ಕಾದಿಹಳು ಭೂದೇವಿ, ನೀವು ಬಾರಿರಾ! ದಿವ್ಯ ತೀರ್ಥ ತಾರಿರಾ! ಬಿಸುಸುಯಿಲ ಬೇಗೆ ಹೊಮ್ಮಿ ಆಗಸವ ತಟ್ಟಿ ತಿವಿಯೆ ಹರಣವನೆ ಕೊರಳಲಿರಿಸಿ ಕರುಣೆಯನು ಕೇಳುತಿಹಳು ಕ್ಷಣ ಕ್ಷಣವು ನಿಮ್ಮ ನೆನಸು ಆನುದಿನವು ನಿಮ್ಮ ಕನಸು ಮರದುದಿಗೆ ಕಣ್ಣನಿರಿಸಿ ನೋಡುವಳು ಕ್...

ಯಾರ ದಾರಿಯ ಕಾಯುತಿರುವೆನು ಯಾರ ಬರವಿಗೆ ನವೆಯುತಿಹೆನೊ? ||ಪ|| ಹೃದಯ ವೀಣೆಯು ಯಾವ ಕೊರಗಿನ ಚಳಿಯ ಬೆರಳಿಗೆ ನಡುಗುತಿದೆಯೊ? ||ಅ.ಪ.|| ಬೆಳಕು ಬೆಳೆಯಲು ಎದೆಯನರಳಿಸಿ ಅರುಣ ಕಿರಣದ ಮುದ್ದನಾಶಿಸಿ ಪಕಳಿ ಮೊಗವನ್ನೆತ್ತಿ ನಿಂತಿಹ ಹೂವ ಕಾಣಲು, ಯಾರನೋ...

ಬೇಗ ಬಾ, ಇರುಳ ದೇವಿ ಬಾ, ಬಾ, ತಡೆಯದಿರು ಸಿಂಗರಕೆ, ಬೇಗ ಬಾ, ಬಾ, ಬಾ! ತಾರೆಗಳ ಲಾಸ್ಯವೇಕೆ ಚಂದ್ರಿಕೆಯ ಹಾಸ್ಯವೇಕೆ ಮುಡಿಗೆ ಸಾಕು ಏಳು ಚಿಕ್ಕೆ ಕಿವಿಗೆ ಎರಡು ಓಲೆ! ಮೊಗ್ಗೆಗಿನಿಸು ನಗೆಯನಾಯ್ದು ದಣಿದ ಮನಕೆ ತಣಿವತಂದು ಬೆಂದ ಬಾಳು ಅರಳುವಂತೆ ಬ...

ಎನಿತುಕಾಲ ಹುದುಗಿ ಕೊಳೆವುದು ಎನಿತುಕಾಲ ನೆಲದಲಡಗಿ, ಕೊಳಚೆಯಾಗಿ ಕಳೆವುದು? ಮಳೆಯ ಹನಿಯು ತಟ್ಟಿ ಕರೆದರೂ ಬೆಳಕ ಕಿರಣ ಇಣಿಕಿ ನಡೆದರೂ ಮನದ ಆಸೆ ಕೊನರದಿಹುದು ಕೊಳೆಕೊಳೆವುದು ಕಸದಲಿ ಹಿರಿಯ ಕನಸ ಕಂಡಿತಾದರೂ ಚಿಗಿದು ಬೆಳೆಯ ಬಯಸಿತಾದರೂ ಕಸದ ರಾಶಿ ...

ನಿನ್ನೊಲವಿನಾಳದಲಿ ಮುಳುಗಿ ಮರೆತಿಹೆ ನನ್ನ ಮನವ ಮುತ್ತಿದ ಮಣ್ಣ ತೊಡರುಗಳ ಕಿತ್ತೊಗೆದು ನಿನ್ನೊಲವ ಜೊನ್ನದಲಿ ಮಿಂದು ಉನ್ಮದಿಸಿರುವೆ ಹಿರಿಮೆ ಹೊನ್ನುಗಳಾಸೆ ವಿಫಲನವೆನಿಸಿತು ಮನಕೆ ಸಂತೃಪ್ತ, ಸಂಪನ್ನ, ಪೂತ, ಸ್ವಾಂತಃಪೂರ್ಣ ನಿದ್ದೆಯಾ ಮರೆಯಿಲ್ಲ,...

(ಒಂದು ಪ್ರಗಾಥ) ಹೃದಯ ಕಂಪಿಸುತಿಹುದು ಆನಂದ ದೂರ್ಮಿಯಲಿ ತುಂಬಿ ಮೈಮನವನ್ನು ಬಂಧಿಸಿಹುದು ಇಹುದೆ ಇಂತಹ ಚೆಲುವು ಲೋಕದಲಿ ನಾಕದಲಿ ನಿನ್ನವೊಲು, ಶ್ಯಾಮಲೆಯೆ, ಮಾಗಿದೊಲವು ಹರಣಗಳ ನಯನದಲಿ ಅರಳಿಸುತ ನೋಡುವೆನು. ಕಡಲನ್ನೆ ಕುಡಿಯುವೊಲು ದಿಟ್ಟಿಸುವೆನು...

ಇರುಳು ಕಳೆಯಿತು, ಬೆಳಕು ಬೆಳೆಯಿತು, ನೋಡು ಮೂಡಣ ದಿಕ್ಕಿಗೆ ಮನದ ಕ್ಲೇಶದ ಲೇಶ ಕಳೆಯಿತು ಮತ್ತೆ ಹೊಮ್ಮಿತು ನಂಬಿಗೆ! ಚೆಲುವ ಬೆಳಕಿನ ಹವಳದುಟಿಯದೊ ಬಾನಿನಂಚನು ತಟ್ಟಿತು ಕೆಂಪು ಕೊನರಿತು ಚಿಮ್ಮಿ ಹರಿಯಿತು ದಿಗ್‌ ದಿಗಂತವ ತುಂಬಿತು. ನೂರು ನಾಲಗೆಯ...

ಗೋಳನಂಜಿನ ಗಾಳಿ ಬೀಸೆ, ಬಾಳಿನಬಳ್ಳಿ, ಮುರುಟಿರಲು ಗಾಸಿಗೊಂಡು ಶಾಪದೊಲು ಚಂಡಾಶು ಶಾಂತಿಯನ್ನೇ ತಳ್ಳಿ ತಾಂಡವವ ನಾಡಿತಂದು ಆಸೆಗಳು ಕನಸುಗಳು ಮನದೆಲ್ಲ ಉಸಿರುಗಳು ಹಳೆತು ಕೊಳೆ ಕಹಿಯಾದವು ಬಾಳ ಬೆಳೆಸಲು ಬಗೆದ ಭಾವಗಳು ರಾಗಗಳು ಇರಿವ ಕೂರಲಗಾದವು. ನ...

ದೇವ ಹೃದಯದ ನೀಲದಾಳದಿ ಮೊರೆವ ಸ್ನೇಹದ ಸಿಂಧುವೆ! ಬೆಂದ ಬಾಳಿಗೆ ನೊಂದ ಜೀವಿಗೆ ನೀನೆ ಸರುವರ ಬಂಧುವೆ! ಇಳೆಯ ಕುದಿಯನು ಕಳೆಯಲೋಸುಗ ಹಸಿರ ಸಿರಿಯನು ಹೊದಿಸಿದೆ ಏಳು ಕಡಲುಗಳನ್ನೆ ಹರಿಯಿಸಿ ಪ್ರಾಣಪವನವ ಸುತ್ತಿದೆ. ಹಗಲಿನುರಿ ನಂದಿಸಲು ಸಂಧ್ಯಾ- ಮೋಹ...

ಹೃದಯದೊಳಗುನ್ಮಾದ ತುಂಬಿದೆ ಕಾಲಿನೊಳಗುರಿಯೆದ್ದಿದೆ ಮರಣ ಮೂರ್ಛಿತ ಮನವು ಹರಣದ ಬಲಿತ ಗರಿಗಳ ಪಡೆದಿದೆ ಕಟ್ಟುಗಳ ಕಿರಿಗೂಡಗೋರಿಯ ಮುರಿದು ಮೇಲಕೆ ನೆಗೆಯುವೆ ಇನ್ನು ನಿಲ್ಲೆನು ನಾನು ಇಲ್ಲಿಗೆ ಬಾನಿನಂಚನೆ ಮುಟ್ಟುವೆ ಯಾರು ತಡೆವರು ನನ್ನನು? ಯಾರು ಕ...