ಚಾಮುಂಡಿಗಿರಿಯ ತಪ್ಪಲಲಿ ಮೈಸೂರು ಪುರ- ನಂಜನಗುಡಿಯ ರಾಜಮಾರ್ಗದಲಿ ರಂಜಿಪುದು ತಾರುಣ್ಯ ತುಂಬಿರುವ ಕನ್ನೆವೊಲು ಮೈಸೂರಿನುದ್ಯಾನ ಮಧುವನವು ೧ ರಂಗುರಂಗಿನ ಹೂಗಳಾಭರಣ ಒಪ್ಪಿರಲು ಕಂಗಳನು ಮೋಹಿಸುವ ಹಸುರುಡುಗೆಯ ಸಿಂಗರಿಸಿ ನಿಂತಿರುವ ಅಂಗನೆಯ ತೆರದಲ್...