೧ ಆಗೊಮ್ಮೆ ಈಗೊಮ್ಮೆ ಬಿರಿದರಳಿ ಸೊಗಯಿಸಿದ ಸೌಸವದ ಸುಮಗಳನ್ನೊಲಿದಾಯ್ದು, ಸರಿ ನೆಯ್ದು, ಸಾಹಿತ್ಯ ಶಾರದೆಯ ಕೊರಳಿಂಗೆ ಕಲೆಗೊಳಿಸಿ ತೊಡಿಸಿರುವೆ ಚೆಲುವಿಲ್ಲದಲರುಗಳನುಳಿದ ಸರ ೨ ಹೃದಯಾಂತರಾಳದಲಿ ಭಾವಗಳ ಘರ್ಷಣೆಯು ಸಂಸ್ಫೂರ್ತಿವಡೆದಾಗ ಚೆಲ್ಲಿ ಹರಿ...