George Bernard Shaw ನ ಐತಿಹಾಸಿಕ ನಾಟಕ St. Joan

George Bernard Shaw ನ ಐತಿಹಾಸಿಕ ನಾಟಕ St. Joan

ಫ್ರಾನ್ಸನ ರಾಜ ಚಾರ್ಲ್ಸ VIನನ್ನು ಸೋಲಿಸಿ ಇಂಗ್ಲೆಂಡಿನ ದೊರೆ ಹೆನ್ರಿ V ಆತನ ಸುಂದರಿಯಾದ ಮಗಳನ್ನು ವಿವಾಹವಾಗುತ್ತಾನೆ. ಅಷ್ಟೇ ಅಲ್ಲ ೧೪೨೦ರ ಟ್ರೋಯ್ಸ ಒಪ್ಪಂದಕ್ಕೆ ಚಾರ್ಲ್ಸ VI ಸಹಿ ಹಾಕುತ್ತಲೂ ಹೆನ್ರಿ V ಚಾರ್ಲ್ಸನ VI ಪುತ್ರ Charles the Dauphin ಹಕ್ಕನ್ನು ಕಸಿದುಕೊಂಡು ಆ ರಾಜ್ಯವನ್ನು ತನ್ನ ವಶಕ್ಕೆ ಪಡೆದು ಎರಡೂ ರಾಜ್ಯಗಳ ರಾಜ್ಯಭಾರವನ್ನು ತಾನೇ ವಹಿಸಿಕೊಳ್ಳುತ್ತಾನೆ. ಆದರೆ ೧೪೨೨ರಲ್ಲಿ ಹೆನ್ರಿ ೫ ಮರಣ ಹೊಂದುತ್ತಲೂ ಆತನ ಪುತ್ರ ಬರೀಯ ಎಂಟು ತಿಂಗಳ ಹೆನ್ರಿ VI ಪಟ್ಟಾಭಿಷೇಕವಾಗುತ್ತದೆ.ಈಗ ೧೯ರ ಹರೆಯದ Charles the Dauphin ತನ್ನ ತಂದೆ ರುಜುಹಾಕಿದ ಒಪ್ಪಂದವನ್ನು ಮುರಿದು ತನ್ನ ಹಕ್ಕಿನ ರಾಜ್ಯಕ್ಕಾಗಿ ಹಂಬಲಿಸುತ್ತಾನೆ. ಆದರಾತ ರಣಹೇಡಿ, ಸ್ವಯಂಸಶಕ್ತ ಮಾನಸಿಕ ಛಲವಿಲ್ಲದ, ಬಲವಿಲ್ಲದ ರಾಜಕುಮಾರ. ಹಾಗಾಗಿ ಇಂಗ್‌ರೆಜಿಮೆಂಟ್ನ ಡ್ಯೂಕ್‌ನೊಂದಿಗಿನ ಕಾಳಗದಲ್ಲಿ ಹೆಮ್ಮೆಟ್ಟಿ ಸೋತು ಹೋಗುತ್ತಾನೆ. ಫ್ರಾನ್ಸನ ದಕ್ಷಿಣಭಾಗದ Orleans ಕೋಟೆಯನ್ನು ಇಂಗ್ಲೀಷ ಸೈನ್ಯ ಆಕ್ರಮಿಸುತ್ತದೆ. ಅದೇ ಸಮಯಕ್ಕೆ ಚಾರ್ಲ್ಸನ ನೆರವಿಗೆ ಆತನಿಗೆ ಗೊತ್ತಿಲ್ಲದ ಸಹಾಯವೊಂದು ಕಾಯುತ್ತಿದೆ. ಅವಳೇ ಜೋನ್ ಆಪ್ ಆರ್ಕ. ಅದ್ಭುತವಾದ ಶೌರ್‍ಯ, ಅಗಾಧವಾದ ಆತ್ಮವಿಶ್ವಾಸ ಆಕೆಯ ಆಸ್ತಿ. ರಾಜನಾಗುವ ಚಾರ್ಲ್ಸನ ಭಾಗಕ್ಕೆ ಆಕೆ ವರದೇವತೆಯಾಗಿ ಬರುತ್ತಾಳೆ.

ಕ್ಯಾಪ್ಟನ್ Robert de Baudricourt ನ ಮನವೊಲಿಸಿ ಸಶಸ್ತ್ರ ಸಜ್ಜಿತಳಾಗಿ ಪುರುಷ ಪೋಷಾಕು ಧರಿಸಿ ಚಾರ್ಲ್ಸನ ಕಾಣಲು ಬರುವ ಆಕೆಯ ಸಾಮರ್ಥ್ಯ ಪರೀಕ್ಷೆಗೆ ಪ್ರಾನ್ಸ ಚರ್ಚಿನ ಆರ್ಚಬಿಷಪ್ ಜನರಲ್‌ಗಳು,
ಆಸ್ಥಾನಿಕರು ಚಾರ್ಲ್ಸನ ಸಿಂಹಾಸನದಲ್ಲಿ ಬೇರೊಬ್ಬನನ್ನು ಕೂರಿಸುತ್ತಾರೆ. ಆದರೆ ಕತ್ತಿಯ ಅಲಗಿನ ಹರಿತ ಬುಧ್ದಿಯ ಆಕೆ ಆಸ್ಥಾನಿಗರ ನಡುವೆ ಕುಳಿತ ನಿಸ್ತೇಜ ರಾಜಕುಮಾರ ಚಾರ್ಲ್ಸನ ಎಳೆದು ತಂದು ತನ್ನ ಸಾಮರ್ಥ್ಯಕ್ಕೆ ಸಾಕ್ಷಿಯಾಗುತ್ತಾಳೆ. ಪರೀಕ್ಷೆಯನ್ನು ಗೆದ್ದು ಆದಾಗ್ಯೂ ಪುಕ್ಕಲು ಸ್ವಭಾವದ ಚಾರ್ಲ್ಸ ಸಮರಕ್ಕೆ ಹಿಂದೇಟು ಹಾಕುತ್ತಲೂ ಆತನ ಸಂಭಾಳಿಸಿ ಮನವೊಲಿಸುತ್ತಾಳೆ. ಯುದ್ಧಕ್ಕೆ Jack Dunois ನ ಜೊತೆಗೂಡಿ ಸೈನ್ಯದ ಮುಂಚೂಣಿಯಲ್ಲಿ ಸಾಗುವ ಆಕೆಯ ಧೈರ್‍ಯ, ಸ್ಥೈರ್ಯ ಆತನ ಮಂತ್ರಮುಗ್ಧಗೊಳಿಸುತ್ತದೆ. ದೈವದ ಪ್ರಭಾವವೆಂಬಂತೆ ನುಡಿದದ್ದೆಲ್ಲಾ ಸತ್ಯವಾಗುತ್ತಲೂ ತಾನು ದೇವ ವಾಣಿಯಿಂದ ಪ್ರಭಾವಿತಳಾಗಿದ್ದೇನೆ ಎಂಬ ಆಕೆಯ ಮಾತನ್ನು ಒಪ್ಪಿಕೊಂಡ
ಕೆಲವರು ಆಕೆಯನ್ನು ಸಂತಳೆಂದು ಭಾವಿಸಿದರೆ ಇನ್ನು ಕೆಲವು ಆಷಾಢಭೂತಿ, ಸಂಪ್ರದಾಯಸ್ಥ, ಪಟ್ಟಭದ್ರ ಹಿತಾಶಕ್ತಿಗಳು ಆಕೆಯನ್ನು ಮಾಟಗಾತಿಯೆಂದು ಬಿಂಬಿಸಲಾರಂಭಿಸುತ್ತವೆ. ಅವರಿಗಾಕೆ ಸಂತಳಂತೆ ಕಾಣುವುದಿಲ್ಲ.

ಆಕೆಯ ಚಾತುರ್‍ಯವನ್ನು ಶಂಕಿಸುತ್ತಾರೆ. ಮತ್ಸರದಿ ಬೇಯುತ್ತಾರೆ. ಇದು ಸ್ತ್ರೀ ಸಮೂಹದ ಸಾಮರ್ಥ್ಯ ಒಪ್ಪಿಕೊಳ್ಳದ ಜಗತ್ತಿನ ನೀತಿ. ಇದಕ್ಕೆ ಕಾಲ ಸ್ಥಳ ಬೇಧವಿಲ್ಲ. ೧೫ನೇ ಶತಮಾನದ ಐರೋಪ್ಯದ ಅಂದಿನ ಸಮಾಜ ಭಾರತದ ಇಂದಿನ ಸಮಾಜಕ್ಕೆ ಸಂವಾದಿಯಾಗಿ ಕಂಡುಬರುತ್ತದೆ.

ಪ್ರಾನ್ಸಿನ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಜೋನಳ ಪಾತ್ರ ಆಕೆಯ ಸಾಧನೆಗಳ ಭವ್ಯತೆ ದಿವ್ಯತೆಗಳ ಅನಾವರಣಗೊಳಿಸುವುದರಲ್ಲಿ ನಿಜಕ್ಕೂ ಬರ್ನಾಡ ಶಾ ಪ್ರಾಮಾಣಿಕವಾಗಿಯೂ ಆಸಕ್ತನಾಗಿರುವುದು. ಇಂಗ್ಲೀಷ ಧಾಳಿಕೋರರಿಂದ ಪ್ರಾನ್ಸನ್ನು ಕಾಪಾಡಲು ಅವರ ಸಾಮ್ರಾಜ್ಯದ ಕನಸನ್ನು ನನಸು ಮಾಡಲು ಶ್ರಮಿಸಿದ ಆಕೆ ತನ್ನನ್ನು ದೇವ ಪ್ರತಿನಿಧಿಯೆಂದು ಕರೆಸಿಕೊಳ್ಳುವುದು ಕೆಲವರ ಮನಸ್ತಾಪಕ್ಕೆ ಕಾರಣವಾಗುತ್ತದೆ.

ಆದರೆ ಮಧ್ಯಯುಗೀನ ಕಾಲದಲ್ಲಿ ಚರ್ಚಿನ ಗರಿಷ್ಟ ಅಧಿಕಾರದ ಮಿತಿಯಿಂದಾಗಿ ಅವುಗಳೇ ಜನರ ಆಧ್ಯಾತ್ಮಿಕ, ಬೌಧ್ಧಿಕ ಸಾಮರ್ಥ್ಯವನ್ನು ನಿಯಂತ್ರಿಸುತ್ತಿದ್ದವು. ಜನರೂ ಆ ವಿಚಾರದಲ್ಲಿ ಸ್ವಾಯತ್ತವಾಗಿ ವ್ಯವಹರಿಸುವಂತಿರಲಿಲ್ಲ. ಆದರೆ ಜೋನ್ ತನ್ನನ್ನು ದೇವರಿಂದ ಅನುಗ್ರಹಿಸಪಟ್ಟವಳೆಂದು ಕರೆದುಕೊಂಡಿದ್ದು ಹಿತವಾಗುವುದಿಲ್ಲ. ದೇವರ ನುಡಿಗಳು ಬರೀಯ ಚರ್ಚಿನ ಮೂಲಕವೇ ಬರಬೇಕೆಂಬುದು, ಚರ್ಚಮಾತ್ರವೇ ಆಧ್ಯಾತ್ಮಿಕ ಶಕ್ತಿಯ ಕೇಂದ್ರವೆಂದು-ಪರಿಗಣಿಸಲ್ಪಟ್ಟಿತ್ತು. ಹಾಗಾಗಿ ಜೋನ್‌ಳ ಪವಿತ್ರತೆಯನ್ನು ಒಪ್ಪಿಕೊಳ್ಳದ ಈ ಗುಂಪು ಜೋನ್‌ಳನ್ನು ಜನರ ದೃಷ್ಟಿಯಲ್ಲಿ ಮಾಟಗಾತಿಯೆಂದು ಬಿಂಬಿಸಬೇಕಾಗಿತ್ತು.

ಹಾಗೆ ಆಕೆಯ ಸುಮಾರ್ಗದ ಹಾದಿಯಲ್ಲಿ ಇದ್ದ ಮತ್ತೊಂದು ಮುಳ್ಳೆಂದರೆ ಅದು ರಾಜಕೀಯ ವ್ಯವಸ್ಥೆಯ ಕರಾಳ ಹಸ್ತಗಳು. ಹೊಸತನ್ನು ಒಪ್ಪಿಕೊಳ್ಳುವುದು, ಹಳೆಯ ಸಿದ್ಧಾಂತಗಳ ವಿರುದ್ಧ ಮಾತನಾಡುವುದು ತಪ್ಪೆಂದು ವಾದಿಸುವ ಜಗತ್ತು. ಅದಕ್ಕಾಗಿ ಬರ್ನಾಡ ಶಾ ತನ್ನ ನಾಟಕದ ಕೇಂದ್ರ ವಸ್ತುವನ್ನಾಗಿ ಆತ ಬಳಸಿಕೊಂಡಿದ್ದು ಜೋನ್ ಆಪ್ ಆರ್ಕಳ ಮತ್ತು ರೋಮನ್ ಕ್ಯಾಥೋಲಿಕ್ ಚರ್ಚ ಹಾಗೂ ಮಧ್ಯಯುಗೀನ ಊಳೀಗಮಾನ್ಯ ಪದ್ಧತಿಯ ನಡುವಿನ ಸಂಘರ್ಷವನ್ನು.

ಜೋನ್‌ಳ ಪ್ರಯತ್ನದ ಫಲವಾಗಿ ಚಾರ್ಲ್ಸ ರಾಜನಾಗುತ್ತಾನೆ. ಆದರೆ ಆಕೆಯ ಇನ್ನೊಂದು ಆಕಾಂಕ್ಷೆ ಎಂದರೆ ಪ್ಯಾರಿಸ್‌ನ್ನು ವಶಪಡಿಸಿಕೊಳ್ಳುವುದು. ಆದರೆ ರಾಜ ತಾನು ಅದಕ್ಕೆ ಸಿದ್ಧನಿಲ್ಲವೆಂದು ಒಪ್ಪಂದ ಮಾಡಿಕೊಳ್ಳುವೆನೆಂದು ಹೇಳುತ್ತಲೂ ಆರ್ಚಬಿಷಪ್ ಕೂಡ ಅದನ್ನೆ ಸಮರ್ಥಿಸಿದಾಗ ಜೋನ್ ಹತಾಶೆಗೊಳ್ಳುತ್ತಾಳೆ. ಸಿಡಿದೇಳುತ್ತಾಳೆ. ಆಕೆಯ ಈ ವರ್ತನೆಯನ್ನು ಉದ್ದಟತನವೆಂದು ಆರ್ಚಬಿಷಪ್ ಮತ್ತು ಇತರರು ಜರಿಯುತ್ತಾರೆ ಆದರೆ ಆಕೆ ತನ್ನ ಗುರಿಯನ್ನು ಮುಟ್ಟಲು ಏಕಾಂಗಿಯಾಗಿ ಹೊರಟು ಹೋದರೂ ಇಷ್ಟೆಲ್ಲಾ ಸಹಾಯ ಮಾಡಿದ ಆಕೆಗೆ ಸಹಕರಿಸುವುದಿಲ್ಲ ರಾಜ. ಹೀಗಾಗಿ ಆಕೆ ಒಬ್ಬಂಟಿಯಾಗಿ ಹೊರಟು ಅಪಾಯದ ಬಲೆಯಲ್ಲಿ ಸಿಕ್ಕಿ ಬೀಳುತ್ತಾಳೆ.

ಇಂಗ್ಲೀಷ ಸೈನ್ಯ ಆಕೆಯ ಶೌರ್‍ಯ ಕಪ್ಪು ವಿದ್ಯೆಯ ಬಲವೆಂದು ತಿಳಿದು ಆಕೆಗೆ ಜೀವಾವಧಿ ಶಿಕ್ಷೆಗೆ ಗುರಿಪಡಿಸಲು ನಿರ್ಧರಿಸುತ್ತದೆ. ಇಂಗ್ಲೆಂಡಿನ ನೊಬಲ್ ಮ್ಯಾನ್ ಹಾಗೂ ಮಿಲಿಟರಿ ಲೀಡರ ಇಚಿಡಿಟ Earl of Warwick ಜೋನ್ ಳ ಕೃತ್ಯವನ್ನು ಹೀಗಳೆದು ವಿರೋಧಿಸುತ್ತಾನೆ. ಆತನಿಗೆ ಪ್ರಾನ್ಸನಿಂದ ಇಂಗ್ಲೀಷರ ಸ್ಥಳಾಂತರ ಬೇಕಿರಲಿಲ್ಲ. ಇದು ಊಳಿಗಮಾನ್ಯ ವ್ಯವಸ್ಥೆಗೆ ಪೆಟ್ಟು ಎಂಬ ಕಾರಣಕ್ಕೆ. ಹಾಗಾಗಿ ಆಕೆಗೆ ಮಾಟಗಾತಿಯ ಪಟ್ಟ ಕಟ್ಟಿ ತಮ್ಮ ಕಾರ್ಯ ಸಾಧನೆ ಮಾಡಿಕೊಳ್ಳಬೇಕಿತ್ತು. ಅದಕ್ಕೆ ಆಕೆಗೆ ಜೀವಾವಧಿ ಶಕ್ಷೆ ನೀಡಲು ನಿರ್ಧರಿಸುತ್ತಾರೆ. ಜೀವಾವಧಿ ಶಿಕ್ಷೆಗೆ ವಿರೋಧಿಸಿ ಆಕೆ ತಾನಾಗಿಯೇ ಉರಿಯುವ ಬೆಂಕಿಯನ್ನು ಅಪ್ಪಿಕೊಂಡು ಅಮರಳಾಗುತ್ತಾಳೆ.

ನಾಟಕದ ಕೇಂದ್ರ ಪಾತ್ರ ಜೋನ್. ಆಕೆ ಧರಿಸುವ ಪುರುಷ ವೇಷದ ಧಿರಿಸು ಆಕೆಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಆಕೆ ಎಲ್ಲ ಸಾಮಾನ್ಯ ಹೆಣ್ಣುಗಳಂತೆ ಮಾಧುರ್‍ಯದ ಗುಣಗಳನ್ನು ಎಲ್ಲಿಯೂ ಪ್ರದರ್ಶಿಸುವುದಿಲ್ಲ. ಬದಲಿಗೆ ಆಕೆಯ ನುಡಿಗಳಲ್ಲಿಯೇ ಅವಳ ವ್ಯಕ್ತಿತ್ವ ಅರಿವಾಗುತ್ತದೆ “They dream of lovers and of money: I dream of leading a charge” Dunois ಮಾತು ಇದನ್ನೆ ಪುಷ್ಟಿಕರಿಸುತ್ತದೆ. You are in love with war”

ಆಕೆ ಅಧಿಕಾರ, ಗದ್ದುಗೆ ಹೊಂದಿದವರ ಒಲೈಸುವುದಿಲ್ಲ. ಆದರೆ ಮಾನವೀಯತೆಯನ್ನು ಬೆಂಬಲಿಸುತ್ತಾಳೆ. ಆಕೆ ಕ್ರಾಂತಿಕಾರಿ ನಡೆಯುಳ್ಳವಳು. ಸೈನ್ಯದ ಜವಾಬ್ದಾರಿಯನ್ನು ಪುರುಷನಿಗೆ ಮೀರೀದ ರೀತಿಯಲ್ಲಿ ನಿಭಾಯಿಸುತ್ತಾಳೆ. ಆದರೆ ಅತಿಯಾದ ಸ್ವಾತಂತ್ರ್ಯದ ಹಂಬಲ ಆಕೆಯನ್ನು ಸಾವಿನ ದವಡೆಗೆ ಕರೆದೊಯ್ಯುತ್ತದೆ. ಆಗಾಗ ಆಕೆಯ ವರ್ತನೆ ಅಧಿಕ ಪ್ರಸಂಗದಂತೆ ಬಿಂಬಿಸಿದ್ದಾನೆ ಶಾ. ಆದಾಗ್ಯೂ ಜೋನ್‌ಳಿಗೆ ದೇವರ ಮೇಲೆ ಅಚಲ ನಂಬಿಕೆ ಚರ್ಚಿನ ಮೇಲಿನ ಭಕ್ತಿ ಆಕೆಯ ಸಂತ ಜೀವನದ ಶೈಲಿ ಎಲ್ಲವೂ ಅತ್ಯಪೂರ್ವ ವ್ಯಕ್ತಿತ್ವವನ್ನು ಆಕೆಗೆ ತಂದುಕೊಟ್ಟಿದೆ. ಐತಿಹಾಸಿಕ ಸ್ತ್ರೀ ಪಾತ್ರಗಳಲ್ಲಿ ಅಪೂರ್ವವಾದ ಶಿಲ್ಪವಾಗಿ ಆಕೆ ಉಳಿಯುತ್ತಾಳೆ.

ಜಾರ್ಜ ಬರ್ನಾಡ ಶಾ ಐರಿಷ್ ದಂಪತಿಗಳಿಗೆ ೧೮೫೬ರಲ್ಲಿ ಡಬ್ಲಿನನಲ್ಲಿ ಜನಿಸಿದ. ಸಂಗೀತ ಹಾಗೂ ಭಾಷಾ ಪ್ರೇಮಿಯಾದ ಆತ ೧೮೭೬ರಲ್ಲಿ ಐರ್‍ಲೆಂಡ ಬಿಟ್ಟು ಲಂಡನ್ನಿಗೆ ಬಂದ. ಕಾರ್ಲಮಾರ್ಕ್ಸನ ಬರಹಗಳು, ಹೆನ್ರಿ ಜಾರ್ಜನೊಂದಿಗಿನ ಒಡನಾಟಗಳು ಶಾನನ್ನು ಬರಬರುತ್ತ ಸಮಾಜವಾದಿ ಧೋರಣೆಗಳ ಕಡೆ ಆಕರ್ಷಿಸಿತು. ಹಲವಾರು ಕಾದಂಬರಿ, ಪ್ರಬಂಧಗಳು, ನಾಟಕಗಳ ಬರೆದ ಶಾಗೆ ೧೯೨೫ರಲ್ಲಿ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಕೂಡ ದೊರೆಯಿತು. ಆದರೆ ಪ್ರಶಸ್ತಿಯ ಎಲ್ಲ ಮೊತ್ತವನ್ನು ಆಂಗ್ಲೋ-ಸ್ವೀಡನ್ ಸಾಹಿತ್ಯ ಸಂಘಟನೆ ಪ್ರಾರಂಭಿಸಲು ನೀಡಿದ ಧಾರಾಳಿ ಇತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೇ ಬಸವಾ ಬಸವನಂದಿರೇ
Next post ಆ ಕನ್ನಡಿ ಬೇಕೆಂದರೆ……

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys