
ಅನ್ಯಾಯದ ಬೆಂಕಿಯಲ್ಲಿ ನೀನು ಕುದಿದು ಕುದಿದು ಕೆಂಪಾಗಿ- ಲಾವಾ ರಸವಾಗಿ- ನಿನ್ನೆದೆಯ ಲಾವಾ ಸ್ಫೋಟಗೊಂಡಾಗ ಜ್ವಾಲಾಮುಖಿ- ಅಗ್ನಿ ಪರ್ವತದಂತೆ ಬಂಡೆಯಾದೆಯಾ? ಗಟ್ಟಿಯಾದೆಯಾ ಬೆಂಜಮಿನ್. ಕಪ್ಪು ದೇಶದ ಆಗಸದಲಿ ಕೆಂಪು ಸೂರ್ಯನ ಉಗಮ ನೆತ್ತಿಗೇರಲು ಬಿಡಲ...
ಆರೋಗ್ಯದಸ್ಮಿತೆಗೆ ನೂರೊಂದು ತರ ವೈದ್ಯ ಇರುತಿಹುದು ವ್ಯಕ್ತಿ – ರೋಗ ಭೇದಕೊಂದೊಂದು ಮದ್ದು ಮೂರಡಿಗೊಂದು ಮಣ್ಣಿನಾ ಗುಣವಿರಲು ಸೂತ್ರವೊಂ ದರೊಳೆಲ್ಲರಿಗು ವರ ಕೃಷಿಯನರುಹಲಳವಿಲ್ಲ ಊರ ಬರವೆಂತು ನೀಗುವುದು ಪರ ಊರ ಮಳೆಗೆ – ವಿಜ್ಞಾನೇಶ...
ನಿನಗೆಂದು ಕವಿತೆಯನು ಬರೆದೆ ಸರಿದ ಮಧು ಚಣದ ರಸ ಸುರಿದೆ ನೀನು ಓದಬೇಕೆಂದು ಓದಿ ತಿಳಿಯಬೇಕೆಂದು ತಿಳಿದು ಉಳಿಸಬೇಕೆಂದು ಉಳಿಸಿ ನಲ್ನುಡಿಯ ಕಳಿಸಬೇಕೆಂದು ಮನಸಿನಲೆ ಬಗೆದು ಕೊರಗಿನಲಿ ಮರೆಯಲಾಗದೆ ಬರೆದೆ ಅದರೊಳಗೆ – ನಮ್ಮೊಲವಿನ ಕಥೆ ಸುಖದ ಸ...
ಹೇಳು ಗಿಳಿಯೆ ಹೇಳು ಇಂದೇಕೆ ನೀ ಮೌನ ಕಣ್ಣೀರ ಸುರಿಸುತ್ತಾ ಕೊರಗುವೇಕೆ! ಇಷ್ಟು ವರ್ಷಗಳಿಂದ ಜೊತೆ ಗೆಳತಿಯಾಗಿದ್ದ ಸೀತೆ ಮಿಥಿಲೆ ತೊರೆದು ಹೋಗುವಳೆಂದೆ! ಸೀತೆ ಮನ ತುಂಬಿದವ ಶ್ರೀರಾಮ ಶ್ರೀರಾಮ ವರಿಸಿದ ಹೆಣ್ಣು ಸೀತೆ ಇಬ್ಬರಾಸೆಗಳಿಂದು ಕೈಗೂಡಿ ಅವ...
(೧) ಬಂಗಾಳ ಪ್ರಾಂತದಲ್ಲಿರುವ ಜಮೀನ್ದಾರರು. ತುರುಕರು ಈ ಸೀಮೆಗೆ ಬರುವುದಕ್ಕೆ ಮುಂಚಿನಿಂದಲೂ ಗ್ರಾಮಗಳಲ್ಲಿ ಸೇರಿಕೊಂಡು ಅಲ್ಲಿನ ಭೂಮಿಗೆಲ್ಲಾ ಸ್ವಾಮಿತ್ವವನ್ನು ಹೇಗೆಯೋ ಸಂಪಾದಿಸಿ ಮುಖಂಡರಾಗಿ ಆಯಾಕಾಲಗಳಲ್ಲಿದ್ದ ಸರ್‍ಕಾರದವರಿಗೆ ಆಯಾ ಗ್ರಾಮಗಳಿ...
ಕ್ಷಣವು ಧೀರ, ಕ್ಷಣವು ಚಂಚಲವು ಈ ನನ್ನ ತನುವಿನಲ್ಲಿ ಮೆರೆವಮನ ಹರಿ ನಿನ್ನ ಧ್ಯಾನಿಸುತ್ತಿರುವಾಗಲೆ ನಾ ಮತ್ತೆ ಹರಿವುದು ವಿಷಯಗಳಲ್ಲಿ ಮನ ಜನುಮ ಜನುಮಕ್ಕೂ ಹೀಗೆ ಬೆಂಬಿಡದೆ ನನ್ನ ಜನುಮಗಳಿಗೆಲ್ಲ ಕಾರಣವು ಈ ಮನ ಮತ್ತೆ ಮತ್ತೆ ಇಂದ್ರಿಯ ಒಡನಾಟದಲಿ ...
ವಧು ಪರೀಕ್ಷೆ ನಡೆದಿದೆ ಜಾತಕ ಫಲಗಳೆಲ್ಲ ಕೂಡಿ| ಹಿರಿಯರೆಲ್ಲರೂ ಒಂದೆಡೆ ಸೇರಿ ಕನ್ಯೆಯೋರ್ವಳ ಸಂಸಾರ ದೀಕ್ಷೆಗೆ|| ಗುಣ ಗಣಗಳನ್ನೆಲ್ಲಾ ಗಣನೆ ಮಾಡಿ ಎರಡು ಜಾತಕಗಳ ತಾಳೆ ನೋಡಿ| ತುಂಬು ಸೌಹಾರ್ದತೆಯಿಂದ ಕನ್ಯೆ ಇವಳ ಮನಸ ಅರಿಯೆ ಮೆಲು ದನಿಯಲಿ ಪ್ರಶ...
ಜೀವನದಲ್ಲಿ ಅದೆಷ್ಟು ಲೆಕ್ಕಾಚಾರ. ಅವಳು ಪ್ರೀತಿಸುವ ಹುಡುಗನ ಶರತ್ತಿನ ಲೆಕ್ಕಾಚಾರ ಪಕ್ಕಾ ಆಗಿ ಮದುವೆ ನಿಶ್ಚಲವಾಗಲು, ಎರಡೂ ಕಡೆಯ ಬೀಗರ ಲೆಕ್ಕಾಚಾರ ಸರಿ ಹೋದಮೇಲೆ ಮದುವೆ ನಡೆದಿತ್ತು. ಇನ್ನು ತಾಯಿ ಯಾಗುವ ಹಂಬಲಕ್ಕೆ ಮತ್ತೆ ಲೆಕ್ಕಾಚಾರ ಶುರುವಾ...
ಪಂಚಮಿ ಹಬ್ಬ ಬಂತು ನಾಡಿಗೆ ಸಂಭ್ರಮ ಸಡಗರ ನಾರಿಯರಿಗೆ ಮಡಿಯುಟ್ಟು ನಾರಿಯರೆಲ್ಲ ಮುತ್ತಿಗೆ ಹಾಕುವರಲ್ಲ ನಾಗರಾಜಗೆ ಅಳ್ಳುಂಡೆ, ಎಳ್ಳುಂಡೆ, ತಂಬಿಟ್ಟು ಮೀಸಲು ಅಡುಗೆಯ ಎಡೆಯಿಟ್ಟು ಅಂಗನೂಲಿನ ವಸ್ತ್ರವ ಮಾಡಿಟ್ಟು ಭಕ್ತಿ ಭಾವದಿ ಹುತ್ತಕೆ ಸುತ್ತಿಬಿ...
ಕರ್ನಾಟಕದ ದಲಿತ-ಬಂಡಾಯದ ಸಾಹಿತ್ಯಕ-ಸಾಂಸ್ಕೃತಿಕ ಸಂದರ್ಭದಲ್ಲಿ ದೇವಯ್ಯ ಹರವೆ ಅವರದು ಗಮನಾರ್ಹ ಹೆಸರು. ಈ ನಿಟ್ಟಿನಲ್ಲಿ ಪ್ರಸ್ತುತ ಟಿಪ್ಪಣಿಯಲ್ಲಿ ಪ್ರಾತಿನಿಧಿಕವಾಗಿ ಅವರ ಮೇಲ್ಕಂಡ ಲೇಖನವನ್ನು ಗುರುತಿಸಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಸಂದರ್...
ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...















