ಮುದುವೀಣೆ ತಂತಿಗಳ ಮಿಡಿಮಿಡಿದು ನುಡಿಸಿದೆನು,
ಸ್ವರರಾಗ ಸವಿಸುಧೆಯ ಮಡುವಿನಲಿ ಬೆರೆಸಿದೆನು;
ಚಲುಓಟ, ಬೆರೆಳಾಟ, ಮಿಡಿಯುತಿತು ನುಡಿಯ,
ಮುದುಭಾವ, ಕೊನೆನೋಟ, ಕೂಡುತಿತು ಮನವ;
ನುಡಿಗೆಲವು, ಮೆಲುಚೆಲುವು, ಮೇಳದಲಿ ಸರಿದು,
ಎಡುವಿನಲಿ, ಇಳಿತದಲಿ, ಆಸರಿಸಿ ಮೆರೆದು;
ಅಲೆದಾಟ, ಸೆಳೆದಾಟ, ದಾಯದಲಿ ಸಿಲುಕಿ;
ಪಲ್ಲವದಿ ಲಹರಿಯಲಿ ಮನವಿಟ್ಟು ಮೆಲುಕಿ,
ಮೋದದಲಿ ಕೂಡಿದೆನು ತಾಳದಲಿ ನೋಟ;
ತನ್ಮಯದಿ ರಾಜಿಸಿದೆ ನಾದದಲಿ ಕೂಟ,
ಹೃದಯದಲಿ ಮೀಟುತಿತು ಮಾಗಧನವಾಣಿ,
ವೇಗದಲಿ ನೋಡಿದೆನು ರಾಗ-ಸುಧೆರಾಣಿ;
ಮುದುವೀಣೆ ಮಿಲನದಲಿ ರಂಜಿಸಿದೆ ಭಾರಿ,
ಪ್ರಭೆಮಿರುಗು ವದನದಲಿ ಮೆಲುನಗೆಯ ತೋರಿ.
*****


















