ಜಯತು ವಿಶ್ವರೂಪಿಣಿ
ಜಯತು ಜಯತು ಭಾರತಿಯೆ
ಜಯತು ಜಗದಂಬೆ ಮಾತೆ
ಜಯತು ಜಯತು ಶರ್ವಾಣಿಯೇ ||

ಕಾಳರಾತ್ರಿ ಕದಂಬ ವಾಸಿನಿ
ಕಾಮಿನಿ ಕಲ್ಯಾಣಿ ಕಣ್ಮಣೀ
ಜಯತು ಜಯತು ಮೂಕಾಂಬಿಕೆ
ಜಯತು ಜಯತು ವಿಶ್ವಾಂಬಿಕೆಯೆ ||

ಜಯತು ರಾಜರಾಜೇಶ್ವರಿ
ಜಯತು ಭುವನೇಶ್ವರಿ
ಕನ್ನಡಾಂಬೆ ಕರುನಾಡ ತಾಯೆ
ಜಯತು ಜಯತು ಸುರನರ ಪೂಜಿತೆಯೆ ||

ಜಯತು ವಾಗ್ದೇವಿ ಗಾಯಿತ್ರಿ
ಜಯತು ಮಹೇಶ್ವರಿ ನಂದಿನಿ
ಭಾಗ್ಯೇಶ್ವರಿ ಭಾರತಿಯೇ
ಭವಾನಿ ಶರ್ವಾಣಿ ನಮಸ್ತೆ
ನಮಸ್ತೆ ನಮಸ್ತೆ ಮಹಾಮಾಯೆ ||
*****