
ಭಾವನ ಭಾವನ ಭಾವನ ನಿನ್ನ ಉಳಿವಿನಲಿ ನನ್ನ ಚೇತನ ಚೇತನ ಚೇತನ ಚೇತನ || ಬದುಕೆಂಬ ಬಳ್ಳಿಯಲಿ ಹೂವೆಂಬ ಚೇತನ ಭಾವನ || ಉಣ್ಣುವ ತುತ್ತು ತುತ್ತಿನಲ್ಲಿ ಅನಂತ ಅನಂತ ಚೇತನ ಬಡವ ಬಲ್ಲಿದ ಭೇದ ತೊರೆದ ನಿತ್ಯನೂತನ ನೂತನ ಭಾವನ || ಜೋಗುಳ ಹಾಡುವ ತಾಯಿ ಮಮತ...
ಒಂದೊಂದು ಚಿಕ್ಕ ಚಿಕ್ಕ ಪ್ರಾಂತಗಳಲ್ಲಿ ದೊಡ್ಡ ಪ್ರಮುಖರಾಗಿ ದೊರೆಗಳಂತೆ ಆಳಿಕೊಂಡು ಜನರಿಂದ ಕಂದಾಯ ಕಾಣಿಕೆ ಮೊದಲಾದ ವರಿಗಳನ್ನು ತೆಗೆದುಕೊಳ್ಳುತಾ ದುಷ್ಟರನ್ನು ನಿಗ್ರಹಿಸುತಾ ಶಿಷ್ಟರನ್ನು ಕಾಪಾಡುತಾ ಇದ್ದ ಮುಖಂಡರನ್ನು ಪಾಳಯಗಾರರು ಎಂಬ ಹೆಸರಿನ...
ಹರಿ ನಿನ್ನ ನಿತ್ಯ ನಿತ್ಯ ಧ್ಯಾನಿಸಿ ಎನ್ನ ಈ ಬದುಕು ಸದಾ ಭವ್ಯವಾಗಲಿ ನಿನ್ನ ರೂಪವೊಂದೇ ಈ ಕಂಗಳಲಿ ಕುಣಿದು ಅರಳಿ ಅರಳಿ ಈ ಜನುಮ ದಿವ್ಯವಾಗಲಿ ಹರಿ ನಿನ್ನ ತೊರೆದು ಕ್ಷಣವು ಎಲ್ಲವೂ ಯುಗದ ಸಮಾನವೆಂದು ನಾ ಹೇಳಬೇಕೆ! ನವ ವಧು ತನ್ನ ಸಂಗಾತಿಗೆ ಕಾಣದ...
ಮರೆಯ ಬೇಡ ಮನುಜ ನೀನು ಮಾನವೀಯತೆ| ಮೆರೆಯಬೇಡ ಮನುಜ ನೀನು ಮದವೇರಿದ ಪ್ರಾಣಿಯಂತೆ| ಮನುಷ್ಯಗಲ್ಲದೆ ಮಾನವತೆಯಮೌಲ್ಯ ಪ್ರಾಣಿಗಳಿಗೆ ಶೋಭೆ ತರುವುದೇ|| ಅಧಿಕಾರ ದರ್ಪ ಯಾರ ಬಳಿ ಶಾಶ್ವತವಾಗಿ ನಿಂತಿದೆ| ಯಾರಬಳಿ ಲಕ್ಷ್ಮಿ ಸದಾ ಇರುವಳೆಂದು ಭ್ರಮಿಸುವೆ|...
ಅವಳು ಮುಂಜಾನೆ ಎದ್ದು ಜಳಕ ಮಾಡಿ ಕನ್ನಡಿ ಮುಂದೆ ನಿಂತಳು. ಕಣ್ಣಲ್ಲಿ ಕಾಂತಿ, ಮುಖದಲ್ಲಿ ಹೊಳಪು, ಮನದಲ್ಲಿ ಶಾಂತಿ ಮೂರೂ ಅವಳಿಗೆ ಕನ್ನಡಿಯಲ್ಲಿ ಕಂಡಿತು. ನಾನು ಎಷ್ಟು ಆರೋಗ್ಯವಂತೆ ಎಂದುಕೊಂಡಳು. ವೃತ್ತ ಪತ್ರಿಕೆ ಓದಲು ಆರಾಮವಾಗಿ ಕುಳಿತಳು. ಅದ...
ಗಾಯಗೊಂಡು ಚೀರುವೆದೆಗೆ ಗುಟುಕು ಕೊಟ್ಟೆ ಮುಖವಾಡಗಳ ಗೂಢದಲ್ಲಿ ಬುದ್ಧಿಬುರಖಾಗಳ ಬಡಿವಾರದಲ್ಲಿ ಗಾಢವಾಗದೆ ಗಡಿದಾಟಿ ದೋಣಿ ಮೀಟಿ ಏಕಾಂತ ಏದುಸಿರಿಡುವಾಗ ಕಾಂತಾಸಮ್ಮಿತವಾದೆ. ಕೆಣಕುವ ಬೆಡಗು ಗುಟರುವ ಗುಡುಗು ಚಳಿಯ ನಡುಗು- ಗಳ ಉಜ್ಜುವಿಕೆಯಲ್ಲಿ ಕಿ...
ಸತೀಶ್ ಕುಲಕರ್ಣಿಯವರು ಚಳವಳಿಗಳಲ್ಲಿ ತೊಡಗಿ ಕೊಂಡವರು. ಸಿದ್ಧಾಂತ ಮತ್ತು ಸಂಸ್ಕೃತಿಯ ಉಳಿವಿಗಾಗಿ ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕ್ರಿಯಾಶೀಲ ವ್ಯಕ್ತಿತ್ವ ಅವರದು. ತಾವು ನಂಬಿದ ತತ್ವಾದರ್ಶನಗಳನ್ನು ಬೀದಿನಾಟಕಗಳ ಮೂಲಕ ಹೇಳುವ ಪ್ರಯ...
ಏನು ಪೇಳಿದನಮ್ಮ ನನ್ನಯ ಪ್ರಿಯನು ಏನು ಸಂದೇಶವ ನೀ ತಂದೆ ಸಖಿಯೆ || ಪ || ಏತಕೆ ಬಾರನೋ ಪ್ರಾಣಪ್ರಿಯನಮ್ಮ ಕಾತರಿಸಿದೆ ಜೀವಾ ತಾಳಲಾರೆನಮ್ಮ ಯಾತನೆ ತಾಳೆನು ಮುಳ್ಳ ಮೇಲಿನ ಬಾಳು ಆತನ ಮಾತೇನು ಪೇಳೆ ಸಖಿ || ೧ || ಕಣ್ಣಲಿ ಅವನದೆ ರೂಪವು ಕುಣಿದಿದೆ ...
ಈ ಗತಿಶೀಲ ಜಗದಲ್ಲಿ ಅತಿಯಾಗದೆ ಇರು ಇತಿಯಾಗದೆ ಇರು ಶ್ರುತಿ ಮಾಡಿದ ವೀಣೆಯ ಹಾಗಿರು ನುಡಿಸುವ ಗಾಯಕ ನುಡಿಸುವ ವೇಳೆಗೆ ನಡೆಸುವ ಗುರು ನಡೆಸುವ ವೇಳೆಗೆ ತಡವರಿಸುವ ಭಯ ಯಾತಕೆ ಹೇಳು ಮಗುವಿನ ಸೋಜಿಗ ಅಂತೆಯೆ ಇರಲಿ ನಗುವಿನ ಚೆಲುವು ಮಾಯದೆ ಇರಲಿ ಮುಗಿ...
ವಾಗ್ದೇವಿಯು ಬಾಗಿಲು ಹಾಕಿ ತಿಪ್ಪಾಶಾಸ್ತ್ರಿಯು ಹೇಳಿದ ಜಾತಕ ಭಾವವನ್ನು ಕುರಿತು ತಾಯಿಯ ಕೂಡೆ ಪ್ರಸ್ತಾಸಿಸುತ್ತಿರುವಾಗ ವೆಂಕಟಪತಿ ಆಚಾರ್ಯನು ಮೆಲ್ಲನೆ ಜಗಲಿಯಿಂದ ಕೆಳಗಿಳಿದು ಬಾಗಲಿಗೆ ಕೈತಟ್ಟಿ “ಭಾಗೀರಥಿ! ಭಾಗೀರಥಿ” ಎಂದು ಕರೆದನು. “ಯಾರದು” ...
ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...
















