ಎದೆ ವೀಣೆ ಮಿಡಿದಿರಲು ತೇಲುವುದು ಇಳೆಯೆಲ್ಲ ಸೊಗಕೊಯ್ದು ಸುಧೆಯುಣಿಪ ರಾಗದಲ್ಲಿ ರಾಗದಾ ಆಳದಿಂ ಚಿಮ್ಮುತಿಹೆ ಕಳೆಯೆಲ್ಲ ಮುಳುಗಿಪುದು ಕಣ್ಮನವ ಭಾವದಲ್ಲಿ ಹುಟ್ಟುವುದು ಹೊಸ ರಾಜ್ಯ ನಾನಲ್ಲಿಯಧಿರಾಜ ಭಾವವೇ ನಲ್‌ರಾಣಿ ವಾಣಿ ಮಾತೆ ಲೇಖನಿಯು ತಾಮಂತ್ರ...

ಚಲುವಿನ ಬಳ್ಳಿಯೆ ಗೆಜ್ಜೆಯ ತೊಟ್ಟು ತುಳುಕುತ ಬಳುಕುತ ಕುಣಿಯುತಿದೆ ಮೋಹಕ ಕಿಂಕಿಣಿ ನಾದವನಿಟ್ಟು ಹೆಜ್ಜೆಯ ಗೆಜ್ಜೆಯು ನುಡಿಯುತಿದೆ ಗೆಜ್ಜೆಯ ನಾದಕೆ ಎನ್ನೆದೆ ನವಿಲು ಗರಿಗೆದರುತೆ ನಲಿದುಲಿದಿತ್ತು ಸಂತಸದೊರತೆಯ ಅಮೃತ ಹೊನಲು ತುಂಬಿದ ಎದಯಿಂ ಚಿಮ್...

ಹೃದ್ವೀಣೆ ಮುರಿದಿರಲು ಶಾರದೆಯನರಸಿದೆನು ಮುರಿದೆನ್ನ ವೀಣೆಯನು ಸರಿಪಡಿಸು ಎಂದು ಕೈಲಿ ವೀಣೆಯ ಹಿಡಿದು ಚೆಲ್ವೆಣ್ಣ ಬೇಡಿದೆನು ಅವರೆಲ್ಲ ಸರಸತಿಯ ಅವತಾರವೆಂದು ದೂಡಿದರು ಕೆಲರವರು ಧೂ ಎಂದರುಳಿದವರು ಆರಲ್ಲಿ ಒಂದಿನಿತು ಮಾರ್ದವತೆ ಇಲ್ಲ ಬಾರೆನ್ನ ಕವ...

ಕವಿದಿತ್ತು ಇರುಳು ಮನವೆಲ್ಲ ಮುರುಳು ಏನೊಂದು ತಿಳಿಯದಂತೆ ಬೀಸಿರಲು ಮಂಜು ಹರಡಿರಲು ನಂಜು ದಶದಿಕ್ಕು ಅರಿಯದಂತೆ ಯಾತ್ರೆಗೆಯೆ ಎಂದು ಹೊರಟಿರ್‍ದೆನಂದು ತಾಯ್ಮಡಿಲಿನಲ್ಲಿ ಮಲಗಿ ಹೊಂಗಿರಣವೆಂದು ಬೆಳಗುವುದೊ ಎಂದು ತಳಮಳಿಸುತಿದ್ದೆ ಮರುಗಿ ಆತುರದಿ ಸೆ...