Home / Panchaksharayya Hiremata

Browsing Tag: Panchaksharayya Hiremata

(“ಶ್ರೀಮಾನ್‌ ಗುಡಿಪಾಟಿ ವೆಂಕಟಾಚಲಮ್‌ರವರ ಲೇಖನವೊಂದನ್ನು ಬೆಂಗಳೂರಿನ ಕನ್ನಡಿಗರೊಬ್ಬರು ಅನುವಾದಿಸಿದುದರ ಆಧಾರದಿಂದ ಬರೆದುದು) ಸೀತಾ:- ಬಾರಿಲ್ಲಿ ಶ್ರೀರಾಮ ಕಲ್ಯಾಣಮೂರ್ತಿ, ಬಹುದಿನದಿ ಬಳಲಿಹೆನು; ನೊಂದಿಹಿರಿ, ಬೆಂದಿಹಿರಿ ಅಗಲಿಕೆಯ ಅನ...

ಆವದೇವನ ಬನವೋ! ದೇವದೇವನ ಬನವೋ! ದೇವನಾಡಿದ ಬನವೋ! ಮತ್ತೆ ದೇವಾನುದೇವತೆಗಳಲ್ಲ ಕೂಡಿದ ಬನವೋ! ಇದು ಇಂದ್ರವನ! ಸಗ್ಗವನ! ಆವುದಾದರು ಇರಲಿ; ನಾನಿರ್ಪ ಒನವಿದೇಂ ದಿವ್ಯ ಬನವೋ! ಪೂರ್ವಜನ್ಮದ ಫಲವೋ! ಪುಣ್ಯ ಪೆಚ್ಚಿದ ಫಲವೋ! ದೇವನೊಲುಮೆಯ ಫಲವೋ! ಏನಿರ್...

ಹೊಲೆಯ! ಹೊಡೆಯ ಬೇಡೆಲೋ ಹಳ್ಳಿ ಎತ್ತನು! ಕ್ರೂರಿ! ಕನಿಕರಿಲ್ಲವೋ ಕೊಲ್ಲೊ ಕುತ್ತನು! ೧ ದುಡಿದು ದೇಹವೆಲ್ಲವೂ ಕೊರಗಿ ಕುಂದಿದೆ! ಸುಟ್ಟ ಸುಣ್ಣದಂತೆಯೇ ಸತ್ವಗುಂದಿದೆ! ೨ ಎಲವೊ ನಿನ್ನಗಾಗಿಯೇ ರಕುತ ಸುಟ್ಟಿದೆ! ತಿಂದ ನಿನ್ನ ಹೊಟ್ಟೆಯೇ ಉಬ್ಬಿ ಬಿಟ್...

೧ ಕಾಲನ ಕಲ್ಲಿನ ಚಕ್ರಗಳು! ತೊಡೆಗಳ ಎಲುವಿನ ಅಚ್ಚುಗಳು! ಪೊಳ್ಳಿನ ಹೃದಯದ ಹಂದರವು! ಗಂಡಿನ ಹೆಣ್ಣಿನ ಹುಡುಗರ ಕಳಸ! ೨ ಕಟ್ಟೋ ಮಂಗಲ ಸೂತ್ರಗಳ! ರುಂಡ ದಿಂಡಗಳ ಮಾಲೆಗಳ! ಬೆಳಗೋ ಕಂಗಳ ಕತ್ತಲೆದೀಪ! ಹಾಕೋ ನಿಡಿದುಸಿರಿನಧೂಪ! ೩ ಬಿಗಿಯೋ ಕೂದಲ ಹಗ್ಗವನ...

೧ ಆಕಳು ಅಂಬಾ ಅನ್ನುತಿದೆ! ಕರುಗಳ ಮುಖಗಳ ನೋಡುತಿದೆ! ಕಂಬನಿಗಳ ಸಲೆ ಸುರಿಸುತಿದೆ! ಹುಲ್ಲನು ಹಾಕಿರಿ ಅನ್ನುತಿದೆ! ೨ ಆಕಳು ಅಂಬಾ! ಅನ್ನುತಿದೆ! ಆಕಾಶದಕಡೆ ನೋಡುತಿದೆ! ಹಿಂಡಿಸಿಕೊಳ್ಳುತ ಹಲುಬುತಿದೆ! ಕಣ್ಣಿಯನುಚ್ಚಲು ಕೋರುತಿದೆ! ೩ ಆಕಳು ಅಂಬಾ!...

ಕಾಳರಾಣಿ ಕೊಲೆಪಾತಕ ಬಂದ! ಮೂಳನಾಗಿ ಮೊಗದೋರಲು ಬಂದ!! ೧ ಮುಗಿಲರಮನೆ ಮುಂಭಾಗದಿ ನಿಂದ! ಜಗದ ಜಾತಿಗಳ ನೆಬ್ಬಿಸಿರೆಂದ!! ೨ ಮನುಜನೊಬ್ಬ ಮನೆಯಿಂದಲಿ ಬಂದ! ಹನಿನೀರಿಗೆ ತಾ ಕೆರೆಗೈ ತಂದ!! ೩ `ಕೊನೆಯಮನುಜ ನಾ ಕಾಣಿರಿ’ ಯೆಂದ! `ಕನಿಕರ ಕಣ್ಣೀರ...

ಜಗವನು ಬೆಳಗುವ ರವಿಯಿಹನೆಂದು, ತಣ್ಗದಿರನು ಶಿರದೊಳಗಿಹನೆಂದು, ಅಪಾರ ಸಂಪದವಲ್ಲಿಹುದೆಂದು, ಅಷ್ಟೈಶ್ವರ್ಯವು ತನಗಿಹುದೆಂದು, ಸಗ್ಗದೊಡೆಯ ತಾ ಪೇಳುವನು! ಬಲು ಬಲು ಬಿಂಕವ ತಾಳಿಹನು!! ಮೀರಿದ ಶೂರರು ಅಲ್ಲಿಹರೆಂದು, ಕುಕ್ಕುವ ಕವಿವರರಿರುತಿಹರೆಂದು, ...

ಗದುಗಿನ ನಾಡಹಬ್ಬದಲ್ಲಿ ಶ್ರೀ `ಮಧುರ ಚೆನ್ನ’ ರಿಂದ ಪರೀಕ್ಷಿಸಲ್ಲಟ್ಟ ರಜತಪದಕವನ್ನು ಪಡೆದುದು ಅಮ್ಮಾ, ಚಿತ್ರದ ಆಂಗಡಿ ನೋಡೆ! ಸುಂದರ ಸೊಬಗಿನ ಅಂಗಡಿ ನೋಡೆ! ಬಗೆ ಬಗೆ ಬಣ್ಣದ ಪಟಗಳ ನೋಡೆ! ಭಾರತದೇಶದ ಚಿತ್ರ ನೋಡೆ! ||೧|| ಅಮ್ಮಾ, ಇಲ್ಲಿದ...

೧ ತಾಳೆಯ ಮರದಡಿ ತಪವನು ಗೈಯುವ ತರುಣನೆ ಏಳಪ್ಪಾ! ಕಣ್ಣು ಮುಚ್ಚಿ ನೀ ಕಾಲವ ಕಳೆದರೆ ಕಾಣುವಿಯೇನಪ್ಪಾ! ೨ ತಾಳೆಯ ಮರವಿದು ಬಾಳಲಿ ಬಹುದಿನ ಕೇಳುವರಾರಪ್ಪಾ! ಅರಳು ಮಲ್ಲಿಗೆಯು ಅರೆಚಣವಿರುವದು ಪರಿಮಳವೆಷ್ಟಪ್ಪಾ! ೩ ಕಾಯಕವರಿಯದೆ ಕಾಯವ ಬೆಳಿಸಿದಿ ಹೇಯ...

(ಹರೀಂದ್ರನಾಥ ಚಟ್ಟೋಪಾಧ್ಯಾಯರ ಒಂದು ಇಂಗ್ಲೀಷ್ ಕವಿತೆಯ ಅನುವಾದ) ಭೂಮ್ಯಾಕಾಶದ ಕೆಂಪುಗಳೆಲ್ಲವು ಕೂಡುತೆ ಹಬ್ಬವ ಮಾಡಿದವು. ಬಂದವು ಅಲ್ಲಿಗೆ ಬಗೆ ಬಗೆ ಕೆಂಪು, ಗುಲಾಬಿ ಪೂಗಳ ಪರಿಮಳ ಕೆಂಪು, ಮಸಣದ ಜ್ವಾಲೆಯ ಗುಟ್ಟಿನ ಕೆಂಪು, ಅರುಣ ಕಿರಣಗಳ ಸಂಜೆ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...