Home / ಕವನ / ಕವಿತೆ / ಚಿತ್ರದ ಅಂಗಡಿ

ಚಿತ್ರದ ಅಂಗಡಿ

ಗದುಗಿನ ನಾಡಹಬ್ಬದಲ್ಲಿ ಶ್ರೀ `ಮಧುರ ಚೆನ್ನ’ ರಿಂದ ಪರೀಕ್ಷಿಸಲ್ಲಟ್ಟ ರಜತಪದಕವನ್ನು ಪಡೆದುದು

ಅಮ್ಮಾ, ಚಿತ್ರದ ಆಂಗಡಿ ನೋಡೆ!
ಸುಂದರ ಸೊಬಗಿನ ಅಂಗಡಿ ನೋಡೆ!
ಬಗೆ ಬಗೆ ಬಣ್ಣದ ಪಟಗಳ ನೋಡೆ!
ಭಾರತದೇಶದ ಚಿತ್ರ ನೋಡೆ! ||೧||

ಅಮ್ಮಾ, ಇಲ್ಲಿದೆ ಹೆಚ್ಚಿನ ಚಿತ್ರ!
ಸಕಲರ ಮನವನು ಸೆಳೆಯುವ ಚಿತ್ರ!
ಇದುವೇ ನಾ ಹಟ ಮಾಡಿದ ಚಿತ್ರ!
ಕನ್ನಡ ಕುವರರ ಹೆಮ್ಮೆಯ ಚಿತ್ರ! ||೨||

ಸುಂದರ ಬನಗಳ ಚಿತ್ರಿಪ ಚಿತ್ರ!
ಗುಡ್ಡ ಬೆಟ್ಟಗಳು ತುಂಬಿಹ ಚಿತ್ರ!
ಗೋದಾವರಿ ಹೊಳೆ ಹರಿದಿಹ ಚಿತ್ರ!
ಕಾವೇರಿಯು ತಾ ಕಾಣುವ ಚಿತ್ರ! ||೩||

ಅಮ್ಮಾ, ಇಲ್ಲಿಹ ಗುಡಿಗಳ ನೋಡು!
ಜಕ್ಕಣ ಶಿಲ್ಪಿಯ ಜಾಣ್ಮೆಯ ನೋಡು!
ವಿಜಯನಗರದಾ ವೈಭವ ನೋಡು!
ಹುಕ್ಕ ಬುಕ್ಳ ಮಾಧವರನು ನೋಡು! ||೪||

ಅಮ್ಮಾ ಕುಮಾರವ್ಯಾಸನ ಚಿತ್ರ!
ಕಲ್ಯಾಣದ ಆ ಬಸವನ ಚಿತ್ರ!
ಚೆನ್ನಮ್ಮನ ಕಿತ್ತೂರಿನ ಚಿತ್ರ!
ಬೆಳವಡಿ ರಾಣಿಯ ಶೌರ್ಯದ ಚಿತ್ರ! ||೫||

ಅಮ್ಮಾ, ಇದದೋ ಹಳ್ಳಿಯ ಚಿತ್ರ!
ನೇಗಿಲ ಹೊಡೆಯುವ ಯೋಗಿಯ ಚಿತ್ರ!
ರಾಟಿಯ ತಿರುಗಿಪ ಭಗಿನಿಯ ಚಿತ್ರ!
ಖಾದಿಯ ಕೊಳ್ಳುವ ಜನಗಳ ಚಿತ್ರ! ||೬||

ಅಮಮಾ! ಭೀಕರ ದೃಶ್ಯವಿದಲ್ಲೆ?
ಬಡವನ ಗೋಳಿನ ಚಿತ್ರವಿದಲ್ಲೆ?
ಹೊಲೆಯರೆಂದು ಸಲೆ ಹಳಿಯುವರಲ್ಲೆ?
ದಾಸ್ಯದ ದಾಹದಿ ಬಳಲುವರಲ್ಲೆ? ||೭||

ಅಮ್ಮಾ, ಇಲ್ಲಿಹ ನೋಟವಿದೇನು?
ಕನ್ನಡದಮ್ಮನು ಅಳುತಿಹಳೇನು?
ಕರುನಾಡಿನ ಜನ ಮಲಗಿಹುದೇನು?
ಪರನಾಡಿನ ಜನ ಬರುತಿಹುದೇನು? ||೮||

ಅಮ್ಮಾ, ಬೇಕಿದು ಚಿತ್ರವು ನೋಡು!
ಅಯ್ಯೋ! ಮರಾಠ ಬಂದನು ನೋಡು!
ತೆಲುಗನು ಬಂದನು ಕೊಳ್ವನು ನೋಡು!
ಅಪ್ಪನ ಹುಡುಕುವ ಬೇಗನೆ ಓಡು ||೯||

ಅಪ್ಪಾ! ಅಪ್ಪಾ!! ಎಲ್ಲಿಹೆ ಬಾರೋ!
ಪ್ರೀತಿಯ ಚಿತ್ರವ ಕೊಳ್ವರು ಬಾರೋ!!
ಕರ್ನಾಟಕವಿದು ಪೋಪುದು ಬಾರೋ!!!
ಕನ್ನಡಿಗನೆ ನೀ ಬೇಗನೆ ಬಾರೋ!!!! ||೧ಂ||
*****

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...