ಜಗವನು ಬೆಳಗುವ ರವಿಯಿಹನೆಂದು, ತಣ್ಗದಿರನು ಶಿರದೊಳಗಿಹನೆಂದು, ಅಪಾರ ಸಂಪದವಲ್ಲಿಹುದೆಂದು, ಅಷ್ಟೈಶ್ವರ್ಯವು ತನಗಿಹುದೆಂದು, ಸಗ್ಗದೊಡೆಯ ತಾ ಪೇಳುವನು! ಬಲು ಬಲು ಬಿಂಕವ ತಾಳಿಹನು!! ಮೀರಿದ ಶೂರರು ಅಲ್ಲಿಹರೆಂದು, ಕುಕ್ಕುವ ಕವಿವರರಿರುತಿಹರೆಂದು, ...

ಗದುಗಿನ ನಾಡಹಬ್ಬದಲ್ಲಿ ಶ್ರೀ `ಮಧುರ ಚೆನ್ನ’ ರಿಂದ ಪರೀಕ್ಷಿಸಲ್ಲಟ್ಟ ರಜತಪದಕವನ್ನು ಪಡೆದುದು ಅಮ್ಮಾ, ಚಿತ್ರದ ಆಂಗಡಿ ನೋಡೆ! ಸುಂದರ ಸೊಬಗಿನ ಅಂಗಡಿ ನೋಡೆ! ಬಗೆ ಬಗೆ ಬಣ್ಣದ ಪಟಗಳ ನೋಡೆ! ಭಾರತದೇಶದ ಚಿತ್ರ ನೋಡೆ! ||೧|| ಅಮ್ಮಾ, ಇಲ್ಲಿದ...

೧ ತಾಳೆಯ ಮರದಡಿ ತಪವನು ಗೈಯುವ ತರುಣನೆ ಏಳಪ್ಪಾ! ಕಣ್ಣು ಮುಚ್ಚಿ ನೀ ಕಾಲವ ಕಳೆದರೆ ಕಾಣುವಿಯೇನಪ್ಪಾ! ೨ ತಾಳೆಯ ಮರವಿದು ಬಾಳಲಿ ಬಹುದಿನ ಕೇಳುವರಾರಪ್ಪಾ! ಅರಳು ಮಲ್ಲಿಗೆಯು ಅರೆಚಣವಿರುವದು ಪರಿಮಳವೆಷ್ಟಪ್ಪಾ! ೩ ಕಾಯಕವರಿಯದೆ ಕಾಯವ ಬೆಳಿಸಿದಿ ಹೇಯ...

(ಹರೀಂದ್ರನಾಥ ಚಟ್ಟೋಪಾಧ್ಯಾಯರ ಒಂದು ಇಂಗ್ಲೀಷ್ ಕವಿತೆಯ ಅನುವಾದ) ಭೂಮ್ಯಾಕಾಶದ ಕೆಂಪುಗಳೆಲ್ಲವು ಕೂಡುತೆ ಹಬ್ಬವ ಮಾಡಿದವು. ಬಂದವು ಅಲ್ಲಿಗೆ ಬಗೆ ಬಗೆ ಕೆಂಪು, ಗುಲಾಬಿ ಪೂಗಳ ಪರಿಮಳ ಕೆಂಪು, ಮಸಣದ ಜ್ವಾಲೆಯ ಗುಟ್ಟಿನ ಕೆಂಪು, ಅರುಣ ಕಿರಣಗಳ ಸಂಜೆ...

೧ ಕೋಣೆಯ ಮೂಲೆಗೆ ಜಗುಲಿಯ ಕಟ್ಟಿ! ಬೆಳ್ಳಿಯ ಮಂಟಪ ಮಾಡಿಸುತಿಟ್ಟಿ! ಚಿನ್ನದ ಮುದ್ದಿಯ ಮೂರ್ತಿಯುಟ್ಟಿ! ಎಡಬಲ ನಂದಾದೀಪಗಳಿಟ್ಟಿ! ೨ ಹಗಲಿರುಳೆನ್ನದೆ ಕಾಯುತಲಿರುವಿ! ತಾಳ ತಂತಿಗಳ ಬಾರಿಸುತಿರುವಿ! ಸವಿ ಸವಿ ತಿಂಡಿಯ ತೋರಿಸುತಿರುವಿ! ಪುಣ್ಯವಪಡೆಯಲ...

ಡೊಂಬರಾಟ! ಡೊಂಬರಾಟ! ಧನಿಯಮುಂದೆ ಡೊಂಬರಾಟ! ಕೋಟಿಗೋಡೆ ಮಧ್ಯದಲ್ಲಿ ಕಾಡುಕಿಚ್ಚು ಬಿಸಿಲಿನಲ್ಲಿ ಹೊಟ್ಟೆಹಸಿದ ಹೊತ್ತಿನಲ್ಲಿ ಒಳಗೆ ಒಳಗೆ ಒಡಲಿನಲ್ಲಿ! ಡೊಂಬರಾಟ! ಡೊಂಬರಾಟ! ಧನಿಯಮುಂದೆ ಡೊಂಬರಾಟ! ಪೊಳ್ಳುಡೊಳ್ಳು ಢೋಲುಬಡೆದ! ಕೂಗಿ ಕೂಗಿ ಕೇಕೆ ಹೊ...

೧ ಪೃಥ್ವಿಯ ಒಡಲೊಳಗಿರುತಿಹುದೇನು? ತಳಮಳ ಕಾಯ್ದಿಹ ಲಾವಾರಸವು! ಭೂಮಿಯು ಗದಗದ ನಡುಗುತಿದೆ! ಸಾಗರ ಕೊನೆ ಮೊದಲಾಗುತಿದೆ! ಗಿಡವದು ಬುಡಮೇಲಾಗುತಿದೆ! ಪಶುಗಳ ಪ್ರಾಣವು ಪೋಗುತಿದೆ! ಮಾನವಕೋಟಿಯು ಮುಳುಗುತಿದೆ! ಕಟ್ಟಡ ಕಟ್ಟಡ ಉರುಳುತಿದೆ! ಪಟ್ಟಣ ಪಟ್ಟ...

ಇದುವೇ ಪಾಪಿಯ ಯಮಲೋಕ! ಭಾವಿಕರೆಂಬರು ಭೂಲೋಕ! ದೈತ್ಯರೆಂಬವರ ಕರೆಕಳಿಸಿ ಹೊಟ್ಟೆಗೆಂಬವರ ಹಿಡಿದೆಳಿಸಿ ಮುಟ್ಟದೆ ಮೈದೊಗಲನು ಸುಲಿಸಿ ಕಟ್ಟಿಗೆಯಿಲ್ಲದೆ ಕರುಳನು ಸುಡಿಸಿ ಇದುವೇ ಪಾಪಿಯ ಯಮಲೋಕ! ಭಾವಿಕರೆಂಬರು ಭೂಲೋಕ! ಒಕ್ಕಲಮಕ್ಕಳ ಹಡಿದೆಳೆದು ಸಾಲದಪ...

ಏನುಬೇಡಲಿ ಬಂದು ಭಾರತಿಯೆ ನಿನ್ನ | ಮಾನವಂತಿಯೆ ಜನನಿ ಸಲಹು ನೀನೆನ್ನ ||ಪಲ್ಲ|| ಬಂಗಾರ ಬೇಡುವೆನೆ ಬಳಿದೆಲ್ಲ ಪೋಗಿಹುದು | ಶೃಂಗಾರ ಬೇಡುವೆನೆ ಶಿವನ ಮನೆಯು || ಮಂಗನಂತಿಹ ಮನವು ಇಂಗಿತವನರಿಯದಲೆ | ಅಂಗಹೀನನ ತೆರದಿ ತಿರುಗುವದಕಂಡು ||೧|| ಅನ್ನವ...

೧ ಮೂಡಣ ದಿಶೆಯಲಿ ಪಡುವಣ ದಿಶೆಯಲಿ ಮೂಡುವ ಅಡಗುವ ರವಿ ಹೊಂಬಣ್ಣವ ಭರದಲಿ, ಹರುಷದಿ ಹೊಗಳುತಲಿರುತಿರೆ ಕವಿಜನರು; ಚಿನ್ನೆಯೆ ನಿನ್ನಯ ಕನ್ನಡಿ ಹೊಳಪಿನ ಕನ್ನೆಯ ಮೇಲಣ ಕೆಂಬಣ್ಣವ ನಾ ಹೊಗಳುತ ನಿಂತಿಹೆ ಓಡುತೆ ಬಾ! ಬಾ! ಹಾರುತೆ ಬಾ! ಬಾ! ೨ ಸರದಲಿಶೋಭ...