ಅಂಗಿಯ ಮೇಲದು ಶಾಯಿಯ ಚುಕ್ಕಿ. ಜೇಬಿನಲ್ಲಿ ಚಕ್ಕಲಿ ಅವಲಕ್ಕಿ, ನಾಲಿಗೆ ಬಹಳೇ ಹೋಗಿದೆ ಸೊಕ್ಕಿ ! ಬಂದ ಬಂದನವ ಗೋವಿಂದಾ. ಮಾಮಿಡಿಯೊಂದೂ ಮರದೊಳಗಿಲ್ಲ; ಪೇರಲ ಹಣ್ಣೂ ಕಾಣುವದಿಲ್ಲ; ಆತನು ಹುಡುಕದ ಗಿಡಮರವಿಲ್ಲ ! ಬಂದ ಬಂದನವ ಗೋವಿಂದಾ ಸಂಗಡ ಹುಡುಗರ ತಂಡವ ಕಟ್ಟಿ. ಊರಿನ ನಾಲ್ಕೂ ಗಡಿಯನೆ ಮುಟ್ಟಿ, ತಂಟೆಯ ತರುವ...

ಎಷ್ಟಾದರೂ ನಾನು ನಿನ್ನ ಗುಲಾಮ ತಾನೆ ? ಕಾಯುವೆನು ನಿನ್ನ ಬಿಡುವಿಗೆ, ನಿನ್ನ ಇಚ್ಛೆಗೆ; ನನ್ನ ಕಾಲ ಅಮೂಲ್ಯವೇನಲ್ಲ ಪ್ರಭು, ನೀನೆ ಕಾರ್ಯವೊಂದನು ನನಗೆ ಆದೇಶಿಸುವವರೆಗೆ. ನಿನಗಾಗಿ ಕಾಯುತ್ತೆ ಗಡಿಯಾರ ನೋಡುತ್ತ ಕೊನೆಯಿರದ – ಗಂಟೆ –...

ದೂರವಾದ ಮಗ ಮಗ ಗುಲ್ಬರ್ಗಕ್ಕೆ ಹೋದ ಮೇಲೆ ಕಳುಹಿಸುತ್ತಿದ್ದುದು ಬರೇ ಐನೂರು ರೂಪಾಯಿ. ರಾಮಕೃಷ್ಣಯ್ಯನವರ ಪಿಂಚಿನಿ ಮತ್ತು ಇದರೊಳಗೆ ಎಷ್ಟು ಎಳೆದಾಡಿದರೂ ಸಂಸಾರ ತೂಗಿಸಲೇ ಸಾಧ್ಯವಾಗ್ತಿರಲಿಲ್ಲ ಸುಶೀಲಮ್ಮನಿಗೆ. ಹೀಗೆ ಹಲವಾರು ತಿಂಗಳು ರಾಮಕೃಷ್ಣಯ್...

ಕೃಷಿಯ ಮಾಡೋಣ ನಾವು ಕನ್ನಡಾಂಬೆಯ ಮಡಿಲಲಿ ಸಿರಿ ಕನ್ನಡದ ನೆಲದಲಿ ನಾವು ಕನ್ನಡದ ಕೃಷಿಯ ಮಾಡೋಣ. ತುಂಗ-ಭದ್ರ ಕೃಷ್ಣೆ ಕಾವೇರಿಯ ಜೀವ ಜಲವ ಹರಿಸಿ ಜನಮನವ ಹದವಾಗಿಸಿ ಜನಮನದ ಕಳೆ ತೆಗೆಯೋಣ ಬಿತ್ತೋಣ ಬೀಜ ಬಿತ್ತೋಣ ಕರುಣಾಳ ಜನರ ಮನದಲಿ ಸಿರಿ ಕನ್ನಡದ ...

ನೀನು ದಯಾಮಯ ಕರುಣಾಸಾಗರ ಕ್ಷಮಾಗುಣ ಸಂಪನ್ನ, ನಾನು ನಿನ್ನ ಶರಣ ಚರಣದಾಸ, ನಿನ್ನಂತೆಯೇ ಕ್ಷಮಯಾಧರಿತ್ರಿ. ನೀ ನನಗೆ. ಕೊಟ್ಟ ಸುಖಕೆ ನಿನ್ನ ದಯೆ ಎಂದು ವೆಂದಿಸಿದೆ. ನೀ ಕೊಟ್ಟ ಕಷ್ಟ ಕೋಟಲೆಗೆ ನಿನ್ನ ದೂರದೆ ಕರ್ಮ ನನ್ನದೆಂದು ನಿಂದಿಸಿ ನನ್ನನೇ ನಿ...

ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದಲ್ಲಿ ಚಾರಿತ್ರಿಕ ಸಂಗತಿಗಳ ಸತ್ಯಾನ್ವೇಷಣೆ ಮತ್ತು ಸಾಮರಸ್ಯ ಗೌಣವಾಗಿ, ಭಾವೋದ್ರೇಕದ ಬುಲ್ಡೋಜರ್ ತನ್ನೆಲ್ಲ ಅಬ್ಬರದೊಂದಿಗೆ ಬೀದಿಗೆ ಬಂದಿದೆ. ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳು ಔಚಿತ್ಯ ಪ್ರ...

ನಿಲ್ಲು ನಿಲ್ಲು ನಿಲ್ಲು ಮನವೆ ಮರಳಿ ಯಾತಕ ಮರೆಯುವಿ ಟೊಂಗಿ ಟೊಂಗಿಗೆ ತೂರಿ ಹಾರುವಿ ಮಂಗನಾಟವ ಮಾಡುವಿ ಯಾರು ಯಾರಿಗೊ ಶಿವಾ ಅನ್ನುತ ಗುಡ್ಡ ಬೆಟ್ಟಾ ತಿರುಗಿದಿ ಗಡಿಗಿ ಮಡಕಿ ಕುಡಿಕಿ ಚಟಿಗಿಗೆ ಅಡ್ಡ ಉದ್ದಾ ಉರುಳಿದಿ ಚರ್ಮ ಚೀಲಕ ಮಣ್ಣ ಹೆಂಟಿಗೆ ದ...

ದೊಗಲೆ ಚಡ್ಡಿ ಹಾಕಿಕೊಂಡು ಬಂದಿದ್ದ ಹುಡುಗನಿಗೆ ಟೀಚರ್ ಹೇಳಿದ್ರು: “ನೊಡು ಇಷ್ಟು ದೊಗಲೆ ಚಡ್ಡಿ ಹಾಕಿರುವೆ, ನಾಳೆ ನಿಮ್ಮಪ್ಪನನ್ನು ಕರೆದುಕೊಂಡು ಬಾ..” ಹುಡುಗ ಹೇಳಿದ- “ನಾ ಬಂದ್ರೆ ನಮ್ಮಪ್ಪ ಬರುವಂತಿಲ್ಲ.” ಟೀಚರ್...

ಒಣಗಿದ ನನ್ನವ್ವನ ಎದೆಯಿಂದ ಝಲ್ಲೆಂಬ ಜೀವರಸ ಬತ್ತಿ ಎಂದಿಗೂ ಬಾಯಿ ತುಂಬಾ ಗುಟುಕು ಎಟುಕಲಿಲ್ಲ ನನ್ನ ಬಾಯಿಗೆ. ಏಕೆಂದರೆ ನನ್ನಪ್ಪನ ಕಷ್ಟಗಳು ಅವಳಿಗೆ ಹೊಟ್ಟೆ ತುಂಬಿಸಲಿಲ್ಲ. ಬಡತನದ ಬೇಗೆಯಿಂದ ಬೇಸತ್ತು ನನ್ನಪ್ಪ – ನನ್ನವ್ವನಿಗೆ ಅಡವಿಟ್...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...