ಶಕುನಿ

ದುರ್ಯೋಧನ ಮನಸ್ಸಿಗೆ ತಿದಿಯೊತ್ತಿ
ತನ್ನ ಹೊಟ್ಟೆಕಿಚ್ಚಿನ ಕುಂಡದಲ್ಲಿ ಕಾಯಿಸಿ ಕೆಂಪುಮಾಡಿ
ಕುಟ್ಟುತ್ತಾನೆ ತನಗೆ ಬೇಕಾದಂತೆ.
ಪಗಡೆಪಾಕ ಪಾಂಡವ ಮಂದಿಯ ಮುಸುಡಿಯನ್ನೇ ಮುಕ್ಕಿದಾಗ
ಮೀಸೆ ಕುಣಿಸಿ
ಕೌರವೇಶ್ವರನ ಕಡೆ ನೋಡಿ ಕಣ್ಣಲ್ಲಿ ಕಿಚ್ಚು
ಮುಕ್ಕಳಿಸಿ
ತುಟಿಯಲ್ಲಿ ನಗೆ ತುಳುಕಿಸುತ್ತಾನೆ.
ದೌಪದಿ ‘ಕೃಷ್ಣಾ’ ಎಂದೊರಲಿದಾಗ ಉಷ್ಣಮಾಪಕದಿಂದ
ಮಾನಧನನನ್ನು ಅಳೆಯುತ್ತಾನೆ.
ಫಣಿರಾಜ ಕೇತನನನ್ನು ಕುಣಿವ ಹುಬ್ಬಹುತ್ತದಲ್ಲೇ ಬೆಳಸಿ
ಬುಸ್ಸೆನ್ನಿಸಿ
ಪಾಂಡವರ ಪುನರಾಗಮನಾನಂತರ ಪತಾಕೆ ಹಾರಿಸಲು
ಹುರಿದುಂಬಿಸಿ
ಹಿಮಾಲಯದ ತುಟ್ಟತುದಿಗೆ ಕಳುಹಿಸುತ್ತಾನೆ.
ಛಲದಂಕನಿಗೆಲ್ಲಿಯ ಪ್ರಜ್ಞೆ ಆಮ್ಲಜನಕವಿಲ್ಲದೆ
ಹಿಮಾಲಯ ಹತ್ತಬಾರದೆಂದು!
ಇವನೊಬ್ಬ ಶಕುನಿಯೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುವೆಂಪು ವಿಮರ್ಶೆಯ ವಿಶಿಷ್ಟತೆ
Next post ಒಂದು ಎಲೆ ಹೇಳಿದ್ದು

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys