ಒಂದು ಎಲೆ ಮನುಷ್ಯನಿಗೆ ಹೇಳಿತು “ನಾನು ಬಾಳಿನಲ್ಲಿ ಎಲ್ಲವನ್ನೂ ಕಂಡೆ” ಎಂದು. “ಅದು ಹೇಗೆ?” ಎಂದ ಮನುಷ್ಯ. “ನನ್ನದು ಚಿಗುರಿನ ಬಾಲ್ಯ. ಬಣ್ಣದ ಹೂವಿನ ಯೌವ್ವನ. ಹಳದಿ ಎಲೆಯಲ್ಲಿ ವೃಧ್ಯಾಪ್ಯದ ನೆರಳು. ಇಷ್ಟನ್ನೂ ನಾನು ಮೌನವಾಗಿ ನಿಂತು ಸವೆದೆ. ನನ್ನಂತೆ ನೀನು ಇರಬಲ್ಲೆಯಾ?” ಎಂದಿತು ಎಲೆ. ಮನುಷ್ಯ ಮಾತನಾಡಿ ಸೋಲ ಬಾರದೆಂದು ಮೌನವಾಗಿ ಎಲೆಯನ್ನು ಕಣ್ಣಿಗೆ ಒತ್ತಿಕೊಂಡು ನಡೆದು ಬಿಟ್ಟ.
*****