ಪ್ರೀತಿ ಮತ್ತ ಸಾಗರಾ ಬಾರೊ ಭವ್ಯ ಸುಂದರಾ ಕರೆವೆ ನಾ ವಸುಂಧರಾ! ನಿನ್ನಡಿಗಳಲಿಂದು ನಾನು ಹುಡಿಯೆನಿಸುತ ಕೆಡೆದಿಹೆ ಬಾಳೆಲ್ಲವು ಕಲ್ಲಾಯಿತು, ಉದ್ಧಾರಕೆ ತಪಮಿಹೆ ಉಕ್ಕಿ ಬಾರೊ ಎಲ್ಲೆಡೆಯಲಿ ಸೊಕ್ಕಿ ಬಾರೊ ನನ್ನೆಡೆಯಲಿ, ಉಳಿಯಿತೊಂದೆ ಮನ್ಮಾನಸ ಕುವಲಯದಲಿ ಆಸೆಯು ನೀನೊರ್ವನೆ ಮನದನ್ನನೆ ಇಂಗಿಸುವ ಪಿಪಾಸೆಯು ಪ್ರ...

ಕೋಳಿ ಕೂಗಿದರೇನೇ ಬೆಳಗಾವುದೆಂಬ ಕಾಲವೊಂದಿತ್ತು| ನನ್ನ ಮನೆ ಬೆಂಕಿಯಿಂದಲೇ ಊರ ಜನರ ಬೇಳೆ ಬೇಯ್ಯುವುದೆಂಬ ಅಜ್ಞಾನದ ಕಾಲವೊಂದಿತ್ತು|| ಎಲ್ಲರೂ ಸರ್ವ ಸ್ವತಂತ್ರರು ಯಾರ ಹಿಡಿತದಲಿ ಯಾರಿಲ್ಲ| ಅಜ್ಞಾನಿಗಳು ಅಜ್ಞಾನದಿಂದ ಮುಗ್ಧರ ಆಳಬಯಸುವರು| ಸತ್ಯವ...

ಒಂದು ಎಲೆ ಮನುಷ್ಯನಿಗೆ ಹೇಳಿತು “ನಾನು ಬಾಳಿನಲ್ಲಿ ಎಲ್ಲವನ್ನೂ ಕಂಡೆ” ಎಂದು. “ಅದು ಹೇಗೆ?” ಎಂದ ಮನುಷ್ಯ. “ನನ್ನದು ಚಿಗುರಿನ ಬಾಲ್ಯ. ಬಣ್ಣದ ಹೂವಿನ ಯೌವ್ವನ. ಹಳದಿ ಎಲೆಯಲ್ಲಿ ವೃಧ್ಯಾಪ್ಯದ ನೆರಳು. ಇಷ್ಟನ್...

ದುರ್ಯೋಧನ ಮನಸ್ಸಿಗೆ ತಿದಿಯೊತ್ತಿ ತನ್ನ ಹೊಟ್ಟೆಕಿಚ್ಚಿನ ಕುಂಡದಲ್ಲಿ ಕಾಯಿಸಿ ಕೆಂಪುಮಾಡಿ ಕುಟ್ಟುತ್ತಾನೆ ತನಗೆ ಬೇಕಾದಂತೆ. ಪಗಡೆಪಾಕ ಪಾಂಡವ ಮಂದಿಯ ಮುಸುಡಿಯನ್ನೇ ಮುಕ್ಕಿದಾಗ ಮೀಸೆ ಕುಣಿಸಿ ಕೌರವೇಶ್ವರನ ಕಡೆ ನೋಡಿ ಕಣ್ಣಲ್ಲಿ ಕಿಚ್ಚು ಮುಕ್ಕಳಿ...

ನವೋದಯದ ಬರಹಗಾರರು ಕೇವಲ ಸಾಹಿತ್ಯ ಚಿಂತಕರಲ್ಲ, ಸಂಸ್ಕೃತಿ ಚಿಂತಕರೂ ಆಗಿದ್ದಾರೆ. ಆದ್ದರಿಂದಲೇ ನವೋದಯ ಬರಹಕ್ಕೆ ವಿಶಿಷ್ಟವಾದ ಸಾಂಸ್ಕೃತಿಕ ಆಯಾಮ ಪ್ರಾಪ್ತವಾಗಿರುವುದು. ನವೋದಯ ಚಿಂತಕರು ಸಂಸ್ಕೃತಿಮುಖಿಯಾದ ಚಿಂತನೆಗಳನ್ನು ಸಾಹಿತ್ಯಕ ನೆಲೆಯಲ್ಲಿ...

ಋಷಿಗಳ ಮನದಾಗೆ ಓಂಕಾರ ಹರದಂಗೆ ಬೆಸಲಾಗಿ ನಡೆದಾವೆ ತುಂತುಂಬಿ ಮೋಡ ನಿಂತಂಗೆ ನಿಂತಲ್ಲಿ ಕುಂತಂಗೆ ಕುಂತಲ್ಲೆ ಚಿಂತ್ಯಾಗೆ ಮೈಮರೆತ ಹಸಿರಿನ ಕಾಡ || ೧ || ಧ್ಯಾನದಾಗ ಸ್ವರ್ಗಾನ ಕಂಡಾಗ ತುಟಿಯಾಗೆ ಎಳೆನಗೆ ಚಿಗತಂಗ ನಗತಾದ ಹುಲ್ಲು ಹಗಲೆಲ್ಲ ಗಾಳೆಪ್ಪ...

ಜುಲೇಖಳ ಪ್ರೀತಿ ಸಂತೆಯಿಂದ ಯೂಸುಫನ ಕೊಂಡು ತಂದ ದಿನದಿಂದ ಜುಲೇಖ ಅವನ ಪ್ರೀತಿಯಲ್ಲಿ ನಾವು ಅವಳ ರೀತಿಯಲ್ಲಿ ಅವನೆದುರು ನಿಲ್ಲುತ್ತಲು ಸುಮ್ಮನೇ ಸುಮ್ಮನೇ ಅವನ ಮಾತಿಗೆಳೆಯುತ್ತಲು ಸುಮ್ಮನೇ ಸುಮ್ಮನೇ ಹೊಸ ಬಟ್ಟೆ ಕೊಡಿಸುತ್ತಲು ಸುಮ್ಮನೇ ಸುಮ್ಮನೇ ...

ಇತ್ತೀಚಿನ ದಿನಗಳಲ್ಲಿ ಹೊಲಗದ್ದೆ ತೋಟಗಳಲ್ಲಿ ಬೆಳೆಯುವ ಬೆಳೆಗಳಿಗೆ ಏನೆಲ್ಲ ಜಾಡ್ಯಗಳು ತಗುಲಿಕೊಂಡು ಪೈರನ್ನು ನಾಶಪಡಿಸುತ್ತಿರುವುದು ಸರ್ವ ವೇದ್ಯ. ಈ ಬೆಳೆಗಳಿಗೆ ತಗುಲವ ಕೀಟಗಳ ಭಾದೆಗಳಿಂದ ಬೆಳೆಗಳನ್ನು ರಕ್ಷಿಸಲು ನಮ್ಮದೇಶಿ ಔಷಧಿಗಳು ಬೇಕಾದಷ್...

ಎಂಥ ಚೆಂದ ನಿನ್ನ ರೂಪು ಭುವನೇಶ್ವರಿ ಕಣ್ಣು ತುಂಬಿ ತುಳುಕುತೈತೆ ನಿನ್ನೈಸಿರಿ /ಪ// ಹಸಿರು ಬಳ್ಳಿ ಮುಡಿಯಲ್ಲಿರೊ ದುಂಡು ಮಲ್ಲಿಗೆ ಚಿಗುರು ಎಲೆಯ ಮರೆಯಲ್ಲಿರೊ ಕೆಂಡ ಸಂಪಿಗೆ ನಿನ್ನ ರೂಪು ತೋರುತೈತೆ ಗಂಧ ಬೀರುತ್ತ ಹೇಗೊ ಮೋಡಿ ಮಾಡುತೈತೆ ರಂಗು ತ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...