನಂದುರ್ಯಾರೂಇಲ್ಲಲ್ಲಾ ತಾನಾ
ನನ್ನಂದುರ್ಯಾರೂಇಲ್ಲಿಲ್ಲಾ ಲೀಗಿನ್ನೂ
ನನಗೇ ಕೂತಲ್ಲೇ ಹಂಬಲಾ” ತಾನಾ

ನನಗೇ ಕೂತಲ್ಲೇ ಹಂಬಲಾಲಂಬೂಕೂ

ವಂದಾ ಪೆಟ್ಟಾರೂ ಹೊಡದಿದನೇ ತಾನಾ
ವಂದಾ ಪೆಟ್ಟಾರೂ ಹೊಡದೀದಾ ಲಾಗಿನ್ನೂ

ತೀಡೀತೇಲದೂ ಮನುಗಿತೂ ತಾನಾ
ತೀಡೀತೇಲದೂ ಮನಗಿತೂ ಲಾಗಿನ್ನು

ಅವನಿಗೂ ಬಾಳಾ ಪಾಪಾ ಕಂಡಿತೂ ತಾನಾ
ಅವನಿಗೂ ಬಾಳಾ ಪಾಪಾ ಕಂಡೀತೂ ಲಾಗಿನ್ನು

ಇದ್ದಾ ಸಂಗ್ಲೆಯೊಂದಾ ಹೇಳುತಾನೇ ತಾನಾ
ಇದ್ದಾ ಸಂಗೆಯೊಂದಾ ಹೇಳುತಾನೇ ಲಾಗಿನ್ನೂ

“ನನ ಕೊಲ್ಲುರ್ಯಾರೂ ಹುಟಲಿಲವೇ ತಾನಾ
ಹೋದಲ್ಲಿ ಬಂದಲ್ಲೀ ನನುಗ್ಯೇನೂ ಆಗೊದಿಲ್ಲ

ನನ್ನ ಕೊಲ್ಲಕ್ಯಾರೂ ಹುಟುಲಿಲವೇ ತಾನಾ
ನನ್ನ ಕೊಲ್ಲುರ್ಯಾರೂ ಹುಟಲಿಲ್ಲ” ಲಂದೇಳೀ

ಸುಮ್ಮನೆ ಲವೇರೂ ಮನುಗಿದರೇ ತಾನಾ
ಸುಮ್ಮನೆ ಲವೇರೂ ಮನುಗೀರು ಲಾಗಿನ್ನೂ

ಜೋಗೀ ಉಂಡು ತಿಂದೂ ಮರುದಿನಾ ತಾನಾ
ಊರ ಮೇನೆ ಲವನೂ ನಡದಿದನೆಯೇ ತಾನಾ

ಊರು ಮೇನೆ ಲವಾ ನೆಡುವಾಕೂ ಲಾಗಿನ್ನೂ
ಮಗುನಾ ಬುಡದಲ್ಲೀ ನಡುದಾದೇಯೇ ತಾನಾ

“ನಾ ಹೇಳಿದ ಮಾತಾ ಕೇಳಿದಯೇ?” ತಾನಾ
“ನೀ ಹೇಳಿದು ಮಾತಾ ಕೇಳಿದೆ ನಾನು ಮಗುವೇ

‘ನನ ಕೊಲುಕ್ಯಾರು ಹುಟುಲಿಲ್ಲೇ ತಾನಾ
ಹಂಚುಗಿ ಯಾರು ಹೇಳುಕೊಟ್ರು?’ ತಾನಾ ಅಂದ್‌ ಹೇಳೀ

ವಂದೂ ಪಟ್ಟಾರೂ ಹೂಡುದೀದಾ” ತಾನಾ
“ಹೊಡೆದ್ರು ಹೊಡಕಣ್ಣಿ ಬಯ್ದರೂ ಬಯ್ಸಕ ನೀನು

ಮತ್ತೊಂದು ಮಾತು ಕೇಳಬೇಕೂ ತಾನಾ
ಮತ್ತೊಂದು ಮಾತು ಕೇಳಬೇಕು ಚಿಕ್ಕೀ ನೀನು

ನೀನೂ ಉಂಡು ತಿಂದೀ ಊರ ಮೇನೆ ಹೋಗುತೇ
ಯೆಲ್ಲಾರೂ ಬಿದ್ರೆ ನನಗೆಂಗೆ ತಿಳಿಬೇಕೂ?’ ತಾನಾ

ಯೆಲ್ಡಾರೂ ಬಿದ್ರೆ ನನಗೆಂಗೆ ತಿಳಿಬೇಕೂ ಲಂದೇಳೀ
ಯೆಲ್ಲಾರೂ ಬೀದ್ದೀ ಕೈಕಾಲು ನೋವಾದ್ರೆ

ನನಗ್ಯಾರೂ ಇಲ್ಲಿ ಹೇಳುವರೂ?” ತಾನಾ
“ಇಟದೀನೆ ಅವಾರೂ ಯಾವ ಸುದ್ದಿ ಇಲ್ಲಾಗಿತ್ತು

ನಿನುಗ್ಯಾರೂ ಹಂಚುಗೀ ಹೇಳು ಕೊಟ್ಟ? ತಾನಾ
ನಿನುಗ್ಯಾರೂ ಹೇಳುಕೂಟ್ರು” ಅಂದ್‌ ಹೇಳೀ

ಯಯ್ದ ಪೆಟ್ಟಾರೂ ಕೊಟ್ಟಿದುನೇ ತಾನಾ
ಯಯ್ದ ಪೆಟ್ಟಾರೂ ಕೊಡುಕೂ ಲಾಗಿನೂ

ತೀಡೇತೆ ಲದೂ, ಮನುಗೀತೇ ತಾನಾ
ತೀಡೇತೇ ಲದೂ ಮನಗೂಕು ಲಾಗಿನ್ನೂ

ಅವ್ನಿಗು ಬಾಳು ಪಾಪ ಕಂಡಿತೇ ತಾನಾ
ಅವ್ನಿಗು ಬಾಳು ಪಾಪ ಕಂಡಿತೂ ಲಾಗಿನ್ನು

ಇದ್ದ ಸಂಗ್ಲೆಯಟ್ಟು ಹೇಳುತನೆಯೇ ತಾನಾ
“ಹೋದಲಿ ಬಂದಲ್ಲಿ ನಮಗೇನೂ ಆಗೂದಿಲ್ಲ

ಯೇಳು ಸಂದ್ರದಾಚೇ ಕೀಳು ಸಂದ್ರದ ತಡಿಮೇಲೆ
ಅಲ್ಲೊಂದು ನವಲೂ ಅದಿಯಲೇ ತಾನಾ

ಅಲ ಹೋಗೂಕ್ಯಾರೂ ಹುಟುಲಿಲವೇ ತಾನಾ
ಹುಟದೋರು ಯಾರು ಇಲ್ಲ ಬೆಳದೋರು ಯಾರು ಇಲ್ಲ

ಮುಂದಾರೂ ಯಾರೂ ಹುಟುದಿಲ್ಲವೇ ತಾನಾ
ಮುಂದಾರೂ ಯಾರೂ ಹುಟುದಿಲ್ಲಾ ಲಾಗಿನ್ನೂ

ಆ ನವಲಾ ನಾರೂ ಹಡಿದಿದರೇ ತಾನಾ
ಆ ನವ್ಣಾ ನಾರೂ ಹಿಡದಿದರೇ ಲಾಗಿನ್ನೂ

ಅದ್ರ ಕಾಲ ಮುರದ್ರೇ ನನ ಕಾಲು ಮುರಿತದೇ
ಅದ್ರ ರಟ್ಟೆ ಮುರಿದರೇ ನನ ರಟ್ಟೇ ಮುರಿತದೇ

ಅದ್ರ ಕುತ್ನೆ ಮುರಿದ್ರೆ ನನ್ಗ ಪರಣ ಹೋಯಿತು”
ಇದ್ದ ಸಂಗ್ರಟ್ಟೂ ಹೇಳಿದನೇ ಲಾಗಿನ್ನು

ಮರುದಿನ ಮಗ್ನ ಕೂಡೇ ಹೇಳುತದೇ ತಾನಾ
“ಯೇಳ ಸಂದ್ರ ದಾಚೇ ಕೀಳ ಸಂದ್ರ ತಡಿಮೇನೇ

ಪಂಜರದಲೆ ವಂದೆ ನವಲೂ ಅದ್ಯಂತೆ ತಾನಾ
ಅದ್ರ ಕಾಲು ಮುರದ್ರೇ ನನ ಕಾಲು ಮುರಿತದೇ

ಅದ್ರ ರಟ್ಟೆ ಮುರೆದ್ರೇ ನನ ರಟ್ಟೇ ಮುರಿತದೇ
ಅದ್ರ ಕುತ್ಲಿ ಮುರಿದರೆ ನನ ಪರಾಣ ಹೋಯಿತು”

ಅಟ್ಟೊಂದ ಮಾತಾ ಕೇಳನೆಯೇ ಲಾಗಿನ್ನು
“ಹಳ್ಳನ ಬುಯ್ಕ್‌ ಯೊಂದ ಗೊತ್ತಿದೆಯೇ ತಾನಾ

ಹಳ್ಳನ ಬುಯ್ಡಯೊಂದಾ ಗೊತ್ತಿದ್ರೇ ಚಿಕ್ಕವ್ವಾ
ಮೂರ ಹಳ್ಳೊಂದಾ ತಂದ ಕೊಡು” ತಾನಾ

ಮೂರ ಹಳ್ಳೊಂದಾ ತಂದಿನ್ನೂ ಕೊಟ್ಟಿತೂ
ಪಂಜೀಸರುಗೀಲೀ ಕಟ್ಟಿದನೇ ತಾನಾ

ಪಂಜೀಸರುಗೀಲೀ ಕಟ್ಟಿದನೇ ಲಾ ಹುಡುಗಾ
ಸಮುದ್ರ ತಡಿಗೋಗೀ ನಿತ್ತಿದನೇ ತಾನಾ

ಸಮುದ್ರ ತಡಿಗೋಗೀ ನಿತ್ತಿದ್ದ ಲಾಗಿನ್ನು
ವಂದೆ ಹಳ್ಳ ಮಂತ್ರೀಸೀ ವಗುದೀದಾ ತಾನಾ

“ಆಚೆ ಸಂದ್ರಾಚೆಲೀ ಇಚೇ ಸಂದ್ರೀಚೇಲೀ
ನಡಗೆ ಹೆದ್ದಾರೀ ಬೀಳಬೇಕೂ ತಾನಾ
ನಡಗೆ ಹೆದ್ದಾರೀ ಬೀಳಬೇಕೂ” ಲಂದೇಳಿ

ಹಳ್ಳನ ಮಂತ್ರೀನೀ ವಗದೀದಾ ಲಾಗಿನ್ನು
ನವ್ಸನ ಜುಡುದಾಗೇ ನಡದೀದಾ ತಾನಾ

ನವ್ಸನ ಜುಡುದಾಗೇ ಹೋಗಿನ್ನೂ ಲಾಗಿನ್ನು
ನವ್ಣಗು ಕೈಯೊಂದಾ ಹಚ್ಚಿದಾ ತಾನಾ

ನವ್ಣಗು ಕೈಯೊಂದಾ ಹಚ್ಚಿದಾ ಲಾಗಿನ್ನೂ
ಅವ್ನ ಹೊಡವಾಕೇ ಬರ್ತದೆ ತಾನಾ

ಅವ್ನ ಹೊಡವಾಕೇ ಬರುವಕೂ ಲಾಗಿನ್ನು
ಮತ್ತೊಂದು ಹಳ್ಳ ಮಂತ್ರಿಸೀ ವಗದೀದಾ ತಾನಾ

ಮುದ್ಯಾಗೀ ಲಿಂದೂ ಕುಂತಿತೂ ತಾನಾ
ಮುದ್ಯಾಗೀ ಲಿಂದೂ ಕುಂತಿತೂ ಲಾಗಿನ್ನು

ಅದ್ರ ಪಂಚೇಲಿ ಕಟ್ಟಿದುನೆ ತಾನಾ
ಅದ್ರ ಪಂಚೇಲಿ ಕಟ್ಕಂಡೀ ಲಾಗಿನ್ನು

ಸಂದ್ರಾ ಕಿಲದೀಚೇ ಬಂದಿದನೇ ತಾನಾ
ಸಂದ್ರಾ ಕಿಲದೀಚೇ ಬಂದೀಗ ಲಾಗಿನ್ನು

ಮತ್ತೊಂದು ಹಳ್ಳ ಮಂತ್ರೀಸಿ ವಗದೀದಾ ತಾನಾ
ಆಚಿ ಸಂದ್ರ ಆಚಾಗ್ಲೀ ಇಚಿ ಸಂದ್ರ ಈಚಾಗ್ತೀ
ನಡಗಿನ ಸಂದರ ನೆಡಗಾಲಿ ತಾನಾ

ನಡಗಿನ ಸಂದರದಲ್‌ ನೆಡದು ಬಂದಾನು ಲಾಗಿನ್ನು
ಹಿಂಡಿನ ಮರಿಯಾಗೇ ಕುತಕಂಡಾ ತಾನಾ

ಜೋಗಿ ಬರು ಬರುವಾ ಕಂಡೀದಾ ಲಾಗಿನ್ನು
ಜೋಗಿ ಬರು ಬರುವಾ ಅಟದೂರೆ ಕಂಡು ಕಂಡೀ
ಅದ್ರ ಕಾಲೊಂದಾ ಮುರದಿದನೇ ತಾನಾ

ನವನ ಕಾಲೊಂದಾ ಮುರದೀದಾ ಲಾಗಿನ್ನು
ಅವ್ನ ಕಾಲಾರೂ ಮುರದೀತೆ ತಾನಾ

ಅವ್ನ ಕಾಲಾರೂ ಮುರದೀತೆ ಲಾಗಿನ್ನು
ರುಂಡ ನವ್ಸಾನಾ ಕೂಯ್ಬದನೇ ತಾನಾ

ರುಂಡ ನಾಗಾವ ಕೊಯ್ದದನೇ ಲಾಗಿನ್ನು
“ರಂಡಿಕಲ್ಲುದೆಂಬ್ಗ ತಗಿತಪ್ಪಾ ನನ್ನೀಗ ತಾನಾ

ಸಂಗ್ರಯೊಂದಾ ಹೇಳಿ ಬಿಟ್ಟೇ ತಾನಾ
ಸಂಗ್ರಯೊಂದಾ ಹೇಳಿ ಬಿಟ್ಟೇ” ಲಂದೇಳಿ
ಹಾರುತ್ತೇ ಬರವನೇ ತಾನಾ

ಹಾರುತ್ತೇ ಬರವಾಗೆ ಲಾಗಿನ್ನು
ರಟ್ಟೆಯಲೊಂದಾ ಮುರದಾನೆ ತಾನಾ

ರಟ್ಟೆಯನಾರು ಮುರದೀದಾ ಲಾಗಿನ್ನು
ಕುತ್ತುಗಿನಾರೂ ಮುರದೀನಾ ತಾನಾ

ಕುತ್ತುಗಿನಾರೂ ಮುರದೊಂದ್ದು ಹಿಂಡಲ್‌ ವಗುದಿ
ಜೋಗೀಯ ಮನಿಗೇ ಬಂದಿದ ತಾನಾ

ಜೋಗೀಯ ಮನಿಗೇ ಬಂದಿದಾನೇ ಲಾಗಿನ್ನು
ಅಜ್ಜವಿಲಾರೂ ಕರದೀ ತಾನಾ

“ಅಜ್ಜವಿಲಾರೂ ಕರದಿನ್ನು ಚಿಕ್ಕವ್ವ
ಅವ್ನ ಬದ್ಕ ಬಾಳಾ ಅದಕ ಕೊಡು ತಾನಾ

ಅವ್ನ ಬದ್ಕ ಬಾಳಾ ಅದುಕಿನ್ನು ಕೊಡು ಚಿಕ್ಕವ್ವ
ಅದು ಇರ್ವಲ್ಜೆ ತನಕೂ ತಿಂದಕಳ್ಳಿ ತಾನಾ

ಹಳ್ಳನ್‌ ಬುಯ್ದೊಂದಾ ತಕ್ಕಣಿ ತಾನಾ ಚಿಕ್ಕವ್ವಾ
ನಮ್ಮನಿಗೂ ನಾವು ಹೊಗುವಾನೆ ತಾನಾ

ನಮ್ಮನಿಗೂ ನಾವು ಹೊಗುವಾನೆ” ಅಂದ ಹೇಳಿ
ಚಿಕ್ಕಿ ಕರಕಂಡೇ ಬರುತಾನೇ ತಾನಾ

ಚಿಕ್ಕಿ ಕರಕಂಡೇ ಬಂದೀರೂ ಲಾಗಿನ್ನು
ಹಾಸರಗಲ್ನಲ್ಲಿ ನಿತ್ತೀದ ತಾನಾ

ಹಾಸರಗಲ್ಲಲ್ಲಿ ನಿತ್ತೀದ ಲಾಗಿನ್ನು
ವಂದೆ ಹಳ್ಳ ಮಂತ್ರೂಸಿ ವಗುದೀರು ತಾನಾ

ಯೇಳು ಜನಣು ತಮದಿರು ಯೇಳು ಪಟ ಹಿಡುಕಂಡೀ

ಯೇಳು ಜನವಾರೂ ಯೆದ್ದಿದರೂ ತಾನಾ
ಯೇಳೂ ಪಟವೊಂದಾ ಹಿಡುಕಂಡಿ ಲಾಗಿನ್ನು

ಅವನಾ ಕೊಲ್ಲೂಕೇ ಹೋಗುವರೇ ತಾನಾ
ಅವನಾ ಕೊಲ್ಲೂಕೇ ಹೋಗುವಾಗೆ ಲಾಗಿನ್ನೂ

ಬರುದ ಚೀಟ್ಯೊಂದಾ ವಗುದನೆಯೆ ತಾನಾ
ಬರುದ ಚೀಟ್ಯೊಂದಾ ವಗುದೀದಾ ಲಾಗಿನ್ನೂ

“ತಡೆ ತಡೆ ತಮೂದೀರೇ ವೊದುಕಂತೇ ತಾನಾ
ತಡೆ ತಡೆ ತಮೂದೀರೇ ವೊದುಕಂತೇ’ ಲಂದೇಳಿ

ಅಕ್ಸರವೂಂದಾ ವೋದಿದನೇ ತಾನಾ
ಮುತ್ತಿನ ಕಣ್ಣೀರಾ ಶಡಿತಾನೇ ತಾನಾ

“ದಂಡೀಗೋಗುವಾಂಗೇ ಮುರೂ ತಿಂಗ್ಳಾ ಗರುಬಿಣಿ
ಮಗ ಹುಟ್ಟಿ ಕಾರುಬಾರಾ ನೆಡಸೀದಾ ತಾನಾ

ಮಗ ಹುಟ್ಟಿ ಕಾರುಬಾರಾ ನೆಡಸೀದಾ ತಮ್ಮದೀರ
ಯೆಂಟ್‌ ಜನಮ ಜೀವ ಪಡದಿದ” ತಾನಾ

ಆಲಕ್ಕೆ ಅವನಾ ಕುದ್ರಿಮೇನೆ ಕುಳ್ಳಕಂಡೀ
ಬಂದೀ ಬಾಗ್ಗದಾಗೇ ನಿಲವರು ತಾನಾ
*****

ಕೆಲವು ಪದಗಳ ವಿವರಣ

ಈಳ * ವೀಳ್ಯ ಉಗರಾದಿ * ಹಚ್ಚಿದಳು
ರಭು – ಎಂಜಲು ಕತೂನ * ಕೆಟ್ಟ ಸಂಗತಿ
ಹಾಲರು * ಹಾಲು ಹಲ್ಲು ಲಾಂಗ್‌ * ಹಾಗೇ
ಸೂಲಿ – ಚೂಳಿ ಸಂದ್ರ * ಸಮುದ್ರ
ಬುಡು * ಗುಂಪು

ಹೇಳಿದವರು : ದೇಬಿ ಕೋಂ ಗಣಪಯ್ಯ ನಾಯ್ಕ, ಗೇರಸೊಪ್ಪೆ,
ದಿನಾಂಕ ೧೯-೦೪-೧೯೭೮

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯಲ್ಲಿ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೌಕಾಬಾರದಾಟ
Next post ಲಜ್ಜೆಗೇಡಲ್ಲಿ ಬರಿದೆ ಸತ್ವವನು ತೇಯುವುದು

ಸಣ್ಣ ಕತೆ

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ವಿಷಚಕ್ರ

  "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…