ಗಂಡ-ಹೆಂಡತಿ
ಇಬ್ಬರೂ, ಬಿಡದೆ
ಯಾವಾಗಲೂ
ಒಟ್ಟೊಟ್ಟಿಗೆ
ಸ್ಕೂಟರಲ್ಲಿ
ಸುತ್ತುತ್ತಾರೆ.
ಕಂಡವರಿಗೆ
ಅಸೂಯೆ
ತರುವಂತಹ
ಅವರಿಬ್ಬರ
ಒಗ್ಗಟ್ಟಿನ ಗುಟ್ಟು
ಪರಸ್ಪರರ ಮೇಲಿನ
ಅಪ ನಂಬಿಕೆ.
ತಾನಿಲ್ಲದಾಗ
ಗಂಡ- ಬೇರೆಯವಳನ್ನು
ಕರೆದೊಯ್ಯ
ಬಹುದೆಂಬ ಹೆದರಿಕೆ
ಹೆಂಡತಿಗೆ
ಹೆಂಡತಿ
ಬೇರೆಯವನ
ಸ್ಕೂಟರಲ್ಲಿ ಹೋಗಿ ಬಿಟ್ಟಾಳೆಂಬ
ಭಯ ಗಂಡನಿಗೆ!
*****
೧೬-೦೬-೧೯೯೨