ಬಂಜೆಯಾಗಿದ್ದರೆ ಚೆನ್ನ

ಮಸೀದಿಗಳ ಉರುಳಿಸಿ
ಮಂದಿರಗಳ ಕಟ್ಟುವವರೇ
ಬಿದ್ದಿರುವ ಮನಗಳನ್ನೆಂತು
ಎತ್ತಿ ನಿಲ್ಲಿಸುವಿರಿ ಹೇಳಿ?
ಬಿದ್ದ ಗೋಡೆಗಳ ಮತ್ತೆ
ಎತ್ತಿ ನಿಲ್ಲಿಸಲೂ ಬಹುದು
ಎರಡು ಮನಗಳ ಮಧ್ಯ
ಎದ್ದ ಗೋಡೆಯನ್ನೆಂತು
ಬೀಳಿಸುವಿರಿ? ಹೇಳಿ.

ಕಂಡಿದ್ದೆವು ಹಿಂದೆ
ಚರಿತ್ರೆಯಲಿ ಕರಾಳ ದಿನ.
ಅಂದು ಹಿಂದೊಮ್ಮೆ
ಮಹಾತ್ಮ ಗಾಂಧಿಗೆ
ಗುಂಡಿಟ್ಟು ಕೊಂದ
ಈ ಚೆಡ್ಡಿ ವೀರರು,
ಇಂದು ಮಸೀದಿಯುರುಳಿಸಿ,
ಮುಖಕ್ಕೆ ಮಸಿ ಬಳಿದು
ಮತ್ತೊಂದು ಕಪ್ಪು ಚುಕ್ಕೆ
ಇಟ್ಟು ಹೋದವು ಚರಿತ್ರೆಗೆ.

ಡಿಸೆಂಬರ್ ಆರರಂದು
ಅಯೋಧ್ಯೆಯೆಡೆಗೆ
ಸಾಗರದಂತೆ ಹರಿದ
ಜನತೆಗೆ ಮತಿಗೆಡಿಸಿ,
ದಿಕ್ಕು ತಪ್ಪಿಸುವ ಧರ್ಮದ
ತುತ್ತೆಯನ್ನು ಕುಡಿಸಿ,
ಅವನತಿಯ ಶಿಖರವ
ಹತ್ತಿಸಿದವರೆ,
ಹೇಳಿ ನೀವು ನಿಜವಾದ
ಭಾರತ ಮಾತೆಯ ಮಕ್ಕಳೇ.

ಕರಸೇವಕರ ಕೈಯಲ್ಲಿ
ನಲುಗಿ ಹೋದ
ದೇವರು, ಧರ್ಮಗಳು –
ಮತ್ತೆಂದೂ ಮತಾಂಧರ
ಕೈಯಲ್ಲಿ ಸಿಕ್ಕಿಕೊಳ್ಳಲಾರೆನೆಂದು
ಪರಿತಪಿಸುತ್ತಿದ್ದರೆ-

ಭಾರತಾಂಬೆಯ ಕಣ್ಣುಗಳಲ್ಲಿ
ರಕ್ತದ ಕಣ್ಣೀರು-ಹರಿದು,
ಸಮತೆಯ ಎದೆಹಾಲು ಕುಡಿಸಿ,
ಪೊರೆದು ಪೋಷಿಸಿದ
ನನ್ನ ಮುಖಕ್ಕೇ
ಮಸಿ ಬಳಿದ ಇವರಿಗೆ
ನಾ ಕೊಟ್ಟ ಎದೆಹಾಲು
ವಿಷವಾಗಬಾರದಿತ್ತೆ?
ಎಂದು ಪರಿತಪಿಸುತ್ತಿರುವ
ಭಾರತ ಮಾತೇ ಹೇಳುತ್ತಿದ್ದಾಳೆ
“ಇಂತಹ ಮಕ್ಕಳನ್ನು
ಹೆರುವುದಕ್ಕೆ ಬದಲು
ನಾನು ಬಂಜೆಯಾಗಿದ್ದರೆ
ಎಷ್ಟೋ ಚೆನ್ನ” ಎಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಿ ಲಂಚವಿರುವಲ್ಲಿ ಸಾವಯವ ಮಂಚವೇರೀತೇ?
Next post ರೈಲು

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…