ಇಸರಪ್ಪನನ್ನು ಅಯ್ಯಾ ಅವರು ಬರಹೇಳಿದ ಸುದ್ದಿ ಒಬ್ಬರಿಂದ ಇನ್ನೊಬ್ಬರಿಗೆ, ಅವರಿಂದ ಮತ್ತೊಬ್ಬರಿಗೆ ಹೀಗೆ ಆ ಪುಟ್ಟ ಊರಲ್ಲಿ ಬಹಳ ಬೇಗ ಎಲ್ಲರಿಗೂ ತಿಳಿದು ಹೋಯಿತು. ನಾಲ್ಕು ದಿನಾ ರಜಾ ಹಾಕಿ ಊರಿಗೆ ಹೋಗಿ ಆಗ ತಾನೆ ನೇರವಾಗಿ ಕಾಲೇಜಿಗೆ ಬಂದ ಮಲ್ಲಪ್...
ನಂಬಿ ಕೆಟ್ಟವರಿಲ್ಲವೋ ಹರಿಯ; ದಾಸರೆಂದರು ನಂಬಿ ಕೆಟ್ಟೆ ನಾ ಮಾರಿ ಮನೆ ಮಾರು ಮಾಡಿದ ಊರಿಂದೂರಿಗೆ ಗಡಿಪಾರು ಆದರೂ ಕಳಿಸಿರುವೆ ಅವಸರದಿ ತಾರು ಬೇಕೇಬೇಕೆಂದು ನೆಮ್ಮದಿಯ ಸೂರು *****...
ದೇವಕಿಯ ಮೇಲೊಂದು ಕತೆ ಬರೆಯಲು ಕುಳಿತೆ ಗರ್ಭದಲ್ಲಿ ಮಗು ಹೊತ್ತೂ ಹೊತ್ತೂ ಹೆರುವ ಗದ್ದಲದಲ್ಲಿಯೇ ಇದ್ದ ದೇವಕಿ ನಿನಗೆ ಕೇಳಿಸಲಿಲ್ಲವೆ ಆ ಕಂಸನ ಆರ್ಭಟ! ಜೊತೆ ಜೊತೆಗೇ ಶ್ರೀ ಕೃಷ್ಣನ ಅಳು, ಒಳ್ಳೆಯದರ ಜೊತೆ ಜೊತೆಗೇ ಕೆಟ್ಟದ್ದೂ ಇರುತ್ತದೆ ಎಂದು ನಂ...
ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ ಧಾವಿಸುತ್ತಿವೆ ನಮ್ಮ ಗಳಿಗೆಗಳು ಗುರಿ ಕಡೆಗೆ ; ಮುಂಚೆ ಸರಿದುದರ ಎಡೆದೊರೆತು ಹಿಂದಿನ ಕ್ಷಣಕೆ ಒಂದೆ ಸಮ ಸ್ಪರ್ಧೆಯಲಿ ಮುಂದೊಡುತಿವೆ ಜೊತೆಗೆ. ಕಣ್ತೆರೆದ ಬದುಕು ಬೆಳಕಿನ ಪಾತ್ರದಲಿ ಚಲಿಸಿ, ತೆವಳುತ್ತ ...
ಆತಂಕ ತಂದ ಅಚಲನ ನಿರ್ಧಾರ ಅಚಲ ಸಂಪಾದಿಸಲು ತಯಾರಾಗಿ ನಿಂತ ಹುಡುಗನೆನ್ನುವ ದೃಷ್ಟಿಯಿಂದ ಅವನನ್ನು ಅವಳು ನೋಡಿರಲೇ ಇಲ್ಲ. ಅವಳ ಮನದಾಳದಲ್ಲಿ ಚಿಕ್ಕ ಅಚಲನೇ ಓಡಿಯಾಡುತ್ತಿದ್ದ. ಕಳೆದ ಮೂರು ವರುಷದಲ್ಲೂ ಅವಳ ಕಣ್ಣ ಮುಂದೆ ಓಡಾಡುತ್ತಿದ್ದುದು ಚಿಕ್ಕ ...
ಮನವೊಂದು ಬಯಕೆಯ ಗೂಡು ಅಲ್ಲಿ ಕೇಳುವುದೆಲ್ಲ ಬೇಕು ಬೇಡುಗಳ ಹಾಡು *****...
ಭಾಷೆ ಹಲವು ಭಾವನೆ ಒಂದೇ ಭಾಷೆಗಾಗಿ ಬಡಿದಾಡುವವರು ಮನುಜನು ಮಾತ್ರ ಹಿಂದೆ ಎಲ್ಲಾ ಜೀವಿಗಳಿಹವು ಮುಂದೆ ಭಾಷೆ ಎಂದರೇನರ್ಥ ತಿಳಿಯಬೇಕು ಮಾತನಾಡುವ ಮೊದಲು ಓ ಮನುಜ ಭಾಷೆಯೊಂದು ಭಾವನೆಗಳ ಇನಿಮಯ ಮಾಧ್ಯಮ ಅಷ್ಟೇ ಅಂತ ಯಾವ ಭಾಷೆಯಲ್ಲಿ ಮಾತನಾಡಿದರೂ ಅರ್...
ಗಂಡ-ಹೆಂಡತಿ ಇಬ್ಬರೂ, ಬಿಡದೆ ಯಾವಾಗಲೂ ಒಟ್ಟೊಟ್ಟಿಗೆ ಸ್ಕೂಟರಲ್ಲಿ ಸುತ್ತುತ್ತಾರೆ. ಕಂಡವರಿಗೆ ಅಸೂಯೆ ತರುವಂತಹ ಅವರಿಬ್ಬರ ಒಗ್ಗಟ್ಟಿನ ಗುಟ್ಟು ಪರಸ್ಪರರ ಮೇಲಿನ ಅಪ ನಂಬಿಕೆ. ತಾನಿಲ್ಲದಾಗ ಗಂಡ- ಬೇರೆಯವಳನ್ನು ಕರೆದೊಯ್ಯ ಬಹುದೆಂಬ ಹೆದರಿಕೆ ಹೆಂ...
(ಕನ್ನಡ ವಿಶ್ವವಿದ್ಯಾಲಯವು ಏರ್ಪಡಿಸಿದ ದಲಿತ ಸಂಸ್ಕೃತಿ ಕುರಿತ ವಿಚಾರ ಸಂಕಿರಣದ ಸಮಾರೋಪ ಭಾಷಣ) ‘ದಲಿತರು, ಭಾಷೆ ಮತ್ತು ಸಮಾಜ’ ಎನ್ನುವ ಈ ವಿಚಾರಸಂಕಿರಣದ ಸಮಾರೋಪ ಭಾಷಣಕ್ಕೆ ಸಂಬಂಧಪಟ್ಟಂತೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕೆ ಮುಂಚೆ ...
ಹುಮ್ಮಸ್ಸು ಹುಟ್ಟಲು ಜೀವಸೆಲೆ ಹೊತ್ತ ಬಸ್ಸು ಬರ್ರೆಂದು ಮನದ ನಿಲ್ದಾಣದಲ್ಲಿ ಬಂದು ನಿಲ್ಲಲು ಅವಳ ನೆನಪೊಂದು ಸಾಕು *****...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...








