Home / ಲೇಖನ / ವಿಜ್ಞಾನ / ಕ್ರಿಮಿನಾಶಕಗಳು ನೆಲವನ್ನು ಜನವನ್ನು ಕೊಲ್ಲುತ್ತವೆ

ಕ್ರಿಮಿನಾಶಕಗಳು ನೆಲವನ್ನು ಜನವನ್ನು ಕೊಲ್ಲುತ್ತವೆ

ಇತ್ತೀಚಿನ ದಿನಗಳಲ್ಲಿ ಹೊಲಗದ್ದೆ ತೋಟಗಳಲ್ಲಿ ಬೆಳೆಯುವ ಬೆಳೆಗಳಿಗೆ ಏನೆಲ್ಲ ಜಾಡ್ಯಗಳು ತಗುಲಿಕೊಂಡು ಪೈರನ್ನು ನಾಶಪಡಿಸುತ್ತಿರುವುದು ಸರ್ವ ವೇದ್ಯ. ಈ ಬೆಳೆಗಳಿಗೆ ತಗುಲವ ಕೀಟಗಳ ಭಾದೆಗಳಿಂದ ಬೆಳೆಗಳನ್ನು ರಕ್ಷಿಸಲು ನಮ್ಮದೇಶಿ ಔಷಧಿಗಳು ಬೇಕಾದಷ್ಟು ಇದ್ದರೂ ಕೇವಾ ಸಮೃದ್ಧಿ ಮತ್ತು ಪ್ರತಿಷ್ಟೆಯಿಂದಾಗಿ ಬಹುರಾಷ್ಟ್ರೀಯ ಕಂಪನಿಗಳಿಂದ ತಯಾರಾದ ನಿಧಾನ ವಿಷಯುಕ್ತ ಔಷಧಿಯನ್ನು ಬಳೆಸುವುದರಲ್ಲಿ ಇತ್ತೀಚೆಗೆ ನಮ್ಮ ರೈತರು ದಾಪುಗಾಲು ಹಾಕುತ್ತಿದ್ದಾರೆ. ಕೇವಲ ಫಸಲನ್ನು ಹೆಚ್ಚು ಪಡಿಯುದರಲ್ಲಿ ಗಮನ ಹರಿಸಿದ್ದು ಭವಿಷ್ಯತ್ತಿನಲ್ಲಿ ಬೆಳೆ ಬೆಳೆಯುವ ಭೂಮಿಯೇ ಬಂಜರು ಆಗುತ್ತದೆಂಬ ಕಲ್ಪನೆ ಕೂಡ ಇರುವುದಿಲ್ಲ. ಶತಮಾನಗಳ ಅನುಭವ ಮತ್ತು ಜ್ಞಾನಗಳಿಂದ ರೂಪಿತಗೊಂಡ ಸಾಂಪ್ರದಾಯಿಕ ಸ್ವಾಭಾವಿಕ ಬೇಸಾಯ ಪದ್ಧತಿಗಳಿಂದ ಬಹುಮುಂದೆ ಓಡುತ್ತಿದ್ದಾನೆ ರೈತ ಪರಂಪರೆಗಳ ಮೌಲ್ಯಗಳಿಗೆ ತಿಲಾಂಜಲಿ ಇಕ್ಕಿದಾನೆ.

ಅತಿಬೇಗನೆ ಪರಿಣಾಮ ಬೀರುವ ರಾಸಾಯನಿಕ ಗೊಬ್ಬರಗಳು, ಔಷಧಗಳು ಅಸ್ವಾಭಾವಿಕ ತಳಿಗಳಿಂದಾಗಿ ತಲೆಮಾರುಗಳಿಂದ ಪರಿಪೂರ್ಣತೆ ಸಾಧಿಸಿದ ಕೃಷಿಪದ್ದತಿಗಳು, ತಳಿ ವೈವಿಧ್ಯತೆಗಳು ಇಂದು ಕಾಣದಂತಾಗಿವೆ. ಅತಿಯಾದ ರಸಗೊಬ್ಬರಗಳನ್ನು ಸಿಂಪಡಿಸುವುದರಿಂದ ಫಲಪ್ರದವಾದ ಭೂಮಿ ಪ್ರದೇಶವೆಲ್ಲ ಜಾಳು, ಕ್ಷಾರಗಳಿಲ್ಲದೇ ಹುಳಿ ಮಣ್ಣಾಗಿ ಪರಿವರ್ತನೆಗೊಂಡು ಕೃಷಿಗೆ ಅನುಕೂಲವಾದ ನೆಲ ಬರಡಾಗುತ್ತದೆ. ಬಂಜರವಾಗುತ್ತದೆ. ವರ್ಷಾನುಗಳಿಂದ ಸತತವಾಗಿ ಕೇವಲ ಪ್ರಧಾನ ಪೋಷಕಗಳ ಬಳಕೆಯಿಂದಾಗಿ ಭೂಮಿಯ ಸತ್ವವೆಲ್ಲ ಖಾಲಿಯಾಗಿ ಹೋಗಿದೆ. ಅಸಮತೋಲನ ರಾಸಾಯನಿಕಗಳ ಬಳಕೆಯಿಂದಾಗಿ ಬೆಳೆಯ ಪ್ರತಿರೋಧಕತೆ ಬಲಹೀನಗೊಂಡು ಆಹಾರದ ಪ್ರಮಾಣ ಮತ್ತು ಗುಣಮಟ್ಟದ ನಷ್ಟದಲ್ಲಿ ರೈತ ಇಂದು ಬಳಲುತ್ತಿದ್ದಾನೆ. ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳು ಊಹಿಸಲಾರದಷ್ಟು ಬದಲಾಗಿದ್ದು ನೈಸರ್ಗಿಕ ಸಾರಜನಕ ಸ್ಥೀರಿಕರಣ ಕ್ರಿಯೆ ಚಿಂದಿಯಾಗಿದೆ. ಪರಿಸರದ ಹಲವು ಸ್ವಾಭಾವಿಕ ಚಕ್ರಗಳು ಸಮರಸಗೊಳ್ಳುವಲ್ಲಿ ವಿಫಲವಾಗಿವೆ. ಕೃಷಿಯಲ್ಲಿನ ಜೀವ ವೈವಿಧ್ಯ ನಶಿಸಿ ಹೋಗಿದೆ. ಈ ರಸಗೊಬ್ಬರಗಳ ಪ್ರಭಾವದಿಂದಾಗಿ ಮಣ್ಣಿನ ಸಾವಯವ ವಸ್ತುಗಳು ಕ್ಷೀಣಿಸುವುದರ ಜತೆಗೆ ಜೈವಿಕ ಗುಣಗಳು ನಾಶಗೊಳ್ಳುತ್ತಿವೆ. ಆಮ್ಲಜನಕ ಮತ್ತು ತೇವಾಂಶ ಧಾರಣಶಕ್ತಿ ಕುಂದುತ್ತದೆ. ಅಂತರ್ಜಲ ಮಟ್ಟ ಕುಸಿಯುತ್ತದೆ. ಹಲವು ರಾಸಾಯನಿಕಗಳು ಬೆಳೆಯಿಂದ ಕೆಳಗೆ ಬಿದ್ದು ಹೆಚ್ಚಾಗಿ ಮಣ್ಣನ್ನು ಸೇರುವ ಸಂಭವವಿರುತ್ತದೆ. ಇವು ಮಣ್ಣಿನೊಳಗೆ ಇದ್ದು ಕೆಲವೊಮ್ಮೆ ಆಹಾರ ಸರಪಳಿಗೆ ಸೇರಿದ ಉದಾಹರಣೆಗಳು ಇಲ್ಲದಿಲ್ಲ. ಸಂಪೂರ್ಣ ಬೆಳೆಯ ರೋಗಗಳಿಗೆ ಬೀಳದೆ ಇರುವ D.D.T. ಯು ತಾಯಿಯ ಎದೆಹಾಲಿನಲ್ಲೂ ಕಾಣಿಸಿಕೊಳ್ಳಬಹುದು. ಶಿಶು ಮತ್ತು ಪಶು ಆರೋಗ್ಯದ ಮೇಲೆ ನೀರಿನಲ್ಲಿ ಬೆರೆತ ನೈಟ್ರೈಟ್, ವಿಷಯುಕ್ತತೆಗಳ ಪರಿಣಾಮಗಳ ಹಲವಾರು ಪ್ರದೇಶಗಳಿಂದ ದಾಖಲಾಗಿವೆ. ಮಾನವ, ಭೂಮಿ ಪರಿಸರದ ನಡುವೆ ಇರುವ ಸರಪಳಿಯ ಬಿಚ್ಚುವ ಕಾಲದೂರವಿಲ್ಲ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...