ಮೇಲುನದಿ ದಂಡೆಯಲಿ ನಡೆದಿದ್ದ ನಾಮನುಜ, ಮುಂಜಾವಿನಲಿ ಒಬ್ಬನೊಬ್ಬ; ಮೂಡಿತ್ತು ಮಂದಾನಿಲ, ನೇರದಲಿ ಆದರದಿ; ವೃಕ್ಷದಲಿ ಉಲಿಉಲಿವ ಹಕ್ಕಿಗಳ ಕೂಡಿ. ಮೆಲುನುಡಿಯ ಗಾನಕ್ಕೆ, ಮೀಸಲಾಗಿರುವಂತೆ; ಹಾಡಿದವು ಮಾಮರವನೇರಿರುವ ಹಕ್ಕಿ. ಹಣ್ಣು ಹೂವ್ಗಳತಾಕಿ ಮಂಡ...

ಅರಸನಾಣತಿಯಂತೆ ಹಳುವಿನಲಿಳಿದು ಮಲೆಗಳನೇರಿ, ಹೊರಟು ನಡೆದನು, ಪ್ರತೀಹಾರಿ! ಆಜ್ಞಾಧಾರಕ; ಸಂಧ್ಯಾ ಸಮೀರಣದಿ, ತುಂಬುಬಯಲಲಿ ಹೊರಟು, ಝುರಿನೀರು ತಿಳಿಹೊಳೆಯ ದಟ್ಟಡವಿ ಪಾತ್ರದಲಿ; ನಡೆದು ಮರಳಿದ ಹಾದಿ ಪೂರ್ವಪರಿವಿಡಿದು. ಅಲೆದಲೆದು ಬಸವಳಿದು ಕತ್ತಲೆ...

ಕಾಳಕಿಚ್ಚು, ಸಮರಸುಳಿವು ಪಡುವನಾಡನೇರಿಬಂತು. ಶಾಂತಿಸತ್ವ ಸರಿದುನಿಂತು- ಧಾಳಿ ಧಾರೆಗೆ ಎಡೆಯನಿತ್ತು. ರೌದ್ರರಾಳು ರೀತಿಸಿತ್ತು ಧರೆಯನೆರೆಯನೇರಿನಿಂತು. ಕ್ರೂರಕರ್ಮಿ ಕೈಯಸಾಗಿ ಪೃಥ್ವಿ, ಕಡಲ, ಹವೆಯನೇರಿ ಸುತ್ತುಗಟ್ಟಿ, ಒಟ್ಟನೆಳೆದು ಮಾನವೀಯ ಸೂರ...

ದೂರದಲಿ ತಾಣದಲಿ ಪಿರಿದೊಂದು ವೃಕ್ಷದಲಿ ಏರಿತ್ತು ಖಗವೊಂದು- ಚಲುವು. ಇನಿದುಸರ ಸವಿಬೆರಸಿ ತನುಅನುವ ಅದರಿರಿಸಿ ಕಾನನದಿ ಹಾಡಿತ್ತು- ಹಿರಿಮೆ. ರಾಗದಲಿ ಮೇಳದಲಿ ಆಗಸದ ನೇಸರದಿ ಸಾಗಿತ್ತು ಪ್ರವಹದಲಿ- ನಡೆದು. ಗಮ್ಯದಲಿ ನೋಡಿದೆನು ಒಮ್ಮೆಯಲೆ ಬೆರೆತು...

ಜೀವನವು ಹೊರೆಯಾಗಿ ಬಾಳುವೆಯು ಧಗೆಯಾಗಿ ರೀತಿಸಿತು ಅವನ ಹಾದಿ, ಕೂಟದಲಿ ಕಾರ್ಮುಗಿಲು ತೋರ್ವಂತೆ, ಕಾಣ್ವಂತೆ ಬಾಳಿನಲಿ ಕೂಡಿತ್ತು ಧಾಳಿ. ಜೀರ್ಣಶೀರ್ಣದ ಉಡುಗೆ ಬಾಳುವೆಯ ಬಲುಬೇಗೆ ಪೀಡನದಿ ಭಾದಿಸುತ ಸಾಗಿ, ಕಂದುಕೊಂದಿದ ದೇಹ ಜೊಳ್ಳುತಿರುಕನ ನೋವ ಅ...

ಅವನೊಬ್ಬ ಕಲೆಗಾರ, ಕುಶಲಮತಿಗಳ ವೀರ; ನಿಶಿತದಲಿ ಉದ್ಯಾನ – ಅದು ಅವನ ಬಿಡಾರ, ನಟಶ್ರೇಷ್ಠನವನಲ್ಲ – ಕಲೆಗೆ ಅವನಿಗೆದುರಾರು ಇಲ್ಲ, ಮನದಲ್ಲಿ ಬೆಳೆಸಿದ್ದ ಕಲೆಗಾರ ಒಲುವಿಂದ, ಮೌನದೇವಿಯನು ಚಿತ್ರಿಸಲು ಬಗೆಯಿಂದ. “ಕುಂಚಕೊನೆಯಲಿ ಮಿಂಚುದೇವಿಯ...

ಗಿರಿ ಕಣಿವೆ ಕಂದರದಿ ಝರಿ ಜಾಣ್ಮೆ ಜಾರಿ, ಸುತ್ತುತ್ತ ಸರಿಯುತ್ತ ತಂಬೆಲರ ಸೇರಿ; ವಿಸ್ತರದ ಹಚ್ಚನೆಯ ಹಳುವವನು ಹೂಡಿ, ಏರುವುದು, ಜಾರುವದು; ಜಾಣ್ಮೆಯನು ತೋರಿ ಚಿಗಿಚಿಗಿದು, ನೆಗೆನೆಗೆದು, ಜರಗಿನಲಿಸಾಗಿ ಕೊಪ್ಪಲಿನ ಒಕ್ಕಲಲಿ ಕೌಶಲವಹಾಡಿ ಹರಿಯುವು...

ಜೀವನ, ಸರಸವಿರಸದಲಿ ತಲೆಯೆತ್ತಿ ತೂರುವೆನು, ನನ್ನಾತ್ಮವನು ತೃಪ್ತಿಸುವ ವಾಣಿಯನು ಸ್ತುತಿಸುವೆನು; ಜಗಜಾಳಿನಾವರಣದಲಿ, ಸುಗಂಧಿಸುವ ಮಾರುತನ; ಮರೆಹೊಕ್ಕು, ಜೀವನಜಾಡನ್ನು ಜಾರಿ; ಮನದ ದುಗುಡವ ಕಳೆಯುವೆನು-ನಾನು. ಶಕ್ತಿಮಯ ಪ್ರಬಲದಲಿ ನಿಧಿನಿಕ್ಷೇಪ,...

ವಿಜಯಹಾದಿಯ ಸುತ್ತಲು ಎತ್ತಲು, ಮುಚ್ಚಿತು ಮುಬ್ಬು ಹೇರಳದಿ; ದೂರದ ಶಿಖರದಿ ಮಿನುಗಿತು ವಿದ್ಯುತ್, ಭೀಕರ ದಿನಗಳಲಿ. ಬಂಟನ ಭರವಸೆ ಸಾಗಿತು ಹಾರಿ, ಧರೆಯಲಿ ಮೆರೆಯುತ ನೆಟ್ಟನೆ ಸಾರಿ; ಕೊಂಬುತುತ್ತೂರಿ ತುಂಬಿತು ನೆರವಿ, ಸಮರವ ಇಮ್ಮಡಿಸಿ. ಸ್ವಚ್ಛ ಸ...

ರವಿಕಿರಣ ತಿಳಿಬೆಳಕು ಬಾನಿನಲಿ ಬೆಳಗುತಿರೆ, ಮೇಘಮಯ ಮುಗಿಲಲ್ಲಿ ಚಲುರಶ್ಮಿ ಬೆಳಗುತಿರೆ, ಮೂಡಲಿನ ನಾಡಿನಲಿ ವೈಭವವು ನಲಿಯುತಿರೆ, ಮುಂಜಾನೆ ಮೆರೆಯಿತು ನಿಶಿದೆಸೆಯ ನೆರೆದಾಟೆ. ತೆಂಕಲಿನ ತಂಗಾಳಿ ತೀಡುತಿರೆ ಇಂಪಾಗಿ, ಮೋದದಲಿ ಹಾಡುತಿರೆ ಹಕ್ಕಿಗಳು ...