ರಹಸ್ಯ

ನಮ್ಮ ಲಾಕರ್‌ನಲ್ಲಿ ಏನೇನಿದೆ ಎಂಬುದು ಒಂದು ರಹಸ್ಯ. ಲಾಕರ್‌ನಲ್ಲಿ ಏನಿದೆ? ಎನ್ನುವುದು ಮುಖ್ಯವಲ್ಲ. ಏನೂ ಇಲ್ಲ ಎನ್ನುವುದು ಯಾರಿಗೂ ತಿಳಿಯುವುದಿಲ್ಲ! ಅದೇ ದೊಡ್ಡ ರಹಸ್ಯ. *****

ಸ್ಪಂಜ್ ನೆಲ

ಅವರ ಮನೆಯಲ್ಲಿ ಮೊಗಸಾಲೆ, ಹಜಾರ, ಕೋಣೆ ಎಲ್ಲೆಡೆ ನೆಲ ಸ್ಪಂಜ್‌ನಂತೆ ರತ್ನ ಕಂಬಳಿ. ನಮ್ಮ ಮನೆಯಲ್ಲಿ ಸ್ನಾನದ ಮನೆ ಶೌಚಾಲಯದಲ್ಲಿ ಕೂಡ ನೆಲ ಸ್ಪಂಜ್‌ನಂತೆ ಪಾಚಿಯೋ ಪಾಚಿ! *****

ವರಾನ್ವೇಶಣೆ

ಹೆಣ್ಣ ಹೆತ್ತವರು ನಾವು ಲೇಖಕರು. ನಮ್ಮ ಮಕ್ಕಳು ಕಾವ್ಯ, ಕವಿತಾ ನವ್ಯಾ, ರೂಪಕಾ ಏಕಾಂಕಿ, ಕಾದಂಬರಿ. ಬೇಕಾಗಿವೆ ಇವರಿಗೆಲ್ಲ ಕೈ ಹಿಡಿದು ಸಾಕಬಲ್ಲ ಬಾಳ ಬೆಳಗಬಲ್ಲ ಸಂಪಾದಕ, ಪ್ರಕಾಶಕ ಗಂಡುಗಳು. *****